“ನನ್ನ ಸಾವಿಗೆ ರವಿ ಹೆಗಡೆ-ಸಚಿವ ಸುಧಾಕರ್ ಅವ್ರೇ ಕಾರಣ”.. ಸುದ್ದಿಮನೆಯನ್ನೇ ತಲ್ಲಣಿಸಿದ ಪತ್ರಕರ್ತನ ಆ ಡೆತ್ ನೋಟ್-ಬಯಲಾಗ್ಬೇಕಿದೆ ಸತ್ಯಾಸತ್ಯತೆ..?!

0
ಪತ್ರಕರ್ತ ಅಶ್ವತ್ಥನಾರಾಯಣ
ಪತ್ರಕರ್ತ ಅಶ್ವತ್ಥನಾರಾಯಣ

ಚಿಕ್ಕಾಬಳ್ಳಾಪುರ/ಬೆಂಗಳೂರು:ಹೀಗಾಗಬಾರದು..ಆದ್ರೆ ದುರಾದೃಷ್ಟವಶಾತ್..ಹಾಗೇನೇ ಆಗೋಗಿದೆ..ಆದ್ರೆ ಇಂತದ್ದೆಲ್ಲಾ ನಡೆದಿದೆ ಎಂದಾಗಲೇ ಸುದ್ದಿ ಮನೆಯಲ್ಲಿ ಆಗುತ್ತಿರಬಹುದಾದ ಅನಾರೋಗ್ಯಕರ ಬೆಳವಣಿಗೆಗಳು..ವೃತ್ತಿನಿಷ್ಟರು ಅನುಭವಿಸುತ್ತಿರಬಹುದಾದ ಕಿರುಕುಳ-ದೌರ್ಜನ್ಯ..ಯಾವುದೇ ರಾಜಕಾರಣಿಗಳಿಗಿಂತಲೂ ಕಡ್ಮೆ ಇಲ್ಲದ ರೇಂಜ್ನಲ್ಲಿ ನಡೆಯುವ ಕೆಟ್ಟ ರಾಜಕೀಯ..ಅಸಹ್ಯ ಹುಟ್ಟಿಸುವಷ್ಟು ಜಾತೀಯತೆ.. ವಿಜೃಂಭಿಸುತ್ತಿರುವ ಹಿಟ್ಲರ್ ನೆನಪಿಸುವ ಸರ್ವಾಧಿಕಾರಿ ಧೋರಣೆ, ಅವಸಾನದಂಚಿಗೆ ತಲುಪಿರುವ  ಪ್ರಜಾಸತ್ತಾತ್ಮಕತೆಯ ಘನಘೋರ ದುರಂತಗಳು ಬಯಲಾಗುತ್ತವೆ.  

ಆದ್ರೆ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನೋದು  ಗೊತ್ತಿಲ್ಲ..ಆದ್ರೆ ಈ ಘಟನೆಯಿಂದ ಇಡೀ ಸುದ್ದಿ ಮನೆ ವ್ಯವಸ್ಥೆಯೇ ಶಾಕ್ ಗೊಳಗಾಗಿದೆ. ಸಾಮಾಜಿಕ ಬದ್ಧತೆಯುಳ್ಳ ಪತ್ರಕರ್ತನೋರ್ವ ತನ್ನ ಸಂಪಾದಕರ ಮನಸ್ಥಿತಿ ಹಾಗೂ ಧೋರಣೆಗೆ ಬೇಸತ್ತು ಬದುಕನ್ನೇ ಅಂತ್ಯಗೊಳಿಸಿಕೊಳ್ಳುವ ಮಟ್ಟಕ್ಕೆ ಪ್ರಯತ್ನಿಸ್ತಾನೆಂದ್ರೆ ವಿಷಯ ಒಮ್ಮೆ ಪರಿಗಣಿಸಿ ಮರುಕ್ಷಣ ನಿರ್ಲಕ್ಷ್ಯಿಸುವಷ್ಟಂತೂ ಸಣ್ಣದಲ್ಲ.. ಸಾಮಾನ್ಯವೇನಲ್ಲ..ಹಾಗೆಯೇ  ಕ್ಷುಲ್ಲಕವಂತೂ ಅಲ್ವೇ ಅಲ್ಲ.ಇದಕ್ಕೆಲ್ಲಾ ಕಾರಣವಾದ ಆ ಘಟನೆಯೇ ಕನ್ನಡಪ್ರಭದ ಮಾಜಿ ಉದ್ಯೋಗಿ ಅಶ್ವತ್ಥನಾರಾಯಣ್ ಎನ್ನುವವರ ಸೂಸೈಡ್ ನೋಟ್..ಅದರಲ್ಲಿ ಉಲ್ಲೇಖವಾಗಿರುವ ಸಂಪಾದಕ ರವಿ ಹೆಗಡೆ ಅವರ ಹೆಸರು.

ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ
ಆರೋಗ್ಯ ಸಚಿವ ಡಾ.ಸುಧಾಕರ್
ಆರೋಗ್ಯ ಸಚಿವ ಡಾ.ಸುಧಾಕರ್

ಆತ್ಮಹತ್ಯೆ ಯತ್ನಕ್ಕೂ ಮುನ್ನ ಅಶ್ವತ್ಥ್ ಬರೆದಿರುವ ಸುದೀರ್ಘ ಪತ್ರ ಸುದ್ದಿಮನೆಗಳಲ್ಲಿ ಕೆಳ ಹಂತದ ವರದಿಗಾರರರು ತಮ್ಮನ್ನು ನಿಯಂತ್ರಿ ಸುವ ಸಂಪಾದಕೀಯ ಮಂಡಳಿಯಿಂದ  ಅನುಭವಿಸುತ್ತಿರಬಹುದಾದ ಕಿರುಕುಳವನ್ನು ಸಾರಿ ಹೇಳುವಂತಿದೆ. ಆದರೆ ಇಲ್ಲಿ ಸಂಪಾದಕ ರವಿ ಹೆಗಡೆ ಜೊತೆ ಸಚಿವ ಸುಧಾಕರ್ ಅವರ ಹೆಸರೂ ಥಳಕು ಹಾಕ್ಕೊಂಡಿರುವುದು ಕೂಡ ಸಾಕಷ್ಟು ಗುಮಾನಿಗೆ ಎಡೆಮಾಡಿಕೊಟ್ಟಿದೆ. ಸುದ್ದಿಮನೆ ಮೇಲೆ ರಾಜಕಾರಣ ಪ್ರತ್ಯಕ್ಷವಾಗೋ..ಪರೋಕ್ಷವಾಗೋ ಪ್ರಭಾವ ಬೀರುತ್ತಿರಬಹುದಾದ ಕಹಿ ಸತ್ಯವನ್ನು ಇದು ಸಾರಿ ಹೇಳುವಂತಿದೆ.

ಸಂಪಾದಕ ರವಿ ಹೆಗಡೆ ಅವರ ಬಗ್ಗೆ ಕೇಳಿಬಂದಿರುವ ಆರೋಪ ಸಾಮಾನ್ಯವಾದುದೇನಲ್ಲ..ಸಮಾಜವನ್ನು ತಿದ್ದಿ ತೀಡುವ ಅವರ  ಹೊಣೆಗಾರಿಕೆಯನ್ನೇ ಪ್ರಶ್ನಿಸುವಂತಿದೆ.ರಾಜಕಾರಣಿಗಳ ಜೊತೆ ಸಂಪರ್ಕವಿಟ್ಟುಕೊಂಡ್ರೆ ಬೇಸರವಿಲ್ಲ.ಆದ್ರೆ ಅದು ಸುಮಧುರ ಸಂಬಂಧವಾದ್ರೆ ಅಪಾಯ ಎನ್ನುವ ಪತ್ರಿಕೋದ್ಯಮದ ನಾಣ್ಣುಡಿ ಈ ಪ್ರಕರಣದಲ್ಲಿ ನೆನಪಾಗುತ್ತದೆ.

ಆತ್ಮಹತ್ಯೆಗೆ ಯತ್ನಿಸಿದ ಅಶ್ವತ್ಥನಾರಾಯಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು
ಆತ್ಮಹತ್ಯೆಗೆ ಯತ್ನಿಸಿದ ಅಶ್ವತ್ಥನಾರಾಯಣ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದವ ಅಶ್ವತ್ಥನಾರಾಯಣ,ತನ್ನ ಆತ್ಮಹತ್ಯೆಯತ್ನಕ್ಕೆ ಸಂಪಾದಕ ರವಿ ಹೆಗಡೆ ಹಾಗೂ ಸಚಿವ ಸುಧಾಕರ್ ಕಾರಣ ಎನ್ನೋದನ್ನು ಸಾರಿ ಹೇಳುವ ಸುಧೀರ್ಘ ಪತ್ರ ಬರೆದ ಅಶ್ವತ್ಥನಾರಾಯಣ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.ಅವರು ಬರೆದ ಪತ್ರದ ಸಾರಾಂಶ ಹೇಳುವ ಸಂಗತಿಗಳು, ನಿರ್ಭೀತ ಹಾಗೂ ನಿಷ್ಪಕ್ಷಪಾತವಾಗಿ ಕೆಲಸ ಮಾಡುವ ಪತ್ರಕರ್ತರಿಗೆ ಉಳಿಗಾಲವಿಲ್ಲ.

ಮಾದ್ಯಮಗಳನ್ನು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಸಂಪಾದಕರು ಅವರ ಅಡಿಯಾಳಾಗಿ ಕೆಲಸ ಮಾಡುತ್ತಾರೆ.ರಾಜಕಾರಣಿಗಳ ಜತೆಗಿನ ಅಡ್ಜೆಸ್ಟ್ಮೆಂಟ್ ವ್ಯವಹಾರ ವೃತ್ತಿನಿಷ್ಠ ಪತ್ರಕರ್ತರ ಉಸಿರುಗಟ್ಟಿಸುತ್ತದೆ.ರಾಜಕಾರಣಿಗಳ ಹಿತಾಸಕ್ತಿ,ಸಂಪಾದಕರ ಮರ್ಜಿಗೆ ಈಡಾಗಿ ಕೆಲಸ ಮಾಡುವ ಪತ್ರಕರ್ತರಿಗಷ್ಟೇ ಸುದ್ದಿಮನೆಯಲ್ಲಿ ಜಾಗ..ಇಲ್ಲದಿದ್ದರೆ ಗೇಟ್ ಪಾಸ್ ಖಾಯಂ ಎನ್ನುವ ಸಂಗತಿಗಳನ್ನೆಲ್ಲಾ ಸಾರಿ ಹೇಳುತ್ತದೆ.

ಅಂದ್ಹಾಗೆ ಅಶ್ವತ್ಥನಾರಾಯಣ್ ಹೇಳಿಕೊಳ್ಳುವಂತೆ  ಅವರು,ಆರೇಳು ತಿಂಗಳ ಹಿಂದೆಯೇ ಕನ್ನಡಪ್ರಭ ಪತ್ರಿಕೆಗೆ ರಾಜೀನಾಮೆ ನೀಡಿದ್ದರು.ಕೆಲಸಕ್ಕೆ ರಾಜಿನಾಮೆ ನೀಡುವಂತೆ ತಮ್ಮನ್ನು ಒತ್ತಾಯಯಿಸಲಾಗಿತ್ತು.ಇದಕ್ಕೆ ಸಚಿವ ಸುಧಾಕರ್  ಕಾರಣ. ಸಚಿವರ ಮಾತು ಕೇಳಿ ಸಂಪಾದಕ ರವಿ ಹೆಗಡೆ ಇಂತದ್ದೊಂದು ಕೆಲಸ ಮಾಡಿದ್ರು.ನಾನು ಯಾವುದೇ ವರದಿ-ಲೇಖನ ಕಳುಹಿಸಿದ್ರೂ ಕಾರಣ ನೀಡದೆ ಅವನ್ನು ತಡೆ ಹಿಡಿಯುತ್ತಿದ್ದರು.ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರಂತೆ.ತಮ್ಮ ನೋವನ್ನು ಚಿಕ್ಕಬಳ್ಳಾಪುರ ಪತ್ರಿಕಾ ಮಿತ್ರರಲ್ಲಿಯೂ ಅವರು ತೋಡಿಕೊಂಡಿದ್ದರಂತೆ.

ಎಷ್ಟೇ ವಸ್ತುನಿಷ್ಟ ವರದಿಗಳನ್ನು ಬರೆದರೂ ಸಂಪಾದಕೀಯ ಮಂಡಳಿ ಅವನ್ನು ತಡೆಹಿಡಿಯುತ್ತಿದ್ದರಿಂದ ತೀವ್ರ ಬೇಸರಗೊಂಡು ಸಾಕಷಷ್ಟು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದೆ ಎಂದು ಕೂಡ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡಪ್ರಭದಿಂದ ಹೊರ ಬಂದ ಮೇಲಂತೂ ತೀವ್ರ ಖಿನ್ನತೆಗೆ ಒಳಗಾಗಿದ್ದ ಅಶ್ವತ್ಥನಾರಾಯಣ ಅವರಿಗೆ ಪತ್ರಿಕೋದ್ಯಮದ ಬಗ್ಗೆ ತುಂಬಾ ಬೇಸರವಿತ್ತು.

ಅದಕ್ಕಾಗಿಯೇ ಪತ್ರಿಕೋದ್ಯಮ ಕ್ಷೇತ್ರದಿಂದ ದೂರ ಉಳಿದು ತೋಟಗಾರಿಕೆ, ಕೃಷಿ ಚಟುವಟಿಕೆಯಲ್ಲಿ ತೊಡಗುವುದಾಗಿ ಹೇಳಿಕೊಂಡಿದ್ದರು. ಆದರೆ ಏಕಾಏಕಿ ಆತ್ಮಹತ್ಯೆಯತ್ನ ಅದಕ್ಕೆ ಕಾರಣವಾದ ಸಂಗತಿಗಳ ಪೋಸ್ಟೊಂದನ್ನು ಫೇಸ್ ಬುಕ್ ನಲ್ಲಿ ಹಾಕಿ ನಾಪತ್ತೆಯಾಗಿದ್ರು. ಆತಂಕಗೊಂಡ ಪೊಲೀಸ್ ಇಲಾಖೆ ಸತತ 5 ಗಂಟೆಗಳ ಕಾಲ ನಿರಂತರ ಹುಡುಕಾಟದ ನಂತರ ಅವರನ್ನು ಪತ್ತೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೆಲಸ ಕಳೆದುಕೊಂಡ ಕಾರಣಕ್ಕೆ ಸಹಜವಾಗೇ ಸಿಟ್ಟು-ಸೆಡವು-ಅಸಹನೆ-ಆಕ್ರೋಶಗಳಿರುತ್ವೆ.ಆದ್ರೆ ಅದಕ್ಕೆ ರವಿ ಹೆಗಡೆ ಅವರೇ ಕಾರಣ ಎನ್ನುವ ಪೂರ್ವಾಗ್ರಹಕ್ಕೆ ಒಳಗಾಗಿ ಮಾನಸಿಕ ಖಿನ್ನತೆ ಒಳಗಾಗಿ ಈ ಪತ್ರ ಬರೆಯಲಾಯಿತಾ ಗೊತ್ತಿಲ್ಲ..ಒಂದಂತೂ ಸತ್ಯ, ಆತ್ಮಹತ್ಯೆ ಯತ್ನಕ್ಕೂ ಮುನ್ನ ಬರೆದಿರುವ ಪತ್ರದಲ್ಲಿನ ಸಂಗತಿಗಳ ಸತ್ಯಾಸತ್ಯತೆ ಹೊರಬೀಳಲೇಬೇಕಿದೆ.

ಪತ್ರದಲ್ಲಿರೋದೆಲ್ಲಾ ಸತ್ಯ ಎಂದು ಹೇಗೆ ನಂಬಲಿಕ್ಕಾಗೋದಿಲ್ವೋ ಹಾಗೆಯೇ ಅವೆಲ್ಲಾ ಸುಳ್ಳು..ಮಾನಸಿಕ ಖಿನ್ನತೆಯಿಂದ ಬರೆದ ಸಾಲುಗಳು ಎಂದು ಸಾರಾಸಗಟಾಗಿ ತಳ್ಳಾಕುವುದು ಕಷ್ಟ.ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಪತ್ರಕರ್ತನೋರ್ವ ತಲುಪುತ್ತಾನೆ ಎನ್ನೋ ಗಂಭೀರ ಸಂಗತಿ ಇದೆಯೆಲ್ಲಾ ಅದರ ಹಿಂದಿರುವ ಸತ್ಯ ಮಾತ್ರ ಹೊರಬರಲೇಬೇಕಿದೆ. ಕನ್ನಡ ಫ್ಲಾಶ್ ನ್ಯೂಸ್ ನ ಆಶಯವೂ ಅದೇ..

ಪತ್ರಕರ್ತ ಹಾಗೂ ಮಾಜಿ ಕನ್ನಡಪ್ರಭ ಪತ್ರಿಕೆಯ ಮಾಜಿ ವರದಿಗಾರ ಅಶ್ವತ್ಥನಾರಾಯಣ ಅವರು ಬರೆದಿರುವ ಡೆತ್ ನೋಟ್ ನ ಯಥಾವತ್ ಬರಹ..

ಸ್ನೇಹಿತರೇ ನಮಸ್ಕಾರ, ಹಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂಬ ಉದ್ಧೇಶದಿಂದ ತುಂಬಾ ದಿನಗಳ ನಂತರ ನಾನು ಮುಖಪುಟದಲ್ಲಿ ಬರೆಯುತ್ತಿದ್ದೇನೆ…
ಸಚಿವ ಸುಧಾಕರ್ ಅವರಿಗೆ ನೀವು ಅಲ್ಲಿರುವುದು ಸಮಾಧಾನ ಇಲ್ಲ. ಹಾಗಾಗಿ ಸಂಪಾದಕರಾದ ರವಿ ಹೆಗಡೆ ಅವರು ಮುಂದಿನ ತಿಂಗಳಿಗೆ ನಿಮ್ಮನ್ನು ತೆಗೆಯುವ ಸಾಧ್ಯತೆ ಇದೆ. ಹಾಗಾಗಿ ನೀವು ಮತ್ತೊಂದು ಉದ್ಯೋಗ ನೋಡಿಕೊಳ್ಳುವುದು ಉತ್ತಮ… ಹೀಗಂತ ಹೇಳಿದ್ದು ಕನ್ನಡಪ್ರಭದ ಸಮನ್ವಯ ಸಂಪಾದಕರು ಹಾಗೂ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು. ಕೊ

ರೋನ ತೀವ್ರವಾಗಿರುವ ಸಮಯದಲ್ಲಿ ಕೆಲಸದಿಂದ ತೆಗೆಯುವ ವಿಚಾರ ತಿಳಿಯುತ್ತಿದ್ದಂತೆ ನನ್ನ ಕಾಲ ಕೆಳಗಿನ ಭೂಮಿ ಕುಸಿದಂತಾಗಲಿಲ್ಲ. ಕಾರಣ ಇದು ನಾನು ನಿರೀಕ್ಷೆ ಮಾಡಿದ್ದ ವಿಚಾರವೇ. ಯಾವಾಗಲೋ ಆಗಬೇಕಿದ್ದ ವಿಚಾರ ಈಗ ಎದುರಾಗಿದೆ ಅಷ್ಟೇ ಎಂದು ನಾನು ಆಗಲೇ ಮಾನಸಿಕವಾಗಿ ಸಿದ್ಧವಾಗಿದ್ದೆ. ಹಾಗಾಗಿ ಕಾರಣ ಹೇಳಬಹುದೇ ಸರ್ ಎಂದು ವಿನಯವಾಗಿಯೇ ಕೇಳಿದೆ.ಗೊತ್ತಿಲ್ಲ ಸುಧಾಕರ್ ಸಂಪಾದಕರ ತಲೆಯಲ್ಲಿ ಏನು ತುಂಬಿದ್ದಾರೋ ಗೊತ್ತಿಲ್ಲ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ, ಇದೇ ಕಾರಣಕ್ಕೆ ಕಳೆದ ನಾಲ್ಕು ವರ್ಷಗಳಿಂದ ನಿಮಗೆ ವೇತನ ಭಡ್ತಿ ನೀಡಿಲ್ಲ. ಒಂದೇ ಸಲಕ್ಕೆ ಹೇಳಿದರೆ ನೀವು ಕುಗ್ಗಿ ಹೋಗುತ್ತೀರಿ ಎಂಬ ಕಾರಣಕ್ಕೆ ನಾನು ಮೊದಲೇ ಎಚ್ಚರಿಕೆ ಕೊಡುತ್ತಿದ್ದೇನೆ ಎಂದು ಹೇಳಿದರು.

ಇದಾದ ನಂತರ ಜುಲೈ 29ರಂದು ವರ ಮಹಾಲಕ್ಷ್ಮೀ ಹಬ್ಬದ ದಿನ ಇದೇ ಮಲ್ಲಿಕಾರ್ಜುನಯ್ಯ ಅವರು ಕರೆ ಮಾಡಿ ನೀವು ಬೆಂಗಳೂರಿನಲ್ಲಿ ಕೆಲಸ ಮಾಡುವಿರಾ ಎಂದು ಕೇಳಿದರು. ನಾನು ಮಾಡುವುದಾಗಿ ಹೇಳಿದೆ. ಸರಿ ಎಂದು ಕರೆ ಕಟ್ ಮಾಡಿದ ಅವರು, ನಂತರ ಕರೆ ಮಾಡಿ ಆ.1 ರಿಂದ ನೀವು ಬೆಂಗಳೂರಿನ ಕಚೇರಿಯಲ್ಲಿ ಕೆಲಸ ಮಾಡಿ ಎಂದರು. ಚಿಕ್ಕಬಳ್ಳಾಪುರಕ್ಕೆ ಯಾರು ಬರುತ್ತಾರೆ ಸರ್ ಎಂದು ಕೇಳಿದೆ. ಅದೆಲ್ಲ ನಿಮಗ್ಯಾಕೆ, ನೀವು ಬಂದು ಬೆಂಗಳೂರಿನಲ್ಲಿ ಕೆಲಸ ಮಾಡಿ ಎಂದು ಹೇಳಿದರು. ನಂತರ ಜುಲೈ 31ರಂದು ಕರೆ ಮಾಡಿ ಹೊಸ ವರದಿಗಾರರು ಆಗಸ್ಟ್ 5ರಿಂದ ಬರುವವರಿದ್ದಾರೆ. ಹಾಗಾಗಿ ನೀವು ಆಗಸ್ಟ್ 5ರವರೆಗೂ ಅಲ್ಲಿಯೇ ಕೆಲಸ ಮಾಡಿ, ಅವರು ಬಂದ ನಂತರ ಅವರಿಗೆ ಸುದ್ದಿ ಕಳುಹಿಸುವ ವಿಧಾನ ತಿಳಿಸಿ, ಆಗಸ್ಟ್ 7ರಿಂದ ಬೆಂಗಳೂರಿಗೆ ಬನ್ನಿ ಎಂದರು.

ಇದರಿಂದ ನಾನು ಬರುವುದಿಲ್ಲ ಕೆಲಸಕ್ಕೆ ರಾಜಿನಾಮೆ ನೀಡುತ್ತೇನೆ ಎಂದು ಹೇಳಿದೆ. ಕೂಡಲೇ ರಾಜಿನಾಮೆಯನ್ನೂ ಸಲ್ಲಿಸಿದೆ. ಅಂದರೆ ನಾನು ಕನ್ನಡಪ್ರಭದಲ್ಲಿ ಕಲಸಕ್ಕೆ ರಾಜಿನಾಮೆ ನೀಡಲು ಈಗಿನ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಎಂಬುದನ್ನು ಸ್ವತಃ ಕನ್ನಡಪ್ರಭ ಸಮನ್ವಯ ಸಂಪಾದಕರಾಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಅವರು ಹೇಳಿದ್ದರಿಂದ ಸುಧಾಕರ್ ಅವರಿಗೆ ನಾನು ಮಾಡಿರುವ ದ್ರೋಹವಾದರೂ ಏನು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಂಡೆ. ಆದರೆ ಅದು ನನ್ನ ಅರಿವಿಗೆ ಬರಲಿಲ್ಲ ಸರಿ ಎಂದು ಸುಮ್ಮನಾದೆ.

ನಂತರ ನಾನು ವಿಶ್ವವಾಣಿ ಜಿಲ್ಲಾ ವರದಿಗಾರನಾಗಿ ನೇಮಕವಾದೆ. ಅದರಲ್ಲಿ ಬೆಟ್ಟಿಂಗ್ ಗೆ ಸಂಬಂಧಿಸಿ ಸುದ್ದಿಯೊಂದನ್ನು ಬರೆದೆ. ಇದಕ್ಕೆ ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಅವರು ಕರೆ ಮಾಡಿ ನನ್ನೊಂದಿಗೆ ವಾದ ಮಾಡಿದರು. ನಂತರ ಇದಕ್ಕೆ ಸಂಬಂಧಿಸಿ ಚಿಂತಾಮಣಿಯಲ್ಲಿ ಕನ್ನಡಪ್ರಭ ವರದಿಗಾರನಾಗಿದ್ದವರನ್ನು ಬಂಧಿಸಲಾಯಿತು. ಈ ಎಲ್ಲ ವಿಚಾರಗಳು ನಡೆದಾಗಲೂ ನಾನು ಸುಮ್ಮನಿದ್ದೆ. ಆದರೆ ವಿನಾಕಾರಣ ನನ್ನನ್ನು ಈ ಕೇಸ್ ನಲ್ಲಿ ಸಿಕ್ಕಿಸುವ ಪ್ರಯತ್ನವನ್ನು ಬಟ್ಲಹಳ್ಳಿ ಠಾಣೆಯ ಪಿಎಸೈ ಪಾಪಣ್ಣ ಮತ್ತು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಮಾಡಿದರು. ಸುಳ್ಳು ಪ್ರಕಣದಲ್ಲಿ ಸಿಕ್ಕಿಸುವುದು ಹೊಸದೇನಲ್ಲ, ಅಲ್ಲದೆ ಇಂತಹ ಅನೇಕ ಪ್ರಕರಣಗಳನ್ನು ನಾನು ಈಗಾಗಲೇ ಎದುರಿಸಿ ಬಂದಿದ್ದೇನೆ. ಆದರೆ ಇದಕ್ಕೆ ನಮ್ಮ ಪತ್ರಕರ್ತರೇ ಭಾಗಿಯಾಗಿದ್ದಾರೆ ಎಂಬ ವಿಚಾರ ತಿಳಿದು ನನಗೆ ತುಂಬಾ ನೋವಾಯಿತು. ನನ್ನಿಂದ ಸಹಾಯ ಪಡೆದ ಪತ್ರಕರ್ತರೇ ಈ ಷಡ್ಯಂತರ ಹೆಣೆದು ನನ್ನನ್ನು ಜೈಲಿಗೆ ಕಳುಹಿಸಲೇಬೇಕು ಎಂಬ ಹಠ ತೊಟ್ಟಿದ್ದಾರೆ ಎಂಬುದು ತಿಳಿದ ನಂತರ ನನ್ನ ಮನಸ್ಸಿಗೆ ತುಂಬಾ ನೋವಾಯಿತು.

ಇವರು ಹೆಣೆದಿರುವ ಸುಳ್ಳು ಷಡ್ಯಂತರದಲ್ಲಿ ನಾನು ಗೆದ್ದು ಬರುವುದು ಕಷ್ಟವೇನಲ್ಲ. ಆದರೆ ನನ್ನ ವಿರುದ್ಧ ರಾಜ್ಯ ಸರ್ಕಾರದ ಪ್ರಭಾವಿ ಸಚಿವರು, ಜಿಲ್ಲೆಯ ಪ್ರಭಾವಿ ಪೊಲೀಸ್ ಅಧಿಕಾರಿಗಳು ಮತ್ತು ಪ್ರಭಾವಿ ಪತ್ರಕರ್ತರು ಸೇರಿ ನನ್ನ ವೃತ್ತಿ ಜೀವನ ಮುಗಿಸಲು ಯತ್ನಿಸುತ್ತಿರುವುದನ್ನು ಕಂಡು ತೀವ್ರ ನೊಂದಿದ್ದೇನೆ. ಈ ಬಗ್ಗೆ ಸಚಿವ ಸುಧಾಕರ್ ಅವರಿಗೆ ಕರೆ ಮಾಡುವಂತೆ ಸ್ವತಃ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಹಾಗೂ ಉದಯ ಟಿವಿ ಮಾಜಿ ವರದಿಗಾರರಾಗಿದ್ದ ಜಯರಾಮ್ ಅವರೇ ಹೇಳಿದರು. ಹಾಗಾಗಿ ಸಚಿವರಿಗೆ ನಾನು ಕರೆ ಮಾಡಿದೆ. ಎಸ್ಪಿ ಮತ್ತು ಪಾಪಣ್ಣ ಅವರಿಗೆ ಹೇಳುವುದಾಗಿ ಸಚಿವರು ಭರವಸೆ ನೀಡಿದರು.

ಆದರೆ ಅದೇ ದಿನ ನನಗೆ ಪಿಎಸೈ ಪಾಪಣ್ಣ ಅವರಿಂದ ಕರೆ ಬಂತು. ನಂತರ ಈ ವಿಚಾರ ಜಯರಾಮ್ ಅವರಿಗೆ ತಿಳಿಸಿದೆ. ಮತ್ತೊಂದು ಬಾರಿ ಬಟ್ಲಹಳ್ಳಿ ಪೊಲೀಸ್ ಠಾಣೆಯ ಕೇಸ್ ವರ್ಕರ್ ಎಂದು ಹೇಳಿಕೊಂಡು ಅರುಣ್ ಎಂಬುವರು ಕರೆ ಮಾಡಿದರು. ಆಗಲೂ ಜಯರಾಮ್ ಅವರಿಗೆ ತಿಳಿಸಿದೆ. ನಾನು ಸಚಿವರನ್ನು ಮಾತನಾಡುವುದಾಗಿ ಹೇಳಿದರು. ಆದರೆ ನಂತರ ಕರೆ ಮಾಡಿದರೆ ಸಚಿವರು ಕರೆ ಸ್ವೀಕರಿಸುತ್ತಿಲ್ಲ. ನೀವು ಸಚಿವರನ್ನೂ ಕೆಟ್ಟದಾಗಿ ಬೈಯ್ದಿದ್ದೀರಿ ಎಂಬಿತ್ಯಾದಿ ವಿಚಾರಗಳನ್ನು ಹೇಳಿದರು. ಇದೂ ನನ್ನ ಮನಸ್ಸಿಗೆ ಘಾಸಿಗೊಳಿಸಿತು.
ನಂತರ ಸಚಿವರು ಸಿಕ್ಕಿದ್ದರೆ ನೀವು ಯೋಚನೆ ಮಾಡಬೇಡಿ, ವಿಚಾರಣೆಗೆ ಹೋಗಬೇಡಿ ಅಂತ ಹೇಳಿದರು. ಆದರೂ ಪಿಎಸ್ಐ ಪಾಪಣ್ಣ ಮತ್ತೆ ಕರೆ ಮಾಡಿ ಜೋರು ಮಾಡಿದರು. ವಿಚಾರಣೆಗೆ ಬರಲೇ ಬೇಕು ಎಂದು ಹೇಳಿದರು.

ಇಬ್ಬರು ಪತ್ರಕರ್ತರು ನನ್ನ ವಿರುದ್ಧ ಈ ಪ್ರಕಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ನಾನು ಚಿಕ್ಕಬಳ್ಳಾಪುರಕ್ಕೆ ಬಂದಾಗಲಿಂದ ನನ್ನ ಪರವಾಗಿರುವಂತೆ ಇದ್ದ ಮತ್ತು ಕಳೆದ ಪತ್ರಕರ್ತರ ಸಂಘದ ಚುನಾವಣೆ ವೇಳೆ ನಮ್ಮ ಪರವಾಗಿರುವಂತೆ ವರ್ತಿಸಿದ್ದ ಹಿರಿಯ ಪತ್ರಕರ್ತರು ನನ್ನ ವಿರುದ್ಧ ಚಿಂತಾಮಣಿ ಪತ್ರಕರ್ತರೊಂದಿಗೆ ಏನೇನು ಮಾತನಾಡಿದ್ದಾರೆ ಎಂಬುದು ತಿಳಿದು ತೀರಾ ನೋವಾಯಿತು. ಇಂತಹ ಪತ್ರಕರ್ತರ ಯಾಕೆ ಬೆಳೆಯಲಿಲ್ಲ ಎಂದು ಚಿಂತಿಸುತ್ತಿದ್ದೆ. ಈಗ ಅರ್ಥವಾಗಿದೆ ಇವರು ಯಾಕೆ ಬೆಳೆಯಲಿಲ್ಲ ಎಂಬುದು. ಒಬ್ಬ ಸಾಮಾನ್ಯ ಪತ್ರಕರ್ತನಾಗಿದ್ದ ನನ್ನ ವಿರುದ್ದ ಪೊಲೀಸ್ ಇಲಾಖೆ, ಪ್ರಭಾವಿ ಸಚಿವರು, ಒಂದು ಪ್ರಮುಖ ಚಾನಲ್ ಮತ್ತು 50 ವರ್ಷದ ಪತ್ರಿಕೆಯ ಸಂಪಾದಕರಾಗಿರುವ ರವಿಹೆಗಡೆ, ಸಮನ್ವಯ ಸಂಪಾದಕರಾಗಿರುವ ಬಿ.ವಿ. ಮಲ್ಲಿಕಾರ್ಜುನಯ್ಯ ಇಷ್ಟು ಮಂದಿ ಸೇರಿ ಷಡ್ಯಂತರ ರೂಪಿಸಿ ನನ್ನನ್ನು ಮುಗಿಸುವ ಯತ್ನ ಮಾಡುತ್ತಿರುವುದು ಕಂಡು ತೀರಾ ನೋವಾಗಿದೆ.

ಹಾಗಾಗಿ ಇಂತಹ ತೀರ್ಮಾನಕ್ಕೆ ಬಂದಿದ್ದೇನೆ. ಬರವಣಿಗೆಯಿಂದಲೇ ಜೀವನ ರೂಪಿಸಿಕೊಳ್ಳಬೇಕು ಎಂದು ಭಾವಿಸಿದ್ದ ನನ್ನ ಕೊನೆಯ ಬರವಣಿಗೆ ಇದಾಗ್ಡಹುದು ಎಂದು ಎಣಿಸಿರಲಿಲ್ಲ.
ನಾನು ಇದನ್ನು ಬರೆದಿರುವುದರಿಂದ ನ್ಯಾಯ ಸಿಗಲಿದೆ ಎಂಬ ನಂಬಿಕೆ ಚೂರೂ ಇಲ್ಲ. ಯಾಕೆಂದರೆ ಮಾದ್ಯಮ, ಪೊಲೀಸ್ ಮತ್ತು ಸರ್ಕಾರ ಒಂದಾಗಿರುವಾಗ ನನಗೆ ನ್ಯಾಯ ಸಿಗುವುದು ಅಸಾಧ್ಯ. ಆದರೆ ನನ್ನ ಇಬ್ಬರು ಎಳೆಯ ಮಕ್ಕಳು ಮತ್ತು ವೃದ್ಧ ತಾಯಿಯನ್ನು ಬಿಟ್ಟು ನಾನು ಇಂತಹ ತೀರ್ಮಾನಕ್ಕೆ ಬಂದಿರುವುದಕ್ಕೆ ನನಗೂ ನೋವಿದೆ. ಹಾಗಂತ ನಾನು ಕ್ಷಣಿಕ ಆವೇಶದಲ್ಲಿಯೋ ಅಥವಾ ದುಡುಕಿಯೋ ಇಂತಹ ತೀರ್ಮಾನ ಕೈಗೊಂಡಿಲ್ಲ. ನಾನು ನೂರಕ್ಕೆ ನೂರರಷ್ಟು ಪ್ರಾಮಾಣಿಕ ಎಂದು ಎದೆ ಮುಟ್ಟಿ ಹೇಳುತ್ತಿದ್ದೇನೆ.

ಇಂತಹ ಪ್ರಾಮಾಣಿಕತೆ ವಿರುದ್ಧ ಇಂದು ಭ್ರಷ್ಟರ ಕೈ ಮೇಲಾಗಿರಬಹುದು. ಆದರೆ ಒಂದಲ್ಲ ಒಂದು ದಿನ ನನ್ನ ಮಕ್ಕಳ ಶಾಪಕ್ಕೆ ಇವರೆಲ್ಲ ಗುರಿಯಾಗಬೇಕಾಗುತ್ತೆ. ಅಲ್ಲದೆ ಒಂದಲ್ಲ ಒಂದು ದಿನ ನನ್ನ ಸಾವಿಗೂ ಇವರು ಉತ್ತರಿಸಬೇಕಾಗುತ್ತೆ. ಇಂದು ಅಧಿಕಾರದ ಮದದಲ್ಲಿ ಎಲ್ಲದರಿಂದ ಪಾರಾದರೂ ಮುಂದೊಂದು ದಿನ ಇವರು ತಪ್ಪದೇ ಶಿಕ್ಷೆ ಅನುಭವಿಸಬೇಕಾಗುತ್ತೆ. ಆದರೆ ಅಂದು ನಾನಿರುವುದಿಲ್ಲ. ಇರುವವರಾದರೂ ಇದನ್ನು ಸ್ಮರಿಸಿಕೊಳ್ಳಲಿ ಎಂಬ ಕಾರಣಕ್ಕೆ ಇಷ್ಟೆಲ್ಲ ಬರೆದಿದ್ದೀನಿ.

ಇನ್ನು ಎಸ್ಪಿ ಮಿಥುನ್ ಕುಮಾರ್ ಅವರ ಗಮನಕ್ಕೆ…
ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಎರಡು ಬಾರಿ ಅಮಾನತು ಆಗಿ, ಒಮ್ಮೆ ಹಿಂಬಡ್ತಿ ಪಡೆದಿದ್ದ ಪಿಎಸ್ಐ ಮಾತು ನಂಬಿ ಪ್ರಾಮಾಣಿಕ ನಾಗಿದ್ದು ನನ್ನ ವಿರುದ್ಧ ಹಗೆ ಸಾಧಿಸಿದ ಎಸ್ಪಿ ಮಿಥುನ್ ಕುಮಾರ್ ಅವರಿಗೂ ದೇವರು ಒಳ್ಳೆಯದು ಮಾಡಲಿ. ಮಾಡುತ್ತಾರೆ ಕೂಡಾ.
ಸನ್ಮಾನ್ಯ ಸಚಿವ ಸುಧಾಕರ್ ಅವರ ಗಮನಕ್ಕೆ…

ಸರ್ ನಮಸ್ಕಾರ, ಪ್ರಾಮಾಣಿಕ ನಾಗಿದ್ದು, ನಿಮ್ಮ ವಿರುದ್ಧ ಯಾವುದೇ ಸುದ್ದಿ ಬರೆಯದಿದ್ದರೂ ನನ್ನ ಕೆಲಸ ತೆಗೆಸಿದರಿ, ಮತ್ತೆ ಪತ್ರಿಕೆಗೆ ಬಂದೆ ಅಂತ ಕೇಸ್ ಹಾಕಿಸಲು ಮುಂದಾಗಿರುವ, ನನಗೆ ಸಹಾಯ ಮಾಡುವ ಸೋಗಿನಲ್ಲಿ ಪತ್ರಕರ್ತರನ್ನು ಮತ್ತು ಪೊಲೀಸ್ ರನ್ನು ನನ್ನ ವಿರುದ್ಧ ಎತ್ತಿಕಟ್ಟಿದಿರಿ, ನಿಮಗೆ ಒಳ್ಳೆಯದಾಗಲಿ. ಪ್ರಾಮಾಣಿಕತೆ ಮತ್ತು ಸತ್ಯ ಬರೆದರೆ ಇದೇ ಸ್ಥಿತಿ ಎಂಬ ಸತ್ಯ ಅರ್ಥ ಆಗಿದೆ. ಇವೆರಡನ್ನೂ ಬಿಟ್ಟು ಬರೆಯಲು ನನ್ನ ಆತ್ಮ ಸಾಕ್ಷಿ ಒಪ್ಪಲ್ಲ ಹಾಗಾಗಿ ಅಂತಿಮವಾಗಿ ಉಳಿದಿದ್ದು ಇದು ಒಂದೇ ದಾರಿ.
1. ಡಾ. ಕೆ. ಸುಧಾಕರ್
2. ರವಿ ಹೆಗಡೆ
3. ಎಸ್ಪಿ ಜಿ. ಕೆ. ಮಿಥುನ್ ಕುಮಾರ್
4. ಬಿ. ವಿ. ಮಲ್ಲಿಕಾರ್ಜುನ ಯ್ಯಾ
5. ಪಿಎಸ್ಐ ಪಾಪಣ್ಣ

ಇವರ ಜತೆಗೆ ಚಿಕ್ಕಬಳ್ಳಾಪುರದ ಮೂರು ಟಿವಿ ಪತ್ರಕರ್ತರು, ಇಬ್ಬರು ಪತ್ರಿಕೆ ಪತ್ರಕರ್ತರು ಪಿತೂರಿಯಲ್ಲಿದ್ದಾರೆ ಅವರಿಗೆಲ್ಲ ದೇವರು ಒಳ್ಳೆಯ ದು ಮಾಡಲಿ.
ನನ್ನ ಪ್ರಾಮಾಣಿಕತೆ ನನಗೆ ಮತ್ತು ನನ್ನ ಕುಟುಂಬಕ್ಕೆ ಮುಳುವಾಗಿದೆ. ನನ್ನ ಹೆಂಡ್ತಿ ಮಕ್ಕಳು ಮತ್ತು ನನ್ನ ತಾಯಿ ಅವರನ್ನು ನೆನಸಿಕೊಂಡರೆ ದುಖ ಉಮ್ಮಳಿಸಿ ಬರುತ್ತೆ. ಏನೂ ಮಾಡಲು ಸಾಧ್ಯವಿಲ್ಲ ಈ ಜನ್ಮಕ್ಕಿಷ್ಟೆ.

ಇನ್ನು ಕನ್ನಡಪ್ರಭ ಸಮನ್ವಯ ಸಂಪಾದಕ ಬಿವಿಎಂ ಎಂಬ ವ್ಯಕ್ತಿ ಜಾಹಿರಾತು ಬಾಕಿ ನಾನು ಇಲ್ಲದಿದ್ದರೂ, ನಮ್ಮ ತಂದೆ ತೀರಿಕೊಂಡಿರುವ ವಿಷಯ ತಿಳಿದು ಉದ್ದೇಶಪೂರ್ವಕವಾಗಿ ನನ್ನ ವೇತನ ತಡೆ ಹಿಡಿದರು. ಪ್ರತಿ ತಿಂಗಳು ಐದನೇ ತಾರೀಖು ಬರಬೇಕಾದ ವೇತನ ಹತ್ತನೇ ತಾರೀಖಾದರೂ ಬರಲಿಲ್ಲ. ಎಚ್ ಆರ್ ನಲ್ಲಿ ಕೇಳಿದರೆ ತಡೆ ಹಿಡಿಯಲು ಬಿವಿಎಂ ಹೇಳಿರುವುದಾಗಿ ತಿಳಿಸಿದರು. ಅಕೌಂಟ್ಸ್ ನಲ್ಲಿ ನನ್ನ ಬಾಕಿ ಎಷ್ಟಿದೆ ಎಂದು ಕೇಳಿದರೆ ಖಾಸಗಿ ಜಾಹಿರಾತಿನ ಯಾವುದೇ ಬಾಕಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಹಾಗಾದರೆ ನನ್ನ ವೇತನ ತಡೆಹಿಡಿಯಲು ಕಾರಣ ಕೇಳಿದರೆ ಮತ್ತೆ ಸಚಿವ ಸುಧಾಕರ್ ಹೆಸರು ಕೇಳಿ ಬಂತು. ನನ್ನನ್ನು ಕೆಲಸದಿಂದ ತೆಗೆಯಲು ಸುಧಾಕರ್ ಹೇಳಿದ್ದಾರೆಂದು, ತೆಗೆಯಲು ಕಾರಣ ಇಲ್ಲದಿರುವುದರಿಂದ ನೀವೇ ಬಿಟ್ಟು ಹೋಗಲಿ ಎಂದು ಈ ರೀತಿ ಕಿರುಕುಳ ನೀಡುತ್ತಿರುವುದಾಗಿ ತಿಳಿಯಿತು. ರವಿ ಹೆಗಡೆ ಅವರು ಸಂಪಾದಕರಾಗಿ ಬಂದ ದಿನದಿಂದ ಒಂದು ಅಕ್ಷರ ಸುಧಾಕರ್ ವಿರುದ್ಧ ಬರೆದಿಲ್ಲ,

ನಾನು ಮಾಡದ ತಪ್ಪಿಗೆ ನನ್ನ ವಿರುದ್ಧ ನಗರಸಭೆಯಲ್ಲಿ ಠರಾವು ಮಾಡಲಾಯಿತು. ಆ ತಲೆ ಬರಹ ಕೊಟ್ಟವರು ಡೆಸ್ಕಿನಲ್ಲಿದ್ದವರು. ಅದಕ್ಕೂ ನನಗೂ ಯಾವುದೇ ಸಂಬಂಧ ಇರಲಿಲ್ಲ. ಆಗಲೂ ಸಂಪಾದಕ ರಿಂದ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪೋಲೀಸರ ಲಾಠಿ ಪ್ರಹಾರದಲ್ಲಿ ಯುವಕನೊಬ್ಬ ಸತ್ತರೆ ಆತನಿಗೆ ಹ್ರುದಯ ಕಾಯಿಲೆ ಇತ್ತು ಎಂದು ಸ್ವತಹ ಸಂಪಾದಕರೇ ಕುಳಿತು ಸುದ್ದಿ ಬರೆಸಿದರು. ಹಾಗೆ ಬರೆಸಿದರು ಚಿಕ್ಕಬಳ್ಳಾಪುರ ಡೇಟ್ ಲೈನ್ ಹಾಕಿದರು. ಇದರಿಂದ ಸ್ಥಳೀಯರ ಮುಂದೆ ನಾನು ತಪ್ಪಿತಸ್ಥನಾದೆ. ಕಳೆದ ಐದು ವರ್ಷಗಳಿಂದ ಇಂತಹ ಹಿಂಸೆ ಸಾವಿರಾರು ಅನುಭವಿಸಿದ್ದೇನೆ. ಕಳೆದ ಆರು ತಿಂಗಳಿಂದ ಸಚಿವರ ಪ್ರಚೋದಿತ ಕಿರುಕುಳದಿಂದ ರೋಸಿಹೋಗಿದ್ದೇನೆ. ಹಾಗಾಗಿ ಇಂತಹ ತೀರ್ಮಾನಕ್ಕೆ ಬಂದಿದ್ದೇನೆ. ಇದರಿಂದ ನನಗೆ ನ್ಯಾಯ ಸಿಗದಿರುವುದು, ನನ್ನ ಕುಟುಂಬಕ್ಕೆ ಅನ್ಯಾಯವಾಗಬಹುದು ಆದರೆ ಮತ್ತೊಬ್ಬ ರಿಗೆ ಇಂತಹ ಅನ್ಯಾಯವಾಗಿ ಅವರ ಕುಟುಂಬ ಅನಾಥವಾಗುವುದಾದರೂ ತಪ್ಪಿದರೆ ನನ್ನ ಆತ್ಮಕ್ಕೆ ಶಾಂತಿ ಸಿಗಲಿದೆ.

ನಾನು ವ್ರತ್ತಿಯನ್ನೇ ಬಿಟ್ಟು ಕ್ರಷಿ ಮಾಡಬೇಕು ಅಂತ ತೀರ್ಮಾನಿಸಿ ಸಿದ್ಧತೆಯಲ್ಲಿದ್ದೆ. ಆದರೆ ಸತ್ಯ ಬರೆಯುವುದೇ ಅಪರಾದ ಎಂಬಂತೆ ಇವರೆಲ್ಲ ನಡೆದುಕೊಂಡಿರುವುದು ನನ್ನ ಈ ನಿರ್ಧಾರಕ್ಕೆ ಕಾರಣವಾಗಿದೆ. ಈ ಷಡ್ಯಂತರ ದಲ್ಲಿ ಶಾಮೀಲಾಗಿರುವ ಎಲ್ಲರಿಗೂ ನಮನ ಗಳು.ಸಚಿವ ಸುಧಾಕರ್ ಅವರಿಗೆ ನಮಸ್ಕಾರ ಗಳು, ನನ್ನ ಜೊತೆ ಮಾತನಾಡುವಾಗ ಎಸ್ ಪಿ ಮತ್ತು ಪಿಎಸ್ಐ ಪಾಪಣ್ಣ ಅವರಿಗೆ ಹೇಳುವುದಾಗಿ ಹೇಳಿ, ಮತ್ತೆ ನನ್ನನ್ನೇ ಬೈದಿದ್ದಾನೆ ಬಿಡಬೇಡಿ ಅವನನ್ನು ಅಂತ ಹೇಳಿದ್ದೀ ರಂತೆ. ಹಾಗಂತ ಸ್ವತಹ ಪಿಎಸ್ಐ ಪಾಪಣ್ಣ ಅವರೇ ಶಾಸಕ ಜೆ. ಕೆ. ಕ್ರಷ್ಣಾರೆಡ್ಡಿ ಅವರ ಎದುರಿನಲ್ಲಿಯೇ ಹೇಳಿದ್ದಾರೆ. ಅಂದರೆ ನೀವು ಕೂಡಾ ಒಳಗೊಂದು, ಹೋರಗೋಂದು ಎಂಬದನ್ನು ನಿರೂಪಿಸಿದ್ದೀರಿ. ವೈ. ಎಸ್. ರಾಜಶೇಖರ ರೆಡ್ಡಿ, ಜನಾರ್ಧನ ರೆಡ್ಡಿ ಅವರ ಸ್ಥಿತಿ ಏನಾಗಿದೆ, ನನ್ನ ಕುಟುಂಬವನ್ನು ಬೀದಿ ಪಾಲು ಮಾಡಿದ ನಿಮಗೆ ಇನ್ನೂ ಭಯಂಕರ ಶಿಕ್ಷೆಯೇ ಕಾದಿದೆ. ಆದರೆ ಸಮಯ ಬರಬೇಕು, ಬರುತ್ತೆ.

ಮಿಸ್ಟರ್ ಪಾಪಣ್ಣ…
ನಿಮಗೆ ಅಪಾಲಜಿ ಹೇಳುವುದಾದರೆ ನಾನು ತಪ್ಪು ಒಪ್ಪಿಕೊಂಡಂತೆ. ಮಾಡದ ತಪ್ಪು ಒಪ್ಪಿಕೋಳ್ಳುವುದಕ್ಕಿಂತ ಸಾಯುವುದೇ ಲೇಸು ಎಂಬುದು ನನ್ನ ಅಭಿಪ್ರಾಯ. ಯಾಕೆಂದರೆ ಸತ್ಯ ಏನು ಎಂಬ ವಿಚಾರ ಮಾಡುವವರೇ ಇಲ್ಲ. ನಾನು ಎಂದೂ ಯಾವ ಜಾತಿಯನ್ನು ನಿಂದನೆ ಮಾಡಿಲ್ಲ ಇದು ನಿಮ್ಮ ಕುತಂತ್ರ ದಲ್ಲಿ ಒಂದು ಭಾಗ. ಎಸ್ ಪಿ ಅವರಿಗೆ ಲಾ ಅಂಡ್ ಆರ್ಡರ್ ಗೊತ್ತಿಲ್ಲ ಎಂಬ ವಿಚಾರ ಹೌದು ಅವರು ಮಾತನಾಡಿದ ರೀತಿ ಕಂಡು ನಾನು ಹೇಳಿದ್ದು ನಿಜ ಇದು ಯಾವ ಅಪರಾಧ ಅಂತ ನನಗೆ ಅರ್ಥವಾಗಲಿಲ್ಲ. ಎಸ್ಪಿ ಅವರ ಜತೆ ನಾನು ಮಾತನಾಡಿದ ರೆಕಾರ್ಡಿಂಗ್ ನನ್ನ ಫೋನ್ ನಲ್ಲಿದೆ. ಪಾಪಣ್ಣ ಅವರೇ ನೀವು ಶಾಸಕ ಕ್ರುಷ್ಣಾರೆಡ್ಡಿ ಮುಂದೆ ಹೇಳಿದ್ದು ಎಲ್ಲ ಸುಳ್ಳು ಎಂದು ನನಗೆ ಗೋತ್ತು.

ನಾನು ಸುಧಾಕರ್, ರವಿ ಹೆಗಡೆ ಅವರ ಬಗ್ಗೆ ಮಾತನಾಡಿರುವುದು ನಿಜ. ಉಳಿದಂತೆ ನೀವು ಹೇಳಿದ್ದೆಲ್ಲಾ ಸುಳ್ಳು. ಇನ್ನು ರವಿ ಹೆಗಡೆ ಅವರು ಬೂಟು ನೆಕ್ಕುವ ವಿಚಾರ ಅವರು ಬೂಟು ನೆಕ್ಕಿದ್ದರಿಂದಲೇ ಅಲ್ಲವಾ ನನ್ನ ಕೆಲಸ, ವೇತನ ಭಡ್ತಿ, ಮುಂಬಡ್ತಿ ಎಲ್ಲ ಕಿತ್ತುಕೋಂಡಿದ್ದು. ಇದರಲ್ಲಿ ತಪ್ಪೇನಿದೆ. ನಾಲ್ಕು ವರ್ಷ ನನ್ನನ್ನು ಅಬ್ಬೆ ಪಾರಿ ಮಾಡಿದ ಸಂಪಾದಕವನ್ನು ಬೈದರೆ ನಿಮಗೆ ಯಾಕೆ ಸಂಕಟ ಅರ್ಥವಾಗಲಿಲ್ಲ. ಇಷ್ಟಕ್ಕೂ ಇವರು ದೂರು ಕೊಟ್ಟಿದ್ದಾರೆಯೇ, ಹಾಗಾದರೆ ನಿಮ್ಮ ವ್ರತ್ತಿ ಜೀವನದಲ್ಲಿ ಇಂತಹ ಎಷ್ಟು ಪ್ರಕರಣ ದಾಖಲಿಸಿ ದ್ದೀರಿ. ನಾನು ಮಾತನಾಡಿರುವ ಪ್ರತಿ ಅಕ್ಷರಕ್ಕೆ ನಾನು ಬದ್ಧ ನಾಗಿದ್ದೇನೆ. ನನ್ನ ಮಾತುಗಳಿಗೆ ಯಾರ ಬಳಿಯೂ ಅಪಾಲಜಿ ಕೇಳಬೇಕಾದ ಅಗತ್ಯವಿಲ್ಲ. ನಿಮ್ಮ ಪ್ರಕರಣಗಳಿಗೆ ಹೆದರಿಯೋ, ನಾನು ದುಡಿಕಿಯೋ ಈ ಕೆಲಸ ಮಾಡುತ್ತಿಲ್ಲ ಪಾಪ ನೀವು ಈ ಷಡ್ಯಂತರ ದಲ್ಲಿ ಒಂದು ಪಾತ್ರ ಮಾತ್ರ. ಮುಖ್ಯ ಪಾತ್ರಗಳಾದ ಎಸ್ಪಿ ಮಿಥುನ್ ಕುಮಾರ್, ಸಚಿವ ಸುಧಾಕರ್, ಕನ್ನಡಪ್ರಭ ಸಂಪಾದಕ ರವಿಹೆಗಡೆ ಎಲ್ಲರೂ ಇದ್ದಾರೆ. ನಿಮಗೆ ಹೇಳಿರುವ ಪೋಲೀಸ್ ಅಧಿಕಾರಿ, ರಾಜಕಾರಣಿಗಳು, ಪತ್ರಕರ್ತರು ಮತ್ತು ನೀವು ಚೆನ್ನಾಗಿರಿ.

ನನ್ನೊಂದಿಗೆ ಕನ್ನಡಪ್ರಭ ಸಮನ್ವಯ ಸಂಪಾದಕರು, ಸಚಿವ ಸುಧಾಕರ್ ಅವರು, ಎಸ್ ಪಿ ಮಿಥುನ್ ಕುಮಾರ್ ಅವರು ಮತ್ತು ಉದಯ ಟಿವಿ ಜಯರಾಮ್ ಅವರು ಮಾತನಾಡಿರುವ ಎಲ್ಲ ರೆಕಾರ್ಡಿಂಗ್ ನನ್ನ ಮೋಬೈಲ್ ನಲ್ಲಿ ಭದ್ರಪಡಿಸಿದ್ದೇನೆ. ಕೇಳಬಹುದು.ಸಚಿವ ಸುಧಾಕರ್ ಅವರ ಪಿತೂರಿ, ಕೆಲ ಪತ್ರಕರ್ತರ ಷಡ್ಯಂತರ, ಪೊಲೀಸರ ಭ್ರಷ್ಟಾಚಾರ ಇವಿಷ್ಟು ಈ ದುರಂತಕ್ಕೆ ಕಾರಣ. ಇದಕ್ಕೆ ನ್ಯಾಯ ಈಗ ಸಿಗದಿದ್ದರೂ ಮುಂದೆ ದೇವರ ಕಟಕಟೆಯಲ್ಲಾದರೂ ನ್ಯಾಯ ಸಿಗಲಿದೆ ಅನ್ನೋ ನಂಬಿಕೆ ಇದೆ.

ನೀವು ವಿಚಾರಣೆಗೆ ಹೋಗುವುದು ಬೇಡ ನಾನು ಪಾಪಣ್ಣ ಮತ್ತು ಮಿಥುನ್ ಕುಮಾರ್ ಅವರಿಗೆ ಹೇಳುವುದಾಗಿ ಸುಧಾಕರ್ ಅವರೇ ನನಗೆ ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದ ವಾಟ್ಸ್ ಆಪ್ ಚಾಟ್ ನನ್ನ ಫೋನ್ ನಲ್ಲಿದೆ. ಆದರೆ ಅದೇ ಪಾಪಣ್ಣ ಶಾಸಕ ಜೆ. ಕೆ. ಕ್ರುಷ್ಣಾರೆಡ್ಡಿ ಎದುರಿನಲ್ಲಿ ಹೇಳಿದರು ಸಚಿವ ಸುಧಾಕರ್ ಅವರ ಒತ್ತಡ ಇರುವುದರಿಂದಲೇ ಕೇಸ್ ಕ್ಲೋಸ್ ಮಾಡುತ್ತಿಲ್ಲ ಅಂತ. ಹಾಗಾದರೆ ಸಚಿವ ಸುಧಾಕರ್ ಅವರು ಡಬಲ್ ಗೇಮ್ ಆಡುತ್ತಿದ್ದಾರೆ ಎಂದು ಅರ್ಥವಾಯಿತು. ಸಾಮಾನ್ಯ ಪತ್ರಕರ್ತನ ವಿರುದ್ಧ ನಿಮ್ಮ ಈ ಪಿತೂರಿ ಅಗತ್ಯವಿರಲಿಲ್ಲ. ನನ್ನ ಮಕ್ಕಳು ಇಂದು ಅನಾಥವಾದಂತೆ ನಿಮ್ಮ ಮಕ್ಕಳೂ ಅನಾಥವಾಗುವ ಕಾಲ ದೂರವಿಲ್ಲ. ವೈ. ಎಸ್. ರಾಜಶೇಖರ ರೆಡ್ಡಿ, ಜನಾರ್ಧನ ರೆಡ್ಡಿ ಅರಿಗೆ ಬಂದಿರುವ ಗತಿ ನೀವು ನೋಡಿಯೂ ಈಗ ನಡೆದುಕೋಂಡಿ ರವುದು ನಿಮ್ಮ ಅದಹಪತನದ ಅಂತಿಮ ಗಡಿ.

ಯಾವುದೇ ತಪ್ಪು ಮಾಡದ ನನ್ನನ್ನು ಜೈಲಿಗೆ ಕಳುಹಿಸುವುದು ನಿಮ್ಮ ಧ್ಯೇಯ ವಾಗಿದ್ದರೆ ಎಲ್ಲ ತಪ್ಪು ಮಾಡಿದ ನಿಮಗೆ ಯಾವ ಶಿಕ್ಷೆಯಾಗಬೇಕು, ತಾಯಿ ಅನಾರೋಗ್ಯ ನೋಡಲಾರದ ನೀವು ನಿಮ್ಮ ಮಕ್ಕಳ ಆರೋಗ್ಯಕರ ಜೀವನ ನೋಡಲು ಸಾಧ್ಯವೇ ಇಲ್ಲ. ನನ್ನ ಮಕ್ಕಳು ಅನಾಥವಾದ ಶಾಪ ನಿಮ್ಮನ್ನು ಬಿಡಲ್ಲ. ನನ್ನ ಮಕ್ಕಳು ಮತ್ತು ನನ್ನ ತಾಯಿಯನ್ನು ನನ್ನಷ್ಟೆ ಪ್ರೀತಿಯಿಂದ ನನ್ನ ಪತ್ನಿ ನೋಡಿಕೋಳ್ಳತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿಯೇ ನಾನು ಸಾವಿನ ಯೋಚನೆ ಮಾಡಿದ್ದೇನೆ. ನಿಮ್ಮ ಅಂತ್ಯ ನಾನು ನೋಡದಿದ್ದರೂ ಇಡೀ ರಾಜ್ಯಕ್ಕೆ ಅರಿವಾಗಲಿದೆ. ಇಂದು ಅಧಿಕಾರ ಮದದಿಂದ ನೀವು ಮಾಡಿರುವ ಪ್ರತಿ ತಪ್ಪು ನಿಮ್ಮ ಅಂತಿಮ ಕ್ಷಣದಲ್ಲಿ ನಿಮ್ಮನ್ನು ಮೋದಲಿಸದಿರಲ್ಲ.

ಶಾಸಕ ಜೆ. ಕೆ. ಕ್ರುಷ್ಣಾರೆಡ್ಡಿ ಅವರ ಎದುರಿನಲ್ಲಿ ಪಿಎಸ್ಐ ಪಾಪಣ್ಣ ಅವರೇ ಹೇಳಿದಂತೆ ನಾನು ಎಸ್ಪಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದೇನಂತೆ. ಹಾಗಾಗಿ ಅವನನ್ನು ಬಿಡಬೇಡಿ ಅಂತ ಹೇಳಿದ್ದಾ ರಂತೆ. ಎಸ್ಪಿ ಅವರೊಂದಿಗೆ ನಾನು ಮಾತನಾಡಿದ ರೆಕಾರ್ಡ್ ಫೋನ್ ನಲ್ಲಿಯೇ ಇದೆ. ಎಲ್ಲಿಯಾದರೂ ಏಕವಚನ ಇದೆಯೇ ಪರೀಕ್ಷಿಸಿ. ಎಲ್ಲ ರೆಕಾರ್ಡಿಂಗ್ಸ್ ಪಬ್ಲಿಕ್ ಟಿವಿ ರಂಗನಾಥ್, ಬಿಜೆಪಿಯ ಸಂತೋಷಿ ಜೀ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರಿಗೂ ಕಳುಹಿಸುತ್ತಿದ್ದೇನೆ. ನನ್ನ ತಪ್ಪಿದ್ದರೆ ಬೇಡ ತಪ್ಪಿಲ್ಲವೆಮದರೆ ವಾಸ್ತವ ಹೋರಾಟ ಬರಲು ಪ್ರಯತ್ನಿಸಿ.

ನನ್ನ ಮರಣ ಪತ್ರ ಇಷ್ಟು ದೀರ್ಘ ವಾಗಿರಲು ಕಾರಣ ಇದು ಒಂದೇ ದಿನ ಬರೆದ ಪತ್ರವಲ್ಲ. ಕಳೆದ ಒಂದೂವರೆ ತಿಂಗಳಿನಿಂದ ನನ್ನ ಸಾವಿನ ದಿನ ಮುಂದೂಡುತ್ತಲೇ ಇದೆ. ಪ್ರತಿದಿನ ನನ್ನ ಮಕ್ಕಳು ನೆನಪಾಗಿ ಮುಂದೂಡುತ್ತಿದ್ದೇನೆ. ಇನ್ನು ಸಾಧ್ಯವಿಲ್ಲ. ನನ್ನ ಕೊನೆಯ ಕ್ಷಣ ಸಮೀಪಿಸಿದೆ.ಸ್ನೇಹಿತರೇ ನನಗೆ ಕಾನೂನಿನ ಮೇಲೆ ತುಂಬಾ ಗೌರವ ಇದೆ. ನೂರು ಮಂದಿ ್ಪರಾಧಿಗಳು ತಪ್ಪಿಸಿಕೊಂಡರು ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎಂದು ಕಾನೂನು ಹೇಳುತ್ತೆ. ಆದರೆ ನಮ್ಮ ಎಸ್ಪಿ ಮಿಥುನ್ ಕುಮಾರ್ ಅವರಿಗೆ, ಸಚಿವ ಸುಧಾಕರ್ ಅವರಿಗೆ ಮತ್ತು ಪಿಎಸ್ಐ ಪಾಪಣ್ಣ ಅವರಿಗೆ ನಿರಪರಾಧಿಗಳೇ ಪ್ರಮುಖ ಟಾರ್ಗೆಟ್ ಆಗಿರುವುದು ವಿಶೇಷ.

ಅಶ್ವತ್ಥನಾರಾಯಣ ಎಲ್.

Spread the love
Leave A Reply

Your email address will not be published.

Flash News