“ಆ” ಸಮಸ್ಯೆಗೆ “ಒನ್ ಅಂಡ್ ಒನ್ಲಿ” ಪರಿಹಾರ ಶಿಖಾ ಮೇಡಮ್ ಮಾತ್ರ….BMTC ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಮೇಲಿನ ಆಸಿಡ್ ದಾಳಿಗೆ ಒಂದು ವರ್ಷ..

0
ಆಸಿಡ್ ದಾಳಿಗೆ ತುತ್ತಾದ ನಿಷ್ಪಾಪಿ ಇಂದಿರಾಬಾಯಿ
ಆಸಿಡ್ ದಾಳಿಗೆ ತುತ್ತಾದ ನಿಷ್ಪಾಪಿ ಇಂದಿರಾಬಾಯಿ

ಬೆಂಗಳೂರು:ಸ್ಟೋರಿ ಹೇಳೊಕ್ಕೆ ಮುನ್ನ ಆ ಘಟನೆಯನ್ನು ಒಮ್ಮೆ ರಿಕಾಲ್ ಮಾಡ್ತೇವೆ ಓದಿ ಬಿಡಿ..

ಅದು ಮಾಗಿಯ ಚುಮು ಚುಮು ಚಳಿಯ ಒಂದು ಬೆಳಗು..ಅಂದಿನ ಫಸ್ಟ್ ಶಿಫ್ಟ್ ಡ್ಯೂಟಿಗೆ ತೆರಳೋ ಧಾವಂತದಲ್ಲಿ ಮನೆಯಿಂದ ದೂರದ ಬಸ್ ಸ್ಟಾಪ್ ನತ್ತ ಬಿರುಸಿನ ಹೆಜ್ಜೆ ಹಾಕತೊಡಗಿದ್ದಳು ಆ ಮಹಿಳೆ..ಇದ್ದಕ್ಕಿದ್ದಂತೆ ಆಕೆಯನ್ನು ಹಿಂಬಾಲಿಸಲಾರಂಭಿಸಿದ್ವು ಮತ್ತೊಂದಷ್ಟು ಪರಿಚಿತ ಹೆಜ್ಜೆಗಳು.ಒಂದು ನೂರು ಹೆಜ್ಜೆಗಳು ಸವೆದಿರಲಿಲ್ಲ,ಅಷ್ಟೊತ್ತಿಗಾಗ್ಲೇ ನಡೆಯಬಾರದ ಅಸಂಭವ ದುರಂತ ವೊಂ ದು ನಡೆದೇ ಹೋಗಿತ್ತು.ಮುಂದೇನಾಗಬಹುದಾದ ಕನಿಷ್ಟ ಕಲ್ಪನೆಯೂ ಇಲ್ಲದ ಆಕೆಯ ಮುಖ ಹಾಗೂ ಬದುಕು ಕೆಲ ಕ್ಷಣಗಳಲ್ಲೇ ಅರೆಬರೆ ದಹಿಸಿ ಹೋಗಿತ್ತು.ಸಹಿಸಲಸಾಧ್ಯ ನೋವಿನಿಂದ ಜರ್ಝರಿತವಾದ ಆ ದೇಹ-ಜೀವದ ಸ್ಥಿತಿಗೆ ಮರುಗಿದವರು ಅದೆಷ್ಟೋ..

ಅಂದ್ಹಾಗೆ ಆ ಘಟನೆ ನಡೆದು ಡಿಸೆಂಬರ್ 19ಕ್ಕೆ ಒಂದು ವರ್ಷ.ಅವತ್ತು ನಡೆದದ್ದು ಘನಘೋರ ಆಸಿಡ್ ದಾಳಿ.ಆ  ದುರ್ಘಟನೆಗೆ ಬಲಿಯಾಗಿದ್ದು ಬಿಎಂಟಿಸಿ ಮಹಿಳಾ ಕಂಡಕ್ಟರ್.ಹೆಸರು ಇಂದಿರಾಬಾಯಿ. ಸ್ವಂತ ದವರ ವಿಕೃತಿಗೆ ಮೈ-ಮುಖ-ದೇಹವನ್ನೆಲ್ಲಾ ಸುಟ್ಟುಕೊಂಡ ಇಂದಿರಾಬಾಯಿ ಬದುಕು ಇವತ್ತು ಜೀವಂತ ನರಕವಾಗ್ಹೋಗಿದೆ.ನರಳುತ್ತಾ ಬದುಕೋದಕ್ಕಿಂತ ಸಾವೇ ಲೇಸು ಎಂದು ತನ್ನನ್ನೇ ಹಳಿದುಕೊಳ್ಳುತ್ತಿರುವ ಇಂದಿರಾಬಾಯಿಗೆ ಆಕೆ ಕೆಲಸ ಮಾಡುವ ಬಿಎಂಟಿಸಿಯಿಂದಲೂ ನಿರೀಕ್ಷಿತ ನೆರವು ಸಿಕ್ಕಿಲ್ಲ ಎನ್ನುವುದು ಆಡಳಿತ ವ್ಯವಸ್ಥೆಯ ಅಮಾನವೀಯತೆಗೆ ಹಿಡಿದ ಕೈಗನ್ನಡಿ.ಘಟನೆಗೆ ಒಂದು ವರ್ಷ ಸಂದಾಯವಾದ್ರೂ ಸರಿಯಾಗದ ಇಂದಿರಾಬಾಯಿ ಇವತ್ತಿನ ಜೀವನನಿರ್ವಹಣೆ ಮೇಲೆ ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಮಾಡುತ್ತಿದೆ ಈ ಬಗ್ಗೆ ಸಾಕಷ್ಟು ವರದಿ ಮಾಡಿರುವ ಕನ್ನಡ ಫ್ಲಾಶ್ ನ್ಯೂಸ್..

ಡಿಸೆಂಬರ್ 19ರ ಬೆಳಗ್ಗೆ ತಾನು ಕೆಲಸ ಮಾಡುತ್ತಿದ್ದ ಪೀಣ್ಯಾ ಡಿಪೋಗೆ ಡ್ಯೂಟಿಗೆ ತೆರಳುವ ವೇಳೆ ಇಂದಿರಾಬಾಯಿ ಪತಿಯ ಸಹೋದರ ಅರುಣ್ ಹಾಗೂ ಆತನ ಸ್ನೇಹಿತ ಬೈಕ್ ನಲ್ಲಿ ಹಿಂಬಾಲಿಸಿ ಆಸಿಡ್ ಎರಚಿದ್ದರು. ಅದೇ ಪೀಣ್ಯಾ ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಇಂದಿರಾಬಾಯಿ ಮೈದುನ ಅರುಣ್ ಹಾಗೂ ಇನ್ನೋರ್ವ ದುಷ್ಕರ್ಮಿ ಅರೆಸ್ಟೂ ಆದ್ರು.

ಆದ್ರೆ ವಿಚಾರಣೆ ವೇಳೆ ಅನೈತಿಕ ಸಂಬಂಧದ ಕಥೆ ಕಟ್ಟಿ ಇಂದಿರಾಬಾಯಿ ಶೀಲವನ್ನೇ ಶಂಕಿಸುವ ಸ್ಥಿತಿ ಸೃಷ್ಟಿಸಿದ್ದರು.ಆದ್ರೆ ತಡವಾಗಿ ಬಯಲಾದ ಸತ್ಯ  ಅದು,ಆಕೆಯ ಬಗ್ಗೆ ಸಹಾನುಭೂತಿ ಬರದಂತೆ ಮಾಡೊಕ್ಕೆ ಆತ ಹೆಣೆದ ವಿಕೃತಿಯ ಕಥೆ ಎನ್ನೋದು ಬಹಿರಂಗವಾಗಿತ್ತು.ಆದ್ರೆ ಇವತ್ತಿನ ದುರಂತ ಹಾಗು ವಿಪರ್ಯಾಸ ಏನಂದ್ರೆ ಆಸಿಡ್ ದಾಳಿ ಮಾಡಿ ಕೆಲಸ ಕಳ್ಕೊಂಡು,ಜೈಲಲ್ಲೂ ಇದ್ದ ಪಾಪಿಷ್ಟರು ಬಿಡುಗಡೆಯಾಗಿದ್ದಾರಂತೆ.ಕೊಂಚವೂ ಪಾಪಪ್ರಜ್ಞೆ ಇಲ್ಲದಂತೆ ಅಡ್ಡಾಡುತ್ತಿದ್ದಾರಂತೆ.ಡ್ಯೂಟಿಗೂ ಹೋಗಿಬರುತ್ತಿದ್ದಾರೆನ್ನುವ ವರ್ತಮಾನವಿದೆ.

ಆಸಿಡ್ ದಾಳಿಗೆ ತುತ್ತಾದ ನಿಷ್ಪಾಪಿ ಇಂದಿರಾಬಾಯಿ
ಆಸಿಡ್ ದಾಳಿಗೆ ತುತ್ತಾದ ನಿಷ್ಪಾಪಿ ಇಂದಿರಾಬಾಯಿ

ಆದ್ರೆ ಪಾಪಿಷ್ಠರ ವಿಕೃತಿಗೆ ದೇಹವನ್ನು ಅರೆಬರೆಯಾಗಿ ಬಲಿಕೊಟ್ಟು,ಮುಖ ತೋರಿಸಿಕೊಂಡು ಅಡ್ಡಾಡಲೂ ಸಾಧ್ಯವಾಗದ ಸ್ಥಿತಿಯಲ್ಲಿರುವ ಇಂದಿರಾಬಾಯಿ ಜೀವನ ಜೀವಂತ ನರಕಕ್ಕಿಂತ ಕ್ರೂರವಾಗಿದೆ. ವಿರೂಪ ಗೊಂಡ ಮುಖ,ಚಿಕಿತ್ಸೆಗೊಳಪಡಿಸಿದ್ರೂ ಅಗತ್ಯಕ್ಕಿಂತ ಹೆಚ್ಚಾಗಿ ಬೆಳೆದಿರುವ ದುರ್ಮಾಂಸ.ನರಗಳ ಮೇಲೆ ನರಗಳು ಅಂಟಿಕೊಂಡು ಕೈ ಕಾಲು ಆಡಿಸಲಿಕ್ಕಾಗದ ಸ್ತಿತಿ.ತನ್ನ ದೈನಂದಿನ ಕರ್ಮಗಳಿಗೂ ಗಂಡನನ್ನು ಅನುಸರಿಸಬೇಕಾದ ಸ್ಥಿತಿ ಎಂಥಾ ಕಲ್ಲುಮನಸನ್ನು ಕರಗಿಸುತ್ತದೆ.

ಆಸಿಡ್ ದಾಳಿಯಿಂದ ಜೀವಂತ ನರಕದಲ್ಲಿ ಬದುಕುವಂತಾಗಿರುವ ಇಂದಿರಾಬಾಯಿಗೆ ಬಿಎಂಟಿಸಿಯಿಂದ  ಸಿಕ್ಕಿದ್ದು ಸಹಾನುಭೂತಿ-ಅನುಕಂಪ ಮಾತ್ರ.ನಿರೀಕ್ಷಿತ ಆರ್ಥಿಕ ನೆರವು ಸಿಕ್ಕಿದ್ದು ಅಷ್ಟಕ್ಕಷ್ಟೇ,ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ನೀಡಿದ 2 ಲಕ್ಷ ಹಣದಿಂದ ತೊಂದರೆ ಸ್ವಲ್ಪ ಮಟ್ಟಿಗೆ ನೀಗಿತಾದ್ರೂ ಶಾಶ್ವತ ಪರಿಹಾರ ಸಿಗ್ಲೇ ಇಲ್ಲ…

ಹೇಳಿಕೊಳ್ಳೊಕ್ಕಷ್ಟೇ ಮಹಿಳಾ ಆಯೋಗ ಇರೋದು,ನೊಂದವರಿಗೆ ಪುಕ್ಕಟೆ ಸಾಂತ್ವನ ಬಿಟ್ಟರೆ ಬೇರ್ಯಾವುದೇ ಸಹಾಯ ಸಿಗಲಿಲ್ಲ. ನಿಗಮದಿಂದ ನೀಡಿತೆನ್ನಲಾದ ಅಷ್ಟಿಷ್ಟು ಸಹಾಯಧನವನ್ನೂ ಇಂದಿರಾಬಾಯಿ ವೇತನದಿಂದ್ಲೇ ಕಟ್ ಮಾಡಲಾಗ್ತಿದೆ ಎನ್ನೋ ಮಾತುಗಳಿವೆ. ಇದ್ಯಾವ ರೀತಿಯ ಸ್ಪಂದನೆ-ಸಂವೇದನೆ ಎನ್ನೋದನ್ನು ಬಿಎಂಟಿಸಿ ಆಡಳಿತವೇ ಹೇಳಬೇಕು.

ಇಂದಿರಾಬಾಯಿ ಅವರಿಗೆ,ಇದೆಲ್ಲದಕ್ಕಿಂತ ಅತೀ ದೊಡ್ಡ ಅನ್ಯಾಯವಾಗುತ್ತಿರುವುದು ವರ್ಗಾವಣೆ ವಿಚಾರದಲ್ಲಿ.ತನ್ನ ಮೂಲವಾದ ತುಮಕೂರು ಜಿಲ್ಲೆಯ ಸುತ್ತಮುತ್ತ ಟ್ರಾನ್ಸ್ ಫರ್ ಕೊಟ್ಟರೆ ಸಮಸ್ಯೆ ಬಗೆಹರಿಯಬಹುದು ಎಂಬ ಕಾರಣಕ್ಕೆ ಮನವಿ ಕೊಟ್ಟರೂ ಅದನ್ನು ಈವರೆಗೂ ಪುರಸ್ಕರಿಸಿಲ್ಲ. ಆರಂಭದಲ್ಲಿ ಇಂದಿರಾಬಾಯಿ ಸಹಾಯಕ್ಕೆ ಬರೋ ಮಾತನ್ನಾಡುತ್ತಿದ್ದ ಎಂಡಿ ಶಿಖಾ ಮೇಡಮ್ ಇತ್ತೀಚೆಗ್ಯಾಕೋ ಅದರ ಬಗ್ಗೆ ಆಸಕ್ತಿಯನ್ನೇ ತೋರಿಸ್ತಿಲ್ಲ.ಕೆಎಸ್ ಆರ್ ಟಿಸಿ ಎಂಡಿ ಕಳಸದ್ ಅವರನ್ನು ನೋಡಿ,ನನ್ನ ವ್ಯಾಪ್ತಿಗೆ ಬರೊಲ್ಲ ಎಂದು ಉತ್ತರಿಸ್ತಿದ್ದಾರಂತೆ.ವಿಶೇಷ ಪ್ರಕರಣ ಎಂದು ಪರಿಗಣಿಸಿ ಆಧ್ಯತೆ ನೀಡಿದ್ರೆ ಇಂದಿರಾಬಾಯಿ ಟ್ರಾನ್ಸ್ ಫರ್ರೇನು ಕಷ್ಟದ ಮಾತೇ..ಆದ್ರೆ ಮೇಡಮ್ ಏಕೋ ಅಂತಹದೊಂದು ಆಸಕ್ತಿಯನ್ನೇ ತೋರಿಸ್ತಿಲ್ಲ. ಅತಿಯಾದ ನೋವಿನ ನಡುವೆಯೂ ಮೇಡಮ್ ಅವರನ್ನು ನೋಡಲು ಶಿರಾದಿಂದ ಬಂದ್ರೂ ರಿಸಪ್ಷನ್ ನಲ್ಲೇ ಅವರನ್ನು ತಡೆದು ಮೇಡಮ್ ಬ್ಯೂಸಿಯಾಗಿದ್ದಾರೆ.. ಇನ್ನ್ಯಾವಾಗಾದ್ರೂ ಬನ್ನಿ ಎಂದ್ಹೇಳಿ ವಾಪಸ್ ಕಳುಹಿಸಲಾಗ್ತಿದೆಯಂತೆ.

ಇಂದಿರಾಬಾಯಿ ಲೈಫನ್ನು ಬರ್ಬಾದ್ ಮಾಡಿದ ಕೀಚಕರು
ಇಂದಿರಾಬಾಯಿ ಲೈಫನ್ನು ಬರ್ಬಾದ್ ಮಾಡಿದ ಕೀಚಕರು

ನನಗೆ ಯಾವುದೇ ಹಣದ ಸಹಕಾರ ಬೇಡ,ತನ್ನ ಮನೆಗೆ ಹತ್ತಿರವಿರುವ ತುಮಕೂರು ಜಿಲ್ಲೆಯ ಯಾವುದಾದ್ರೂ ಡಿಪೋನೋ..ಬಸ್ ಸ್ಟ್ಯಾಂಡ್ ಗೋ ಟ್ರಾನ್ಸ್ ಫರ್ ಮಾಡಿಕೊಡಿ ಎನ್ನೋದಷ್ಟೇ ಇಂದಿರಾಬಾಯಿ ಬೇಡಿಕೆ..ಮನವಿ…ಅಹವಾಲು.ಅದೊಂದ್ ಮಾಡಿಕೊಟ್ಟರೆ ಬದುಕೋತೀನಿ.. ಪ್ಲೀಸ್..ಅವಕಾಶ ಮಾಡಿಕೊಡಿ ಎಂದು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದಾರೆ.ಏನೆಲ್ಲಾ ವಿಷಯಗಳಲ್ಲಿ ಎಂತೆಂಥದ್ದೋ ಮಹತ್ವದ ನಿರ್ದಾರ ಕೈಗೊಳ್ಳುವ ಶಿಖಾ ಮೇಡಮ್..ನೊಂದ-ಬೆಂದ ಇಂದಿರಾಬಾಯಿ ಸಮಸ್ಯೆಗೆ ಸ್ಪಂದಿಸಿ ಆಕೆಯ ಬದುಕಿಗೆ ದಾರಿದೀಪವಾಗೋದೇನೋ ಕಷ್ಟದ ವಿಷಯವೇನಲ್ಲ..

ಜೀವನೋತ್ಸಾಹ ಕಳಕೊಂಡ ಇಂದಿರಾಬಾಯಿ ಮುಖ ಹಾಗೂ ಜೀವನದಲ್ಲಿ ಮುಗುಳ್ನಗೆ-ನೆಮ್ಮದಿ ತರೋ ಸಾಧ್ಯತೆ ಇರೋದು ಒನ್ ಅಂಡ್ ಒನ್ಲಿ  ಶಿಖಾ ಮೇಡಮ್  ಅವರಿಗೆ ಮಾತ್ರ..ಅದು ಸಾಧ್ಯವಾಗಲಿ…ಆಸಿಡ್ ದಾಳಿಯಿಂದ ಈಗಾಗ್ಲೇ ಅರೆಬರೆ ಬೆಂದು ಬಸವಳಿದಿರುವ ಇಂದಿರಾಬಾಯಿ ಉಳಿದ ಬದುಕಿನ ದಿನಗಳಾದ್ರೂ ನೆಮ್ಮದಿಯಲ್ಲಿ ಕಳೆಯುವಂತಾಗ್ಲಿ ಎನ್ನುವುದಷ್ಟೇ ನಮ್ಮ  ಆಶಯ-ಆರೈಕೆ..

Spread the love
Leave A Reply

Your email address will not be published.

Flash News