ಕೇಳಿದ್ರೆ ಶಾಕ್ ಆಗ್ತೀರಾ..ಎಷ್ಟು ಕೋಟಿಗೆ ತೂಗುತ್ತೆ ಗೊತ್ತಾ ನಕಲಿ ಬಿಲ್ ಸರದಾರ ಗೋವಿಂದರಾಜು ಅಕ್ರಮ ಸಂಪತ್ತು…!! ತನ್ನ ಹೆಂಡ್ತಿ-ಮಕ್ಳು-ತಂಗಿ-ಚಿಕ್ಕಮ್ಮ ಸಂಬಂಧಿ ಹೆಸ್ರಲೆಲ್ಲಾ ಅಕ್ರಮ ಆಸ್ತಿ..

0

ಬೆಂಗಳೂರು:ಇದು ಎಂಥವ್ರನ್ನೂ ಗಾಬರಿಗೊಳಿಸುವಂಥ ಅಕ್ರಮ ಸಂಪಾದನೆಯ ಲೂಟಿ ಕಹಾನಿ.. ಒಬ್ಬ ಸರ್ಕಾರಿ ಅಧಿಕಾರಿ ಅಕ್ರಮವಾಗಿ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾ ಎನ್ನುವಷ್ಟರ ಮಟ್ಟಿಗೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತೆ ಈ ಕಥೆ.ಅಂದ್ಹಾಗೆ ಆ ಲೂಟಿಕೋರ ಅಧಿಕಾರಿಯೇ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್.ಗೋವಿಂದರಾಜು ಅಕ್ರಮ. ಈತನೆಲ್ಲಾ ಅಕ್ರಮ ಆಸ್ತಿಯ ವಿವರವನ್ನು ಕಲೆ ಹಾಕಿ ಎಸಿಬಿಗೆ ದೂರು ನೀಡಿದ್ದಾರೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ.ಇದರ ಕಂಪ್ಲೀಟ್  ಹಾಗು ಡೀಟೈಲ್ ಸ್ಟೋರಿ ನಿಮ್ಮ ಕನ್ನಡ ಫ್ಲಾಶ್ ನ್ಯೂಸ್ ನಲ್ಲಿ.

ನಕಲಿ ಬಿಲ್ ಸೃಷ್ಟಿಸಿ ಪಾಲಿಕೆ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟ ಮಾಡಿದ್ದ ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ಆರ್.ಗೋವಿಂದರಾಜ್ ಜಾತಕ ಬಯಲಾಗಿದೆ.ತನ್ನ ಅಧಿಕಾರ ಹಾಗು ಹುದ್ದೆಯನ್ನು ಎಷ್ಟ್ ಪ್ರಮಾಣದಲ್ಲಿ ಮಿಸ್ಯೂಸ್ ಮಾಡಿಕೊಳ್ಳೊಕ್ಕೆ ಸಾಧ್ಯವಿದೆಯೋ ಅದನ್ನು ಮೀರಿ ಪರಮಭ್ರಷ್ಟತೆ ಮೆರೆದಿದ್ದಾನೆ ಈ ಲೂಟಿಕೋರ.ಇದನ್ನು ನಾವ್ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಊಹೆಯಲ್ಲಿ ಹೇಳುತ್ತಿಲ್ಲ.ಭ್ರಷ್ಟಾಚಾರ ನಿಗ್ರಹದಳಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿರುವ ಸಾರಾಂಶವನ್ನು ಕ್ರೋಢೀಕರಿಸಿ ನಕಲಿ ಬಿಲ್ ಸರದಾರನ ಲೂಟಿಕಹಾನಿ ಹೇಳುತ್ತಿದ್ದೇವೆ,..

ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ.

ಗೋವಿಂದರಾಜ್ ಎನ್ನುವ ಖದೀಮ-ಲೂಟಿಕೋರ ಕರ್ನಾಟಕದ ಒಳ ಹೊರಗೆ ಮಾಡಿಟ್ಟಿರುವ ಆಸ್ತಿ ವಿವರ ನೋಡುದ್ರೇನೆ ಕ್ಷಣ ತಲೆ ತಿರುಗುತ್ತದೆ.ತನ್ನ ಅಧಿಕಾರವನ್ನು ಯಾವ್ ಪರಿ ಮಿಸ್ಯೂಸ್ ಮಾಡ್ಕೊಂಡಿರಬಹುದೆನ್ನುವ ಅಂದಾಜು ಸಿಕ್ಕೋಗುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅಧಿಕಾರಿ ಇಷ್ಟೆಲ್ಲಾ ಸಂಪಾದನೆ ಮಾಡಬಹುದೇ? ಎನ್ನುವ ಪ್ರಶ್ನೆ ಮೂಡಿಸುತ್ತದೆ.ಏಕೆಂದ್ರೆ ಎಸಿಬಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಗೋವಿಂದರಾಜ್ ವಿರುದ್ಧ ತನಿಖೆಗೆ ಕೋರಿ ನೀಡಿರುವ ದೂರಿನಲ್ಲಿ ಅಕ್ರಮ ಸಂಪಾದನೆಯ ರಂಕುಗಳೆಲ್ಲಾ ಬಯಲಾಗಿವೆ.ಕನ್ನಡ ಫ್ಲಾಶ್ ನ್ಯೂಸ್ ಗೆ ದೊರೆತಿರುವ ದೂರಿನ ಪ್ರತಿಯ ವಿವರಗಳು ಕೆಳಕಂಡಂತಿವೆ ನೋಡಿ..

ಅಂದ್ಹಾಗೆ ಗೋವಿಂದರಾಜ್ ಕರ್ನಾಟಕದಲ್ಲಿ ಆಸ್ತಿ ಮಾಡಿದ್ರೆ ಅನುಮಾನ ಬರುತ್ತೆ ಎನ್ನುವ ಬುದ್ದಿವಂತಿಕೆಯಿಂದ ಪಕ್ಕದ ತಮಿಳ್ನಾಡು,ಪಾಲಕ್ಕಾಡು,ಧರ್ಮಪುರಿ,ಸಪಾನಿಪಟ್ಟಿ ಸೇರಿದಂತೆ ಅನೇಕ ಕಡೆ ಬೇನಾಮಿ ಆಸ್ತಿ ಸಂಪಾದಿಸಿರುವುದು ಗೊತ್ತಾಗಿದೆ.ಪತ್ನಿ ಪದ್ಮಾವತಿ,ಮಗಳು ಅರ್ಚನ,ಮಗ ಅರುಣ್ ಕುಮಾರ್,ತಂಗಿ ಕಲಾವತಿ,ಇಂದಿರಾ,ಚಿಕ್ಕಮ್ಮ ಈಶ್ವರಮ್ಮ ಹಾಗೂ ಸಂಬಂಧಿಕರಾದ ರಂಗಪ್ಪ,ಗೋವಿಂದರಾಜು,ಸೇವಂತಿ,ಈಶ್ವರಮ್ಮ ಅವರ ಹೆಸರಿನಲ್ಲಿ ಆಸ್ತಿ ಸಂಪಾದನೆ ಮಾಡಿದ್ದಾರೆನ್ನುವುದು ದೂರಿನಲ್ಲಿ ಉಲ್ಲೇಖವಾಗಿದೆ.

ಇಷ್ಟೆಲ್ಲಾ ಚರ ಹಾಗೂ ಚಿರಾಸ್ತಿಯನ್ನು ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ಸಂಪಾದಿಸಲು ಸಾಧ್ಯವೇ ಎಂದು ದೂರಿನಲ್ಲಿ ಪ್ರಶ್ನಿಸಿರುವ ದಿನೇಶ್ ಕಲ್ಲಹಳ್ಳಿ ,ಭ್ರಷ್ಟ ಆರ್.ಗೋವಿಂದಾಜ್ ವಿರುದ್ಧ ಬೇನಾಮಿ ಹಣ ವರ್ಗಾವಣೆ ಕಾಯ್ದೆ,ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1998ರ 13(1) (ಬಿ)R/W 13(2) ರಂತೆ ಹಾಗೂ ಭಾರತೀಯ ದಂಡ ಸಂಹಿತೆ 120(ಬಿ),409,468 ಹಾಗೂ 417 ಕಲಂ ಅನ್ವಯ ದೂರು ದಾಖಲಿಸಿ ತನಿಖೆ ನಡೆಸುವಂತೆ ಕೋರಿದ್ದಾರೆ.

ಅಂದ್ಹಾಗೆ ಈಗ ಸಿಕ್ಕಿರುವುದು  ಗೋವಿಂದರಾಜ್ ನ ಭ್ರಹ್ಮಾಂಡ ಭ್ರಷ್ಟಾಚಾರದ  ಕೆಲವು ಸ್ಯಾಂಪಲ್ಸ್ ಮಾತ್ರ ಅಂತೆ .ಪಾತಾಳಗರಡಿ ಹಾಕಿ ಹುಡುಕಿದ್ರೆ ಇನ್ನೊಂದಷ್ಟು ಅವ್ಯವಹಾರ-ಅಕ್ರಮದ ಸರಕುಗಳು ಬಯಲಾಗೋ ಸಾಧ್ಯತೆಗಳಿವೆ.ಸಂಬಂಧಪಟ್ಟ ಏಜೆನ್ಸಿಗಳು   ಯಾವುದೇ ಮರ್ಜಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕೆಲಸ ಮಾಡಿದ್ದೇ ಆದಲ್ಲಿ ಗೋವಿಂದರಾಜ್ ನ ಮತ್ತಷ್ಟು ಹರಕುತನಗಳು ಬಯಲಾಗೋದ್ರಲ್ಲಿ ಅನುಮಾನವೇ ಇಲ್ಲ.

ಗೋವಿಂದರಾಜ್ ಲೂಟಿ ವಿವರ

-ಸೆಲ್ವಂ ಸೂರ್ಯ ಮ್ಯಾಗೋ ಜ್ಯೂಸ್ ಕಾರ್ಖಾನೆ

-ಕಿರುಕುಮಾರನ್ ಜ್ಯೂಸ್ ಸೆಂಟರ್, ಸಪಾನಿಪಟ್ಟಿ

-ಹಿಲ್ಸ್ ಆರ್ಗೋ ಮ್ಯಾಗೋ ಜ್ಯೂಸ್ ಕಾರ್ಖಾನೆ

-ಎ೧ ಮಿಲ್ಕ್ ಡೈರಿ,  ಸೋಮಪಲ್ಲಿ ಪಾಲ್ಕೋಡು 25 ಎಕರೆ

ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್,  ಸಪಾನಿಪಟ್ಟಿ 10 ಎಕರೆ (ಚಿಟ್ಟಿಬಾಬು ಪ್ರಾಂಶುಪಾಲರ ಹೆಸರಿನಲ್ಲಿ)

-ಅಚನ್ ಕಲ್ಯಾಣ ಮಂಟಪ, ಹೊಸೂರು ಮೇನ್‌ರೋಡ್

-ರಾಯಲ್ ಕಂಫರ್ಟ್ ಹೋಟೆಲ್, ಜಯನಗರ ೪ನೇ ಹಂತ ಬೆಂಗಳೂರು

ಮ್ಯಾಗೋ ಗಾರ್ಡನ್, ಸಪಾನಿಪಟ್ಟಿ 100 ಎಕರೆ

ಮ್ಯಾಗೋ ಗಾರ್ಡನ್, ಇರುಗುಕೋಟ್ಯ್ 140  ಎಕರೆ

ಅತ್ತಿಮುಟ್ಟು, ಪಾಲ್ಕೋಡು 70ಎಕರೆ ಜಾಗ, 70 ಎಕರೆ

-ಉರಿಗಂ, ಪಾಲ್ಕೋಡು ತಾಲ್ಲೂಕು, ದರ್ಮಪುರಿ ಜಿಲ್ಲೆ 80 ಎಕರೆ ಜಾಗ

-ತುಂಬಲಳ್ಳಿ, ಕೃಷ್ಣಗಿರಿ ಜಿಲ್ಲೆ, 30 ಎಕರೆ ಜಾಗ

-ಕೋಕನಟ್ ಗಾರ್ಡನ್, ಮಾರ್ಡಳ್ಳಿ ಸಮೀಪ, ತಮಿಳುನಾಡು 150 ಎಕರೆ

-ಬೆಲ್ಲರಾಮಪಟ್ಟಿ, ತಮಿಳುನಾಡು 83 ಎಕರೆ ಜಾಗ

-ಜನಪನ್ನೂರು ಕೋಕಿಕಲ್ಲ, ಪಾಲ್ಕೋಡು 65 ಎಕರೆ ಜಾಗ

-ಚಂದ್ರಪುರಂ, ಪಾಲ್ಕೋಡು 40 ಎಕರೆ ಜಾಗ

-ಚಂದ್ರಪುರಂ, ತಮಿಳುನಾಡು 24  ಎಕರೆ ಜಾಗ

-ಮ್ಯಾಗೋ ಗಾರ್ಡನ್, ತುಂಬಲಳ್ಳಿ 26 ಎಕರೆ

-ವಿಎಓ ಲ್ಯಾಂಡ್, ಕಮಲಾಪಟ್ಟಿ 24 ಎಕರೆ

-ನಾರಾಯಣ ಕೋಟ್ಯೆ, ಮಾರೇಡ್ಯನಳ್ಳಿ, ತಮಿಳುನಾಡು 3 ಎಕರೆ ಜಗ

-ಪಾಲ್ಕೊಡು-3 ಬಿಲ್ಡಿಂಗ್

-ದ್ವಿತಿ ರಿಸೋರ್‍ಸ್ (ಶ್ರೀ ವಿದ್ಯಾ ನೂಲ್ ಮಿಲ್) ಮ್ಯಾನೇಜರ್ ಸಿದ್ದಾಂತ್ ಚೌದರಿ

-ಅರಣ್ಯ ಭೂಮಿ, ಎಲತೋಟಂ, ಪೈಯೂರ್ 84 ಎಕರೆ

-ಪುಲಿಕೆರೆ ಕೋಕನೆಟ್ ಗಾರ್ಡನ್, 30 ಎಕರೆ ಜಾಗ

-ಲೇಡಿಸ್ ಪಿಜಿ, ಬೈರಸಂದ್ರ, ಜಯನಗರ ಬೆಂಗಳೂರು

-ಬೈರಸಂದ್ರ ಡ್ಯೂಪೆಕ್ಸ್ ಮನೆ, ಮೇನ್ ರೋಡ್

-ಸಾಗರ್ ಕಾರ್‍ಸ್ (100 ಕಾರುಗಳನ್ನು ಬಾಡಿಗೆಗೆ ನೀಡಲಾಗಿದೆ)

-ಬನಶಂಕರಿ ಗೆಸ್ಟ್ ಹೌಸ್

-ದಿ; 15-02-2012 ಕೆನರಾ ಬ್ಯಾಂಕ್, ಕೃಷ್ಣಗಿರಿ ರೋಡ್, ಕಾವೇರಿಪಟ್ಟಂ ಬ್ರಾಂಚ್‌ನಲ್ಲಿ 95  ಲಕ್ಷ ಡಿಡಿ

-ಸರ್ವೆ ನಂ. 856 /12 ಎಕರೆ 1 ಸೆಂಟ್

-ಸರ್ವೆ ನಂ. 856/1 15 ಸೆಂಟ್

-ಸರ್ವೆ ನಂ. 858.1 1.53 ಎಕರೆ

-ಸರ್ವೆ ನಂ. 872/ಎಲ್ 32 ಸೆಂಟ್

-ಸರ್ವೆ ನಂ5 885 /1.48  ಎಕರೆ

-ಸರ್ವೆ ನಂ. 5.55/ಇ 25 ಸೆಂಟ್

-ಸರ್ವೆ ನಂ. 913  11.12  ಎಕರೆ

-ಸವೆ ನಂ. 915 /1.58 ಎಕರೆ

-ಸರ್ವೆ ನಂ. 914 /3 73 ಸೆಂಟ್

Spread the love
Leave A Reply

Your email address will not be published.

Flash News