ಶಿವಮೊಗ್ಗ ಪತ್ರಕರ್ತರಿಗೆ ಬಿಜೆಪಿಗರಿಂದ ಅವಮಾನ: ಮಹಾನ್ ಗರ್ವಿ ದತ್ತಾತ್ರಿ ಅಂಡ್ ಟೀಂ ನಿಂದ ಪತ್ರಕರ್ತರ ನಿರ್ಲಕ್ಷ್ಯ..

0

ಶಿವಮೊಗ್ಗ:ಬಿಜೆಪಿಯ ವಿಶೇಷ ಸಭೆಯೊಂದರಲ್ಲಿ ತಮ್ಮನ್ನು ಕಡೆಗಣಿಸಲಾಯ್ತು..ಅಪಮಾನ ಮಾಡಲಾಯ್ತು ಎಂದು ಶಿವಮೊಗ್ಗದ ಪತ್ರಕರ್ತರು ಆಕ್ಷೇಪದ ಧ್ವನಿ ಎತ್ತಿದ್ದಾರೆ.  ಶಿವಮೊಗ್ಗ ಪತ್ರಕರ್ತರನ್ನು ವಿಶೇಷ ಸಭೆಯೊಂದರಲ್ಲಿ ಅವಮಾನಿಸಲಾಗಿದೆ ಎನ್ನುತ್ತಿರುವುದು ನಿಜಕ್ಕು ಖಂಡನೀಯ. ಪ್ರಚಾರಕ್ಕೆ ಮಾದ್ಯಮಗಳು ಬೇಕು..ಹಾಗಂತ ಸುದ್ದಿ ಕವರೇಜ್ ಗೆ ಬಂದವರನ್ನು ಸರಿಯಾಗಿ ನಡೆಸಿಕೊಳ್ಳಬೇಕೆನ್ನುವ ಕನಿಷ್ಠ ಸೌಜನ್ಯವೂ ಆಯೋಜಕರಿಗೆ ಇಲ್ಲವಾದ್ರೆ ಹೇಗೆ..? ಆತಿಥ್ಯ ವಿಭಾಗದ ಕೆಲವರು ಮಾಡಿದ ಎಡವಟ್ಟು ಇಡೀ ಕಾರ್ಯಕಾರಣಿ ವ್ಯವಸ್ಥಾಪಕರ ಬಗ್ಗೆ ಬೇಸರ ಮೂಡುವಂತೆ ಮಾಡಿದೆ.

ಶಿವಮೊಗ್ಗ-ಸಾಗರ ರಸ್ತೆಯಲ್ಲಿರುವ ಫೆಸಿಟ್ ಕಾಲೇಜಿನಲ್ಲಿ ಗೋಹತ್ಯೆ ನಿಷೇಧದ ಕಾನೂನು ಜಾರಿಗೆ ತಂದ ಹಿನ್ನಲೆಯಲ್ಲಿ ಸಿಎಂಗೆ ಅಭಿನಂದನೆ ಹಾಗೂ ಬಿಜೆಪಿ ರಾಜ್ಯ ವಿಶೇಷ ಸಭೆ ಆಯೋಜಿಸಲಾಗಿತ್ತು.ಕವರೇಜ್ ಗೆ ಬಂದಿದ್ದ ಪತ್ರಕರ್ತರನ್ನು ಸಿಎಂ ಎದುರಿನಲ್ಲಿಯೇ ಹೀನಾಯವಾಗಿ ನಡೆಸಿಕೊಳ್ಳಲಾಯಿತೆನ್ನುವುದು ಪತ್ರಕರ್ತರೊಬ್ಬರ ಆರೋಪ.

ಮೊದಲಿಗೆ ನಡೆದ ಜನಸಂಘ ಕಾರ್ಯಕ್ರಮದಲ್ಲಿ ಸಿಎಂ ಫೊಟೊ ಶೂಟ್ ಮಾಡುವ ವೇಳೆ ಬಿಜೆಪಿ ಮುಖಂಡ ಎನಿಸಿಕೊಂಡ  ದತ್ತಾತ್ರಿ ದರ್ಪ ದೌರ್ಜನ್ಯ ಪ್ರದರ್ಶಿಸಿದ್ದಾರೆ.ಪತ್ರಕರ್ತರನ್ನು ಅಕ್ಷರಶಃ ದಬ್ಬಿದ್ದಾರೆ.ಅಷ್ಟೇ ಅಲ್ಲ,ಈ ಮಹಾನ್ ಗರ್ವಿ ಬಿಜೆಪಿ ಫೋಟೋಗ್ರಾಫರ್ ನ್ನು ವೀಡಿಯೋ ಕ್ಯಾಮೆರಾಗಳಿಗೆ ಅಡ್ಡ ಬರುವಂತೆ ನಿಲ್ಲಿಸಿ ಮೊದಲು ನಮ್ಮವರು ಶೂಟ್ ಮಾಡಿಕೊಳ್ಳಲಿ.ನಂತ್ರ ನೀವ್ ಮಾಡ್ಕೊಳ್ಳಿ ಎಂದು ಹುಬ್ಬೇರಿಸಿ ಮಾತನಾಡಿದ್ದಾರಂತೆ. 

ಅಷ್ಟಕ್ಕೆ ಪತ್ರಕರ್ತರನ್ನು ಅವಮಾನಿಸುವ ಕೆಲಸ ನಿಂತಿಲ್ಲ. ಸಿಎಂ ಅಭಿನಂದನೆ ಸಮಯದ ವೇಳೆಯೂ ಪತ್ರಕರ್ತರಿಗೆ ತಿಂಡಿ ವ್ಯವಸ್ಥೆ ಮಾಡದೆ ಅವಮಾನಿಸಲಾಗಿದೆ. ಸಿಎಂ ಕಾರ್ಯಕ್ರಮ ಇರೋದ್ರಿಂದ ಕಾರ್ಯಕ್ರಮ ಮುಗಿಸಿ ಬರೋದಾಗಿ ಹೇಳಿ ಕೆಲ ನಿಮಿಷದ ನಂತ್ರ ವಾಪಸ್ಸಾದ್ರೆ ಕಂಡುಬಂದಿದ್ದು ಖಾಲಿ ಪಾತ್ರೆಗಳು ಮಾತ್ರವಂತೆ.ಇದನ್ನು ಪ್ರಶ್ನಿಸಿದರೆ ಆಯೋಜಕರಿಂದ ಉಡಾಫೆ ಉತ್ತರ ದೊರೆತಿದೆ.ಕೆಲವರು ಅರಚಾಡಿ ಕಿರುಚಾಡಿದ ಮೇಲೆ ತಿಂಡಿ ವ್ಯವಸ್ಥೆಯಾಗಿದೆ.

ಅದೇನೇ ಆಗಲಿ,ಆತಿಥ್ಯದ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮಾದ್ಯಮಗಳನ್ನು ನಡೆಸಿಕೊಂಡ ರೀತಿ ಇದೆಯೆಲ್ಲಾ ಅದು ಅವಮಾನಕರ.ಕೆಲವರು ಕಾರ್ಯಕ್ರಮವನ್ನೇ ಬ್ಯಾನ್ ಮಾಡಿ ಆಕ್ರೋಶ ವ್ಯಕ್ತಪಡಿಸಲು ಮುಂದಾದ್ರೂ ಸಿಎಂ ಅವರು ತವರು ಕ್ಷೇತ್ರದಲ್ಲಿ ಪತ್ರಕರ್ತರಿಂದ ಅವಮಾನವಾಯ್ತೆಂಬ ಅಪಖ್ಯಾತಿ ಬಂದ್ ಬಿಡ್ತದೆ..ಬೇಡ ಎಂಬ ತಿರುಬೋಕಿ ಸಲಹೆ ಕೊಟ್ಟ ಕೆಲ ಪತ್ರಕರ್ತರಿಂದಾಗಿ ಉಳಿದವರು ಅವಮಾನವನ್ನು ತುಟಿ ಕಚ್ಚಿ ಸಹಿಸಿಕೊಂಡಿದ್ದಾರೆ.

ತಮ್ಮ ಅನುಕೂಲಕ್ಕೆ ಬೇಕಾದಾಗ ಪತ್ರಕರ್ತರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿ ಬಳಸಿಕೊಂಡು ಉದ್ದೇಶ ಈಡೇರಿದ ಮೇಲೆ ರಾಜಕಾರಣಿಗಳು ನಿರ್ಲಕ್ಷ್ಯಿಸುವ ಸಂದರ್ಭಗಳು ಸಾಮಾನ್ಯ..ಆದ್ರೆ ಇವುಗಳಿಂದ ಪಾಠ ಕಲಿತಿದ್ದೇವಾ..ಖಂಡಿತಾ ಇಲ್ಲ..ಕೆಲ ಪತ್ರಕರ್ತರು ಯಾವುದೋ ಹಿತಾಸಕ್ತಿಗೆ ಆ ಅವಮಾನವನ್ನೆಲ್ಲಾ ಮರೆತುಬಿಟ್ಟು ಮತ್ತೆ ರಾಜಕಾರಣಿಗಳ ಜೊತೆ ಫೋಸ್ ಕೊಟ್ಟಿಕೊಂಡು ಅಡ್ಡಾಡುವುದು ವಿಪರ್ಯಾಸ. 

Spread the love
Leave A Reply

Your email address will not be published.

Flash News