ಅಕ್ರಮಗಳ ಅಡ್ಡೆಯಾಯ್ತಾ ಮೈಸೂರ್ ಜೈಲ್..ಅಸಹ್ಯವನ್ನು ಬಯಲುಮಾಡ್ತು  ಆ ಸ್ಪೋಟಕ ಆಡಿಯೋ..ಇಲ್ಲಿ 500 ರೂಗೆ ಗಾಂಜಾ..30 ಸಾವಿರಕ್ಕೆ ಮೊಬೈಲ್ ಸೇಲ್..ಬಾಸ್-ಡಾನ್-ದಾದಾಗಳದ್ದೇ ಅಬ್ಬರ

0

ಮೈಸೂರು:ಅಪರಾಧಿಗಳ ಮನಪರಿವರ್ತನೆಯ ಕೇಂದ್ರಗಳಾಗಬೇಕಾದ ಜೈಲ್ ಗಳು ಕ್ರೈಮ್ ನ್ನು ಜೀವಂತವಾಗಿಡುವ, ಹಾಗೆಯೇ ಪ್ರಚೋದಿಸುವ ಅಡ್ಡೆಗಳಾದ್ರೆ ಹೇಗೆ,.? ಬಹುತೇಕ ಜೈಲ್ ಗಳಂತೆ  ಮೈಸೂರು ಜಿಲ್ಲಾ ಕಾರಾಗೃಹ ಕೂಡ  ಅಕ್ರಮ ಚಟುವಟಿಕೆಗಳ ಅಡ್ಡೆಯಾಗೋಗ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.ಇಂತದ್ದೊಂದು ಶಂಕೆ ಕಾಡೊಕ್ಕೆ ಕಾರಣವೇ ಆ ಸ್ಪೋಟಕ ಆಡಿಯೋ ಕ್ಲಿಪ್.. ಖೈದಿಯೋರ್ವ ಜೈಲ್ ನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾನೆ.ಸಾದಾ ಖೈದಿಗಳ ಮೇಲೆ ಜೈಲ್ ಅಧಿಕಾರಿಗಳಿಂದ್ಲೇ ನಡೆಯುತ್ತಿರುವ ಕ್ರೌರ್ಯ-ಗಾಂಜಾ-ಮೊಬೈಲ್ ಅಕ್ರಮ ಬಳಕೆ,ಡಾನ್-ಬಾಸ್-ದಾದಾಗಳ ಅಬ್ಬರವನ್ನು ಖೈದಿಯ ಆಡಿಯೋ ತುಣುಕು ಅನಾವರಣಗೊಳಿಸಿದೆ.ಆ ಎಕ್ಸ್ ಕ್ಲ್ಯೂಸಿವ್ ಆಡಿಯೋ ರೆಕಾರ್ಡಿಂಗ್ ನ ಕಂಪ್ಲೀಟ್ ಸ್ಟೋರಿ “ಕನ್ನಡ ಫ್ಲಾಶ್ ನ್ಯೂಸ್” ನಲ್ಲಿ ನಿಮಗಾಗಿ.

ಸಾಂಸ್ಕ್ರತಿಕ ನಗರಿ ಮೈಸೂರಿನ ಜೈಲ್ ನಲ್ಲಿ ಕ್ರಿಮಿನಲ್ ಚಟುವಟಿಕೆಗಳು ಅನಿಯಂತ್ರಿತವಾಗಿ ನಡೆಯುತ್ತಲೇ ಇವೆ.ಜೈಲ್ ಸುಧಾರಣೆ-ಕ್ರಿಮಿನಲ್ಸ್ ಗಳ ಮನಪರಿವರ್ತನೆಗೆ ಕ್ರಮ ಕೈಗೊಳ್ಳಬೇಕಾದವ್ರೇ ಕ್ರಿಮಿನಲ್ಸ್ ಗಳು ಕೊಡುವ ಪುಡಿಗಾಸಿನ ಆಸೆಗೆ ಅವರಿಗೆ ಬೇಕಾದ ಬಹುತೇಕ ಸವಲತ್ತುಗಳನ್ನು ಜೈಲಿನ ಒಳಗೇ ಪೂರೈಸುವ ಕೆಲಸ ಮಾಡ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ.ಹೊರಗೆ ಹಾಯಾಗಿ ಅಡ್ಡಾಡಿಕೊಂಡಿಲ್ಲ ಎನ್ನೋದನ್ನು ಬಿಟ್ಟರೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕ್ರಿಮಿನಲ್ಸ್ ಗಳು ಎಂಜಾಯ್ ಮಾಡ್ತಿದ್ದಾರೆ.

ಮೈಸೂರಿನ ಜೈಲ್ ನಲ್ಲಿ ಗಾಂಜಾ.ಮೊಬೈಲ್,ಬೀಡಿ-ಸಿಗರೇಟ್,ಮದ್ಯ,ಬಾಡು,ಗುಟ್ಕಾ-ಪಾನ್ ಪರಾಗ್. ಎಲ್ಲವೂ ಸಿಗುತ್ತಿದೆ ಎನ್ನುವುದನ್ನು ಅಲ್ಲಿರುವ ಖೈದಿಗಳೇ ಬಾಯಿಬಿಟ್ಟಿದ್ದಾರೆ.ಫೀಲ್ಡ್ ನಲ್ಲಿ ಹವಾ ಕ್ರಿಯೇಟ್ ಮಾಡಿರುವ ಪಾತಕಿಗಳು ಜೈಲ್ ನೊಳಗೆ ಬಂದ್ರೆ ಅಲ್ಲಿ ಅವರದೇ ಹುಕುಮ್ ನಡೆಯುತ್ತದೆ.

ಕಾಲು-ಕೈ ಒತ್ತುವವರಿಂದ ಹಿಡಿದು ಎಲ್ಲಾ ರೀತಿಯ ಸವಲತ್ತನ್ನು ಬಾಸ್..ಬಾಸ್ ಎಂದು ಪೂರೈಸುವ ಕೆಲಸ ಮಾಡುವ ದೊಡ್ಡ ಪಟಾಲಮನ್ನೇ “ಬಾಸ್ “ಗಳು ಕ್ರಿಯೇಟ್ ಮಾಡಿಕೊಂಡಿರ್ತಾರೆ.ಇಂಥವ್ರ ನಡುವೆ ಇದ್ಯಾವುದರ ಬಗ್ಗೆಯೂ ಸಣ್ಣ ಸುಳಿವು ಇರದವರೇನಾದ್ರೂ ಹೋದ್ರೆ ಅವರ ಪಡಿಪಾಟಲು-ಕಷ್ಟ ನಮ್ ಶತೃಗೂ ಬೇಡ ಎನಿಸುವಷ್ಟು ಅಸಹನೀಯವಾಗಿರುತ್ತೆ.ದೊಡ್ಡ ದೊಡ್ಡ ದಾದಾ-ಬಾಸ್ ಗಳು ಹೇಳೋ ಎಲ್ಲಾ..ಎಲ್ಲಾ ಕೆಲಸವನ್ನು ಗೊಣಗದೆ ಮಾಡಬೇಕಾಗ್ತದೆ.ಇವರದು ಒಂದ್ರೀತಿ ಜೀತವಾಗಿಬಿಡುತ್ತೆ.

ಸಾಮಾನ್ಯ ಖೈದಿಗಳಿಗೆ ಜೈಲ್ ಎನ್ನೋದು ನರಕಸದೃಶವಾಗ್ತಿದೆ…ದುಡ್ಡಿರೋರ್ದೇ ಅಲ್ಲಿ ದರ್ಬಾರ್..ದುಡ್ಡಿಲ್ಲದವರೇನಾದ್ರೂ ಜೈಲಿಗೆ ಹೋದ್ರೆ ಅವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗ್ತಿದೆ ಎನ್ನುವ ನೋವನ್ನು ಜೈಲ್ ನೊಳಗಿಂದ್ಲೇ ಸಾಕಷ್ಟು ಖೈದಿಗಳು ಕನ್ನಡ ಫ್ಲಾಶ್ ನ್ಯೂಸ್ದೊಂದಿಗೆ ಹಂಚಿಕೊಂಡಿದ್ದಾರೆ.

ಸರ್ಕಾರ ಖೈದಿಗಳಿಗೆ ಉತ್ತಮವಾದ ಆಹಾರ ಪೂರೈಸಲು ಸಾಕಷ್ಟು ಕ್ರಮ ಕೈಗೊಂಡಿದೆ.ಇದಕ್ಕಾಗಿ ವರ್ಷಕ್ಕೆ ಹತ್ತಾರು ಕೋಟಿ ಖರ್ಚು ಮಾಡ್ತಿದೆ.ಆದ್ರೆ ದರ್ಬಾರ್ ಮಾಡುವ ಡಾನ್-ದಾದಾ-ಬಾಸ್ ಗಳು ಹಾಗೂ ಅವರ ಪಟಾಲಂ ಬಿಟ್ಟರೆ ಉಳಿದವರಿಗೆ ಅತ್ಯಂತ ಕಳಪೆ ಆಹಾರ ಕೊಡಲಾಗ್ತಿದೆಯಂತೆ.ಜೈಲು ಹಕ್ಕಿಗಳಿಗೆ ನೀಡಲಾಗ್ತಿರುವ ಆಹಾರದಲ್ಲಿ ಕ್ರಿಮಿಕೀಟಗಳಿರುತ್ವೆ.ತಿನ್ನಲು ನಿರಾಕರಿಸಿದ್ರೆ ಬರಿ ಹೊಟ್ಟೆಯಲ್ಲಿ ಮಲಗಬೇಕಾಗ್ತದೆ.ಪ್ರಶ್ನಿಸಿದ್ರೆ,ಅವರನ್ನು ಡಾನ್-ಬಾಸ್ ಪಟಾಲಂಗಳಿಂದ ಅ ಥಳಿಸಲಾಗ್ತಿದೆಯಂತೆ.

ಸಮಸ್ಯೆ ಇರೋದು ಕೇವಲ ಆಹಾರದಲ್ಲಲ್ಲ..ವೈದ್ಯಕೀಯ ಸೌಲಭ್ಯ ಕೊಡೋದ್ರಲ್ಲೂ ನಿರ್ಲಕ್ಷ್ಯ ವಹಿಸಲಾಗ್ತಿದೆಯಂತೆ.ಡಾನ್ ಗಳಿಗೆ ರಾಯಲ್ ಟ್ರೀಟ್ಮೆಂಟಾದ್ರೆ ಸಾದಾ ಖೈದಿಗಳು ಜ್ವರದಿಂದ ಬಳಲ್ತಿದ್ರೂ ಅವರನ್ನು ಉಪಚರಿಸೋರಿಲ್ಲ.ವೈದ್ಯಕೀಯ ಸಿಬ್ಬಂದಿಯ ಸೇವೆ ಕೇವಲ ದೊಡ್ಡವರಿಗೆ ಮಾತ್ರ ಲಭ್ಯವಾಗ್ತಿದೆ.ಈ ಅನ್ಯಾಯ ಪ್ರಶ್ನಿಸೋರೇ ಇಲ್ಲವಾಗಿದೆ.  ಕೊರೊನಾ ವೇಳೆಯ ಲ್ಲಂತೂ ಸಾದಾ ಖೈದಿಗಳನ್ನು ಕನಿಷ್ಟ ತಪಾಸಣೆಗೊಳಪಡಿಸುವ ಕೆಲಸವನ್ನೂ ಇಲ್ಲಿರೋ ವೈದ್ಯಕೀಯ ಸಿಬ್ಬಂದಿ ಮಾಡಲಿಲ್ಲ.ಖೈದಿಗಳ ವಿಚಾರದಲ್ಲಿನ ಜೈಲ್ ಆಡಳಿತದ ನಿರ್ಲಕ್ಷ್ಯಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ  ಬೇಕಾ.

 ಸಾದಾ ಖೈದಿಗಳಿಗೆ ವರ್ಷವಾದ್ರು ಎಂಟ್ರಿ ಕೊಡ್ತಿಲ್ಲ.ದೊಡ್ಡವರನ್ನು ನೋ ಡೊಕ್ಕೆ ದಿನಂಪ್ರತಿ ಹತ್ತಾರು ಜನ ಬಂದೋಗ್ತಾರೆ.ಆದ್ರೆ ಹಣವಿಲ್ಲದವರಿಗೆ ತಮ್ಮ ಸಂಬಂಧಿಗಳನ್ನು ಭೇಟಿಯಾಗೊಕ್ಕೆ ಅವಕಾಶ ವೇ ಸಿಗ್ತಿಲ್ಲ.ಅದೆಷ್ಟೋ ಸಾದಾ ಖೈದಿಗಳು ವರ್ಷಗಟ್ಟಲೇ ತಮ್ಮವರನ್ನು ನೋಡದೆ ಮಾನಸಿಕ ರೋಗಿಗಳಾಗ್ತಿದ್ದಾರಂತೆ.

ಮೈಸೂರ್ ಜೈಲ್ ನಲ್ಲಿನ ವ್ಯವಸ್ಥೆ ಇಷ್ಟೊಂದು ಹಾಳಾಗಿ ಹೋಗಿಕ್ಕೆ..ಸಾದಾ ಖೈದಿಗಳ ಸ್ಥಿತಿ ಚಿಂತಾಜನಕ-ನಾರಕೀಯವಾಗೊಕ್ಕೆ ಕಾರಣವೇ ಜೈಲ್ ಆಡಳಿತ ವ್ಯವಸ್ಥೆ ಎನ್ನಲಾಗ್ತಿದೆ.ಹಲವಾರು ಖೈದಿಗಳು ನೇರವಾಗಿ ಇಲ್ಲಿರೋ ಜೈಲ್ ಅಧಿಕಾರಿ ಸಿಬ್ಬಂದಿ ಕಡೆ ಬೊಟ್ಟು ಮಾಡಿ ತೋರಿಸ್ತಾರೆ. ಪ್ರಕಾಶ್ ಜಲಗಿರಿ, ಸಾಹೇಬ್ ಗೋಡಾ ಸವಲಗಿ ಹಾಗೂ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಸುರೇಶ್ ಎನ್ನೋ ತ್ರಿಮೂರ್ತಿಗಳು. ಅವರೇ ದೊಡ್ಡವರ ಜೊತೆ  ಶಾಮೀಲಾಗಿ ಸಾದಾ ಖೈದಿಗಳ ಬದುಕನ್ನು ನಾರಕೀಯಗೊಳಿಸಿದ್ದಾರೆ ಎನ್ನೋದು ನೊಂದ ಜೈಲು ಹಕ್ಕಿಗಳ ಆರೋಪ.   

ಜೈಲ್ ನಲ್ಲಿ ಯಾವ್ದೇ ಜಾಮರ್ ಹಾಕಿದ್ರೂ ಮೊಬೈಲ್ ಗಳು ರಿಂಗಣಿಸುತ್ತಲೇ ಇರುತ್ವೆ.ಬಹುತೇಕ ಸೆಲ್-ಬ್ಯಾರಕ್ ಗಳಲ್ಲಿ ಬೇಸಿಕ್ ಮಾಡೆಲ್ ನಿಂದ ಹಿಡಿದು ಅತ್ಯಾಧುನಿಕ ಸೌಲಭ್ಯದ ಆಂಡ್ರಾಯ್ಡ್ ಮೊಬೈಲ್ ಗಳು ಹಣ ಕೊಟ್ಟರೆ ಇಲ್ಲಿ ಲಭ್ಯ.ಅಂಡ್ರಾಯ್ಡ್ ಮೊಬೈಲ್ 30  ಸಾವಿರಕ್ಕೆ ಸಿಕ್ಕರೆ, ಸಿಂಗಲ್ ಸಿಮ್ ಇರೋ ಮೊಬೈಲ್  8 ಸಾವಿರ, ಡಬಲ್ ಸಿಮ್ ಮೊಬೈಲ್ 15 ಸಾವಿರಕ್ಕೆ ಸಿಗುತ್ತೆ.ಚಾರ್ಜರ್ ಗೆ ಸಪರೇಟ್ ಆಗಿ 2 ಸಾವಿರ ತೆರಬೇಕಾಗ್ತದೆ.

ವಿಚಿತ್ರ ಏನ್ ಗೊತ್ತಾ,ಕಮಿಷನ್ ಪಡೆದು  ಮೊಬೈಲ್ ಗಳನ್ನು ಕೊಡೋದು, ನಾವೂ ಕೆಲಸ ಮಾಡ್ತಿದ್ದೇವೆ ಎಂದು ತೋರಿಸೊಕ್ಕೆ ದಾಳಿ ಹೆಸ್ರಲ್ಲಿ ಅವುಗಳನ್ನು ಸೀಜ್ ಮಾಡುವುದು,ಪರಿಸ್ಥಿತಿ ಸಣ್ಣಗಾದ ಮೇಲೆ ಅದನ್ನು ಮತ್ತೆ ಹಣ ಪಡೆದು ಖೈದಿಗಳಿಗೆ ನೀಡೋದು ಕೂಡ ಈ ತ್ರಿಮೂರ್ತಿಗಳೇ.ಜೈಲ್ ನಲ್ಲಿ ಖೈದಿಗಳ ಜೊತೆ ಕಣ್ಣಾಮುಚ್ಚಾಲೆ ಆಡೋದ್ರಲ್ಲಿ ಈ ತ್ರಿಮೂರ್ತಿಗಳದ್ದು ಎತ್ತಿದ ಕೈ.ಮೊಬೈಲ್ ನಂತೆ ಗಾಂಜಾ-ಅಫೀಮ್-ಚರಸ್ ನಂಥ ಮಾದಕದ್ರವ್ಯ ಕೂಡ ಜೈಲ್ ನಲ್ಲಿ ಸಪ್ಲೈ ಮಾಡಲಾಗ್ತಿದೆಯಂತೆ.

ಸಣ್ಣ ಪೊಟ್ಟಣಕ್ಕೆ  500 ರೂ ಫಿಕ್ಸ್ ಮಾಡಿ ಮಾರಲಾಗ್ತಿದೆಯಂತೆ. ಯಾವ್ದೇ ಕ್ಷಣದಲ್ಲಿ ತಪಾಸಣೆ ಮಾಡಿದ್ರೂ ಮೈಸೂರ್ ಜೈಲ್ ನಲ್ಲಿ ಅದೆಷ್ಟ್ ಕೆಜಿ ಗಾಂಜಾ ಸಿಗುತ್ತೋ ಗೊತ್ತಿಲ್ಲ ಎನ್ನುತ್ತಾರೆ ಖೈದಿಗಳು.ಜೈಲ್ ನಲ್ಲಿ ಸಾದಾ ಖೈದಿಗಳಿಗೊಂದು,ಹಣವುಳ್ಳ ಡಾನ್-ದಾದಾ-ಬಾಸ್ ಗಳಿಗೊಂದು ಎನ್ನುವ ರೀತಿಯ ಟ್ರೀಟ್ಮೆಂಟ್ ಸಿಗ್ತಿದೆಯಂತೆ.ಶಿಕ್ಷೆ ಏನಿದ್ರೂ ಅನ್ಯಾಯ-ತಾರತಮ್ಯ ಪ್ರಶ್ನಿಸೋ ಸಾದಾ ಖೈದಿಗಳಿಗೆ…ಹಣ ಉಳ್ಳವರಿಗೆರಾಯಲ್ ಟ್ರೀಟ್ಮೆಂಟ್ ಎನ್ನೋದು ಜೈಲ್ ಗೆ ಎಂಟ್ರಿ ಹೊಡೆಯೊಕ್ಕೆ ಮುನ್ನವೇ ಫಿಕ್ಸ್ ಆಗೋಗಿರುತ್ತದಂತೆ…ಪರಿಸ್ತಿತಿ ಹೀಗಿರುವಲ್ಲಿ ,ಜೈಲ್ ಎನ್ನೋದು  ಖೈದಿಗಳ ಮನಪರಿವರ್ತನೆಯ ತಾಣವಾಗುತ್ತಾ..ಹಾಗಂದುಕೊಳ್ಳೋದು ನಮ್ಮ ಮೂರ್ಖತನ ಅಲ್ವೇ.. ಇಲ್ಲಿನ ವ್ಯವಸ್ಥೆ ನಿಜಕ್ಕು ಬದಲಾಗುತ್ತಾ..ಬದಲಾಗುತ್ತೆನ್ನುವ ನಿರೀಕ್ಷೆ ಮಾಡಬಹುದಾ..?ಹಾಗೆನಿಸುತ್ತಿಲ್ಲ.. 

ಅಕ್ರಮಗಳ ಅಡ್ಡೆಯಾಯ್ತಾ ಮೈಸೂರ್ ಜೈಲ್..ಅಸಹ್ಯವನ್ನು ಬಯಲುಮಾಡ್ತು  ಆ ಸ್ಪೋಟಕ ಆಡಿಯೋ.. ಇಲ್ಲಿ 500 ರೂಗೆ ಗಾಂಜಾ..30 ಸಾವಿರಕ್ಕೆ ಮೊಬೈಲ್ ಸೇಲ್..ಬಾಸ್-ಡಾನ್-ದಾದಾಗಳದ್ದೇ ಅಬ್ಬರ..

Spread the love
Leave A Reply

Your email address will not be published.

Flash News