ಹಡಬೆ ಹಣ ಮಾಡೋ ಖಯಾಲಿಗೆ ಬಿದ್ದು ನಿರುದ್ಯೋಗಿಗಳನ್ನು ವಂಚಿಸ್ತಿದ್ದ ಮಂಗ್ಳೂರಿನ “ಚೈನ್ ಲಿಂಕ್” ವಂಚಕ ಸಂದೇಶ್ ಶೆಟ್ಟಿ ಅಂದರ್..

0

ಬೆಂಗಳೂರು/ಮಂಗಳೂರು:ಪ್ರತಿಭೆ-ಸೌಂದರ್ಯವನ್ನು ಸರಿಯಾಗಿ ಬಳಸಿಕೊಂಡಿದ್ರೆ ಇಂದು ಈತ ಯಶಸ್ವಿ ಉದ್ಯಮಿ..! ಆದ್ರೆ ಬೆಳೆದದ್ದು ಮಾತ್ರ ವಂಚಕನಾಗಿ..ಅದು ಕೂಡ ನಿಷ್ಪಾಪಿ ನಿರುದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಿ..ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಸಮುದಾಯ ನೋಡಲೇಬೇಕಾದ ಸ್ಟೋರಿ ಇದು..ಅದೇನೇ ಇರಲಿ ಒಟ್ನಲ್ಲಿ ಉದ್ಯೋಗ ಸಿಕ್ಕರೆ ಸಾಕು ಎಂಬ ಮೆಂಟಾಲಿಟಿಯ ನಿರುದ್ಯೋಗಿಗಳ ಅಮಾಯಕತೆಯನ್ನೇ ಕೆಲವು ವಂಚಕರು ಹೇಗೆಲ್ಲಾ ಮಿಸ್ಯೂಸ್ ಮಾಡ್ಕಂಡು, ಮಕ್ಮಲ್ ಟೋಪಿ ಹಾಕ್ತಾರೆನ್ನುವುದಕ್ಕೆ ಈ ಬಹುಕೋಟಿ ವಂಚಕನ ಕಥೆ  ಒಂದು ಜ್ವಲಂತ ನಿದರ್ಶನ.

ಅಂದ್ಹಾಗೆ ಈತ ವಂಚಿಸಿದ್ದು ವಿದ್ಯಾರ್ಥಿ ಹಾಗು ಕಾಲೇಜ್ ಮುಗಿಸಿ ಕೆಲಸದ  ಅನ್ವೇಷಣೆಯಲ್ಲಿರುವ ಯುವ ನಿರುದ್ಯೋಗಿ ಸಮೂಹವನ್ನು.ಅದು ಕೂಡ  ಒಂದಷ್ಟು ಜನರನ್ನಲ್ಲ ಹಾಗೆಯೇ ಒಂದು ಜಿಲ್ಲೆಯವರನಲ್ಲ..ಬರೋಬ್ಬರಿ 10 ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಹಾಗೂ  ನಿರುದ್ಯೋಗಿಗಳನ್ನು.ಯುವ ಸಮೂಹವನ್ನು ಟಾರ್ಗೆಟ್ ಮಾಡಿ ಅವರಲ್ಲಿ ಟ್ರಿಲೇನಿಯರ್ ಆಸೆಯನ್ನು ಮೂಡಿಸಿ ಹಣವನ್ನು ಕಲೆ ಹಾಕುತ್ತಿದ್ದ ಟ್ರಿಲೇನಿಯರ್ ಮೈಂಡ್  ಎನ್ನುವ ವಂಚಕ ಚೈನ್ ಲಿಂಕ್ ಕಂಪೆನಿ ಮಾಲೀಕನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

ಈತ.. ಸಂದೇಶ್ ಶೆಟ್ಟಿ ಮಂದಾರ್ಥಿ…ಮೂಲತಃ ಮಂಗಳೂರಿನವನು.. ತನ್ನ ಸ್ಪುರದ್ರೂಪಿತನ ಹಾಗೂ ಬುದ್ಧಿವಂತಿಕೆಯನ್ನು ಒಳ್ಳೆ ಕೆಲಸಕ್ಕೆ ಯೂಸ್ ಮಾಡಿದಿದ್ದರೆ ಇವತ್ತು ಮಂಗಳೂರಿನಲ್ಲಿಯೇ ಅತ್ಯಂತ ಯಶಸ್ವಿ ಬ್ಯುಸಿನೆಸ್ ಮೆನ್ ಆಗ್ತಿದ್ದನೇನೋ.. ಆದರೆ ಮೈ ಬಗ್ಗಿಸಿ,ಬೆವರನ್ನು ಹರಿಸದೆ ಸಲೀಸಾಗಿ ದುಡ್ಡು ಮಾಡಬೇಕೆನ್ನುವ ಕೆಟ್ಟ ಖಯಾಲಿ ತಲೆಗಚ್ಚಿಸಿಕೊಂಡು ಯುವ ಸಮೂಹವನ್ನು ವಂಚಿಸಿ ಸಿಕ್ಕಾಕೊಂಡಿ ದ್ದಾನೆ. ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದ್ರೆ ಪ್ರಪಂಚಕ್ಕೆ ಗೊತ್ತಾಗೊಲ್ಲ ಎಂಬ ಆತನ ಅತಿಯಾದ ಆತ್ಮವಿಶ್ವಾಸವೇ ಪೊಲೀಸರ ಖೆಡ್ಡಾಕ್ಕೆ ಬೀಳುವಂತೆ ಮಾಡಿದೆ.ಈತನ ವಂಚನೆಯ ರಸವತ್ತಾದ ಕಥೆ ಕೇಳಿಸಿಕೊಂಡ ಪೊಲೀಸ್ರೆ ಬೆಚ್ಚಿ ಬಿದ್ದಿದ್ದಾರೆ.

ಬೆಂಗಳೂರು ಸೇರಿದಂತೆ  ದ.ಕನ್ನಡ, ಉ.ಕನ್ನಡ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಉಡುಪಿ, ಮಂಗಳೂರು, ಕಾರವಾರ ಜಿಲ್ಲೆಯ ವಿದ್ಯಾರ್ಥಿಗಳನ್ನು ತನ್ನ ವಂಚಕ ನೆಟ್ವರ್ಕ್ ಬಳಸಿಕೊಂಡು ಚೈನ್ ಲಿಂಕ್ ಬ್ಯುಸಿನೆಸ್ ಹೆಸ್ರಲ್ಲಿ ವಂಚಿಸುತ್ತಿದ್ದ  ಸಂದೇಶ್ ಶೆಟ್ಟಿಯನ್ನು ಬೆಂಗಳೂರಿನಲ್ಲಿ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.ಡಿಗ್ರಿ ಮುಗಿಸಿ ಕೆಲಸದ ಅನ್ವೇಷಣೆಯಲ್ಲಿರುವ ಯುವ ಸಮುದಾಯವನ್ನು  ಸಂದೇಶ್ ಶೆಟ್ಟಿ ಟಾರ್ಗೇಟ್ ಮಾಡುತ್ತಿದ್ದ.ಆತನ ಮನಸ್ತಿತಿಯ ಒಂದಷ್ಟು ಯುವಕರನ್ನು ಏಜೆಂಟ್ ರನ್ನಾಗಿ ನಿಯೋಜಿಸಿಕೊಂಡು ಕಾಲೇಜುಗಳತ್ತ ಕಳುಹಿಸಿಕೊಡುತ್ತಿದ್ದನಂತೆ. ಯುವ ಸಮುದಾಯದಲ್ಲಿ ಹಣ ಮಾಡುವ ಆಸೆಯನ್ನು ಬಿತ್ತಿ ಅವರು ಕೂಡಿಟ್ಟ ಹಣವನ್ನು ಚೈನ್ ಲಿಂಕ್ ಕಂಪೆನಿಯಲ್ಲಿ ಹೂಡಿಕೆ ಮಾಡುವಂತೆ ಏಜೆಂಟ್ ಗಳು ಹುರಿದುಂಬಿಸುತ್ತಿದ್ದರಂತೆ.

ಯುವಕರು,ತಮ್ಮ ಮನೆಗಳಲ್ಲಿ ಅಪ್ಪ-ಅಮ್ಮ ಕೊಡುವ ಪಾಕೆಟ್ ಮನಿಯನ್ನೆಲ್ಲಾ ತಂದು ಈ ವಂಚಕ ಏಜೆಂಟ್ ಗಳಿಗೆ ಕೊಡುತ್ತಿ ದ್ದರು.ಸಾವಿರಾರು ವಿದ್ಯಾರ್ಥಿಗಳಿಂದ ಕಲೆ ಹಾಕಿದ ಕೋಟ್ಯಾಂತರ ಹಣವನ್ನು ಬೇರೆಲ್ಲೂ ಹೂಡಿಕೆ ಮಾಡಿ ಅದರಿಂದ ಹತ್ತಾರು ಕೋಟಿ ಸಂಪಾದಿಸುತ್ತಿದ್ದನಂತೆ ಸಂದೇಶ್ ಶೆಟ್ಟಿ.ತಾವು ಹಣ ಹೂಡಿದ್ದಲ್ಲದೆ ಅವರ ನೆಟ್ವರ್ಕ್ ನಲ್ಲಿರುವ ಮತ್ತಷ್ಟು ಅಮಾಯಕರ ನ್ನು ಪರಿಚಯಿಸಿ ಅವರಿಂದ್ಲೂ ಹಣವನ್ನು ಹೂಡಿಕೆ ಮಾಡಿಸಿದ್ದಾರೆ ವಿದ್ಯಾರ್ಥಿಗಳು.ಅನುಮಾನ ಬಾರದಿರುವಂತಾಗಲು ಆರಂಭದಲ್ಲಿ ಒಂದಷ್ಟು ಹಣವನ್ನು ಕೊಟ್ಟು ನಂಬಿಕೆ ಬಲಪಡಿಸಿಕೊಂಡಿದ್ದನಂತೆ ಈ ವಂಚಕ ವಿನೋದ್ ಶೆಟ್ಟಿ.

ಸಾವಿರಾರು ಅಮಾಯಕ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರಿಂದ ಸಂಗ್ರಹಿಸಿದ ಕೋಟ್ಯಾಂತರ ಹಣವನ್ನು ಹೂಡಿಕೆ ಮಾಡಿ ಅದರಿಂದ ಬರೋ ಬಡ್ಡಿಯಿಂದ್ಲೇ ಐಷಾರಾಮಿ ಜೀವನ ನಡೆಸುತ್ತಿದ್ದನಂತೆ ವಿನೋದ್ ಶೆಟ್ಟಿ.ಒರಾಯನ್ ಮಾಲ್ ಹಿಂದೆ ಫ್ಲಾಟ್ ಖರೀದಿಸಿ ಅಲ್ಲಿ ನಿತ್ಯವೂ ಮೋಜುಮಸ್ತಿ ಮಾಡುತ್ತಿದ್ದನಂತೆ.ಸಿಕ್ಕ ಕಡೆ ಟೂರ್ ಮಾಡಿಕೊಂಡು ಈ ಹಣದಲ್ಲೇ ಪ್ರಾಪರ್ಟಿಯನ್ನು ಖರೀದಿಸಿದ್ದನಂತೆ.ಅನೇಕ ಉದ್ಯಮಗಳಲ್ಲೂ ಹಣ ಹೂಡಿಕೆ ಮಾಡಿದ್ದನಂತೆ.

ನಯವಾದ ಮಾತುಗಳ ಮೂಲಕ ಎಂಥವ್ರನ್ನು ಬೇಕಾದ್ರೂ ನಂಬಿಸ್ತಿದ್ದ ವಿನೋದ್ ಶೆಟ್ಟಿ,ಒಂದ್ ಹೆಜ್ಜೆ ಮುಂದ್ಹೋಗಿ ದೊಡ್ಡ ದೊಡ್ಡ ಫ್ಲಾಟ್ ಫಾರ್ಮ್ ಗಳಲ್ಲಿ ಪ್ರೋಗ್ರಾಂ ಮಾಡಿಸ್ತಿದ್ದ.ಕೆಲವರಿಗೆ ಹಣ ಕೊಟ್ಟು ಅವರಿಂದ ವೇದಿಕೆಗಳ ಮೇಲೆ ನಾವು ಕೋಟಿಗಳಲ್ಲಿ ಲಾಭ ಮಾಡಿದ್ದೇವೆ ಎಂದು ಸಾಕ್ಷಿ ನುಡಿಸುತ್ತಿದ್ದನಂತೆ.ಇನ್ನು ಕೆಲವರಿಗೆ ಸಣ್ಣಪುಟ್ಟ ಗಿಫ್ಟ್-ಆಕರ್ಷಕ ನಗದು ಬಹುಮಾನ ನೀಡಿ ಹುರಿದುಂಬಿಸುತ್ತಿದ್ದನಂತೆ.ಇದು ಈತನನ್ನು ಮತ್ತಷ್ಟು ಅಮಾಯಕರು ನಂಬುವಂತೆ ಮಾಡಿತ್ತಂತೆ.

ಫೇಸ್ ಬುಕ್ ನಲ್ಲಿ ಈತನ ಐಷಾರಾಮಿ ಜೀವನ ಶೈಲಿ ಗಮನಿಸಿ ಸಂಶಯಗೊಂಡ ಸಂತ್ರಸ್ಥರು ಆತನ ಹಿನ್ನಲೆಯನ್ನು ಸ್ಟಡಿ ಮಾಡಿದಾಗ ತಾವೆಲ್ಲಾ ಮೋಸ ಹೋಗಿರುವುದು ಖಾತ್ರಿಯಾಗಿದೆ.ಆತ ಮಾಡಿರೋ ವಂಚನೆ ಅದೆಷ್ಟೋ ಕೋಟಿಗಳೆಷ್ಟೆನ್ನುವು ದು ಗೊತ್ತಾಗಿದೆ.ಹಣ ವಾಪಸ್ ಗೆ ಫ್ಲಾಟ್ ಹತ್ತಿರ ಹೋದ್ರೆ ಬೌನ್ಸರ್ ಗಳ ಮೂಲಕ ಹೊಡೆದೋಡಿಸುತ್ತಿದ್ದನಂತೆ. ಕಂಗಾಲಾದ 60 ಕ್ಕೂ ಹೆಚ್ಚು ಸಂತ್ರಸ್ಥ ವಿದ್ಯಾರ್ಥಿಗಳು  ಸುಬ್ರಮಣ್ಯಪುರಂ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಕೊಟ್ಟ ದೂರಿನ ಮಾಹಿತಿ ಪಡೆದು ಕೆಲವೆಡೆ ತಲೆ ಮರೆಸಿಕೊಂಡು ನಂತ್ರ ಬೆಂಗಳೂರಿಗೆ ವಾಪಸ್ಸಾದ ವಂಚನ ವಿನೋದ್ ಶೆಟ್ಟಿ ಮಂದಾರ್ಥಿಯನ್ನು ಸುಬ್ರಮಣ್ಯಪುರ ಪೊಲೀಸರು ಬಲೆ ಹಾಕಿ ಸೆರೆ  ಹಿಡಿದಿದ್ದಾರೆ.ಈತನಿಂದ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿದ್ದಾರೆ.ತನ್ನ ವ್ಯವಸ್ಥಿತ ವಂಚನೆಗೆ ಸಾಕಷ್ಟು ಜನರನ್ನು ಬಳಸಿಕೊಂಡಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.ಒಟ್ಟಿನಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿಗಳಿಗೆ ವಿನೋದ್ ಶೆಟ್ಟಿ ಎನ್ನುವ ವಂಚನ ಸರಿಯಾದ ಪಾಠವನ್ನೇ ಕಲಿಸಿದ್ದಾನೆ..

Spread the love
Leave A Reply

Your email address will not be published.

Flash News