ಜಮೀನಿಗೆ ಬೋರ್ಡ್ ಹಾಕೊಕ್ಕೆ 5 ಲಕ್ಷ ಲಂಚಕ್ಕೆ ಕೈಯೊಡ್ಡಿ ಕ್ರಿಮಿನಲ್ ಆದ್ರಾ  ಇನ್ಸ್ ಪೆಕ್ಟರ್ ಯಶವಂತ್ – ಭೂಗಳ್ಳನಿಗೆ ಸಾಥ್ ಕೊಡ್ಲಿಕ್ಕೆ ಪಿಸಿ ಮೂಲಕ  ಲಂಚ- ಟ್ರ್ಯಾಪ್ ಆಗ್ತಿದ್ದಂಗೆ ಎಸ್ಕೇಪ್  

0

ಬೆಂಗಳೂರು: ತಮ್ಮನ್ನು ಖೆಡ್ಡಾಕ್ಕೆ ಬೀಳಿಸ್ತಾರೆಂದು ಪೊಲೀಸರಿಗೆ ಹೆದರಿ ಕ್ರಿಮಿನಲ್ಸ್ ಗಳು ತಲೆ ಮರೆಸಿಕೊಳ್ಳೋದನ್ನು ನೋಡಿದ್ದೇವೆ..ಆದ್ರೆ ಇಲ್ಲಿ ಅಪರಾಧಿಗಳನ್ನು ಹಿಡಿಯುವ ಪೊಲೀಸ್ ಅಧಿಕಾರಿಯೇ ತಾನು ಸಿಕ್ಕಾಕೊಳ್ತಿನೆನ್ನೋ ಭಯದಿಂದ ಮೊಬೈಲ್ ಸ್ವಿಚಾಫ್ ಮಾಡ್ಕೊಂಡು ಎಸ್ಕೇಪ್ ಆಗಿದ್ದಾರೆ. ಪೊಲೀಸ್ರೇ ಟೀಮ್ ಹಾಕ್ಕೊಂಡು  ಆತನನ್ನು ಹಿಡಿಯೊಕ್ಕೆ ಶುರು ಮಾಡಿದ್ದಾರೆ ಎಷ್ಟು ವಿಚಿತ್ರ ಅಲ್ವಾ..?

ಹೌದು..ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಯಶವಂತ್ ರನ್ನು ಹಿಡಿಯೊಕ್ಕೆ ಪೊಲೀಸ್ರೇ ಮುಂದಾಗಿದ್ದಾರೆ.ಅದಕ್ಕೊಂದು ತಂಡವನ್ನೇ ರಚಿಸಿಕೊಂಡು ಯಶವಂತ್ ರ ಮೊಬೈಲ್ ಟವರ್ ಲೊಕೇಶನ್ ನ್ನು ಹುಡುಕುತ್ತಿದ್ದಾರೆ.ಅಂದ್ಹಾಗೆ ಯಶವವಂತ್ ಎಸ್ಕೇಪ್ ಆಗೊಕ್ಕೆ ಕಾರಣ ಅವರ ವಿರುದ್ಧ ಕೇಳಿಬಂದಿರುವ ಲಂಚಾವತಾರದ ಗಂಭೀರ ಆರೋಪ.

ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್
ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್
ಕಾನ್ಸ್ ಟೇಬಲ್ ರಾಜು
ಕಾನ್ಸ್ ಟೇಬಲ್ ರಾಜು

ಕಾನೂನು ಸುವ್ಯವಸ್ಥೆಗೆ ಭಂಗ ತರುವಂಥ ಸನ್ನಿವೇಶ ಎದುರಾಗುವವರೆಗು  ಯಾವುದೇ ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರು ತಲೆ ಹಾಕಬಾರದೆನ್ನುವ ನಿಯಮವಿದೆ.ಆದ್ರೆ ಕೆಲವು ಪೊಲೀಸ್ ಅಧಿಕಾರಿಗಳು ಎಷ್ಟೊಂದು ಭ್ರಷ್ಟರಾಗಿರುತ್ತಾರೆ ಎಂದ್ರೆ ಹಣದಾಸೆಗೆ ನಿಯಮಮೀರಿ ವಿವಾದಗಳಲ್ಲಿ ಎಂಟ್ರಿಯಾಗ್ತಾರೆ.ಬಹುತೇಕ ಅದನ್ನು ಪ್ರಶ್ನಿಸುವ ಧೈರ್ಯ ಯಾರೂ ಮಾಡದಿರೋದ್ರಿಂದ ಬಚಾ ವ್ ಆಗ್ತಿದ್ದಾರೆ.ಕೈ ತುಂಬಾ ಹಣ ಎಣಿಸಿಕೊಂಡು ದುಂಡಗಾಗುತ್ತಿದ್ದಾರೆ.ಆದ್ರೆ ಅದೇ ಕೆಲವೊಮ್ಮೆ ಬುಡಕಾಯಿಸುವಷ್ಟು ಅಪಾಯ ಕಾರಿಯಾಗಿರುತ್ತೆನ್ನುವುದು ಗೊತ್ತೇ ಆಗೋದಿಲ್ಲ..ಚಿಕ್ಕಜಾಲ ಇನ್ಸ್ ಪೆಕ್ಟರ್ ಯಶವಂತ್  ವಿಷಯದಲ್ಲಿ ಆಗಿರೋದು ಅದೇ..

ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯಲ್ಲಿ 5 ಎಕರೆ ಜಮೀನನ್ನು ವ್ಯಕ್ತಿಯೋರ್ವರು ಖರೀದಿಸಿ ನೋಂದಣಿ ಮಾಡಿಸಿದ್ದರು.ಜಮೀನಿನ ಹಿಂದಿನ ಮಾಲೀಕ ಇದೇ ಜಮೀನನ್ನು ಇನ್ನೊಬ್ಬರಿಗೆ ಮಾರಾಟ ಮಾಡುವ ಹುನ್ನಾರ ನಡೆಸುತ್ತಿರು ವುದನ್ನು ಪ್ರಶ್ನಿಸಿ ಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು.ಇದಕ್ಕೆ ತಡೆಯಾಜ್ಞೆ ಕೂಡ ನೀಡಲಾಗಿತ್ತು.ಪರಿಸ್ಥಿತಿ ಹೀಗಿದ್ದರೂ ಜಮೀನಿನ ಮಾಲೀಕ ಜಾಲ ಹೋಬಳಿಯ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ಅಕ್ರಮಕ್ಕೆ ಸಾಥ್ ಕೊಡುವಂತೆ ಮನವಿ ಮಾಡಿದ್ದ ಎನ್ನಲಾಗಿದೆ.

ನಕಲಿ ದಾಖಲೆ ಮಾಡಿಕೊಡಲು RI ಎಚ್.ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.ಈ ನಡುವೆ ಜಮೀನು ಕಬಳಿಸುತ್ತಿರುವ ಹುನ್ನಾರ ತಡೆಯೊಕ್ಕೆ ಜಮೀನಿನಲ್ಲಿ ಬೋರ್ಡ್ ಅಳವಡಿಸಿಕೊಟ್ಟು ಸಹಕರಿಸಿ ಎಂದು ಚಿಕ್ಕಜಾಲ ಠಾಣೆಗೆ ಹೋದರೆ ಯಶವಂತ್ ಅಂಡ್ ಟೀಮ್ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ.ಈ ಸಂಗತಿಯನ್ನು ದೂರುದಾರರು ACB  ಗಮನಕ್ಕೆ ತಂದಿದ್ದಾರೆ.

ಖಾಸಗಿ ಚಾನೆಲ್ ವೊಂದರಲ್ಲಿ ಹೀರೋ ಆಗಿ ವಿಜೃಂಭಿಸಿದ್ದ ಇನ್ಸ್ ಪೆಕ್ಟರ್ ಯಶವಂತ್:
ಖಾಸಗಿ ಚಾನೆಲ್ ವೊಂದರಲ್ಲಿ ಹೀರೋ ಆಗಿ ವಿಜೃಂಭಿಸಿದ್ದ  ಯಶವಂತ್:
ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಯಶವಂತ್
ಚಿಕ್ಕಜಾಲ ಠಾಣೆಯ ಇನ್ಸ್ ಪೆಕ್ಟರ್ ಯಶವಂತ್

ಟ್ರ್ಯಾಪ್ ಗೆ ಮುಹೂರ್ತ ಸಿದ್ದಪಡಿಸಿದ ಟೀಮ್ ನಿನ್ನೆ ದೂರದಾರರು 5 ಲಂಚ ನೀಡುವ ವೇಳೆ ಎಚ್.ಪುಟ್ಟಹನುಮಯ್ಯ ಅಲಿಯಾಸ್ ಪ್ರವೀಣ್ ಹಾಗು ಇನ್ಸ್ ಪೆಕ್ಟರ್ ಯಶವಂತ್ ಪರ ಲಂಚ ಪಡಯಲು ಮುಂದಾದ ಕಾನ್ಸ್ ಟೇಬಲ್ ರಾಜು ಅವರನ್ನು ಹಣದ ಸಮೇತ ಸೀಜ್ ಮಾಡಿ ವಶಕ್ಕೆ ಪಡೆದಿದ್ದಾರೆ.ಹಣವನ್ನು ಪಡೆದು ಜೋಪಾನವಾಗಿಟ್ಟಿರು..ಆಮೇಲೆ ಬರುತ್ತೇನೆಂದು ಹೇಳಿದ್ದ ಯಶವಂತ್  ಎಸಿಬಿ ಟ್ರ್ಯಾಪ್ ಆಗ್ತಿರೋ ವಿಷಯ ಗೊತ್ತಾಗ್ತಿದ್ದಂಗೆ ಮೊಬೈಲ್ ಸ್ವಿಚಾಫ್ ಮಾಡ್ಕಂಡ್ ಎಸ್ಕೇಪ್ ಆಗಿದ್ದಾರೆ.ತಲೆ ಮರೆಸಿಕೊಂಡಿರುವ ಯಶವಂತ್ ಪತ್ತೆ ಕಾರ್ಯದಲ್ಲಿ ಎಸಿಬಿ ನಿರತವಾಗಿದೆ.

ಖಾಸಗಿ ಚಾನೆಲ್ ವೊಂದರಲ್ಲಿ ಹೀರೋ ಆಗಿ ವಿಜೃಂಭಿಸಿದ್ದ ಇನ್ಸ್ ಪೆಕ್ಟರ್ ಯಶವಂತ್: ಲಂಚದ ಹಪಾಹಪಿತನಕ್ಕೆ ಸಿಲುಕಿ ಈಗ ಕ್ರಿಮಿನಲ್ ಪಟ್ಟ ಪಡೆದುಕೊಳ್ಳಬೇಕಾಗಿ ಬಂದಿರುವ ಯಶವಂತ್ ಬಗ್ಗೆ ಒಂದು ಮಾತನ್ನು ಹೇಳಲೇಬೇಕಿದೆ.ಖಾಸಗಿ ಸುದ್ದಿ ವಾಹಿನಿಯೊಂದ್ರ ಕಾರ್ಯಕ್ರಮವೊಂದು ಆತನನ್ನು  ಸಾಧಕನನ್ನಾಗಿ ಬಿಂಬಿಸಿತ್ತು. ಸುಮಾರು ಅರ್ಧ ಗಂಟೆಗಳ ಕಾರ್ಯಕ್ರಮದ ಉದ್ದಕ್ಕೂ ಯಶವಂತ್ ಅವರನ್ನು ಹೀರೋ ರೀತಿಯಲ್ಲಿ ಬಿಂಬಿಸಲಾಗಿತ್ತು.ಅವರು ಜನೋಪಕಾರಿ..ಸಹೃದಯ..ಸವ್ಯಸಾಚಿ ಎನ್ನುವಂತೆ ಹಾಡಿ ಹೊಗಳಿತ್ತು.ಆದ್ರೆ ಅದೇ ಯಶವಂತ್  ಇಂದು  ಕ್ರಿಮಿನಲ್ ಎನ್ನೋ ಕಳಂಕ ಪಡೆದುಕೊಳ್ಳುವಂತಾಗಿದೆ..ಎಂಥಾ ದೌರ್ಭಾಗ್ಯವಲ್ಲವೇ..? ಇದು ಸಿವಿಲ್ ಮ್ಯಾಟರ್ ಗಳಲ್ಲಿ ಅನಗತ್ಯವಾಗಿ ಕೈ ಹಾಕುವ ಅದೆಷ್ಟೋ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಪಾಠವಾಗ್ಬೇಕು.

Spread the love
Leave A Reply

Your email address will not be published.

Flash News