“ಕ್ಯಾಮೆರಾಮನ್” ಗಳಾಯ್ತು..ಈಗ “ರಿಪೋರ್ಟಸ್”  ಗು “ಸೋಡಾಚೀಟಿ”.?? !!, ಸಿಬ್ಬಂದಿಯನ್ನು  ಮನೆಗೆ ಕಳುಹಿಸಲು “ಮತ್ತೊಂದು ಚಾನೆಲ್” ನಲ್ಲೂ ರೆಡಿಯಾಗ್ತಿದೆ “ಬ್ಲ್ಯೂ ಪ್ರಿಂಟ್”..?!?!?

0

ಬೆಂಗಳೂರು:ಈ ಕ್ಷಣ ಅಷ್ಟೇ ಶಾಶ್ವತ..ಮರುಕ್ಷಣ ಏನಾಗುತ್ತೋ..ಗೊತ್ತಾಗೊಲ್ಲ.. ಪತ್ರಕರ್ತರ ಇಂದಿನ ಸ್ಥಿತಿಗೆ ಹೋಲಿಕೆಯಾಗುವ ಮಾತಿದು. ದೇಶದ ಅತೀ ದೊಡ್ಡ ನೆಟ್ ವರ್ಕ್ ಎನಿಸಿಕೊಂಡ ನ್ಯೂಸ್ 18 ಕನ್ನಡದ ಸುದ್ದಿಮನೆಯಿಂದ ಮತ್ತೊಂದು ಅಘಾತಕಾರಿ ಸುದ್ದಿ ಹೊರಬಿದ್ದಿದೆ.

30 ಜಿಲ್ಲೆಗಳ ಕ್ಯಾಮೆರಾಮನ್ ಗಳಿಗೆ ಯಾವುದೇ ನೊಟೀಸ್ ನೀಡದೆ ಸೋಡಾಚೀಟಿ ನೀಡಿದ್ದ ಮ್ಯಾನೇಜ್ಮೆಂಟ್ ಇದೀಗ ಬಹುತೇಕ ಎಲ್ಲಾ ಜಿಲ್ಲೆಗಳ ರಿಪೋರ್ಟರ್ಸ್ ಗಳಿಗೂ ನಿಮ್ಮ ಸೇವೆ ನಮಗೆ ಬೇಕಿಲ್ಲ..ರಾಜೀನಾಮೆ ಕೊಡಿ..ಇಲ್ಲದಿದ್ದರೆ ನಿಮ್ಮನ್ನು ನಾವೇ ಹೊರಗಾಕಬೇಕಾಗುತ್ತದೆ ಎಂಬ ಖಡಕ್ ವಾರ್ನಿಂಗ್ ನೀಡಿದೆಯಂತೆ..ಕ್ಯಾಮೆರಾಮನ್ ಗಳ ನಂತ್ರ ಬದುಕಿನ ಅನಿಶ್ಚಿತತೆ-ಉದ್ಯೋಗ ಅಭದ್ರತೆಯ ಸಮಸ್ಯೆ ಇದೀಗ ರಿಪೋರ್ಟರ್ಸ್ ಗಳಿಗೆ ಎದುರಾಗಿದೆಯಂತೆ.

ಹೌದು…ಮೊನ್ನೆ ತಾನೇ ಕನ್ನಡ ಫ್ಲಾಶ್ ನ್ಯೂಸ್..ನ್ಯೂಸ್18 ಕನ್ನಡದ ದುಸ್ಥಿತಿಯನ್ನು ಎಳೆಎಳೆಯಾಗಿ ಕೆಲಸದಿಂದ ತೆಗೆಯಲ್ಪಟ್ಟ ಕ್ಯಾಮೆರಾಮನ್ ಗಳ ನೋವು-ಆಕ್ರಂಧನವನ್ನೇ ಆಧಾರವಾಗಿಟ್ಟುಕೊಂಡು ವರದಿ ಮಾಡಿತ್ತು.ಪತ್ರಕರ್ತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರೇ ಕಡಿಮೆಯಾಗಿರುವಾಗ ಯಾವುದೇ ನಿರ್ಭಿಡೆಯಿಲ್ಲದೆ ಅಂತದ್ದೊಂದು ಸುದ್ದಿ ಹಾಕುವ ಧೈರ್ಯ ಮಾಡಿದ ನಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ಅದರ ಬೆನ್ನಲ್ಲೇ ಫ್ಲಾಶ್ ನ್ಯೂಸ್ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಮತ್ತೊಂದು ಸ್ಪೋಟಕವಾದ ಸುದ್ದಿಯನ್ನು ಹೊರಹಾಕ್ತಿದ್ದೇವೆ..ಕ್ಯಾಮೆರಾಮನ್ ಗಳ ಬೆನ್ನಲ್ಲಿಯೇ ರಿಪೋರ್ಟರ್ಸ್ ಗು ಕೆಲಸ ಬಿಡುವಂತೆ ಕಟ್ಟಪ್ಪಣೆ ಮಾಡಿದ್ದಾರೆನ್ನೋ ಶಾಕಿಂಗ್ ನ್ಯೂಸ್.

ರಾಜೀನಾಮೆ ಕೊಟ್ರೆ ಒಳ್ಳೇದು..ನಿರಾಕರಿಸಿದ್ರೆ..ಮುಂದಿನ ಪರಿಣಾಮ ಎದುರಿಸಿ..!:ಕನ್ನಡ ಫ್ಲಾಶ್ ನ್ಯೂಸ್ ಕೆಲ ಜಿಲ್ಲೆಗಳ ವರದಿಗಾರರನ್ನು ಸಂಪರ್ಕಿಸಿದಾಗ ರಾಜೀನಾಮೆ ನೀಡಿ ಎಂದ್ಹೇಳಿ ರುವುದು ಸತ್ಯ…ಸಧ್ಯಕ್ಕೆ ರಾಜೀನಾಮೆ ಕೊಡಿ..ಅವಶ್ಯಕತೆ ಬಿದ್ದರೆ ಮುಂದೆ ನಿಮ್ಮ ಸಹಾಯವನ್ನು ಪಡೆಯಲಾಗುವುದು ಎಂದು ಹೇಳಿದ್ದಾರೆನ್ನುವ ಮಾತು ಕೇಳಿಬಂತು.. ಅಲ್ರಿ ಎಲ್ಲರನ್ನೂ ಮನೆಗೆ ಕಳುಹಿಸಿ ಚಾನೆಲನ್ನು ಮುಚ್ಚುತ್ತಾರಾ…? ಚಾನೆಲ್ ಉಳಿಸಿಕೊಳ್ಳುತ್ತಾರೆಂದ್ರೆ ನಡೆಸುತ್ತಾರಾದ್ರೂ ಹೇಗೆ.?.ಆಗಲೂ ಮಾನವ ಸಂಪನ್ಮೂಲ ಬೇಕಾಗುತ್ತಲ್ವೇ..?  ಎಂದು ಕೇಳಿದ್ರೆ. ,ರಿಪೋರ್ಟರ್ಸ್ ಗಳನ್ನು ತೆಗೆದು ಸ್ಟ್ರಿಂಜರ್ಸ್ ಗಳನ್ನು ತೆಗೆದುಕೊಳ್ಳುತ್ತಾರಂತೆ.. ಕೆಲ ಕಡೆ ಆ ಕೆಲಸ ಈಗಾಗಲೇ ಶುರುವಾಗಿದೆ ಎಂದ್ರು..ಹೋಗ್ಲಿ ರಾಜಿನಾಮೆ ನೀಡಲಿರುವ ರಿಪೋರ್ಟರ್ಸ್ ಗಳನ್ನೇ ಸ್ಟ್ರಿಂಜರ್ಸ್ ಗಳನ್ನಾಗಿ ನೇಮಕ ಮಾಡಿಕೊಳ್ಳಬಹು ದಲ್ವಾ..?  ಎನ್ನುವ ಪ್ರಶ್ನೆಗೆ..ಏನೋ ಗೊತ್ತಿಲ್ಲ..ಸಾರ್..ಆದ್ರೆ ನಾವಂತೂ ಬೀದಿಗೆ ಬಿದ್ವಿ ಎಂದು ಕಣ್ಣೀರಾಕುತ್ತಾರೆ.

ಬೆಂಗಳೂರಿನ ಸಿಬ್ಬಂದಿ ಗತಿ ಏನು..?ಇದೆಲ್ಲಾ ಜಿಲ್ಲೆಗಳ ಪರಿಸ್ತಿತಿಯಾದ್ರೆ,ಇನ್ನು ಬೆಂಗಳೂರಿನ ಚಿತ್ರಣ ಹೇಗಿದೆ ಎನ್ನುವುದನ್ನು ನೋಡಿದ್ರೆ ಈಗಾಗ್ಲೇ 10ಕ್ಕೂ ಹೆಚ್ಚು ಕ್ಯಾಮೆರಾಮನ್ಸ್ ಕೆಲಸ ಕಳ್ಕೊಂಡು ನೋಟಿಸ್ ಪಿರಿಯಡ್ ನಲ್ಲಿದ್ದಾರೆ.ಕೆಲಸ ಕಳಕೊಂಡವ್ರು ಬೇರೆ ಚಾನೆಲ್ ಗಳಿಗೆ ಹೋಗಲಿಕ್ಕೆ ಅಲ್ಲಿಯೂ ಅವಕಾಶವಿಲ್ಲ.ಈ ನಡುವೆ ಕೆಲ ಚಾನೆಲ್ ಗಳು ಕ್ಯಾಮೆರಾಮನ್ ಗಳಿಗೆ ಆಫರ್ ಮಾಡುತ್ತಿರುವ ಸಂಬಳ ಕೇಳಿದ್ರೆ ನಾಚಿಕೆಯಾಗುತ್ತೆ.ಕೊರೊನಾದಂಥ ಪರಿಸ್ತಿತಿಯಲ್ಲಿ ಏನ್ ಮಾಡ್ಬೇಕು..ಏನ್ ಬಿಡ್ಬೇಕೆಂದು ತೋಚದೆ ಪಾಪ ಕ್ಯಾಮೆರಾಮನ್ ಗಳು ಸಂಕಟಕ್ಕೆ ಸಿಲುಕಿದ್ದಾರೆ.ಮದ್ವೆ ಆರ್ಡರ್,ಫೋಟೋ ಶೂಟ್..ಸಿನೆಮಾ ವೀಡಿಯೋಗ್ರಫಿ ಮಾಡೊಕ್ಕೆ ಮುಂದಾಗಿದ್ದಾರೆ.

ಚಾನೆಲ್ ಮುಚ್ಚೋ  ಪ್ಲ್ಯಾನ್ ಏನಾದ್ರೂ ಇದೆಯೇ..?!: ಇದೆಲ್ಲವನ್ನು ನೋಡಿದ್ರೆ ನ್ಯೂಸ್-18 ಕನ್ನಡ ಚಾನೆಲ್ ಮುಚ್ಚೊಕ್ಕೇನಾದ್ರೂ ಪ್ಲ್ಯಾನ್ ಮಾಡಲಾಗಿದೆಯೇ..? ಎಂದು ನೋಡಿದ್ರೆ ಅದರ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ..ಬೆಂಗಳೂರಿನಲ್ಲಿಯೂ ಸಂಪಾದಕೀಯದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನೂ ಟಾರ್ಗೆಟ್ ಮಾಡಲಾಗಿದೆ ಎನ್ನುವ ಮಾತಿದೆ..ರಿಪೋರ್ಟರ್ಸ್ ಗಳಿಗೆ ಮೋಜೋ ಕಿಟ್ ನೀಡಿ ಅವರನ್ನೇ ಕ್ಯಾಮೆರಾಮನ್ ಕಮ್ ರಿಪೋರ್ಟರ್ಸ್ ನ್ನು ಮಾಡುವ ಪ್ಲ್ಯಾನ್ ಇದೆ ಎನ್ನಲಾಗ್ತಿದೆ.ಅದು ಒಂದ್ ವಿಶ್ಲೇಷಣೆಯಾದ್ರೆ ಕೆಲ ರಿಪೋರ್ಟರ್ಸ್ ಗಳಿಗೂ  ಮನೆಗೆ ಕಳುಹಿಸುವ ಪ್ಲ್ಯಾನ್ ಇದೆಯಂತೆ.ಒಂದೊಂದು ಬ್ಯೂರೋದಲ್ಲಿ ಒಬ್ಬೊಬ್ಬ ರಿಪೋರ್ಟನ್ನು ಉಳಿಸಿಕೊಂಡು ಚಾನೆಲ್ ನಡೆಸುವ ನಿರ್ದಾರಕ್ಕೆ ಬಂದಿದೆ ಆಡಳಿತ ಮಂಡಳಿ ಎನ್ನುವುದು ಸುದ್ದಿಜಗತ್ತಿನಲ್ಲಿ  ಹರಿದಾಡುತ್ತಿರುವ ಮಾತು.

ಆರಕ್ಕೇರಲಿಲ್ಲ..ಮೂರಕ್ಕೆ ಇಳಿಯಲಿಲ್ಲ.. :ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಪೂರೈಸಿದ ಹೊರತಾಗ್ಯೂ ಸುದ್ದಿ ಪೈಪೋಟಿಯ ವಿಚಾರದಲ್ಲಿ  ನ್ಯೂಸ್ 18 ಕನ್ನಡದ ಸಾಧನೆ ಅಷ್ಟಕ್ಕಷ್ಟೆ ಎನ್ನುವ ಮಾತು ಸುದ್ದಿಜಗತ್ತಿನಲ್ಲಿದೆ. ಅದಕ್ಕೆ  ಒಂದರ್ಥದಲ್ಲಿ ಮ್ಯಾನೇಜ್ಮೆಂಟೂ ಕಾರಣ  ಎನ್ನಲಾಗಿದೆ.ಕ್ವಾಲಿಟಿ-ಕ್ವಾಂಟಿಟಿಯಲ್ಲಿ ಕಾಂಪ್ರಮೈಸ್ ಆಗ್ಬೇಡಿ ಎಂದು ಮ್ಯಾನೇಜ್ಮೆಂಟ್ ಎಲ್ಲಾ ಸೌಲಭ್ಯವನ್ನು ಮರುಮಾತಾಡದೆ ಕಲ್ಪಿಸಿಕೊಟ್ಟರೂ, ಚಾನೆಲ್ 4 ನೇ ಸ್ಥಾನವನ್ನು ಬಿಟ್ಟು ಮೇಲೇಳಲೇ ಇಲ್ಲ..

ಒಮ್ಮೆ ಪಬ್ಲಿಕ್ ಟಿವಿಯನ್ನು ಬೀಟ್ ಮಾಡುದ್ವಿ ಎಂದು ಚಾನೆಲ್ ನಲ್ಲಿ ಸಂಭ್ರಮಿಸಿದ್ದನ್ನು ಬಿಟ್ಟರೆ(ಅದರ ಬಗ್ಗೆಯೂ ಸಾಕಷ್ಟು ಅನುಮಾನಗಳಿವೆ.ಇದರ ಬಗ್ಗೆ ತನಿಖೆ ನಡೆಸಬೇಕೆನ್ನುವ ಮಾತುಗಳು ಕೇಳಿಬಂದಿದ್ದವಂತೆ.ಆದ್ರೆ ನಂತರ ಅದನ್ನು ತಣ್ಣಗೆ ಮಾಡಲಾಯ್ತಂತೆ)  ಟಿಆರ್ ಪಿ ವಿಚಾರದಲ್ಲಿ 4ರ ಸ್ಥಾನದಲ್ಲಿ ವೈಬ್ರೇಷನ್ನೇ ಕಾಣಲಿಲ್ಲ..ಚಾನೆಲ್ ನಡೆಸುವವರ ವೈಯುಕ್ತಿಕ ಹಿತಾಸಕ್ತಿಯೇ ಇವತ್ತು ಪರಿಸ್ತಿತಿ ಕ್ಯಾಮೆರಾಮನ್ಸ್ ,ಅದರ ಬೆನ್ನಲ್ಲಿ ರಿಪೋರ್ಟರ್ಸ್ ಗಳನ್ನು ತೆಗೆಯುವಂಥ ಪರಿಸ್ತಿತಿಗೆ ಕಾರಣವಾಯ್ತಾ..ಮ್ಯಾನೇಜ್ಮೆಂಟೇ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಮತ್ತೊಂದು ಚಾನೆಲ್ ನಲ್ಲೂ ಸಿದ್ಧವಾಗ್ತಿದೆಯಂತೆ  ಬ್ಲ್ಯೂ ಪ್ರಿಂಟ್: ಇದು ಈ ಚಾನೆಲ್ ನ ಸ್ತಿತಿ..ಇದರಿಂದ ಪ್ರೇರೇಪಣೆಗೊಂಡ ಮತ್ತೊಂದಷ್ಟು ಚಾನೆಲ್ ಗಳು ಕೂಡ ತಮ್ಮ ಸಿಬ್ಬಂದಿ ಸಂಖ್ಯೆಯನ್ನು ಕಡಿತ ಮಾಡಿಕೊಳ್ಳೊಕ್ಕೆ ಬ್ಲ್ಯೂ ಪ್ರಿಂಟ್ ರೆಡಿ ಮಾಡಿಕೊಂಡಿವೆ ಎನ್ನುವ ಮಾತುಗಳಿವೆ.ನ್ಯೂಸ್ 18 ಬೆನ್ನಲ್ಲೇ ಪ್ರತಿಷ್ಟಿತ ಉದ್ಯಮಿಯೋರ್ವರ ಆಡಳಿತದಲ್ಲಿ ನಡೆಯುತ್ತಿರುವ ಮತ್ತೊಂದು ಚಾನೆಲ್ ಕೂಡ ಹಚ್ಚುವರಿ ಸಿಬ್ಬಂದಿ ನೆವ ಇಟ್ಟುಕೊಂಡು ಚಾನೆಲ್ ನಲ್ಲಿರುವ ಸ್ಟಾಫ್ ಗಳನ್ನು ಮನೆಗೆ ಕಳುಹಿಸಲು ಪ್ಲ್ಯಾನ್ ಹಾಕ್ಕೊಂಡಿವೆ ಎನ್ನಲಾಗ್ತಿದೆ…ನ್ಯೂಸ್-18 ಕನ್ನಡದ ಚಾಳಿ ಉಳಿದೆಲ್ಲಾ ಚಾನೆಲ್ ಗಳಿಗೂ ಹಬ್ಬುತ್ತಿರುವುದು ಮಾತ್ರ ದುರಾದೃಷ್ಟಕರ.

 ಬಕೆಟ್ …ಜೊಲ್ಲು….ಬಹುಪರಾಖ್ ಹಾಕೋರು..ಗಾಡ್ ಫಾದರ್ಸ್ ಇರೋರಿಗಷ್ಟೇ ಉದ್ಯೋಗ ಖಾತ್ರಿ: ಪಾಪ..ಪತ್ರಕರ್ತರು (ಹುದ್ದೆ ಬಳಸಿಕೊಂಡು ಸೊಂಪಾಗಿ ಇರುವವರು -ದೊಡ್ಡವರಿಗೆ ಬಕೆಟ್ ಹಿಡ್ಕಂಡಿರುವರು.. ..ಕೆಲಸ ಬಾರದಿದ್ದರೂ ಗಾಡ್ ಫಾದರ್ಸ್ ಗಳ ಶ್ರೀರಕ್ಷೆಯಿಂದ ಮೆರೆಯುತ್ತಿರುವವರನ್ನು ಹೊರತುಪಡಿಸಿ) ಅದೇನ್ ಕರ್ಮ ಮಾಡಿ ಹುಟ್ಟಿರುತ್ತಾರೋ ಗೊತ್ತಿಲ್ಲ..ದಯೆ-ಕಾರುಣ್ಯ-ಮಾನವೀಯತೆ ಇಲ್ಲದೆ ತಮ್ಮ ನೌಕರ-ಕಾರ್ಮಿಕರನ್ನು ಕೆಲಸದಿಂದ ತೆಗೆದು ಬೀದಿಗೆ ತಳ್ಳುವ ಅದೆಷ್ಟೋ ಮ್ಯಾನೇಜ್ಮೆಂಟ್ ಗಳ ವಿರುದ್ಧ ದಿನಗಟ್ಟಲೇ ಸುದ್ದಿ ಮಾಡುವ ವರದಿಗಾರರೇ ಇವತ್ತು ಬೀದಿಗೆ ಬೀಳುವಂಥ ಸನ್ನಿವೇಶ..

ಎಲ್ಲಿವೆ ಪತ್ರಿಕಾ ಸಂಘಟನೆಗಳು..ನಾಚಿಕೆಯಾಗಬೇಕು..?: ಆದ್ರೆ ದುರಂತ ಏನ್ ಗೊತ್ತಾ..? ಆ ಕಾರ್ಮಿಕರ ಬೆನ್ನಿಗೆ ಸಂಘಟನೆಗಳಿದ್ವು..ಅವರಿಗೊಂದು ಧ್ವನಿ ಎತ್ತು..ಆದ್ರೆ ನಮ್ಮ ವರದಿಗಾರರಿಗೆ ಎರಡರ ಬಲವೂ ಇಲ್ಲ..ಪತ್ರಕರ್ತ ಸಂಘಟನೆಗಳೆನಿಸಿಕೊಂಡವಕ್ಕೆ ಪಾಪ..?! ತಮ್ಮದೇ ಹಿತಾಸಕ್ತಿಗಳನ್ನು ನೋಡಿಕೊಳ್ಳೊಕ್ಕೇನೆ ಪುರುಸೊತ್ತಿಲ್ಲ..ಯಾವುದೇ ಪತ್ರಕರ್ತ ಬೀದಿಗೆ ಬಿದ್ದರೂ ಅದರ ವಿರುದ್ದ ಧ್ವನಿ ಎತ್ತಿ ನ್ಯಾಯ ದೊರಕಿಸಿಕೊಟ್ಟ ಸಂಘಟನೆಗಳ ತಾಕತ್ತಿನ ನಿದರ್ಶನಗಳೇ ನಮ್ಮ ಪತ್ರಿಕೋದ್ಯಮದ  ಇತಿಹಾಸದಲ್ಲಿ ತೀರಾ ಕಡಿಮೆ ಎನಿಸುತ್ತೆ..

ಪತ್ರಕರ್ತರ ನೋವಿಗೆ ಸ್ಪಂದಿಸುವ ಸಂಘಟನೆಗಳು ಬೇಕಿವೆ..: ಹೌದು..ಖಂಡಿತಾ..ಈಗಿರುವ ಸಂಘಟನೆಗಳ ಪೈಕಿ ಬಹುತೇಕ ಸಂಘಟನೆಗಳಿಗೆ ಬಕೆಟ್..ರೋಲ್ ಕಾಲ್ ಸಂಘಟನೆಗಳೆನ್ನುವ ಆರೋಪ ಇದೆ.ತಮ್ಮ ಹಿತಾಸಕ್ತಿಗಾಗಿ ಅವನ್ನು ಬಳಸಿಕೊಳ್ತಿರುವ ಆಪಾದನೆಗಳಿವೆ.ರಾಜಕಾರಣಿಗಳಿಗೆ ಬಕೆಟ್ ಹಿಡ್ಕಂಡು..ಕಾರ್ಯಕ್ರಮಗಳ ಆಯೋಜನೆ ಹೆಸ್ರಲ್ಲಿ ಎತ್ತುವಳಿ ಮಾಡುತ್ತಿರುವ ಸಂಘಟನೆಗಳೇ ಹೆಚ್ಚಾಗಿ ಹೋಗಿವೆ..ಇಂಥಾ ಪರಿಸ್ತಿತಿ ನಡುವೆ ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಿರುವ ಅಮಾಯಕ ಹಾಗೂ  ನಿಷ್ಪಾಪಿ ಪತ್ರಕರ್ತರ ನೋವು-ಕಷ್ಟ-ಬವಣೆಗಳು ಅರಣ್ಯರೋಧನವಾಗಿದೆ.

ಆ ತಾಕತ್ತಿದೆಯಾ ಸಂಘಟನೆಗಳಿಗೆ..?: ಯಾವುದೇ ಚಾನೆಲ್ ಅಥವಾ ಪತ್ರಿಕೆ ತನ್ನ ಕೆಲಸಗಾರರನ್ನು ಒಲ್ಲದ ಕಾರಣಕ್ಕೆ-ನೆವಕ್ಕೆ ಕೆಲಸದಿಂದ ತೆಗೆದು ಹಾಕಿದಾಗ ಆ ಸಂಸ್ಥೆಗಳ  ಮುಂದೆ ಪತ್ರಿಕಾ ಸಂಘಟನೆಗಳು ನ್ಯಾಯಕ್ಕಾಗಿ ಪ್ರತಿಭಟಿಸಿದ,ಮ್ಯಾನೇಜ್ಮೆಂಟ್ ಜತೆ ಸಂಘರ್ಷಕ್ಕಿಳಿದ  ಉದಾಹರಣೆಗಳೇ ಇಲ್ಲ.. ಮ್ಯಾನೇಜ್ಮೆಂಟ್ ಜತೆ ಏಕೆ ಒಬ್ಬ ಪತ್ರಕರ್ತ-ಕ್ಯಾಮೆರಾಮನ್ ಗಾಗಿ ವಿರೋಧ ಕಟ್ಟಿಕೊಳ್ಳಬೇಕೆನ್ನುವುದು ಸಂಘಟನೆಗಳ ಮನಸ್ತಿತಿ ಇರಬಹುದಾ..?. ಗೊತ್ತಿಲ್ಲ..ಆದ್ರೆ ಪತ್ರಕರ್ತರ ನೋವಿಗೆ ಸ್ಪಂದಿಸದ-ಕಷ್ಟಕ್ಕಾಗದ ಮೇಲೆ ಸಂಘಟನೆಗಳೇಕೆ ಇರಬೇಕು..ಇದು ಇಡೀ ಪತ್ರಿಕಾಸಮೂಹ ಕೇಳುತ್ತಿರುವ ಪ್ರಶ್ನೆ..ಉತ್ತರಿಸುವ ತಾಕತ್ತಿದೆಯಾ ಸಂಘಟನೆಗಳಿಗೆ…?!

Spread the love
Leave A Reply

Your email address will not be published.

Flash News