ನಾಗೇಶ್ ಮಾಡಿದ್ದು ತಪ್ಪೆನ್ನುವುದಾದ್ರೆ ಬಿ.ಸಿ ಪಾಟೀಲ್ ಮಾಡಿದ್ದು ಇನ್ನೇನು..?! ನಾಗೇಶ್ ಗೆ ಶಿಕ್ಷೆ ಎನ್ನುವುದಾದ್ರೆ, ಬಿ.ಸಿ ಪಾಟೀಲ್ ಗೇಕಿಲ್ಲ..??..

0

ಬೆಂಗಳೂರು:ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಮಾಡಿದ್ದು ತಪ್ಪಲ್ವಾ..ರಾಜ್ಯದ ಜನತೆ ಹೀಗೆ  ಪ್ರಶ್ನೆ ಮಾಡ್ತಿದೆ. ಸಾಮಾಜಿಕ ನ್ಯಾಯ ಎಂದ್ರೆ ಎಲ್ಲರ ವಿಷಯದಲ್ಲು ಒಂದೇ ರೀತಿಯಾಗಿ ಪಾಲನೆಯಾಗಬೇಕು.. ಒಬ್ಬರಿಗೊಂದು..ಇನ್ನೊಬ್ಬರಿಗೊಂದು ಎನ್ನುವಂತಿರಬಾರದು..ಆದ್ರೆ ಯಡಿಯೂರಪ್ಪ ಮಾಡಿದ್ದು ಮಾತ್ರ ಉಲ್ಟಾಪಲ್ಟಾ..

ರಾಜಕೀಯದಲ್ಲಿ ದಕ್ಷತೆ-ಪಾರದರ್ಶಕತೆ-ಸಾಮಾಜಿಕ ನ್ಯಾಯ ಎನ್ನುವ ಪದಗಳಿಗೆ ಅರ್ಥವೇ ಇಲ್ಲ..ಅಧಿಕಾರಕ್ಕಾಗಿ ಎದುರಿಗೆ ಸಿಕ್ಕರೆ ಕೊಂದೇ ಬಿಡುವಷ್ಟರ ಮಟ್ಟಿಗಿನ ಆಕ್ರೋಶ ಇರೋನು ಕೂಡ ಪರಮಮಿತ್ರನಾಗ್ತಾನೆ..ಜೀವ ಕೊಡುವ ಕುಚುಕು ಕೂಡ ಬದ್ಧವೈರಿಯಾಗ್ತಾನೆ.ತಪ್ಪು ಮಾಡಿದ ಎಲ್ಲರಿಗೂ ಶಿಕ್ಷೆಯಾಗುತ್ತೆ ಎಂದುಕೊಂಡ್ರೂ ಅದು ಮೂರ್ಖತನ..ತಪ್ಪು ಮಾಡಿದವ ರೇ ಕೆಲವೊಮ್ಮೆ ದೊಡ್ಡವರ ಶ್ರೀರಕ್ಷೆಯಿಂದ ಪಾರಾಗ್ತಾರೆ..ಗಾಡ್ ಫಾದರ್ ಗಳ ಬೆಂಬಲ ಇಲ್ಲದಿದ್ದವರು ಮಂತ್ರಿ ಸ್ಥಾನವನ್ನೂ ಕಳಕೊಳ್ಳುತ್ತಾರೆ.

ಇದನ್ನೆಲ್ಲಾ ಹೇಳೊಕ್ಕೆ ಕಾರಣವಿದೆ..ಟ್ರಾನ್ಸ್ ಫರ್ ಗೆ ಹಣಕ್ಕೆ ಬೇಡಿಕೆ ಇಟ್ಟು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದರೆನ್ನುವ ಕಾರಣಕ್ಕೆ ಸಚಿವರಾಗಿದ್ದ  ನಾಗೇಶ್ ಅವರಿಗೆ ಸಂಪುಟ ವಿಸ್ತರಣೆ ವೇಳೆ ಕೊಕ್ ನೀಡಲಾಗಿತ್ತು.ತಪ್ಪು ಮಾಡಿ ಸರ್ಕಾರವನ್ನು ಮುಜುಗರಕ್ಕೀಡಾಗಿಸಿದವರಿಗೆಲ್ಲಾ ನಾಗೇಶ್ ಅವರಂತೆ ಸಚಿವ ಸ್ಥಾನ ತಪ್ಪುತ್ತೆ ಎನ್ನುವುದು ಸರಿಸಮನಾಗಿ ಅಪ್ಲೈ ಆಗುವುದಿದ್ದರೆ ಇಷ್ಟು ಯಡಿಯೂರಪ್ಪ ಸರ್ಕಾರದ ಅರ್ಧಕ್ಕರ್ಧ ಸಚಿವರು ಮನೆ ಸೇರಬೇಕಾಗಿತ್ತು..ಆದ್ರೆ ರಾಜಕೀಯದಲ್ಲಿ ಆ ತತ್ವಸಿದ್ದಾಂತಕ್ಕೆ ಫಾಲೋನೂ ಆಗೊಲ್ಲ..ಅದಕ್ಕೆ ಬೆಲೆನೂ ಇಲ್ಲ.

ನಾಗೇಶ್ ವಿಷಯದಲ್ಲಿ ಪಕ್ಷ ಅನುಸರಿಸಿದ ನೀತಿಯನ್ನೇ ಸರ್ಕಾರ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ವಿಷಯದಲ್ಲೂ ಅನುಸರಿಸಬಹುದಿತ್ತಲ್ವಾ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಕೇಳಿಬರುತ್ತಿದೆ.ಏಕೆಂದ್ರೆ ನಾಗೇಶ್ ಅವರ ವಿರುದ್ಧ ಕೇಳಿಬಂದ ಆರೋಪಕ್ಕಿಂತ ಗಂಭೀರವಾದ ಆಪಾದನೆ ಸಚಿವ ಬಿ,ಸಿ ಪಾಟೀಲ್ ವಿರುದ್ಧ ಕೇಳಿಬಂದಿತ್ತು.ಆದ್ರೆ ಆಗ ಈ ಬಗ್ಗೆ ಸೊಲ್ಲೆತ್ತದೆ ಸುಮ್ಮನಿದ್ದ ಪಕ್ಷದ ವರಿಷ್ಠರು ನಾಗೇಶ್ ವಿಷಯದಲ್ಲಿ ಅವಸರ ಮಾಡಿದ್ದು ಪಕ್ಷ ಹಾಗು ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಮಾಡಿದ ಅಪಮಾನ ಎನ್ನಲಾಗುತ್ತಿದೆ.

ಕೃಷಿ ಇಲಾಖೆಯ ಎ.ಬಿ ಮತ್ತು ಸಸಿ ಗ್ರೂಪ್ ನ ನೌಕರ ಸಿಬ್ಬಂದಿ ವರ್ಗಾವಣೆಗೆ ತಮ್ಮ ಇಲಾಖೆ ಅಧಿಕಾರಿಗಳ ಮುಖೇನ ಕೃಷಿ ಸಚಿವ ಬಿ.ಸಿ ಪಾಟೀಲ್ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆನ್ನುವ ಆರೋಪವನ್ನು ಇಲಾಖೆಯ ಸಿಬ್ಬಂದಿಯೇ ಲಿಖಿತವಾಗಿ ಮಾಡಿದ್ದರು.ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಕೂಡ ಸಂಬಂಧಪಟ್ಟವರಿಗೆ ಒದಗಿಸಲಾಗಿತ್ತು.ಹಾಗಿದ್ದಾಗ್ಯೂ ಪಾಟೀಲ್ ವಿರುದ್ದ ಯಾವುದೇ ಕ್ರಮ ಕೈಗೊಳ್ಳದೆ ವರಿಷ್ಠರು ಸುಮ್ಮನಾಗಿದ್ರು.

ಬಿ.ಸಿ ಪಾಟೀಲ್ ಅವರ ವಿರುದ್ದ ಕೇಳಿಬಂದ ಆರೋಪ, ನಾಗೇಶ್ ಮೇಲಿನ ಆಪಾದನೆಗೆ ಕಂಪೇರ್ ಮಾಡಿದ್ರೆ ಗಂಭೀರ ಹಾಗೂ ಸೂಕ್ಷ್ಮವಾದಂತದ್ದು.ಆದ್ರೆ ನಾಗೇಶ್ ಅವರಿಂದ ಸಚಿವ ಸ್ಥಾನ ಕಿತ್ತುಕೊಳ್ಳಲಾಯ್ತು.ಪಾಟೀಲ್ ಅವರನ್ನು ಸಮಾಧಾನಿಸಿ ಗೋ ಹೆಡ್ ಎನ್ನಲಾಯ್ತು.

ಬಿಜೆಪಿ ಸರ್ಕಾರ ಇಂತದ್ದೊಂದು ಮಲತಾಯಿ ಧೋರಣೆ ಅನುಸರಿಸಲು,ಪಕ್ಷಪಾತ ನಿಲುವನ್ನು ಪ್ರತಿಪಾದಿಸೊಕ್ಕೆ ಕಾರಣ  ನಾಗೇಶ್ ಪರಿಶಿಷ್ಟ ಜಾತಿಯವ್ರು…ಬಿ.ಸಿ ಪಾಟೀಲ್ ವೀರಶೈವ ಲಿಂಗಾಯಿತ ಎನ್ನುವ ಕಾರಣವಾ..?ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಬಗ್ಗೆ ಇರುವ ಗೌರವ-ಅಭಿಮಾನ ಈ ಬೆಳವಣಿಗೆಯಿಂದ  ಸಾರ್ವಜನಿಕವಾಗಿ ಕಡಿಮೆಯಾಗಿರೋದಂತೂ ಸತ್ಯ..

Spread the love
Leave A Reply

Your email address will not be published.

Flash News