“ಬಿಹಾರಿ”ಗಳ ಬೆನ್ನಿಗೆ ನಿಂತು..”ಕನ್ನಡಿಗ”ರ ಕೆಂಗಣ್ಣಿಗೆ ತುತ್ತಾದ ಹಿರಿಯ ಐಪಿಎಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ…..

0

ಬೆಂಗಳೂರು:ಇಂತದ್ದೊಂದು ಸಂಕಷ್ಟವನ್ನು ಖುದ್ದು ಹಿರಿಯ ಐಪಿಎಸ್  ಅಮರ್ ಕುಮಾರ್ ಪಾಂಡೆ ಅವರು ಗೊತ್ತಿದ್ದೇ ತಮ್ಮ ಮೇಲೆ ಎಳೆದುಕೊಂಡ್ರೋ,ಅಥವಾ ಅತಿಯಾದ ಕಾಳಜಿಯಿಂದ ಬರಮಾಡಿಕೊಂಡ್ರೋ ಗೊತ್ತಾಗ್ತಿಲ್ಲ..ಆದರೆ ಅವರು ಮಾಡಿದ ಕೆಲಸವೇ ಇವತ್ತು ಅವರನ್ನು ಇಡೀ ಕನ್ನಡಿಗರು ಕೆಂಗಣ್ಣಿನಿಂದ ನೋಡುವಂತಾಗಿದೆ.ಅವರ ವಿರುದ್ದ ಕನ್ನಡಪರ ಸಂಘಟನೆಗಳಂತೂ ನಿಗಿ ನಿಗಿ ಕೆಂಡವಾಗಿಬಿಟ್ಟಿವೆ.

ಅಮರ್ ಕುಮಾರ್ ಪಾಂಡೆ..1989ರ ಕರ್ನಾಟಕ ಬ್ಯಾಚ್ ನ ಬಿಹಾರ ಮೂಲದ ಐಪಿಎಸ್ ಅಧಿಕಾರಿ ಅಮರ್ ಕುಮಾರ್ ಪಾಂಡೆ ಕಳೆದ ವರ್ಷವಷ್ಟೇ ಎಡಿಜಿಪಿ ಹುದ್ದೆಯಿಂದ ಡಿಜಿಪಿ ಹುದ್ದೆಗೆ ಪದೋನ್ನತಿ ಪಡೆದವರು.ಹಾಲಿ ಅವರು ಪೊಲೀಸ್ ತರಬೇತಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಅಮರ್ ಕುಮಾರ್ ಪಾಂಡೆ ತಮ್ಮ ಕೆರಿಯರ್ ನಲ್ಲಿ ಯಾವುದೇ ಕಳಂಕ ಹೊತ್ತುಕೊಂಡವರಲ್ಲ .ಯಾರೊಂದಿಗೂ ಕಿರಿಕ್ ಮಾಡಿಕೊಂಡು ಹೆಸರು ಹಾಳು ಮಾಡಿಕೊಂಡವರಲ್ಲ,ಆದ್ರೆ ಬಿಹಾರ ಮೇಲಿನ ಅತಿಯಾದ ಪ್ರೀತಿಯಿಂದಾಗಿ ಅವರು ಮಾಡಲು ಹೊರಟಿರುವ ಕೆಲಸ ಇದೆಯೆಲ್ಲಾ ಅದು ಕನ್ನಡಿಗರನ್ನು ಕೆಂಡಾಮಂಡಲಗೊಳಿಸಿದೆ.

ಬಿಹಾರ ರಾಜ್ಯದಲ್ಲಿ ಕನ್ನಡಿಗರು ಆಸಕ್ತಿ ಇದ್ದರೆ ಹಣ ಹೂಡಿಕೆ ಮಾಡೊಕ್ಕೆ ವೇದಿಕೆ ಕಲ್ಪಿಸಿಕೊಡೊಕ್ಕೆ ಅಮರ್ ಕುಮಾರ್ ಪಾಂಡೆ ಹೊರಟಿದ್ದಾರೆನ್ನುವುದು ಅವರ ವಿರುದ್ದ ಕೇಳಿಬಂದಿರುವ ಗಂಭೀರ ಆರೋಪ.ಬಿಹಾರ್ ಪೌಂಡೇಷನ್ ನ ಅಧ್ಯಕ್ಷರೂ ಆಗಿರುವ ಪಾಂಡೆ ಇದೇ ಸಂಜೆ (ಭಾನುವಾರ 6 ಗಂಟೆಗೆ) ಇದಕ್ಕೆಂದೇ ವಿಶೇಷವಾದ ಬಂಡವಾಳ ಹೂಡಿಕೆದಾರರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಹರಸಾಹಸ ಮಾಡ್ತಾ ಅವರಿವರನ್ನು ಕಾಡಿಬೇಡುತ್ತಿರುವಾಗ ಅಮರ್ ಕುಮಾರ್ ಪಾಂಡೆ ಅವರಂಥ ಅಧಿಕಾರಿಗಳು ಬಿಹಾರದಲ್ಲಿ ಬಂಡವಾಳ ಹೂಡಲು ಆಸಕ್ತರಿರುವ ಬಂಡವಾಳಶಾಹಿಗಳಿಗಾಗಿ ಕಾರ್ಯಕ್ರಮ ಆಯೋಜನೆ ಮಾಡಿ ಇನ್ವಿಟೇಷನ್ ನಲ್ಲಿ ತಮ್ಮದೇ ಹೆಸರನ್ನು ದೊಡ್ಡದೊಡ್ಡ ಅಕ್ಷರಗಳಲ್ಲಿ ಅಚ್ಚಾಕಿಸಿ ಕೊಳ್ಳುತ್ತಾರೆಂದ್ರೆ ಇದು ಬಿಹಾರಿಗಳ ಚೇಲಾಗಿರಿ ತಾನೇ..ಇಂಥವರಿಗೆ ಕರ್ನಾಟಕ ದ್ರೋಹಿ ಎಂದು ಕರೆಯಬೇಕೇ ಬೇಡವೇ..ಎನ್ನೋದು ಸ್ವಾಭಿಮಾನಿ ಕನ್ನಡಿಗರ ಪ್ರಶ್ನೆ.

ವಾಸವಿರೋದು ಕರ್ನಾಟಕದಲ್ಲಿ,,ಎಲ್ಲಾ ಸವಲತ್ತು ಪಡೆಯೋದು ಕರ್ನಾಟಕ ಪೊಲೀಸ್ ದ್ದು..ಆದ್ರೆ ಚೇಲಾಗಿರಿ ಮಾಡೋದು ಮಾತ್ರ ಬಿಹಾರದ್ದಾ..? ಅವರಿಗೆ ಬಿಹಾರಿಗಳ ಬಗ್ಗೆ ಅಭಿಮಾನವಿದ್ದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಬಿಹಾರ್ ಗೆ ತೆರಳಿ ಸೇವೆ ಮಾಡಲಿ,ಅಥವಾ ಬಿಹಾರಿಗಳು ಕರ್ನಾಟಕದಲ್ಲಿ ಪಡುತ್ತಿರುವ ಕಷ್ಟಕ್ಕೆ ಸ್ಪಂದಿಸಲಿ..

ಅದನ್ನು ಬಿಟ್ಟು ಕೆಲಸದಲ್ಲಿರುವಾಗ್ಲೇ ಬಿಹಾರದಲ್ಲಿ ಬಂಡವಾ:ಳ ಹೂಡೊಕ್ಕೆ ಆಸಕ್ತರಿರುವ ಕನ್ನಡಿಗರನ್ನುಹುಡುಕಲು ಕಾರ್ಯಕ್ರಮ ಆಯೋಜಿಸುವುದೆಂದ್ರೆ ಇದರ ಅರ್ಥವೇನು..? ಬಿಹಾರದಲ್ಲಿ ಕನ್ನಡಿಗರು ಯಾರಾದ್ರೂ ಹೀಗೆ ಮಾಡಿದ್ದರೆ ಅಲ್ಲಿನ ಪ್ರಭುತ್ವಗಳು ಇದಕ್ಕೆ ಅವಕಾಶ ಕಲ್ಪಿಸಿಕೊಡುತ್ತಿದ್ವಾ..? ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸ್ಬೇಕು..ಇಂಥ ಗಂಭೀರ ತಪ್ಪೆಸಗಿದ ಅಮರ್ ಕುಮಾರ್ ಪಾಂಡೆ ಅವರಂಥ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ನೀಡಬೇಕೆನ್ನುತ್ತಾರೆ ಕನ್ನಡ ಪರ ಹೋರಾಟಗಾರ ಗ್ಯಾಸ್ ನಾಗರಾಜ್.

ಅಷ್ಟೇ ಅಲ್ಲ,ಕನ್ನಡಿಗರನ್ನು ಅವಮಾನಿಸಿರುವ ಕಾರಣಕ್ಕೆ ಅಮರ್ ಕುಮಾರ್ ಪಾಂಡೆ ಕನ್ನಡಿಗರ ಭೇಷರತ್ ಕ್ಷಮೆ ಯಾಚರಿಸಬೇಕು..ಇಲ್ಲವಾದಲ್ಲಿ ಪ್ರತಿಭಟನೆ ಎದುರಿಸ್ಲಿಕ್ಕೆ ಸಿದ್ಧವಾಗಿರಿ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಸಿವೆ.

ಬಿಹಾರದಲ್ಲಿ ಬಂಡವಾಳ ಹೂಡಿಕೆ ಮಾಡಿಸುವ ಅವಶ್ಯಕತೆ ಅಮರ್ ಕುಮಾರ್ ಪಾಂಡೆ ಅವರಿಗೇನಿದೆ..ಆ ಅವಶ್ಯಕತೆ ಅವರಿಗೆ ನಿಜಕ್ಕೂ ಇದೆಯಾ.? ಹೀಗೆ ಹೂಡಿಕೆ ಮಾಡಿಸುವುದರಿಂದ ಅವರೇನಾದ್ರೂ  ಪರ್ಸಂಟೇಜ್ ಪಡೆಯುತ್ತಿದ್ದಾರಾ..?ಅಂದ್ಹಾಗೆ ಇಂತದ್ದೊಂದು ಕಾರ್ಯಕ್ರಮದ ಅಯೋಜನೆ ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟವರು ಯಾರು..? ಎನ್ನುವ  ಪ್ರಶ್ನೆಗಳು ಸಾರ್ವಜನಿಕವಾಗಿ ಕೇಳಿಬರುತ್ತಿವೆ.ಕರ್ನಾಟಕದಲ್ಲಿದ್ದು ಬಿಹಾರಿಗಳ  ಪರ ಚೇಲಾ ಕೆಲಸ ಮಾಡುತ್ತಿರುವ ಅಮರ್ ಕುಮಾರ್ ಪಾಂಡೆ ಅವರ ವಿರುದ್ದ ಕಠಿಣ ಕ್ರಮ ಜರುಗಿಸಲೇಬೇಕೆನ್ನುವ ಕೂಗು ಕೇಳಿಬರುತ್ತಿದೆ.ಇದು ಕನ್ನಡಪರ ಸಂಘಟನೆಗಳನ್ನು ಕೆಂಡಾಮಂಡಲಗೊಳಿಸಿರುವುದಂತೂ ಸತ್ಯ..  

ಅಮರ್ ಕುಮಾರ್ ಪಾಂಡೆ ಅವರನ್ನು ಈ ಕುರಿತು ಕನ್ನಡ ಫ್ಲಾಶ್ ನ್ಯೂಸ್ ಮಾತನಾಡಿಸುವ ಪ್ರಯತ್ನ ಮಾಡಿತು..ಆದ್ರೆ ಬಿಹಾರಿಗಳ ಕಾರ್ಯಕ್ರಮದಲ್ಲಿ ಬ್ಯುಸಿ ಇದ್ದುದ್ದರಿಂದ ಸಾಧ್ಯವಾಗಲಿಲ್ಲ.ಆದ್ರೆ ಅವರ ಬಿಹಾರಿಗಳ ವ್ಯಾಮೋಹ ವಿರುದ್ಧ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡೋ ಸಾಧ್ಯತೆಗಳಂತೂ ಇದ್ದೇ ಇದೆ..ಇದೆಲ್ಲಾ ಆಗೊಕ್ಕೆ ಮುನ್ನ ಅವರೇ  ಇದನ್ನು ತಿಳಿಗೊಳಿಸುವ ಕೆಲಸ ಮಾಡಿ ಔದಾರ್ಯತೆ ಮೆರೆಯಬೇಕಿದೆ…ಅಷ್ಟೇ.. 

Spread the love
Leave A Reply

Your email address will not be published.

Flash News