ಬೆಂಗಳೂರು ಬಿಜೆಪಿ ಶಾಸಕರಿಬ್ಬರ ಒಣಪ್ರತಿಷ್ಟೆಗೆ ಇನ್ಸ್ ಪೆಕ್ಟರ್ ಗಳ ನಡುವೆ ಹೈಡ್ರಾಮ ಕ್ರಿಯೇಟ್: ಬೇಗೂರು ಸ್ಟೇಷನ್ “ಗದ್ದುಗೆ”ಗಾಗಿ ಇನ್ಸ್ ಪೆಕ್ಟರ್ಸ್ ಗಳ ನಡುವೆ “ಗುದ್ದಾಟ”.

0

ಬೆಂಗಳೂರು:ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ಟ್ರ್ಯಾಕ್  ರೆಕಾರ್ಡ್ ಹೊಂದಿರುವ ಆಫೀಸರ್ಸೇ..ಹೇಳಿಕೊಳ್ಳುವಂಥ ಮೇಜರ್ ಕಂಪ್ಲೆಂಟ್ಸ್ ಗಳೇನು ಇವರ ವಿರುದ್ಧ ಇಲ್ಲ..ಆದ್ರೆ ಯಾರದೋ ಹಿತಾಸಕ್ತಿ..ಸ್ವಾರ್ಥಸಾಧನೆಗೆ ಬಲಿಪಶುಗಳಾಗಬೇಕಾಗಿ ಬಂದಿದೆ.. ಖುರ್ಚಿಗಾಗಿ ಪರಸ್ಪರ ಸಂಘರ್ಷಕ್ಕಿಳಿಯುವಂಥ ಕಳಂಕವನ್ನು ಹೊತ್ತುಕೊಳ್ಳಬೇಕಾಗಿ ಬಂದಿದೆ..

ಇದು.. ಇಬ್ಬರು ಪೊಲೀಸ್ ಅಧಿಕಾರಿಗಳು ನಡೆಸುತ್ತಿರುವ ಮುಸುಕಿನ ಗುದ್ದಾಟದ ಕಥೆ ಎನಿಸಿದ್ರೂ, ಮೇಲ್ನೋಟಕ್ಕೆ ಇಬ್ಬರು ಇನ್ಸ್ ಪೆಕ್ಟರ್ ಗಳ ನಡುವೆ ನಡೆದ ಹೈಡ್ರಾಮಾ ಎಂದೆನಿಸಿದ್ರೂ ವಿಷಯದ ಆಳಕ್ಕೆ ಇಳುದ್ರೆ ಕಾಣಸಿಗೋದು ಇಬ್ಬರು ಶಾಸಕರ ಪ್ರತಿಷ್ಟೆಯ ಒಣಜಗಳ,ತನ್ನದೇ ನಡೆಯಬೇಕೆನ್ನುವ ಜಿದ್ದು.ದ್ವೇಷ ಪ್ರತೀಕಾರದ ಹೊಗೆ.ತಮ್ಮ ಮುಸುಕಿನ ಗುದ್ದಾಟಕ್ಕೆ ಬಲಿಕೀ ಬಕ್ರಾಗಳ ತರಹ ಸಿಕ್ಕಿದ್ದು ಈ ಇಬ್ಬರು ಇನ್ಸ್ ಪೆಕ್ಟರ್ ಗಳಷ್ಟೇ..

ಶಿವಕುಮಾರ್ ಮುಚ್ಚಂಗಿ
ಇನ್ಸ್ ಪೆಕ್ಟರ್ ಶಿವಕುಮಾರ್ ಮುಚ್ಚಂಗಿ
ಮಂಜು ಎಂ.ಎಸ್
ಇನ್ಸ್ ಪೆಕ್ಟರ್ ಮಂಜು ಎಂ.ಎಸ್

ಯೆಸ್.. ಶಿವಕುಮಾರ್ ಮುಚ್ಚಂಗಿ ಹಾಗೂ  ಮಂಜು ಎಂ.ಎಸ್ ನಡುವೆ ಬೇಗೂರು ಪೊಲೀಸ್ ಠಾಣೆ ಚಾರ್ಜ್ ವಹಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ವಿಚಾರದಲ್ಲಿ ಗಲಾಟೆಯೇ ನಡೆದೋಗಿದೆ.ನೇರಾನೇರ ಅಲ್ಲವಾದ್ರೂ ವರ್ಗಾವಣೆ ಪ್ರಕ್ರಿಯೆಗಳ ವಿಷಯದಲ್ಲಿ.ಸ್ಟೇಷನ್ ಸಿಬ್ಬಂದಿಗೆ ಇದೆಲ್ಲಾ ಪುಕ್ಕಟೆ ಮನರಂಜನೆ ಕೊಟ್ಟಿದ್ದು ಸುಳ್ಳಲ್ಲ.

ಬೆಂಗಳೂರು ದಕ್ಷಿಣ ಡಿಸಿಪಿ ಶ್ರೀನಾಥ್ ಜೋಷಿ
ಬೆಂಗಳೂರು ದಕ್ಷಿಣ ಡಿಸಿಪಿ ಶ್ರೀನಾಥ್ ಜೋಷಿ

ಮಂಜು ಎಂ.ಎಸ್ ಹಾಲಿ ಬೇಗೂರು ಪೊಲೀಸ್ ಠಾಣೆಯ ಇನ್ ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದರು.ಅದೇ ಜಾಗಕ್ಕೆ ವರ್ಗವಾಗಿ ಬಂದ ಶಿವಕುಮಾರ್ ಮುಚ್ಚಂಗಿ ಅವರಿಗೆ ನಿಯಮಗಳ ಪ್ರಕಾರ ಗೌರವಯುತವಾಗಿ ಚಾರ್ಜ್ ನೀಡಬೇಕಿತ್ತು ಮಂಜು ಎಂ.ಎಸ್..ಆದ್ರೆ ಸ್ಟೇಷನ್ ಮೇಲೆ ವ್ಯಾಮೋಹವೋ..ಅಥವಾ ವರ್ಗಾವಣೆಯಾಗಿದ್ದಕ್ಕೆ ಕೋಪವೋ  ಗೊತ್ತಿಲ್ಲ..ನೀ ಕೊಡೆ..ನಾ ಬಿಡೆ ಎನ್ನುವ ರೀತಿಯಲ್ಲಿ ಗಲಾಟೆಗಳಾಗಿದೆ.

ಶಿವಕುಮಾರ್ ಮುಚ್ಚಂಗಿ ಚಾರ್ಜ್ ತೆಗೆದುಕೊಳ್ಳಲು ಸ್ಟೇಷನ್ ಗೆ ಬರುತ್ತಿದ್ದಾರೆಂದು ಗೊತ್ತಾಗ್ತಿದ್ದಂಗೆ ಎಲ್ಲಿಗೆ ಹೋಗ್ತೇನೆನ್ನುವ ಮಾಹಿತಿಯನ್ನೂ ಸಿಬ್ಬಂದಿಗೆ ಕೊಡದೆ  ಮಂಜು ಡೈರಿ ಸಮೇತ ಜೀಪ್ ನಲ್ಲಿ ಎಸ್ಕೇಪ್  ಆಗಿದ್ದಾರೆ.ಸ್ಟೇಷನ್ ಗೆ ಬಂದು ಗಂಟೆಗಟ್ಟಲೇ ಕಾದು ಸುಸ್ತಾಗಿದ್ದಾರೆ ಶಿವಕುಮಾರ್.

ಸಿಬ್ಬಂದಿ ಬಳಿಯೆಲ್ಲಾ ಕಾಲ್ ಮಾಡಿಸಿದ್ರೂ ಮಂಜು ಕಾಲ್ ಲಿಫ್ಟ್ ಮಾಡಿಯೇ ಇಲ್ವಂತೆ.ಬೇಸರದಿಂದ ಶಿವಕುಮಾರ್  ವಾಪಸ್ಸಾಗಿ ತಮ್ಮ ಮೇಲಾಧಿಕಾರಿಗಳ ಕಚೇರಿಗೆ ತಿಳಿಸಿದ್ದಾರೆ.ಈ ವಿಷಯವನ್ನು ಡಿಸಿಪಿ ಶ್ರೀನಾಥ್ ಜೋಷಿಯವರಿಗೆ ತಿಳಿಸೋಣ ಎಂದ್ರೆ ಅವರು ಸಹ ಲೀವ್ ನಲ್ಲಿದ್ದರಂತೆ.ಈ ಕ್ಷಣದವರೆಗೂ ಶಿವಕುಮಾರ್ ಗೆ ಮಂಜು ಅವರು ಚಾರ್ಜ್ ಹಸ್ತಾಂತರಿಸಿಲ್ಲ ಎನ್ನುವ ಮಾತುಗಳಿವೆ.

ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ
ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ
ಬೆಂಗಳೂರು ದಕ್ಷಿಣ ಬಿಜೆಪಿ ಶಾಸಕ ಎಂ.ಕೃಷ್ಣಪ್ಪ

ಆದ್ರೆ ಇದು ಒಂದು ಹಂತದ ಸತ್ಯ,ಆದ್ರೆ ಅಸಲೀಯತ್ತೇ ಬೇರೆ ಎನ್ನಲಾಗ್ತಿದೆ.ಈ ಇಬ್ಬರು ಇನ್ಸ್ ಪೆಕ್ಟರ್ ಗಳ ನಡುವೆ ಇಂತದ್ದೊಂದು ಮುಸುಕಿನ ಗುದ್ದಾಟ ನಡೆಯೊಕ್ಕೆ ಕಾರಣವೇ ಬಿಜೆಪಿಯ ಇಬ್ಬರು ಶಾಸಕರಂತೆ.ಇನ್ಸ್ ಪೆಕ್ಟರ್ ಮಂಜು ಬೆನ್ನಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಇದ್ದರೆ,ಮಂಜು ಅವರನ್ನು ಟ್ರಾನ್ಸ್ ಫರ್ ಮಾಡಿಸಿದ್ದರ ಹಿಂದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಎಂ.ಕೃಷ್ಣಪ್ಪ ಅವರ ಕೃಪಕಟಾಕ್ಷ ಇದೆ ಎನ್ನಲಾಗ್ತಿದೆ.

ಬೇಗೂರು ಈ ಎರಡು ಕ್ಷೇತ್ರಗಳ ಬಾರ್ಡರ್ ನಲ್ಲಿ ಬರುವ ಪ್ರದೇಶವಾಗಿರುವುದ ರಿಂದ ಅದರ ಮೇಲೆ ಹಕ್ಕು ಸ್ಥಾಪಿಸೊಕ್ಕೆ ಇಬ್ಬರು ಪ್ರತಿಷ್ಟೆಗೆ ಇಳಿದಿದ್ದಾರೆನ್ನುವ ಮಾತು ಕೇಳಿ ಬರುತ್ತಿದೆ.ಹಾಗಾಗಿನೇ  ಮಂಜು ವರ್ಗಾವಣೆ ತಡೆಯೊಕ್ಕೆ ಸತೀಶ್ ರೆಡ್ಡಿ ಇದೀಗ ಸರ್ಕಾರದ ಮೊರೆ ಹೋಗಿದ್ದಾರೆನ್ನಲಾಗ್ತಿದೆ.ನಾನು ಕೂಡ ಸತೀಶ್ ರೆಡ್ಡಿಯಷ್ಟೇ ಸೀನಿಯರ್,ಅದ್ಹೇಗೆ ಮಂಜು ಅವರನ್ನು ಉಳಿಸಿಕೊಳ್ತೀರಾ ನಾನು ನೋಡ್ತೇನೆ ಎಂದು ಕೃಷ್ಣಪ್ಪ ತೋಳೇರಿಸಿದ್ದಾರೆ.

ಈ ಇಬ್ಬರು ಶಾಸಕರ ವೈಯುಕ್ತಿಕ ಪ್ರತಿಷ್ಟೆ ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಇಬ್ಬರು ಇನ್ಸ್ ಪೆಕ್ಟರ್ ಗಳು ಆಹಾರವಾಗಿದ್ದಾರೆ.ವಾಸ್ತವದಲ್ಲಿ ಈ ಇಬ್ಬರು ಇನ್ಸ್ ಪೆಕ್ಟರ್ ಗಳ ಬಗ್ಗೆ ಡಿಪಾರ್ಟ್ಮೆಂಟ್ ನಲ್ಲಿ ಒಳ್ಳೆಯ ಹೆಸರಿದೆ.ಅದನ್ನು ಈ ಇಬ್ಬರು ಶಾಸಕರು ಸೇರಿ ತಮ್ಮ ರಾಜಕೀಯ ಕೆಸರನ್ನು ಇವರಿಬ್ಬರ ಮುಖಕ್ಕೆ ಒರೆಸೊಕ್ಕೆ ಮುಂದಾಗಿದ್ದಾರೆ ಅಷ್ಟೇ..ಅದನ್ನು ಅರ್ಥ ಮಾಡಿಕೊಂಡು ಪರಸ್ಪರ ಹೊಂದಾಣಿಕೆಯಲ್ಲಿ ಮುಂದುವರೆಯೋದು ಅವರ ಹಿತದೃಷ್ಟಿಯಿಂದ ಒಳ್ಳೆಯದೆನಿಸುತ್ತದೆ.  ಇಲ್ಲದಿದ್ದಲ್ಲಿ  ಜನರು ಆಡಿಕೊಂಡು ನಗ್ಬೇಕಾದ ನಗೆಪಾಟಲಿನ ಪರಿಸ್ಥಿತಿ ನಿರ್ಮಾಣವಾಗೋದ್ರಲ್ಲಿ ಅನುಮಾನವೇ ಇಲ್ಲ.. 

Spread the love
Leave A Reply

Your email address will not be published.

Flash News