“ಶುಲ್ಕ”ದ ನೆವದಲ್ಲಿ ಸಾರಿಗೆ ನೌಕರರ ಲೂಟಿ..!? ಕೇಂದ್ರ ಸರ್ಕಾರಿ ನೌಕರ ಮಾನ್ಯತೆ ಹೋರಾಟಕ್ಕೆ ಡೆಲ್ಲಿಗೆ ಓಡಾಡೊಕ್ಕೆ 500 ರೂ ಗೂಗಲ್ ಪೇ ಮಾಡ್ಬೇಕಂತೆ..

0
ಸಾರಿಗೆ ನೌಕರರಿಂದ ಹಣ ವಸೂಲಿಗೆ ಇಳಿದಿರುವ ಸಂಗತಿಗೆ ಇದಕ್ಕಿಂತ ದೊಡ್ಡ ಹೆಚ್ಚಿನ ನಿದರ್ಶನ ಬೇಕೆ..?!
ಸಾರಿಗೆ ನೌಕರರಿಂದ ಹಣ ವಸೂಲಿಗೆ ಇಳಿದಿರುವ ಸಂಗತಿಗೆ ಇದಕ್ಕಿಂತ ದೊಡ್ಡ ಹೆಚ್ಚಿನ ನಿದರ್ಶನ ಬೇಕೆ..?!

ಬೆಂಗಳೂರು:ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿಸುವ ಸಾಧ್ಯತೆಯ ಭರವಸೆ ದಿನಕಳೆದಂತೆಲ್ಲಾ ಕರಗುತ್ತಿದ್ದರೂ ಕೆಲ ಸಾರಿಗೆ ನೌಕರ ಸಂಘಟನೆಗಳು ಮಾತ್ರ ನೌಕರರಲ್ಲಿ ಆ ಹುಸಿ ಭರವಸೆಯನ್ನು ಜೀವಂತವಾಗಿಸುವ ಕೆಲಸ ಮಾಡುತ್ತಿವೆ.ಬಹುತೇಕ ನೌಕರರಿಗೂ ಕೂಡ ಸತ್ಯದರ್ಶನವಾಗ್ತಿದೆ.ಹಾಗಾಗಿ ತಾವಾಯ್ತು ತಮ್ಮ ಕೆಲಸವಾಯ್ತೆನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.  

ಸರ್ಕಾರಿ ನೌಕರರ ಮಾನ್ಯತೆ ಬಹುತೇಕ ಕೈಬಿಟ್ಟ  ವಿಷಯ ಎನ್ನೋದನ್ನು ಸರ್ಕಾರ ಸೂಚ್ಯವಾಗಿ ತಿಳಿಸಿರುವುದು 4 ನಿಗಮಗಳ ಸಾರಿಗೆ ನೌಕರರಿಗೂ ಗೊತ್ತು..ಹಾಗಾಗಿಯೇ .ಈ ಬೇಡಿಕೆಯ ಬಿಗಿಪಟ್ಟು ಹಾಗೂ ಆಕ್ರೋಶ ಎರಡೂ ಕಡಿಮೆಯಾಗ್ತಿದೆ.ಆದ್ರೆ ಕೆಲವು ಸಾರಿಗೆ ನೌಕರ ಮುಖಂಡರು ಮಾತ್ರ ಈ  ವಿಷಯವನ್ನೇ  ಬಂಡವಾಳವಾಗಿಸಿಕೊಂಡು ನೌಕರರನ್ನು ಪ್ರಚೋದನೆ ಗೊಳಿಪಡಿಸುವುದನ್ನು ಇನ್ನೂ ಬಿಟ್ಟಿಲ್ಲ..ಇದನ್ನೇ ಅಸ್ತ್ರವಾಗಿಸಿಕೊಂಡು  ತಮ್ಮ ಬೇಳೆ ಬೇಯಿಸಿಕೊಳ್ಳೋದನ್ನು ನಿಲ್ಲಿಸಿಲ್ಲ..

ಸಾರಿಗೆ ನಿಗಮಗಳ ನೌಕರ ಸಂಘಟನೆಗಳ ಕ್ಯಾಂಪ್ ನಿಂದ ಹೊಸದೊಂದು ವಿಷಯ ಚರ್ಚೆಯಾಗುತ್ತಿದೆ.ಇದು ಮೂರ್ಖತನದ ಪರಮಾವಧಿ ಎಂದೂ ವಿಶ್ಲೇಷಿಸಿಕೊಳ್ಳುತ್ತಿದೆ.ಏಕೆಂದ್ರೆ ರಾಜ್ಯ ಸರ್ಕಾರಿ ನೌಕರರ ಮಾನ್ಯತೆ ಬಗ್ಗೆ ಇಷ್ಟು ದಿನ ಮಾಡಿದ ಹೋರಾಟವನ್ನು ಕೇಂದ್ರ  ಸರ್ಕಾರಿ ನೌಕರರ ಮಾನ್ಯತೆಯ ಹೋರಾಟಕ್ಕೆ ವರ್ಗಾಯಿಸುವ ಚಿಂತನೆಯನ್ನು ಕೆಲಸ ಸಂಘಟನೆಗಳು ಮಾಡಿವೆಯಂತೆ.ಹಾಗಾಗಿಯೇ ನೌಕರರಲ್ಲಿ ಧನಸಹಾಯದ ಮನವಿ ಮಾಡಲಾಗ್ತಿದೆ.

ಮುಷ್ಕರದಲ್ಲಿ ಪಾಲ್ಗೊಂಡ ತಪ್ಪಿಗೆ ಆಡಳಿತ ಮಂಡಳಿ ಕೆಂಗಣ್ಣಿಗೆ ಗುರಿಯಾಗಿ ಅಮಾನತ್ತಾಗಿರುವ ಅದೆಷ್ಟೋ ನೌಕರರ ಹಿತ ಕಾಯ್ಬೇಕಾದ ನೌಕರ ಮುಖಂಡರು ಹೋರಾಟಗಳೆಂದಾಗ ಇದೆಲ್ಲಾ ಕಾಮನ್..ನಮ್ಮ ಬೇಡಿಕೆ ಈಡೇರುವವರೆಗೂ ಇದೆಲ್ಲವನ್ನು ಸಹಿಸಿಕೊಳ್ಳಬೇಕು ಎಂದು ಉಡಾಫೆಯ  ಮಾತನ್ನಾಡುತ್ತಿದ್ದಾರೆ.ಅವರ ನಿರ್ಲಕ್ಷ್ಯ ಅಷ್ಟಕ್ಕೆ ಸೀಮಿತವಾಗಿದಿದ್ದರೆ ಪರ್ವಾಗಿರಲಿಲ್ಲ..ಸರ್ಕಾರಕ್ಕೆ ಕೊಟ್ಟ ಗಡವು ತೀರುತ್ತಿದ್ದಂತೆ ಮತ್ತೊಂದು ಸುತ್ತಿನ ನಿರ್ಣಯಕ ಹೋರಾಟಕ್ಕೆ ಸಿದ್ಧವಾಗ್ಬೇಕಿದೆ ಸ್ನೇಹಿತರೇ ಎನ್ನುವ ರೀತಿಯಲ್ಲಿ ಪ್ರಚೋದಿಸುವ ಕೆಲಸ ಮಾಡ್ತಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಕಳೆದ ತಿಂಗಳು ಬಸ್ ಮುಷ್ಕರ ನಡೆಸುವಲ್ಲಿ ಸಾರಿಗೆ ನೌಕರರ ಒಕ್ಕೂಟದ್ದು ನಿರ್ಣಾಯಕ ಪಾತ್ರ.ಮುಷ್ಕರ ಯಾವ್ ಉದ್ದೇಶಕ್ಕೆ ಆಯ್ತು..ಅದರ ಹಿಂದೆ ಸಾರಿಗೆ ನಿಗಮಗಳ  ಯಾವೆಲ್ಲಾ ಹಂತದ ಅಧಿಕಾರಿಗಳಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ.ಬಹುಷಃ ನಿಗಮದ ಅಧಿಕಾರಿಗಳ ಕುಮ್ಮಕ್ಕು ಹಾಗೂ ಬೆಂಲಬದಿಂದ ನಡೆದ ಮೊದಲ ಮುಷ್ಕರ ಇದೆನ್ನುವ ಮಾತುಗಳು ಕೇಳಿಬಂದಿವೆ.ಭದ್ರತೆ ಹಾಗು ಜಾಗೃತಾ ದಳ ಈ ಬಗ್ಗೆ ತನಿಖೆ ಮಾಡುದ್ರೆ ಸತ್ಯಾಂಶ ಹೊಇರಬೀಳಬಹುದೇನೋ..ಅದು ಇಲಾಖಾ ಮಟ್ಟದಲ್ಲಿಯೂ ನಡೆಯುತ್ತಿದೆ ಎನ್ನುವ ಮಾತುಗಳಿವೆ.

ಇದೆಲ್ಲಾ ಒತ್ತಟ್ಟಿಗಿರಲಿ,ಆದ್ರೆ ಮುಷ್ಕರದ ನಂತ್ರ ಮುಖಂಡರೆನಿಸಿಕೊಂಡವ್ರು ಸಾರಿಗೆ ನೌಕರರಿಂದ ಹಣ ವಸೂಲಿಗೆ ಇಳಿದಿರುವ ಸಂಗತಿ ಹೊರಬಿದ್ದಿದೆ.ಅದು ಕೂಡ ನಿಗಮದ   ಆಡಳಿತ ಮಂಡಳಿ ಗಮನಕ್ಕೆ ಬಾರದೆ..ಆದ್ರೆ ಇದಕ್ಕಾಗಿ ಹಿಡಿದಿರುವ ಮಾರ್ಗಗಳು ಮಾತ್ರ ಅಚ್ಚರಿ ಮೂಡಿಸುತ್ತವೆ.

ಸಾರಿಗೆ ನೌಕರರಿಂದ ಕೂಟದಿಂದ ಶುಲ್ಕ ವಸೂಲಿ:ಇದಕ್ಕೆ ಅವಕಾಶ ಇದೆಯೇ..? :ಸಾರಿಗೆ ನೌಕರರ ಒಕ್ಕೂಟ ಹುಡುಕಿಕೊಂಡಿರುವ ಮಾರ್ಗವೇನು ಗೊತ್ತಾ..?ನಾಲ್ಕು ನಿಗಮಗಳ ನೌಕರರನ್ನು ಒಳಗೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಎನ್ನುವ ಹೆಸರಿನಲ್ಲಿ ಬಿಲ್ ಸೃಷ್ಟಿಸಿ ಅದರ ಮೂಲಕ ಸದಸ್ಯತ್ವ ಶುಲ್ಕ ವಸೂಲಿ ಮಾಡುತ್ತಿದ್ದಾರೆ( AITUC ಗೆ ನೌಕರರು ಹಣ ನೀಡಿದ್ರೆ ಅದು ಇವರಿಗೆ ಸುಲಿಗೆ,ಅದೇ ಇವ್ರು ಮಾಡಿದ್ರೆ ಅದು ಕರ್ತವ್ಯದ ಭಾಗನಾ..?). ಹಾಗೆ ಶುಲ್ಕ ವಸೂಲಿ ಮಾಡುತ್ತಿರುವ ರಸೀದಿ ಕೂಡ  ದೊರೆತಿದೆ.ಆದ್ರೆ ಈ ರೀತಿ ಶುಲ್ಕವನ್ನು ವಸೂಲಿ ಮಾಡುವ ಅವಕಾಶ ನಿಗಮದಲ್ಲಿದೆಯೇ..? ಒಂದ್ವೇಳೆ ಇದ್ದರೂ ಶುಲ್ಕ ಸಂಗ್ರಹಕ್ಕೆ ಮುನ್ನ ಸಂಬಂಧಪಟ್ಟ ಆಡಳಿತ ಮಂಡಳಿಯಿಂದ ಪರವಾನಗಿ ಪಡೆಯುವುದು ಕಡ್ಡಾಯವೇ ಎನ್ನುವುದರ ಬಗ್ಗೆಯೂ ಕೂಟಕ್ಕೆ ಸ್ಪಷ್ಟತೆ ಇದ್ದಂತಿಲ್ಲ

ಕೇಂದ್ರ ಸರ್ಕಾರಿ ನೌಕರರ ಮಾನ್ಯತೆ ಕೊಡುಸ್ತೀನಿ…ಡೆಲ್ಲಿಗೆ ಓಡಾಡೊಕ್ಕೆ ಹಣ ಕೊಡಿ:..ಇದು ಕೂಟದ ಕಥೆಯಾದ್ರೆ ಒಂದೆಜ್ಜೆ ಮುಂದ್ಹೋಗಿರುವ ಕೂಟದ ವಿರೋಧಿ ಬಣ ರಾಜ್ಯ ಸರ್ಕಾರಿ ನೌಕರರ ಮಾನ್ಯತೆ ನಮಗೆ ಬೇಡ,ಕೇಂದ್ರ ಸರ್ಕಾರಿ ನೌಕರರ ಮಾನ್ಯತೆ ಕೊಡುಸ್ತೀವಿ ಎಂದು ಮತ್ತೊಂದ್ ರೀತಿಯಲ್ಲಿ ಸುಲಿಗೆಗೆ ಇಳಿದಿದೆ.ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಣದ ಮುಖಂಡರೆನಿಸಿಕೊಂಡ ಓರ್ವರು ಇದಕ್ಕಾಗಿ ದೆಹಲಿಗೆ ಹೋಗ್ಬೇಕು..ಅಲ್ಲಿ ನಾಲ್ಕೈದು ದಿನ ಉಳಿಯಬೇಕು.ಬಸ್ ನಲ್ಲಿ ಹೋದರೆ ಸಮಯ ವ್ಯರ್ಥ ಹಾಗಾಗಿ ವಿಮಾನದಲ್ಲಿ ಹೋಗಬೇಕಾಗ್ತದೆ..ಹಾಗಾಗಿ ಹಣ ಸಹಾಯ ಮಾಡಿ ಎಂದು ಬೇಡಿಕೊಂಡಿದ್ದಾರೆ.ಇದಕ್ಕಾಗಿ 8088773154 ಮೊಬೈಲ್ ಸಂಖ್ಯೆಯನ್ನು ನೀಡಿ ಸಾಧ್ಯವಿದ್ದವರು ಗೂಗಲ್ ಪೇ ಮಾಡಿ ಎಂದು ಮನವಿ ಮಾಡಿದ್ದಾರೆ.ಈ ನಂಬರ್ ಗೆ ಡಯಲ್ ಮಾಡಿದ್ರೆ ಬಿಎಂಟಿಸಿ ಒಕ್ಕಲಿಗ ಸಂಘ ಎಂದು ಸ್ಕ್ರೀನ್ ನಲ್ಲಿ ಡಿಸ್ ಪ್ಲೈ ಆಗ್ತದೆ..

ಆಡಳಿತ ಮಂಡಳಿ ಏನ್ ಮಾಡ್ತಿದೆ..?ಆದ್ರೆ ಇಲ್ಲಿ ಪ್ರಶ್ನೆ ಇರೋದು,ನಿಗಮದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧಿಕಾರಿಗಳೆನಿಸಿಕೊಂಡವರು ಏನ್ ಮಾಡ್ತಿದ್ದಾರೆ ನ್ನೋದು,ಕೆಲಸ ಬಿಟ್ಟು ಮತ್ತೊಂದು ಸುತ್ತಿನ ಮುಷ್ಕರಕ್ಕೆ ನೌಕರರನ್ನು ಪ್ರಚೋದಿಸುವ ಕೆಲಸವನ್ನು ಕೆಲವು ಸಂಘಟನೆ ಹಾಗೂ ವ್ಯಕ್ತಿಗಳು ಮಾಡುತ್ತಿದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳುವ ಪ್ರಯತ್ನಗಳೇ ನಡೆಯುತ್ತಿಲ್ಲ.ಕಳೆದ ತಿಂಗಳ ಮುಷ್ಕರದ ಹಿಂದೆ ಡಿಪೋ ಮ್ಯಾನೇಜರ್ಸ್ ಹಾಗೂ ಕೆಲ ಹಂತದ ಅಧಿಕಾರಿಗಳ ಕುಮ್ಮಕ್ಕಿತ್ತೆನ್ನುವ ಮಾಹಿತಿ ಇದ್ದಾಗ್ಯೂ ತನಿಖೆಗೆ ಮುಂದಾಗಿಲ್ಲ..ಆಡಳಿತ ಮಂಡಳಿಯೇ ಸುಮ್ಮನಿರುವಾಗ ನೌಕರ ಸಂಘಟನೆಗಳು ಇನ್ನೇನು ಮಾಡಿಯಾವು ಅಲ್ಲವೇ..? ಸಾರಿಗೆ ನಿಗಮಗಳೆನ್ನುವ ಮನೆಗೆ ಸರಿಯಾದ ಯಜಮಾನನೇ ಸಿಗದಿರುವುದು ಇಡೀ ಸಾರಿಗೆ ಇಲಾಖೆಯ ದುರಂತವೇ ಸರಿ.. 

Spread the love
Leave A Reply

Your email address will not be published.

Flash News