“ತುತ್ತು ಚೀಲ” ತುಂಬಿಸುತ್ತಿದ್ದ ಆ “ಸ್ಪೋಟಕ”ಗಳಿಂದಲೇ ಮಾಂಸದ ಮುದ್ದೆಗಳಾದ ನಿಷ್ಪಾಪಿ “ಬಿಹಾರಿ”ಗಳು..?! ಅಮಾಯಕರ ಸಾವಿಗೆ ಯಾರು ಹೊಣೆ.?

0

ಶಿವಮೊಗ್ಗ: ಒಂದೇ  ಕ್ಷಣ..ಅಮ್ಮಾ..ಅಯ್ಯೊ ಎಂದು ಕೊಸರಾಡ್ಲಿಕ್ಕೂ ಸಾವು ಅವಕಾಶ ಕೊಡಲಿಲ್ಲ.. ಒಟ್ಟಿಗಿದ್ದವರೆಲ್ಲಾ ನೋಡ ನೋಡುತ್ತಿದ್ದಂತೆ ಎಲ್ಲೆಲ್ಲೋ ಸಿಡಿದು ಮಾಂಸದ ಮುದ್ದೆಗಳಾಗಿ ಚೆದುರಿ ಹೋದ್ರು… ಕಿಲೋಮೀಟರ್ ವರೆಗೂ ವ್ಯಾಪಿಸಿದ ಆ ಸದ್ದು ಶಿವಮೊಗ್ಗ ಜಿಲ್ಲೆ ಜನರನ್ನು ಅಕ್ಷರಶಃ ಕಂಪಿಸಿದ್ರೆ,ನಂತರ ವರದಿಯಾದ ಸಾವುಗಳಿಗೆ ಜನತೆ ಕಣ್ಣೀರಿಟ್ಟಿದ್ದು ಸುಳ್ಳಲ್ಲ..

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಮಹಾ ಸ್ಪೋಟಕ್ಕೆ ಹತ್ತಿರತ್ತಿರ 8 ಜನ ಸಾವನ್ನಪ್ಪಿದ್ದಾರೆ.ಘಟನೆ ಬಗ್ಗೆ ನಾನಾ ರೀತಿಯ ವಿಶ್ಲೇಷಣೆ ನಡೆಯುತ್ತಿವೆ.ಘಟನೆಗೆ ಕಾರಣವಾದವರನ್ನು ಶಪಿಸುವ ಕೆಲಸವೂ ಭಾರೀ ಜೋರಾಗೇ ನಡೆಯುತ್ತಿದೆ.ಅವರಿಗೆ ಗಲ್ಲುಶಿಕ್ಷೆಯಾಗಬೇಕೆಂದು ಒತ್ತಾಯಿಸುವವರಿಗೇನೂ ಕಡ್ಮೆ ಇಲ್ಲ..ಆದ್ರೆ..ಆದ್ರೆ ಇದು ಓರ್ವನ ಮೇಲೆ ತಪ್ಪು ಹೊರಿಸಿ,ಆತನನ್ನೇ ಸಂಪೂರ್ಣ ಹೊಣೆಮಾಡುವಂಥ ಸ್ಥಿತಿಯಲ್ಲ..ಅಂಥಾ ಪ್ರಕರಣವೂ ಅದಲ್ಲ..ಇದಕ್ಕೆ ಎಲ್ಲರೂ ಕಾರಣರೇ..ಆದ್ರೆ ಯಾರು ಕಾರಣ ಎನ್ನೋದು ಅವರವರ ಅಂತಃಸಾಕ್ಷಿಗೆ ಬಿಟ್ಟಿದ್ದಷ್ಟೇ..

ನೋಡಿ., ಪಾಪ..ಅವರೆಲ್ಲರೂ ಬದುಕನ್ನು ಕಟ್ಟಿಕೊಳ್ಳಲು ದೂರದ ಬಿಹಾರ್ ನಿಂದ ಕರ್ನಾಟಕವನ್ನೇಗೂ ತಲುಪಿ ಉದ್ಯೋಗವನ್ನರಸು ತ್ತಾ ಶಿವಮೊಗ್ಗಕ್ಕೆ ಬಂದವರು.ಹಾಗೆ ಬಂದವರ ತುತ್ತು ಚೀಲ ತುಂಬಿಸಿದ್ದು ಶಿವಮೊಗ್ಗ ಹೊರವಲಯದಲ್ಲಿರುವ ಸಾಲು ಸಾಲು ಕಲ್ಲುಕ್ವಾರಿಗಳು.ದಣಿ ಕೊಡುತ್ತಿದ್ದ ಪುಡಿಗಾಸಿನಲ್ಲೇ ನೆಮ್ಮದಿಯ ಬದುಕು ಕಂಡುಕೊಂಡವರಿಗೆ ಕೆಲಸವೇ ಜೀವನವಾಗೋಯ್ತು. ಬೆಳಗ್ಗೆಲ್ಲಾ ಕಲ್ಲು ಒಡೆಯುವ ಕೆಲಸ ಮಾಡಿಸ್ತಿದ್ದ ಮಾಲೀಕರು ವಿಶ್ರಾಂತಿ ತೆಗೆದುಕೊಳ್ಳಲಿಕ್ಕೂ ಬಿಡದೆ  ರಾತ್ರಿ ಸ್ಪೋಟ ಕಾರ್ಯಕ್ಕೆ ಬಳಸಿಕೊಳ್ತಿದ್ರು.ದಿನದ 24 ಗಂಟೆಗಳಲ್ಲಿ ಹತ್ತಿರತ್ತಿರ 20 ಗಂಟೆ ದುಡಿಯಬೇಕಾಗಿ ಬಂದ್ರೂ ಚಕಾರವೆತ್ತುತ್ತಿ ರಲಿಲ್ಲ.ಆದ್ರೆ ಅದೇ ಸ್ಪೋಟಕಗಳು ನಿಷ್ಪಾಪಿಗಳ ಜೀವವನ್ನೇ ಬಲಿತೆಗೆದುಕೊಂಡಿದ್ದು ಮಾತ್ರ ವಿಪರ್ಯಾಸ.

ಮೊನ್ನೆ ರಾತ್ರಿಯ ವಿಸ್ಪೋಟ ಕೃತ್ಯಕ್ಕೆ ಇಡೀ ಮಲೆನಾಡು ಅದುರಿಬಿಟ್ಟಿದೆ. ಕಿಲೋಮೀ ಟರ್ ವರೆಗೂ ಕೇಳಿಬಂದ ಸ್ಪೋಟದ ಸದ್ದು ನೆಮ್ಮದಿಯಿಂದಿದ್ದ ಮಲೆನಾಡಿಗರನ್ನು ವಿಚಲಿತಗೊಳಿಸಿದೆ.ಕ್ವಾರಿ ಮಾಲೀಕನ ದುರಾಸೆ ತಪ್ಪೇ ಮಾಡದ ಜೀವಗಳನ್ನು ಬಲಿಪಡೆದಿದೆ.

ಸುದ್ದಿಯನ್ನು ಬಿತ್ತರಿಸುವ ಆತುರಕ್ಕೆ ಬಿದ್ದಿರುವ ಮಾದ್ಯಮಗಳು ಪೈಪೋಟಿಗೆ ಬಿದ್ದು ಸಾವಿನ ಸಂಖ್ಯೆಯನ್ನು ಏರಿಸುತ್ತಲೇ ಇವೆ.ಮೇಲ್ನೋಟಕ್ಕೆ ಘಟನೆಗೆ ಸ್ಪೋಟಕ ಸಾಮಾಗ್ರಿನೇ ಕಾರಣ ಎಂದ್ಹೇಳಲಾಗುತ್ತಿದೆ.ಆದ್ರೆ ಜಿಲ್ಲಾಧಿಕಾರಿ ಶಿವಕುಮಾರ್ ಅವರಿಗೆ ಮಾತ್ರ ನಿಖರ ಕಾರಣ ತಿಳಿದುಬರುತ್ತಿಲ್ಲವಂತೆ.ಹಾಗೂ ಸತ್ತವರ ಸಂಖ್ಯೆಯೂ ಲೆಕ್ಕಕ್ಕೆ ಸಿಗುತ್ತಿಲ್ಲವಂತೆ..ಎಂಥಾ ದುರಂತವಲ್ವೇ ಇದು.ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಬ್ಬಲಗೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣಸೋಡು ವ್ಯಾಪ್ತಿಯಲ್ಲಿ ನೂರಾರು ಕಲ್ಲುಕ್ವಾರಿಗಣಿಗಾರಿಕೆ ನಡೆಯುತ್ತಲಿದೆ. ಅಂತದ್ದೊಂದು ಕಲ್ಲುಕ್ವಾರಿಯ ಮಾಲೀಕ ಸುಧಾಕರ್ ಎನ್ನುವವರಿಗೆ ಸೇರಿದ ಕ್ರಷರ್ ನಲ್ಲಿ ದುರಂತ ಸಂಭವಿಸಿದೆ.

ಅಂದ್ಹಾಗೆ ಸುಧಾರಕ್ ಕ್ರಷರ್ ನಿಂದ ತೆಗೆದ  ಜಲ್ಲಿಯನ್ನು ರೈಲ್ವೆ ಇಲಾಖೆಗೆ ಕದ್ದುಮುಚ್ಚಿ ಪೂರೈಸುತ್ತಿದ್ದ ಎನ್ನಲಾಗಿದೆ.ಅಂದ್ಹಾಗೆ 2016 ರಲ್ಲೇ ಈತನ ಕ್ರಷರ್ ಗೆ ನೀಡಲಾಗಿದ್ದ ಲೈಸೆನ್ಸ್ ಅವಧಿ ಕೊನೆಗೊಂಡಿದೆ.ಅದನ್ನು ನವೀಕರಣ ಮಾಡಿಕೊಳ್ಳುವ ಗೋಜಿಗೂ ಹೋಗಿಲ್ಲ..

ಸಂಬಂಧಪಟ್ಟ ಗ್ರಾಮ ಪಂಚಾಯ್ತಿ ಅಧಿಕಾರಿಗಳು,ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲ ಭ್ರಷ್ಟರಿಗೆ ತಿಂಗಳು ಮಾಮೂಲು ಫಿಕ್ಸ್ ಮಾಡ್ಕಂಡು ದಂಧೆಯನ್ನು ಲೀಲಾಜಾಲವಾಗಿ ನಡೆಸಿಕೊಂಡು ಹೋಗುತ್ತಿದ್ದ.ಜಿಲ್ಲಾಡಳಿತ,ಪೊಲೀಸ್ ಇಲಾಖೆಯಲ್ಲಿರುವ ಕೆಲವರಿಗೂ ಹಡಬೆ ಹಣದಲ್ಲಿ ಅವರ ಪಾಲಿನ ಕಪ್ಪ ಸಂದಾಯವಾಗುತ್ತಿತ್ತಂತೆ.ಅದಕ್ಕಿಂತ ಸ್ಪೋಟಕ ಮಾಹಿತಿ ಅಂದ್ರೆ ಇದೆಲ್ಲಾ ಹೀಗೇನು ಅಕ್ರಮ ಗಣಿಗಾರಿಕೆ ವಿರುದ್ದ ಏರುಧ್ವನಿಯಲ್ಲಿ ಮಾತನಾಡುತ್ತಿದ್ದಾರೋ, ಚುನಾಯಿತರೂ ಅಕ್ರಮ ಹಣದ ಫಲಾನುಭವಿಗಳಂತೆ

ಒಂದಲ್ಲಾ ಎರಡಲ್ಲ ಹತ್ತಕ್ಕು ಹೆಚ್ಚು ಬಾರಿ ಸ್ಥಳೀಯರು,ಅಕ್ರಮ ಗಣಿಗಾರಿಕೆಯಿಂದಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ  ಸಂಬಂಧಪ ಟ್ಟವರೆಲ್ಲರಿಗೆ ದೂರು ನೀಡಿದ್ದರಂತೆ.ಆದ್ರೆ ಬಹುತೇಕರಿಗೆ ಅಕ್ರಮ ಗಣಿಗಾರಿಕೆಯಿಂದ ಬರುವ ಕಪ್ಪದ್ದು ಚಿಂತೆಯಾಗಿತ್ತೇ ವಿನಃ..ಸ್ಥಳೀಯರ ನೆಮ್ಮದಿ ಹಾಗೂ ಪರಿಸರದ ಕಾಳಜಿ ಮುಖ್ಯವಾಗಲೇ ಇಲ್ಲ..ಹಾಗಾಗಿ ಮೇಲ್ನೋಟಕ್ಕೆ ಇದೆಲ್ಲಕ್ಕೂ ಅಕ್ರಮ ಗಣಿ ನಡೆಸುತ್ತಿದ್ದ ಸುಧಾಕರ್ ಹಾಗೂ ಆತನ ಪಟಾಲಂ ಕಾರಣ ಎನಿಸಿದರೂ ನೈತಿಕವಾಗಿಕಪ್ಪ” ತಿಂದವರೆಲ್ಲರೂ ಹೊಣೆಗಾರರೇ..

ನಿಮಗೆ ಗೊತ್ತಿರಲಿ ಎಂದು ಹೇಳ್ತಿವಿ ಕೇಳಿ..ಘಟನೆ ನಂತ್ರ ಸ್ಪಾಟ್ ಗೆ ಬಂದು ಹೌದಾ..ಹೀಗೆಲ್ಲಾ ಆಗೋಯ್ತಾ ಎಂದು ಏನೂ ಗೊತ್ತಿಲ್ಲದ ಸಾಚಾಗಳಂತೆ ಮಾತನಾಡುತ್ತಿರುವ ಎಲ್ಲರಿಗೂ ಇಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದು ಗೊತ್ತೇ ಇದೆ..

ಅಷ್ಟೇ ಅಲ್ಲ,ಸುಧಾಕರ್ ನಂತೆ 60ಕ್ಕೂ ಹೆಚ್ಚು  ಕಳ್ಳರು ಅಕ್ರಮವಾಗಿ ಕ್ವಾರಿಗಳನ್ನು ನಡೆಸುತ್ತಿದ್ದಾರೆ ನ್ನುವುದೂ ತಿಳಿದಿದೆ.ಭೂಗರ್ಭ ಹಾಗು ಗಣಿ ಇಲಾಖೆಯ ಭ್ರಷ್ಟರು ನೊಟೀಸ್ ಕೊಟ್ಟಂತೆ ನಾಟಕವಾಡುತ್ತಲೇ ಮಾಲೀಕರಿಂದ ತಿಂಗಳಿಗಿಷ್ಟು,ಲೋಡ್ ಗಿಷ್ಟು ಪರ್ಸಂಟೇಜ್ ತಿನ್ನುತ್ತಲೇ ಬಂದಿದ್ದಾರೆ.ಇವರದೇ ಈ ಕಥೆಯಾದರೆ ಇನ್ನು ದೊಡ್ಡವರೆನಿಸಿಕೊಂಡವರಿಗೆ ಕ್ವಾರಿ ಮಾಲೀಕರು ಅಕ್ರಮ ಮುಚ್ಚಾಕಿಕೊಳ್ಳಲು ಎಷ್ಟು ಮೊತ್ತದ ಕಪ್ಪ ಒಪ್ಪಿಸ್ತಿರಬಹುದೆಂದು  ಊಹೆ ಮಾಡಿಕೊಳ್ಳಬಹುದೇನೋ..

ಕ್ವಾರಿ ಮಾಲೀಕರಿಂದ ಚೆನ್ನಾಗಿ ತಿಂದು ಕೊಬ್ಬಿದವರು ಇವತ್ತು ಆತನ ಬಗ್ಗೆ ಇಲ್ಲಸಲ್ಲದ ಟೀಕೆಗಳನ್ನು ಮಾಡ್ತಾರೆ,ಜೀವಗಳನ್ನು ಬಲಿ ಪಡೆದವರಿಗೆ ತಕ್ಕ ಶಾಸ್ತಿ ಆಗಬೇಕೆನ್ನುತ್ತಿದ್ದಾರಲ್ಲಾ, ಇವರಿಗೆಲ್ಲಾ ಮಾನ- ಮರ್ಯಾದೆ-ನೈತಿಕತೆ ಇದೆಯೇನ್ರಿ ಎಂದು ಶಿವಮೊಗ್ಗದ ಜನ ಪ್ರಶ್ನಿಸ್ತಿದ್ದಾರೆ.ಅದೇನೇ ಆಗಲಿ, ಪಾಪದ ಹಣಕ್ಕಾಗಿ ಕ್ವಾರಿ ಅಕ್ರಮವನ್ನು ವ್ಯವಸ್ತಿತವಾಗಿ ಬೆಂಬಲಿಸ್ತಾ, ಪೋಷಿಸುತ್ತಾ ಬಂದವರೇ,  ಕ್ವಾರಿ ಮಾಲೀಕನಷ್ಟೇ  ಹುಣಸೋಡು ದುರಂತಕ್ಕೆ ಕಾರಣಕರ್ತರು-ವಿದ್ವಶಂಸಕ ಕೃತ್ಯದ ಪಾಲುದಾರರೆನ್ನುವುದರಲ್ಲಿ  ಯಾವುದೇ ಅನುಮಾನವಿಲ್ಲ.

ರಾಜಕಾರಣಿಗಳ ಪಾಲುದಾರಿಕೆಯಲ್ಲೂ ಕ್ವಾರಿಗಳು ನಡೆಯುತ್ತಿವೆ..ಹೌದು ಇದು ಮುಚ್ಚಿಡುವಂಥ ಸಂಗತಿಯೇನಲ್ಲ..ಎಲ್ಲರಿಗೂ ಗೊತ್ತಿರುವ ಸತ್ಯವೇ..ಬಹುತೇಕ ಕ್ವಾರಿಗಳ ಮಾಲೀಕತ್ವ ಒಂದಲ್ಲಾ ಒಂದು ಕಾರಣಕ್ಕೆ ರಾಜಕಾರಣಿಗಳದ್ದಾಗಿರುತ್ತೆ..ಆದ್ರೆ ಗೊತ್ತಾಗಬಾರದೆಂದು ಬೇನಾಮಿಗಳ ಹೆಸರಿನಲ್ಲಿ ನಡೆಸುತ್ತಿರುತ್ತಾರೆ..ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ದುರಂತ ಸ್ಥಳದಲ್ಲಿರುವ ಅನೇಕ ಕ್ವಾರಿಗಳ ಮಾಲೀಕತ್ಚ ರಾಜಕಾರಣಿಗಳಿಗೆ ಸೇರಿದ್ದೆನ್ನಲಾಗ್ತಿದೆ..ಈ ಬಗ್ಗೆ ತನಿಖೆ ನಿಷ್ಪಕ್ಪಪಾತವಾಗಿ ನಡುದ್ರೆ ಸತ್ಯ ಹೊರಬರೋದು ಕಷ್ಟವೇನಲ್ಲ.. 

Spread the love
Leave A Reply

Your email address will not be published.

Flash News