ಮೆಜೆಸ್ಟಿಕ್ ನಲ್ಲಿ ಮಹಿಳಾ ಪ್ರಯಾಣಿಕರ ಶೌಚಕ್ಕೆ KSRTC ಯಿಂದ ಸೂಪರ್ ಡೂಪರ್ ಐಡ್ಯಾ.. KSTDC ಅಧ್ಯಕ್ಷೆ ಶೃತಿ ಮೆಚ್ಚುಗೆ

0

ಬೆಂಗಳೂರು:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೇ ಮೊದಲ ಬಾರಿಗೆ ವಿಶೇಷ ಪರಿಕಲ್ಪನೆಯೊಂದನ್ನು ಸಾಕಾರಗೊಳಿಸಿದೆ. ಮಹಿಳಾ ಪ್ರಯಾಣಿಕರಿಗೆ ಅನುಕೂಲವಾಗಿರುವ ವಿಶೇಷ ಪರಿಕಲ್ಪನೆಯಾಗಿದೆ.ಎಲ್ಲಕ್ಕಿಂತ ಪ್ರಯೋಜನಕಾರಿಯೂ ಹೌದೆನ್ನುವ ಕಾರಣಕ್ಕೆ ಇದು ಮೆಚ್ಚುಗೆಗು ಪಾತ್ರವಾಗಬಹುದೇನೋ..

ಹೌದು.. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೇ ಮೊದಲ ಬಾರಿಗೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಹಿಳೆಯರ ಶೌಚಕ್ಕೆ ಅನುಕೂಲವಾಗಲೆಂದು ವಿಶಿಷ್ಟ ಸ್ವರೂಪದ ಹಾಗೂ ಕಲಾತ್ಮಕ ಶೈಲಿಯ ಟಾಯ್ಲೆಟೊಂದನ್ನು ಸ್ಥಾಪಿಸಿದೆ.ಅದು ಕೂಡ ಬಸ್ ನಲ್ಲಿ ಎನ್ನೋದು ಮತ್ತೊಂದು ವಿಶಿಷ್ಟ ಸಂಗತಿ.

ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಬರುತ್ತಾರೆ.ಅಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಅವರು ಬಳಸಿಕೊಳ್ಳಬೇಕಾಧ ಸ್ಥಿತಿಯಿದೆ.ಅದು ಸಾಕಷ್ಟು ಮಹಿಳೆಯರಿಗೆ ಅನ್ ಕಂಫರ್ಟ್ ಎನಿಸ್ತಿರೋದು ಕೂಡ ಸತ್ಯ..ಈ ಬಗ್ಗೆ ಸಾಕಷ್ಟು ಆರೋಪ ಹಾಗೂ ದೂರುಗಳು ಕೂಡ ಕೇಳಿಬಂದಿದ್ವು.

ಇದೆಲ್ಲವನ್ನು ಗಮನಿಸಿದ ಕೆಎಸ್ ಆರ್ ಟಿಸಿ ಇದಕ್ಕೆ ಪರಿಹಾರ ದೊರಕಿಸಿಕೊಡಲು ಯತ್ನಿಸುತ್ತಲೇ ಇತ್ತು.ಆಗ ಹೊಳೆದದ್ದೇ ಬಸ್ ನಲ್ಲಿ ವಿನೂತನ ರೀತಿಯಲ್ಲಿ ಟಾಯ್ಲೆಟ್ ಸ್ಥಾಪಿಸಿ ಮಹಿಳಾ ಪ್ರಯಾಣಿಕರಿಗೆ ಅದನ್ನು ನೀಡುವಂತೆ ಮಾಡುವಂತದ್ದು ಕೆಲವೇ ದಿನಗಳಲ್ಲಿ ಆ ಪರಿಕಲ್ಪನೆ ಸಾಕಾರಗೊಂಡಿತು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಿಗಮವು ಅನುಷ್ಠಾನಗೊಳಿಸಿರುವ ಸ್ತ್ರೀ ಶೌಚಾಲಯವನ್ನು     ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷೆ  ಶೃತಿ,  ವೀಕ್ಷಿಸಿ , ಅದರ ಅನುಷ್ಠಾನ ,ಬಳಕೆ ಹಾಗೂ ಮಹಿಳೆಯರಿಗೆ ಆಗುತ್ತಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದರು.

ಸ್ತೀ ಶೌಚಾಲಯಗಳ ಅವಶ್ಯಕತೆಯು ಬಹಳಷ್ಟು ಇದ್ದು ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕೆಂದು ತಿಳಿಸಿದರು.ಇದೇ ವೇಳೆ, ಇತ್ತೀಚೆಗಷ್ಟೇ ನಿಗಮದ ಕಾರ್ಯಾಗಾರದಲ್ಲಿಯೇ ನಿರ್ಮಿಸಿರುವ ಮತ್ತೊಂದು ಸ್ತ್ರೀ ಶೌಚಾಲಯವನ್ನು ದಾವಣಗೆರೆ ಬಸ್ ನಿಲ್ದಾಣದಲ್ಲಿ ನಾಲ್ಕೈದು ದಿನದ ಹಿಂದಷ್ಟೇ ಪ್ರಾರಂಭಿಸಿರುವ ಬಗ್ಗೆಯೂ ಅವರಿಗೆ ಮಾಹಿತಿ ನೀಡಲಾಯಿತು.  

Spread the love
Leave A Reply

Your email address will not be published.

Flash News