“ಸಾಮ್ರಾಟ್” ಅಶೋಕ್  ಸಹಾಯಕನ ಲಂಚಕಾಂಡ-ಸಬ್ ರಿಜಿಸ್ಟ್ರಾರ್ ಹಿಗ್ಗಾಮುಗ್ಗಾ ತರಾಟೆಗೆ ಥಂಡಾ..

0
ಶೃಂಗೇರಿ,ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು
ಶೃಂಗೇರಿ,ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು

ಬೆಂಗಳೂರು;ಇದು ಸಚಿವ ಆರ್.ಅಶೋಕ್ ಅವರಿಗೆ ಗೊತ್ತಿದ್ದೇ ನಡೆಯಿತೋ..ಅಥವಾ ಅವರ ಗಮನಕ್ಕೆ ತರದೆಯೇ ಅವರ ಆಪ್ತ ಸಹಾಯಕ ಎನಿಸಿಕೊಂಡ ಭ್ರಷ್ಟ ಗಂಗಾಧರ್ ಮಾಡಿದ ಅಕ್ರಮವೋ ಗೊತ್ತಾಗ್ತಿಲ್ಲ..ಆದ್ರೆ ಅವರ ಪಿಎ ಮಾಡಿದ ತಪ್ಪು ಇವತ್ತು ಸಚಿವರೇ ತಲೆ ತಗ್ಗಿಸಿ ಸಾರ್ವಜನಿಕವಾಗಿ ಇದಕ್ಕೆ ಉತ್ತರಿಸುವಂತೆ ಮಾಡಿರುವುದಂತೂ ಸತ್ಯ..

ಇವತ್ತಿನ ಸ್ಥಿತಿಯಲ್ಲಿ ಬಹುತೇಕ ಸರ್ಕಾರಿ ಇಲಾಖೆಗಳು ಅಕ್ರಮದ ಗೂಡಾಗಿವೆ. ಅಧಿಕಾರಿಗಳು ಸೋಲ್ಡ್ ಔಟ್ ಆಗಿಬಿಟ್ಟಿದ್ದಾರೆ.ಇಂಥವರ ನಡುವೆ ಪ್ರಾಮಾಣಿಕರು ಹಾಗೂ ದಕ್ಷರು ಸಿಗೋದೇ ಕಡ್ಮೆ.ಅಂಥವರ ಪೈಕಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಎಚ್.ಎಸ್ ಚೆಲುವರಾಜ್ ಒಬ್ಬರು..ಅವರು ಮಾಡಿದ ಧೈರ್ಯ ಹಾಗೂ ಸಾಹಸ ನಿಜಕ್ಕೂ ಮಾದರಿಯಾಗುವಂತದ್ದು ಹಾಗೂ ಅಭಿನಂದನಾರ್ಹ.

ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್
ಸಚಿವ ಆರ್ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್

ಕಂದಾಯ ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಹೇಳಿಕೊಂಡಿರುವ  ಗಂಗಾಧರ್‌  ಅವರು, ಶೃಂಗೇರಿ ತಾಲೂಕಿನ ಉಪನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಎಂಬುವರಿಗೆ ಅಕ್ರಮ ಹಣಕ್ಕಾಗಿ ಬೇಡಿಕೆ ಇಟ್ಟಿರುವ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.ತನ್ನೊಂದಿಗೆ ಸಚಿವರ ಆಪ್ತ ನಡೆಸಿದ ಆಡಿಯೋ ಸಂಭಾಷಣೆಯನ್ನು  ಚೆಲುವರಾಜ್ ಅವರೇ ವೈರಲ್ ಮಾಡಿದ್ದಾರೆ..

ಆಗಿದ್ದೇನು ಗೊತ್ತಾ.,.ಅಂದ್ಹಾಗೆ ಸಚಿವ ಆರ್‌ ಅಶೋಕ್‌  , ಶೃಂಗೇರಿಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಅಕ್ಷರ ಮಿತ್ರ ಕಾರ್ಯಕ್ರಮದಲ್ಲಿ   ಭಾಗವಹಿಸುವ ಹಿನ್ನಲೆಯಲ್ಲಿ . 2021ರ ಜನವರಿ 21ರಂದೇ  ಸಚಿವರ ಪ್ರವಾಸ ವೇಳಾಪಟ್ಟಿಯನ್ನು ಎಲ್ಲರಂತೆ  ಉಪ ನೋಂದಣಾಧಿಕಾರಿ ಎಚ್‌ ಎಸ್‌ ಚೆಲುವರಾಜು ಅವರ ಖಾಸಗಿ ಮೊಬೈಲ್‌ ನಂಬರ್‌ 9741114815ಗು ಮೆಸೇಜ್ ಮಾಡಲಾಗಿತ್ತು.

ಇದಾಗಿ 3 ದಿನದ ನಂತರ ಅಂದ್ರೆ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡ ಗಂಗಾಧರ್‌  ಮೊಬೈಲ್ ಕರೆ ಮಾಡಿ ಸಚಿವ ಅಶೋಕ್‌ ಅವರನ್ನು ಭೇಟಿ ಆಗಬೇಕು ಎಂದು ಸೂಚಿಸಿದ್ದರಂತೆ.ಅದರಂತೆಯೇ 2021ರ ಜನವರಿ 24ರಂದು ಸಚಿವ ಆರ್‌ ಅಶೋಕ್‌ ಅವರನ್ನು ಭೇಟಿಯಾಗಲು  ದಿಚುಂಚನಗಿರಿ ಸಮುದಾಯ ಭವನಕ್ಕೆ ತೆರಳಿದ್ದಾರೆ ಚೆಲುವರಾಜ್,ಈ  ವೇಳೆ ಗಂಗಾಧರ ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟರು.ಆದರೆ ಇದನ್ನು ಸಾರಾಸಗಟಾಗಿ ತಿರಸ್ಕರಿಸಿದ ಚೆಲುವರಾಜ್,ನನಗೆ ತಗೊಂಡೂ ಅಭ್ಯಾಸವಿಲ್ಲ.ಕೊಟ್ಟೂ ಅಭ್ಯಾಸವಿಲ್ಲ ಎಂದಿದ್ದಾರಂತೆ.

ಅಷ್ಟಕ್ಕೆ ಸುಮ್ಮನಾಗದ ಗಂಗಾಧರ್ ದೂರವಾಣಿ ಸಂಖ್ಯೆ  ತಮ್ಮ  7760666222 ರಿಂದ    ವಾಟ್ಸಾಪ್‌ ಕರೆ ಮಾಡಿ ಅಕ್ರಮ ಹಣಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರಂತೆ.ಆಗಲೂ  ಚೆಲುವರಾಜು ಗರಂ ಆಗಿ ಗಂಗಾಧರ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಚೆಲುವರಾಜ್ ಬೈಗುಳಕ್ಕೆ ಬೆಚ್ಚಿದ ಗಂಗಾಧರ್ ತಾನು ಹಣವನ್ನು ಕೇಳಿಯೇ ಇಲ್ಲ ಎಂದು ಯೂ ಟರ್ನ್ ಹೊಡೆದಿದ್ದಾರೆ.

ಈ ಬಗ್ಗೆ ಚೆಲುವರಾಜ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲು ಕೂಡ ನಿರ್ಧರಿಸಿದ್ದಾರೆ.ಸರ್ಕಾರಿ ಇಲಾಖೆಗಳು ಸಂಪೂರ್ಣ ಭ್ರಷ್ಟವಾಗಿರುವ ಸಂದರ್ಭದಲ್ಲಿ ಚೆಲುವರಾಜ್ ಅವರಂಥ ನಿಷ್ಠಾವಂತರು ಹಾಗೂ ಪ್ರಾಮಾಣಿಕರ ಕಾರ್ಯ ಹಾಗೂ ಧೈರ್ಯ ಮೆಚ್ಚುವಂತದ್ದು. ಅವರ ಕಾರ್ಯಕ್ಕೆ ಕನ್ನಡ ಫ್ಲಾಶ್ ನ್ಯೂಸ್ ಅಭಿನಂದನೆ ಸಲ್ಲಿಸುತ್ತೆ.  

“ಸಾಮ್ರಾಟ್” ಅಶೋಕ್  ಸಹಾಯಕನ ಲಂಚಕಾಂಡ-ಸಬ್ ರಿಜಿಸ್ಟ್ರಾರ್ ಹಿಗ್ಗಾಮುಗ್ಗಾ ತರಾಟೆಗೆ ಥಂಡಾ..

Spread the love
Leave A Reply

Your email address will not be published.

Flash News