ಅಂತೂ ಇಂತೂ ಪ್ರಕಟವಾಯ್ತು ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ-ಆದರೆ ನೆನಪಿರಲಿ..ಇದೇ ಅಂತಿಮವಲ್ಲ,ಕೇವಲ ತಾತ್ಕಾಲಿಕ…

0

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನ   ಎಸ್.ಎಸ್.ಎಲ್.ಸಿ ಪರೀಕ್ಷೆಗಳನ್ನು ನಡೆಸಲು  ರಾಜ್ಯಸರ್ಕಾರ ತೀರ್ಮಾನಿಸಿದೆ. ಜೂನ್‌ 14ರಿಂದ ಜೂನ್‌ 25ವರೆಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ..

ಫೆ. 1ರಿಂದ 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪ್ರಥಮ ಮತ್ತು ದ್ವಿತೀಯ ಪಿಯುಸಿ ಪೂರ್ಣಾವಧಿಗೆ ನಡೆಯಲಿದೆ.ಹಾಗೆಯೇ  6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ’ವೇ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಫೆಬ್ರುವರಿ ಎರಡನೇ ವಾರದಲ್ಲಿ ಪರಿಸ್ಥಿತಿ ಗಮನಿಸಿ ಮತ್ತೆ ತಾಂತ್ರಿಕ ಸಲಹಾ ಸಮಿತಿಯ ಜೊತೆ ಸಭೆ ಸೇರಿ, ಇತರ ತರಗತಿಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು  ಎಂದು ಸುರೇಶ್ ಕುಮಾರ್  ಹೇಳಿದರು.

ಜೂನ್ 14 ರಂದು ಪ್ರಥಮಭಾಷೆ, 16 ರಂದು ಕೋರ್ ಸಬ್ಜೆಕ್ಟ್, ಗಣಿತ, 18 ಕ್ಕೆ ದ್ವಿತೀಯ ಭಾಷೆ, 21 ಕ್ಕೆ ವಿಜ್ಞಾನ, 23 ಕ್ಕೆ ತೃತೀಯ ಭಾಷೆ, 25 ಕ್ಕೆ ಸಮಾಜ ವಿಜ್ಞಾನ. ಹೀಗೆ ಜೂನ್ 14 ರಿಂದ 25 ರ ವರೆಗೂ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದೆ.

ಅಂದ್ಹಾಗೆ  ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿಯ ತರಗತಿಗಳನ್ನು ಪುನರಾರಂಭಿಸಲು ತಿಂಗಳ ಹಿಂದೆಯೇ ಅವಕಾಶ ನೀಡಿದ್ದು, ವಿದ್ಯಾರ್ಥಿಗಳು ಸಹ ಕೊರೊನಾ ಆತಂಕದಲ್ಲೇ ಶಾಲಾ ಕಾಲೇಜುಗಳತ್ತ ತೆರಳುತ್ತಿದ್ದಾರೆ. ಈಗ 9 ಮತ್ತು 11 ನೇ ಕ್ಲಾಸ್ ಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಪ್ಲ್ಯಾನ್ ಮಾಡುತ್ತಿದೆ.

ಕೊರೊನಾ ಕೇಸ್ ಗಳು ಹಂತ ಹಂತವಾಗಿ ಕಡಿಮೆಯಾಗುತ್ತಿರುವ ಹಿನ್ನಲೆ ಶಿಕ್ಷಣ ಇಲಾಖೆ ಈ ಚಿಂತನೆಯನ್ನು ನಡೆಸುತ್ತಿದೆ ಎನ್ನಲಾಗುತ್ತಿದ್ದು, ತಾಂತ್ರಿಕ ಸಲಹಾ ಸಮಿತಿ ಇದಕ್ಕೆ ಒಪ್ಪಿಗೆ ಸೂಚಿಸಬೇಕಾಗಿದೆ. ಸಲಹಾ ಸಮಿತಿಯ ವರದಿಯ ಮೇರೆಗೆ ತರಗತಿಗಳನ್ನು ಪ್ರಾರಂಭಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ.

ಈ ಹಿಂದೆ ಮುನ್ನೆಚ್ಚರಿಕಾ ಕ್ರಮ ವಹಿಸಿಕೊಂಡೇ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದ್ದರೂ ಅಲ್ಲಲ್ಲಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಬೆಳಕಿಗೆ ಬಂದಿವೆ. ಅದಲ್ಲದೇ ಖಾಸಗಿ ಶಾಲೆಗಳು ಅಧಿಕೃತ ಘೋಷಣೆ ಇಲ್ಲದೆಯೇ ಕೆಲವು ತರಗತಿಗಳನ್ನು ಈಗಾಗಲೇ ಆರಂಭಿಸಿವೆ. ಇನ್ನು ಅಧಿಕೃತ ಘೋಷಣೆಯ ಬಳಿಕ ಎಲ್ಲಾ ಶಾಲಾ ಕಾಲೇಜು ಆರಂಭವಾಗೋದಂತೂ ಗ್ಯಾರಂಟಿ.

 ಹೀಗೆ ಎಲ್ಲಾ ತರಗತಿಗಳು ಶುರುವಾದ್ರೆ ವಿದ್ಯಾರ್ಥಿಗಳಿಗೆ ಸೋಂಕು ತಗಲುವುದಿಲ್ಲವೇ?  ಈ ಮಧ್ಯೆ ಖಾಸಗಿ ಶಾಲೆಗಳು ಸುಲಿಗೆ ಮಾಡಲು ಪ್ರಾರಂಭಿಸಿದ್ದು, ಪೋಷಕರನ್ನು ಫೀಸ್ ಗೋಸ್ಕರ ರಣಹದ್ದುಗಳಂತೆ ಕಿತ್ತು ತಿನ್ನುತ್ತಿವೆ. ಇವುಗಳ ನಡುವೆಯೂ   ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಿಸಿದ್ದು, ವೇಳಾಪಟ್ಟಿಯು ಸಹ ಪ್ರಕಟವಾಗಿದೆ.  

ಆರೋಗ್ಯ ಸಚಿವರ ಜೊತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ‌‌ ನಡೆಸಲಾಗಿದೆ. ಚರ್ಚೆಯ, ಆಧಾರದಲ್ಲಿ ಕೆಳಕಂಡ ನಿರ್ಣಯ ತೆಗೆದುಕೊಳ್ಳಲಾಗಿದೆ.

1. 01.02.2021 ರಿಂದ 10, 12 ನೇ‌ ತರಗತಿಗೆ ಸಂಬಂಧಿಸಿದಂತೆ ಹಾಗೂ 9, 11 ನೇ ತರಗತಿಗಳು ಪೂರ್ಣ ದಿನ ನಡೆಯಲಿವೆ.
2. 6-8 ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ಮುಂದುವರೆಯಲಿವೆ.
3. ಮುಂದಿನ ಫೆಬ್ರುವರಿ 2021ರಲ್ಲಿ ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
4. ಆಫ್ ಲೈನ್/ಆನ್ ಲೈನ್ ಆಯ್ಕೆ‌ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ.  

Spread the love
Leave A Reply

Your email address will not be published.

Flash News