ರಾಜ್ಯ ಸರ್ಕಾರಿ ನೌಕರರ ನಿವೃತ್ತಿಗೆ ಮಾನದಂಡ 60 ವರ್ಷನೋ…33 ವರ್ಷ ಸೇವಾನುಭನೋ..ಗೊಂದಲಕ್ಕೆ ಸಿಲುಕಿದ ನೌಕರ ಸಮೂಹ…

0

ಬೆಂಗಳೂರು:ಸರ್ಕಾರಿ ನೌಕರರ ನಿವೃತ್ತಿ ವಯೋಮಾನ ಹಾಗೂ ಅನುಭವದ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.60 ವರ್ಷಗಳೇ ಆಗಿರಬೇಕಾ..? ಅಥವಾ ಇಲಾಖೆಯಲ್ಲಿ 33 ವರ್ಷಗಳ ಸೇವೆ ಮಾಡಿದ್ದರೆ ಸಾಕಾ..? ಎನ್ನುವ ಗೊಂದಲ ನೌಕರ ವಲಯದಲ್ಲಿ ಮೂಡಿದೆ.ಇದಕ್ಕೆ ಸ್ಪಷ್ಟನೆ ನೀಡಬೇಕಾದ ಸರ್ಕಾರವೇ ಮೌನವಾಗಿರುವುದು ನೌಕರರ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

58 ವರ್ಷಕ್ಕಿದ್ದ ನಿವೃತ್ತಿ ವಯಸ್ಸನ್ನು ಸರ್ಕಾರ 60ಕ್ಕೆ ಏರಿಸಿದ್ದು ಎಲ್ಲರಿಗು ತಿಳಿದೇ ಇದೆ..ಸರ್ಕಾರದ ಈ ತೀರ್ಮಾನದ ಬಗ್ಗೆ  ಪರ-ವಿರೋಧದ ಅಭಿಪ್ರಾಯ ಮೂಡಿದ್ದೂ ಇದೆ.ಬಹುತೇಕ ಅಭಿಪ್ರಾಯಗಳು ನಕಾರಾತ್ಮಕವಾಗಿ ಬಂದಿದ್ದರಿಂದಾಗಿ ಸರ್ಕಾರ ಮುಂದೆ ಈಗಲೂ ಹಿಂದಿದ್ದ 58 ವರ್ಷಗಳಿಗೇನೆ ಇಳಿಸಬೇಕೆನ್ನುವ ಪ್ರಸ್ತಾಪದ ಮೇಲೆ ಸರ್ಕಾರ ತಲೆ ಕೆಡಿಸಿಕೊಂಡಿದೆ.ಇದೆಲ್ಲದರ ನಡುವೆಯೇ ಸರ್ಕಾರದ ಮಟ್ಟದಲ್ಲಿ ಒಂದು ಸುದ್ದಿ ಹರಿದಾಡಲಾರಂಭಿಸಿದೆ.ಅದು ಎಷ್ಟು ಸತ್ಯವೋ..ಸುಳ್ಳೋ ಎನ್ನುವುದು ಈವರೆಗೂ ಇತ್ಯರ್ಥವಾಗಿಲ್ಲ.ಸರ್ಕಾರವೂ ಇದರ ಗೊಡೆವೆಗೆ ಹೋಗಿಲ್ಲ..ಅದೇ ಗೊಂದಲ ಹೆಚ್ಚಾಗೊಕ್ಕೆ ಕಾರಣವಾಗಿದೆ.

ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಬಗ್ಗೆ ಸೃಷ್ಟಿಯಾಗಿರುವ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸ್ಪಷ್ಟನೆ
ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ಬಗ್ಗೆ ಸೃಷ್ಟಿಯಾಗಿರುವ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರಿ ನೌಕರರ ಸಂಘದ ಸ್ಪಷ್ಟನೆ

ನಿವೃತ್ತಿ ವಯಸ್ಸು 60ಕ್ಕೆ ನಿಗಧಿಯಾಗಿದೆಯೋ..ಅಥವಾ ವಯಸ್ಸನ್ನು ಮಾನದಂಡವಾಗಿಟ್ಟುಕೊಳ್ಳದೆ ಸೇವಾವಧಿಯನ್ನು ಗಮನದಲ್ಲಿಟ್ಟುಕೊಂಡು ಇಲಾಖೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದ್ದರೆ ಸಾಕಾ ಎನ್ನುವ ರೀತಿಯ ಪ್ರಶ್ನೆಗಳು ಸುಳಿದಾಡುತ್ತಿವೆ. ಏಕೆಂದ್ರೆ ಕೆಲವರು ಸಣ್ಣ ವಯಸ್ಸಿನಲ್ಲಿ ಸರ್ಕಾರಿ ಸೇವೆಗೆ ಸೇರಿಕೊಂಡಿದವರಿಗೆ 60ಕ್ಕೆ ಮುನ್ನವೇ ಸಾಕಷ್ಟು ಅನುಭವವಾಗಿರು ತ್ತದೆ.ಹಾಗಾಗಿ ಇಲಾಖೆಗೆ ಸೇರಿ 33 ವರ್ಷ ಸೇವೆ ಸಲ್ಲಿಸಿದ್ದರೆ ಸಾಕು,ಅವರು ನಿವೃತ್ತಿ ಪಡೆಯಲು ಅರ್ಹರು ಎನ್ನುವ ಆದೇಶ ಹೊರಡಿಸುವ ಸಾಧ್ಯತೆಗಳಿವೆಯೇ.? ಎನ್ನುವ ಪ್ರಶ್ನೆಗಳು ಸುಳಿದಾಡಲಾರಂಭಿಸಿವೆ.

ಏಕೆಂದ್ರೆ ನಿವೃತ್ತಿಯಾಗೊಕ್ಕೆ 60 ವರ್ಷಗಳವರೆಗೂ ಕಾಯಬೇಕಾದವರ ಸಂಖ್ಯೆ ಹೆಚ್ಚಿದ್ದರೂ ಕೆಲಸಕ್ಕೆ ಸಣ್ಣ ವಯಸ್ಸಿಗೆ ಸೇರಿ 50 ವರ್ಷದ ಹೊತ್ತಿಗೇನೆ 33 ವರ್ಷ ಸೇವಾನುಭವ ಪಡೆದರು ಸಾಕಪ್ಪಾ…ಸರಕಾರಿ ಹುದ್ದೆ ಸಹವಾಸ ಎನ್ನುವ ಮಂದಿಯೂ ಇತ್ತೀಚೆಗೆ ಹೆಚ್ಚಿದ್ದಾರೆ.ಅವರೆಲ್ಲಾ 33 ವರ್ಷಕ್ಕೆ ಸೀಮಿತ ಮಾಡೋದು ಒಳ್ಳೇದು..ಉಳಿದ ಸಮಯವನ್ನು ಹಾಯಾಗಿ ಕಳೆಯಬಹುದೆನ್ನುವುದು ಅವರ ಆಲೋಚನೆಯಾಗಿದ್ದಿರಬಹುದು.

ವಯೋಮಾನ ಮತ್ತು ಸೇವಾನುಭವದ ನಡುವಿನ ಈ ಚರ್ಚೆ ಸರ್ಕಾರದ ಅಂಗಳವನ್ನು ತಲುಪಿದ್ದರೂ ಅದರ ಬಗ್ಗೆ ಸಂಬಂಧಪಟ್ಟವರು ರಿಯಾಕ್ಟ್ ಮಾಡಿಯೇ ಇಲ್ಲ..ಇದು ಗೊಂದಲ ಹೆಚ್ಚಾಗೊಕ್ಕೆ ಕಾರಣವಾಗಿದೆ.ಆದ್ರೆ ಸರ್ಕಾರಿ ನೌಕರರ ಸಂಘ ಮಾತ್ರ ಇದೆಲ್ಲಾ ಗಾಳಿ ಸುದ್ದಿ..60 ವರ್ಷವೇ ನಿವೃತ್ತಿಗೆ ನಿಗಧಿಯಾಗಿರುವ ವಯಸ್ಸಾಗಿದೆ.ಇದನ್ನು ಬಿಟ್ಟು 33 ವರ್ಷ ಸೇವೆ ಸಲ್ಲಿಸಿದ್ರೆ ಸಾಕು ನಿವೃತ್ತಿ ಪಡೆಯಬಹುದೆನ್ನುವ ಆಲೋಚನೆಯಲ್ಲಿರುವವರು ಯಾವುದೇ ಅಂತಿಮ ನಿರ್ದಾರಕ್ಕೆ ಬರಬಾರದು.ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದೆ.

ನಿವೃತ್ತಿ ವಯೋಮಾನದ ಬಗ್ಗೆ ಸರ್ಕಾರದ ಮುಂದಾಗಲಿ,ಸಂಘದ ಮುಂದಾಗಲಿ ಯಾವುದೇ ಹೊಸ ಪ್ರಸ್ತಾವನೆ ಇಲ್ಲ..60 ವರ್ಷಕ್ಕೇನು ನಿಗಧಿಯಾಗಿದೆಯೋ ಅದೇ ಮುಂದುವರೆಯಲಿದೆ. ಯಾವುದೇ ರೀತಿಯಲ್ಲು ನೌಕರರು ಗೊಂದಲಕ್ಕೆ ಈಡಾಗಬಾರದು ಎಂದು ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಕನ್ನಡ ಫ್ಲಾಶ್ ನ್ಯೂಸ್ ಗೆ  ತಿಳಿಸಿದ್ದಾರೆ.ರಾಜ್ಯಾಧ್ಯಕ್ಷರ ಸ್ಪಷ್ಟನೆಯಿಂದ ಗೊಂದಲ ಸಧ್ಯಕ್ಕೆ ದೂರವಾಗಿದೆ.ಆದ್ರೆ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ನೀಡುವುದು ಕೂಡ ಅದರ ಬಾಧ್ಯಸ್ಥಿಕೆಯಾಗುತ್ತೆ.

Spread the love
Leave A Reply

Your email address will not be published.

Flash News