“ದರ್ಶನ್” ವಿರುದ್ಧ“ಸುದೀಪ್”ಗೇಕೆ ಇಷ್ಟೊಂದು  ಕಿಚ್ಚು..! “ರಾಬರ್ಟ್” ಪರ ನಿಲ್ಲದಿರೋಕೇ “ಕಿಚ್ಚಂ” ಗೆ ಟಾಲಿವುಡ್ ಆತಂಕನಾ..?!

0

ಬೆಂಗಳೂರು: “ರಾಬರ್ಟ್ ಚಿತ್ರದ ಬಗ್ಗೆ ಕಾಮೆಂಟ್ ಮಾಡುವಷ್ಟು ದೊಡ್ಡವನು ನಾನಲ್ಲ.”

ಕಿಚ್ಚ ಸುದೀಪ್ ಅವರ ಹೀಗೊಂದು ಸ್ಟೇಟ್ಮೆಂಟ್ ದರ್ಶನ್ ಹಾಗೂ ಸುದೀಪ್ ನಡುವೆ ಎಲ್ಲವೂ ಸರಿಯಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆಯಾ..?(ಹಾಗೆಂದು ಮೊದಲಿಂದಲೂ ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇತ್ತು ಎಂದೇನಲ್ಲ..). .ಹೌದು..ಇಂತದೊಂದಿಷ್ಟು ಅನುಮಾನಗಳು ಸ್ಯಾಂಡಲ್ ವುಡ್ ನಲ್ಲಿ ಕಾಡಲು ಶುರು ಮಾಡಿದೆ.

ರಾಬರ್ಟ್ ಚಿತ್ರ ಬಿಡುಗಡೆ ಸಂಬಂಧ ಟಾಲಿವುಡ್ ರಿಯಾಕ್ಟ್ ಮಾಡಿರುವ ರೀತಿಗೆ ಇಡೀ ಕನ್ನಡ ಚಿತ್ರರಂಗ ಕೆಂಡಾಮಂಡಲವಾಗಿದೆ. ಇಡೀ ಸ್ಯಾಂಡಲ್ ವುಡ್ ಈ ವಿಷಯದಲ್ಲಿ ಒಗ್ಗಟ್ಟು-ಐಕ್ಯತೆ ಪ್ರದರ್ಶಿಸಬೇಕು. ಆದ್ರೆ ಸುದೀಪ್ ಅವರಂಥ ನಟ, ವ್ಯಕ್ತಿಗತವಾಗಿ ದರ್ಶನ್ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿದ್ದರೂ ಟಾಲಿವುಡ್ ನಿಲುವು-ಧೋರಣೆಯನ್ನು ಖಂಡಾತುಂಡವಾಗಿ ಖಂಡಿಸಬೇಕಿತ್ತು.ಆದ್ರೆ ಅಂತದ್ದ್ಯಾವುದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿರುವುದು, ಸುದೀಪ್  ಅವರ ಇಬ್ಬಂದಿತನ ಪ್ರದರ್ಶಿಸುತ್ತಿದೆ. ಸುದೀಪ್  ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಲಿಕ್ಕೆ ಶುರುವಾಗಿದೆ.

ವಿಕ್ರಾಂತ ರೋಣಾ ಚಿತ್ರದ ಟೈಟಲ್ ಬಿಡುಗಡೆಗಾಗಿ ದುಬೈನ ಭುರ್ಜ್ ಖಲೀಫಾಗೆ ತೆರಳಿ(ಪತ್ರಿಕೆ ಅಚ್ಚಿಗೆ ಹೋಗುವ ಹೊತ್ತಿಗೆ ಟೈಟಲ್  ಬಿಡುಗಡೆಯಾಗಿರುತ್ತದೆ)ದ ವೇಳೆ ಪತ್ರಕರ್ತರು ರಾಬರ್ಟ್ ಸಿನೆಮಾ ಬಿಡುಗಡೆ ಬಗ್ಗೆ ಟಾಲಿವುಡ್ ತಳೆದಿರುವ ನಿಲುವಿನ ಬಗ್ಗೆ ಪ್ರಶ್ನಿಸಿದ್ದಾರೆ.ದರ್ಶನ್ ಹೆಸರನ್ನು ಕೇಳುತ್ತಿದ್ದಂತೆ ಸ್ವಲ್ಪ ಇರುಸುಮುರುಸಿಗೆ ಒಳಗಾದವರಂತೆ ಕಂಡಿದ್ದಾರೆನ್ನಲಾದ ಸುದೀಪ್, ರಾಬರ್ಟ್ ಸಿನೆಮಾ ಬಗ್ಗೆ( ಆ ಮಾತಿನ ಲಹರಿಯಲ್ಲಿ ದರ್ಶನ್ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನಲ್ಲ ಎನ್ನುವ ಭಾವನೆ ಇತ್ತಾ..?)ಮಾತನಾಡುವಷ್ಟು ದೊಡ್ಡವನು ನಾನಲ್ಲ.ಚಿತ್ರ ತಂಡಕ್ಕೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತಾಕತ್ತಿದೆ ಅದನ್ನು ಅವರು ಮಾಡುತ್ತಾರೆ ಬಿಡಿ ಎಂದು ಉಡಾಫೆತನದಿಂದ ರಿಯಾಕ್ಟ್ ಮಾಡಿದ್ದಾರಂತೆ.

ಸುದೀಪ್ ಅವರಂಥ ನಟ ಚಿತ್ರರಂಗದಲ್ಲಿ 25 ವರ್ಷಗಳನ್ನು ಕಳೆದಿದ್ದಾರೆ.ಅವರ ಹೇಳಿಕೆಗಳು ಸಾರ್ವಜನಿಕವಾಗಿಯೂ..ಚಿತ್ರೋದ್ಯಮದಲ್ಲಿಯೂ ಸಾಕಷ್ಟು ಇಂಪ್ಯಾಕ್ಟ್ ಮೂಡಿಸುವಂಥ ತಾಕತ್ತನ್ನು ಹೊಂದಿವೆ.ರಾಬರ್ಟ್ ಸಿನೆಮಾಕ್ಕೆ ಬಂದೊದಗಿರುವ ಆಪತ್ತಿನ ಬಗ್ಗೆ ಖಡಕ್ಕಾಗಿ ರಿಯಾಕ್ಟ್ ಮಾಡುತ್ತಾರೆಂದೇ ಎಲ್ಲರೂ ನಿರೀಕ್ಷಿಸಿದ್ದರು.ಆದ್ರೆ ಸುದೀಪ್ ಮಾತಿನಲ್ಲಿ ಅಂತದ್ದ್ಯಾವುದೇ ಗಟ್ಟಿತನ-ನಿಷ್ಟೂರತೆ ಕಂಡುಬಾರಲೇ ಇಲ್ಲ..ಇದು ಸುದೀಪ್ ಅವರಿಂದ ಟಾಲಿವುಡ್ ವಿರುದ್ಧ ಬಂಡಾಯ ಏಳುವಂಥ ಹೇಳಿಕೆ ಹೊರಬಹುದು ಎಂದು ನಿರೀಕ್ಷಿಸಿದ್ದವರಿಗೆ ದೊಡ್ಡ ನಿರಾಶೆ ಹಾಗೂ ಶಾಕ್ ನೀಡಿದ್ದುಸುಳ್ಳಲ್ಲ.

ಸುದೀಪ್ ಗೆ ಟಾಲಿವುಡ್ ನ ಹೆದರಿಕೆನಾ..?: ಟಾಲಿವುಡ್ ಧೋರಣೆಯನ್ನು ಸಾರಾಸಗಟಾಗಿ ಖಂಡಿಸಿ ಸ್ಯಾಂಡಲ್ ವುಡ್ ಬೆನ್ನಿಗೆ ನಿಲ್ಲುವ ಮಾತನ್ನಾಡದ ಸುದೀಪ್ ನಿಲುವಿನ ಬಗ್ಗೆ ಸಾಕಷ್ಟು ರೀತಿಯಲ್ಲಿ ಚರ್ಚೆಗಳಾಗುತ್ತಿವೆ.ಬಹುಭಾಷಾ ಕಲಾವಿದನಾಗಿರುವ ಸುದೀಪ್,ಟಾಲಿವುಡ್ ಬಗ್ಗೆ ನಿಷ್ಟೂರವಾಗಿ ಮಾತನಾಡಿದ್ರೆ ಅಲ್ಲಿ ನನ್ನನ್ನು ಬ್ಯಾನ್ ಮಾಡಬಹುದು..ನನ್ನ ಚಿತ್ರಗಳಿಗಿರುವ ಮಾರುಕಟ್ಟೆ ವ್ಯಾಪ್ತಿ ಕುಗ್ಗೋತ್ತದೆ ಎನ್ನುವ ಲಾಭದ ದೃಷ್ಟಿಯಿಂದ  ಹಾರಿಕೆಯ ಉತ್ತರ ಕೊಟ್ಟರೆಂದು ವಿಶ್ಲೇಷಿಸಲಾಗುತ್ತಿದೆ.

ಸುದೀಪ್ ಹೇಳಿಕೆಗೆ ಕನ್ನಡಪರ ಸಂಘಟನೆಗಳ ಆಕ್ರೋಶ: ರಾಬರ್ಟ್ ಗೆ ಬಂದೊದಗಿದ ಸಂಕಷ್ಟ ಭವಿಷ್ಯದಲ್ಲಿ ಬೇರೆ ಯಾವುದೋ ಚಿತ್ರಕ್ಕೂ ಎದುರಾಗಬಹುದು..ಇವತ್ತು ಚಿತ್ರರಂಗ ಒಗ್ಗಟ್ಟಿನ ಮಂತ್ರ ಜಪಿಸಿದ್ರೆ ಟಾಲಿವುಡ್ ಗೂ ಅದರ ಹೆದರಿಕೆ ಇರುತ್ತೆ..? ಆದರೆ ಸಮಸ್ಯೆಗೂ ನನಗೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ನಡೆದುಕೊಂಡಿರುವುದು ಸುದೀಪ್ ಅವರ ಅಹಂಕಾರವನ್ನು ಪ್ರದರ್ಶಿಸುತ್ತದೆ..ಯಾರು ಏನ್ ಬೇಕಾದ್ರೂ ಮಾಡಿಕೊಳ್ಳಲಿ,ನನಗೆ ಎಲ್ಲರೂ ಬೇಕು ಎನ್ನುವ ರೀತಿಯ ಸುದೀಪ್ ಧೋರಣೆ ಸರಿಯಲ್ಲ..ಈ ಕೂಡಲೇ ತನ್ನ ಹೇಳಿಕೆಯನ್ನು ವಾಪಸ್ ಪಡೆಯಬೇಕು..ಕನ್ನಡಿಗರ ಕ್ಷಮೆ ಕೋರಬೇಕು..ಹಾಗೆಯೇ ಇಡೀ ಚಿತ್ರರಂಗ ಈ ಸಮಸ್ಯೆ ಬಗ್ಗೆ ಒಗ್ಗಟ್ಟಾಗಿ ಹೋರಾಡುವಂತೆ ಕರೆ ಕೊಡಬೇಕು..ಇಲ್ಲವಾದಲ್ಲಿ ಸುದೀಪ್ ಮನೆ ಮುಂದೆಯೇ ಬೃಹತ್ ಪ್ರತಿಭಟನೆ ನಡೆಸಬೇಕಾಗ್ತದೆ ಎಂದು ಎಚ್ಚರಿಸಿವೆ ಕನ್ನಡಪರ ಸಂಘಟನೆಗಳು.

ದರ್ಶನ್ ಬಿಟ್ಟು ಬೇರೆ ಕಲಾವಿದರ ಚಿತ್ರಗಳಿದ್ದರೆ ಸುದೀಪ್ ನಿಲುವು ಬೇರೆಯಾಗಿರುತ್ತಿತ್ತೆ..?ಹೀಗೂ ಒಂದ್ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ.ದರ್ಶನ್ ಹಾಗು ಸುದೀಪ್ ಸಂಬಂಧ ಹೇಗಿದೆ ಎನ್ನುವುದು ಇಡೀ ಕರ್ನಾಟಕಕ್ಕೇನೆ ಗೊತ್ತು.ಸಾಕಷ್ಟು ಸನ್ನಿವೇಶಗಳಲ್ಲಿ ಅವರಿಬ್ಬರು ಹೇಳಿಕೆ-ಪ್ರತಿ ಹೇಳಿಕೆ ಕೊಟ್ಟಿಕೊಂಡು ವಾಕ್ಸಮರಕ್ಕೆ ಇಳಿದಿರುವುದನ್ನು ಚಿತ್ರರಂಗ ಕಂಡಿದೆ.

ದರ್ಶನ್ ಬಗ್ಗೆ ಈ ಕ್ಷಣಕ್ಕೂ ಅಸಹನೆಯಿಂದ್ಲೇ ಮಾತನಾಡುವ ಸುದೀಪ್,ದರ್ಶನ್ ರಾಬರ್ಟ್ ಸಿನೆಮಾದ ಹೀರೋ ಎನ್ನುವ ಕಾರಣಕ್ಕೆ ಟಾಲಿವುಡ್ ಬಗ್ಗೆ ಖಡಕ್ಕಾಗಿ ರಿಯಾಕ್ಟ್ ಮಾಡಿಲ್ಲ..ದರ್ಶನ್ ಬದಲು ಬೇರೆ ಯಾರೇ ಇದ್ದರೂ ನಿಷ್ಟೂರವಾಗಿ ಮಾತನಾಡುತ್ತಿದ್ದರು.ತನ್ನ ಪ್ರತಿಸ್ಪರ್ಧಿಯ ಚಿತ್ರ ಗೆಲ್ಲಬಾರದು ಎನ್ನುವ ಮನಸ್ಥಿತಿಯಲ್ಲಿ ಸುದೀಪ್ ಈ ರೀತಿಯ ನಿಲುವು ತಳೆದಿದ್ದರೂ ಆಶ್ವರ್ಯವಿಲ್ಲ ಎಂದು ಮಾತನಾಡುವವರಿಗು ಕಡಿಮೆಯಿಲ್ಲ.

ಚಿತ್ರ ದರ್ಶನ್ ದಿರಲಿ..ಅಥವಾ ಸುದೀಪ್ ದಿರಲಿ..ಅಥವಾ ಅಪ್ಪು.ಶಿವಣ್ಣ..ಮುರುಳಿ…ಸರ್ಜಾ ಯಾರದ್ದೇ ಇರಬಹುದು..ಆದ್ರೆ ಸಂಕಷ್ಟ ಒಂದು ಚಿತ್ರಕ್ಕೆ ಎದುರಾಗುತ್ತದೆ ಎಂದ್ರೆ ಐಕ್ಯತೆಯ ಮಂತ್ರವನ್ನು ಇಡೀ ಚಿತ್ರರಂಗ ಜಪಿಸಬೇಕು.ಆಗಲೇ ಇವತ್ತು ಟಾಲಿವುಡ್ ಇರಬಹುದು..ನಾಳೆ ಇನ್ನೊಂದು ಭಾಷೆಯ ಚಿತ್ರರಂಗ ಇರಬಹುದು..ಅದಕ್ಕೆ ಕನ್ನಡ ಚಿತ್ರರಂಗದ ತಾಕತ್ತು-ಸಾಮರ್ಥ್ಯದ ಪರಿಚಯವಾಗಬಲ್ಲದು…ಅದನ್ನು ಬಿಟ್ಟು ಒಬ್ಬ ಉದ್ದಾರವಾದ್ರೆ ಅದು ತನ್ನ ಬೆಳವಣಿಗೆಗೆ ತೊಡಕು ಎಂದು ಭಾವಿಸುವುದು ಎಷ್ಟು ಸೂಕ್ತ..

ದರ್ಶನ್ ಹಾಗು ಸುದೀಪ್ ವಿಷಯದಲ್ಲಿ ಆಗಿರುವುದು ಅದೇ ಎನ್ನಲಾಗ್ತಿದೆ.ಸುದೀಪ್ ತನ್ನ ಹೇಳಿಕೆಯನ್ನು ವಾಪಸ್ ಪಡೆದು ರಾಬರ್ಟ್ ಚಿತ್ರದ ಬೆಂಬಲಕ್ಕೆ ನಿಲ್ಲಬೇಕು..ಅದನ್ನು ಬಿಟ್ಟು ಹಾರಿಕೆಯ ಉತ್ತರ ಕೊಡ್ತಾ ಅಡ್ಡಾಡಿದ್ರೆ ಮುಂದೆ ಸುದೀಪ್ ಚಿತ್ರಕ್ಕೇ ಅಂತದ್ದೊಂದು ಸಮಸ್ಯೆ ಎದುರಾದ್ರೆ ಅವರ ಬೆಂಬಲಕ್ಕೆ ನಿಲ್ಲೋರೇ ಇಲ್ಲದಂತಾಗಬಹುದೇನೋ..ಅಲ್ವಾ..

Spread the love
Leave A Reply

Your email address will not be published.

Flash News