ಬಾನಂಗಳದಲ್ಲಿ  ಸೂರ್ಯ ಕಿರಣ್‌- ಸಾರಂಗ್‌ ಶಿಸ್ತುಬದ್ಧ ತಾಲೀಮು ಸೇರಿದಂತೆ   ಏರೋ ಇಂಡಿಯಾ-2021 ರಲ್ಲಿ ಇಂದು ಏನೇನೆಲ್ಲಾ ಇರಲಿದೆ ಗೊತ್ತಾ..?

0

ಬೆಂಗಳೂರು: ಏರೋ ಇಂಡಿಯಾದಲ್ಲಿ ಮೊಟ್ಟ ಮೊದಲ ಬಾರಿಗೆ ಸೂರ್ಯ ಕಿರಣ್‌ ಮತ್ತು ಸಾರಂಗ್‌ ಜಂಟಿ ಪ್ರದರ್ಶನ ನೀಡುತ್ತಿರುವುದು ಏರೋ ಇಂಡಿಯಾದ ಮೊದಲ ದಿನದ ವಿಶೇಷ.

ಬಾನಂಗಳದಲ್ಲಿ  9 ಸೂರ್ಯ ಕಿರಣ್‌ ವಿಮಾನಗಳು ಮತ್ತು 4  ಸಾರಂಗ್‌ ಹೆಲಿಕಾಪ್ಟರ್‌ಗಳು ಏರೋಬ್ಯಾಟಿಕ್‌ ಪ್ರದರ್ಶನ ನೀಡಲಿವೆ. ಸೂರ್ಯ ಕಿರಣ್‌ ಹಾಗೂ ಸಾರಂಗ್ ವಿಮಾನಗಳು ಅತಿ ವೇಗದಲ್ಲಿ  ವಿರುದ್ಧ ದಿಕ್ಕಿನಲ್ಲಿ ಬಂದು ಇನ್ನೇನು ಡಿಕ್ಕಿ ಹೊಡೆಯುತ್ತವೆ ಎನ್ನುವಾಗಲೇ ಪಕ್ಕದಿಂದ ಹಾದು ಹೋಗುವ ದೃಶ್ಯ ನೋಡುವುದೇ ರೋಮಾಂಚಕ. ನೋಡುಗರನ್ನು ಝುಮ್ಮನ್ನಿಸುವ ಅನುಭವವೇ ವರ್ಣನಾತೀತ. 

ಭಾರತೀಯ ವಾಯುಪಡೆಯ ಬೋಯಿಂಗ್ ಚಿನೂಕ್ಸ್ ಮತ್ತು ಎಹೆಚ್ -64 ಅಪಾಚೆಗಳ ಮೊದಲ ಬಾರಿಗೆ ಪಾಲ್ಗೊಳ್ಳುವಿಕೆಯನ್ನು ಸಹ ನೋಡಬಹುದುಮಿ -17 ವಿ 5, ಎಎಲ್‌ಹೆಚ್, ಎಲ್‌ಸಿಎಚ್, ಎಲ್‌ಯುಹೆಚ್, ಸಿ -17 ಗ್ಲೋಬ್‌ಮಾಸ್ಟರ್, ಎಂಬ್ರೇರ್, ಆಂಟೊನೊವ್ ಆನ್ -32 ಸೇರಿದಂತೆ 41 ವಿಮಾನಗಳು ಭಾಗವಹಿಸಲಿವೆ.ಫ್ಲೈಟ್ ಮತ್ತು 1940 ರ ದಶಕದ ಸಿ -47 ಡಕೋಟಾ ಸೇರಿದಂತೆ 42 ಏರ್‌ಕ್ರಾಫ್ಟ್‌ಗಳು ಭಾಗವಹಿಸಲಿವೆ ಎನ್ನಲಾಗಿದೆ.

ವಾಯುಪ್ರದರ್ಶನದ ಜೊತೆಗೆ ಸುಖೋಯ್ ಸು -30 ಮತ್ತು ಮಿ -17 ವಿ 5 ಭದ್ರತಾ ದಳದ ಭಾಗವಾಗಿದ್ದು, ಏರ್ ಶೋ ಸ್ಥಳದ ಸುತ್ತಲೂ ಗಸ್ತು ನಡೆಸಲಿದೆ ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ಆಯೋಜಕರು ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News