“ಪರಪ್ಪನ  ಅಗ್ರಹಾರ” ಎನ್ನೋ ಪಾಪಕೂಪದಲ್ಲಿ ದಂಧೆಯ ಮತ್ತೊಂದು ಕರಾಳ ಮುಖ ಬಯಲು- ಇಲ್ಲಿ ದುಡ್ಡಿದ್ರೆ ದುನಿಯಾ..?ಜೈಲ್ ಅಧಿಕಾರಿಗಳೇ ಅಕ್ರಮದ ಕಿಂಗ್ ಪಿನ್ಸ್    

0

ಬೆಂಗಳೂರು:ಪರಪ್ಪನ ಅಗ್ರಹಾರ ಜೈಲ್ ನ ಕರ್ಮಕಾಂಡ ಮತ್ತೊಂದು ಮಗ್ಗಲು ಬದಲಿಸಿದೆ.

ಜೈಲ್ ನೊಳಗೆ ಎಲ್ಲಾ ವ್ಯವಸ್ಥೆ ಇದ್ದರೂ ಹೊರಗಿಂದ ಪೂರೈಸಲ್ಪಡುವ ಸಾಮಾಗ್ರಿಗಳ ಅಕ್ರಮದ ಪ್ರಪಂಚ ಹೇಗೆ ನಡೆಯುತ್ತಿದೆ ಎನ್ನೋದು ಬಟಾಬಯಲಾಗಿದೆ.ಹೊರಗಿಂದ ಖೈದಿಗಳಿಗೆ ಬೀಡಿ,ಸಿಗರೇಟ್ ಸೇರಿದಂತೆ ಸಾಕಷ್ಟು ವಸ್ತುಗಳನ್ನು ಪೂರೈಸಿ ಹಣ ಮಾಡುವ ದಂಧೆ ನಡೆಯುತ್ತಿರುವುದು ಕೂಡ ಬಹಿರಂಗವಾಗಿದೆ.

ಒಳಗಿರುವ ಕ್ಯಾಂಟೀನ್ ನಿಂದಲೇ ಜೈಲ್ ಅಧಿಕಾರಿಗಳು ಹತ್ತಿರತ್ತಿರ 10 ಲಕ್ಷ ಹಣವನ್ನು ಕಮಾಯಿಮಾಡುತ್ತಾರೆಂದ್ರೆ ಜೈಲ್ ನೊಳಗೆ ಇರುವ ಕೆಲವು ಡಾನ್ ಗಳು ನಡೆಸುವ ಹಣದ ವ್ಯವಹಾರ ಹೇಗೆ ಇರಬಹುದೆನ್ನುವ ಅಂದಾಜು ಮಾಡಬಹುದು.

ಜೈಲ್ ನೊಳಗೆ ಪೌಷ್ಟಿಕ ಆಹಾರ ಪೂರೈಸುವ ವ್ಯವಸ್ಥೆಯಿದ್ದರೂ ಒಳಗಿರುವವರ ನಾಲಿಗೆಗೆ ಅದು ಹಿಡಿಸೋದೇ ಇಲ್ವಂತೆ.ಅವರಿಗೆ ದಿನನಿತ್ಯ ನಾನ್ ವೆಜ್ ಬೇಕು..ಒಳ್ಳೆಯ ನಾಲಿಗೆ ರುಚಿಯ ಭಕ್ಷ್ಯ ಭೋಜನವೇ ಬೇಕಂತೆ..ಅದನ್ನು ಪೂರೈಸುವ ವ್ಯವಸ್ಥೆಯೂ ಜೈಲ್ ನೊಳಗೆ ಇರುವ ಅಧಿಕಾರಿಗಳು ಮಾಡ್ತಾರಂತೆ.

ಅದನ್ನೇನು ಅವರು ಪುಕ್ಕಟೆ ಮಾಡುತ್ತಿಲ್ಲ..ಡಾನ್ ಗಳು ಕೊಡುವ ಭಕ್ಷಿಸ್ ನ್ನು ಪಡೆದು ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.ಅದು ಕೂಡ ಸಾವಿರಗಳಲ್ಲಲ್ಲ..ಲಕ್ಷಗಳಲ್ಲಿ ಎನ್ನೋದು ಸ್ಟಿಂಗ್ ಆಪರೇಷನ್ ನಲ್ಲೇ ಬಯಲಾಗಿದೆ.

ಸಿಗರೇಟ್ ,ಬೀಡಿ ಅಷ್ಟೇ ಅಲ್ಲ,ಗಾಂಜಾ,ಅಫೀಮ್,ಚರಸ್ ನಂಥ ಮಾದಕದ್ರವ್ಯವನ್ನು ಪೂರೈಸುವ ಕೆಲಸವೂ ನಡೆಯುತ್ತಿದೆ.ಅದು ಹೊಸ ಗುಟ್ಟಿನ ವಿಷಯವೇನಲ್ಲ.

ಅನೇಕ ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ.ದೊಡ್ಡ ದೊಡ್ಡ ಕ್ರೈಮ್  ಮಾಡಿ ಬಂದವರಲ್ಲಿ ಅನೇಕರು ಮಾದಕದ್ರವ್ಯದ ವ್ಯಸನಿಗಳಾಗಿರುತ್ತಾರೆ..ಅಂಥವರಿಗೆ ದಿನನಿತ್ಯ ಅದು ಬೇಕೇ ಬೇಕು..ಅದಕ್ಕಾಗಿಎಷ್ಟ್ ಹಣವನ್ನು ಬೇಕಾದ್ರೂ ನೀಡಲು ಸಿದ್ಧರಿರುತ್ತಾರೆ.

ಅಂಥವ್ರ ದೌರ್ಬಲ್ಯವನ್ನು ಮನಗಂಡ ಕೆಲವು ಜೈಲ್ ಅಧಿಕಾರಿಗಳು ಮೀಡಿಯೇಟರ್ಸ್ ಗಳ ಮೂಲಕ  ಅದನ್ನು ಪೂರೈಸಿ ಲಕ್ಷ ಲಕ್ಷ ಹಣ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ.

ಇದೆಲ್ಲಾ ದೊಡ್ಡವರಿಗೆ ಗೊತ್ತಿದ್ರೂ ಅವರಿಂದ್ಲೂ ಇದಕ್ಕ ಬ್ರೇಕ್ ಹಾಕಲಿಕ್ಕಾಗುತ್ತಿಲ್ಲ ಎನ್ನೋದ್ರಲ್ಲೇ ಪರಪ್ಪನ ಅಗ್ರಹಾರ ಜೈಲ್ ನೊಳಗೆ ಇರುವ ರೌಡಿ ಮಾಫಿಯಾ ಎಷ್ಟು ಸ್ಟ್ರಾಂಗ್ ಎನ್ನೋದನ್ನು ಅರ್ಥ ಮಾಡಿಕೊಳ್ಳಬಹುದು.

ಜೈಲ್ ನೊಳಗೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಅದನ್ನು ಜೈಲ್ ನಲ್ಲಿಪ್ರಶ್ನಿಸುವಂಗೆ ಇಲ್ಲ..ಇದನ್ನು ವಿರೋಧಿಸುವ ಇತರೆ ಸಜಾಬಂಧಿಗಳನ್ನು ಜೈಲ್ ನಲ್ಲಿರುವ ಅಧಿಕಾರಿ-ಸಿಬ್ಬಂದಿಯೇ ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ.

ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತದೆ.ಹಾಗಾಗಿ ಅವರೆಲ್ಲರೂ ಜೀವಭಯಕ್ಕೆ ಏನನ್ನೂ ಹೇಳದೆ ಕಣ್ಣಮುಂದೆ ನಡೆಯುವ ಎಲ್ಲಾ ರೀತಿಯ ಅವ್ಯವಹಾರವನ್ನು ಸಹಿಸಿಕೊಳ್ಳುತ್ತಿದ್ದಾರಂತೆ. 

ಜೈಲ್ ನೊಳಗೆ ಇಷ್ಟೆಲ್ಲಾ  ಅಕ್ರಮ ರಾಜಾರೋಷವಾಗಿ ನಡೆಯೊಕ್ಕೆ ಕಾರಣವೇ ಜೈಲ್ ನ ವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಅಧಿಕಾರಿಗಳು.ಮರಿಗೌಡ್ರು, ಸುಂದರ್,ಬಿ ಸುರೇಶ್  ಎನ್ನುವವರೇ ಹಣದಾಸೆಗೆ ಪಾಪಿಗಳೊಂದಿಗೆ ಶಾಮೀಲಾಗಿ ದಂಧೆಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆನ್ನುವುದು ಖೈದಿಗಳ ಆರೋಪ.

ಖೈದಿಗಳ ಮನಪರಿವರ್ತನೆಯ ಕೇಂದ್ರಗಳಾಗಬೇಕಾದ ಜೈಲ್ ನೊಳಗೆ ಅಧಿಕಾರಿಗಳೇ ಹಣದಾಸೆಗೆ ಬಿದ್ದು ವ್ಯವಸ್ಥೆಯನ್ನು ಎಕ್ಕುಟ್ಟಿಸುವ ಸ್ಥಿತಿ ಸೃಷ್ಟಿಸುತ್ತಾರೆಂದ್ರೆ ಇನ್ಹೇಗೆ ಜೈಲ್ ಗಳ ಚಿತ್ರಣ ಬದಲಾದೀತು..?ಖೈದಿಗಳ ಮನಸ್ಥಿತಿಯಲ್ಲಿ ಹೇಗೆ ಬದಲಾವಣೆ ಬರಲಿಕ್ಕೆ ಸಾಧ್ಯವ್ಹೇಳಿ..

Spread the love
Leave A Reply

Your email address will not be published.

Flash News