“ಕಲ್ಪತರು ನಾಡಿನಲ್ಲಿ ದಲಿತರ ರಕ್ಷಣೆಗೆ ಪೊಲೀಸರ ನಿರ್ಲಕ್ಷ್ಯ”DYSP ಸೀರಿಯಸ್ಸಾಗಿ ಸಭೆ ಮಾಡ್ತಿದ್ರೆ ಇನ್ಸ್ ಪೆಕ್ಟರ್ಸ್ ಮೊಬೈಲ್ ನಲ್ಲಿ ಬ್ಯುಸಿ

0

ತುಮಕೂರು: ದಲಿತರ ಮೇಲಿನ ದೌರ್ಜನ್ಯ ಹಾಗೂ ಹಲ್ಲೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ  ಎಂದು ತುಮಕೂರು ನಗರ ಉಪವಿಭಾಗದ ಡಿವೈಎಸ್ಪಿ ಎಚ್. ಶ್ರೀನಿವಾಸ್ ಖಡಕ್ ವಾರ್ನಿಂಗ್ ನೀಡಿದ್ದಾರೆ.ತುಮಕೂರು ನಗರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಭಾರಿಗೆ ದಲಿತ ಮುಖಂಡರ ಸಭೆ ನಡೆಸಿದ ಅವರು, ಕಳೆದ ಎರಡು ವರ್ಷಗಳಲ್ಲಿ ಒಂದೇ ಒಂದು ದಲಿತ ಮುಖಂಡರ ಸಭೆ ನಡೆದಿರಲಿಲ್ಲ. ಕಾರಣ ನಿಗೂಢವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.

ಸಭೆಯಲ್ಲಿ, ದಲಿತರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ಹಾಗೂ ವಿವಿಧ ಬೇಡಿಕೆಗಳನ್ನು ದಲಿತ ಮುಖಂಡರು ಎಳೆ ಎಳೆಯಾಗಿ ಬಿಡಿಸಿಟ್ಟರು.ಜಿಲ್ಲೆಯ ವಿವಿಧೆಡೆಗಳಿಂದ ನಗರಕ್ಕೆ ನೂರಾರು ದಲಿತ ವಿದ್ಯಾರ್ಥಿಗಳು ಬಂದು ಹಾಸ್ಟೆಲ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಂಥ ಹಾಸ್ಟೆಲ್ ಗಳ ಸುತ್ತಮುತ್ತಲು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಬಗ್ಗೆ ಅನೇಕ ಭಾರಿ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿವೈಎಸ್ಪಿ ಎಚ್. ಶ್ರೀನಿವಾಸ್ ಗಂಭೀರವಾಗಿ ದಲಿತ ಮುಖಂಡರ ಸಭೆ ನಡೆಸುತ್ತಿದ್ದರೆ ಇದ್ಯಾವುದರ ಪರಿವೆಯೂ ಇಲ್ಲದೆ,ಮೊಬೈಲ್ ನೋಡುವುದರಲ್ಲಿ ಮಗ್ನವಾಗಿರುವ ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ರಾಧಾಕೃಷ್ಣ,ನಗರ ಠಾಣೆಯ ವೃತ್ತ ನಿರೀಕ್ಷಕ ನವೀನ್
ನಿರ್ಲಕ್ಷ್ಯ ಇರಬೇಕು..ಆದ್ರೆ ಇಷ್ಟೊಂದಾ..?!..ಡಿವೈಎಸ್ಪಿ ಎಚ್. ಶ್ರೀನಿವಾಸ್ ಗಂಭೀರವಾಗಿ ದಲಿತ ಮುಖಂಡರ ಸಭೆ ನಡೆಸುತ್ತಿದ್ದರೆ ಇದ್ಯಾವುದರ ಪರಿವೆಯೂ ಇಲ್ಲದೆ,ಮೊಬೈಲ್ ನೋಡುವುದರಲ್ಲಿ ಮಗ್ನವಾಗಿರುವ ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ರಾಧಾಕೃಷ್ಣ,ನಗರ ಠಾಣೆಯ ವೃತ್ತ ನಿರೀಕ್ಷಕ ನವೀನ್.

ದಲಿತರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆಗಳು ಹೆಚ್ಚುತ್ತಿವೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು. ಆದರೆ  ಹಲ್ಲೆಗಳೊಗಾಗಿ ದೂರು ನೀಡಲು ಪೊಲೀಸ್ ಠಾಣೆಗಳಿಗಳಲ್ಲಿ  ಪೊಲೀಸರು ಸೌಜನ್ಯವಾಗಿ ವರ್ತಿಸುತ್ತಿಲ್ಲ. ಹಲ್ಲೆಗೊಳಗಾಗಿ ಬಂದವರ ಮೇಲೆಯೇ ದರ್ಪ ತೋರುತ್ತಿದ್ದಾರೆ ಎಂದು ದೂರಿದರು. ಇನ್ನು ದಲಿತ ಕಾಲೋನಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಕುಟುಂಬಗಳು ಹಾಳಾಗಿವೆ. ಬಗ್ಗೆ ಅಬಕರಿ ಇಲಾಖೆಯ ಗಮನಕ್ಕೂ ತಂದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲವಾದ್ದರಿಂದ ಪೊಲೀಸರಾದರೂ ಬಗ್ಗೆ ಗಮನ ಹರಿಸಬೇಕೆಂದು ಮುಖಂಡರು ಒತ್ತಾಯಿಸಿದರು.

ಸಭೆಯಲ್ಲಿ ತುಮಕೂರು ನಗರದ ವಿವಿಧ ದಲಿತ ಕಾಲೋನಿಗಳ ಹಾಗೂ ಸ್ಲಂ ಗಳ ಮುಖಂಡರು ಭಾಗವಹಿಸಿದ್ದರು. ಆದರೆ ಸಭೆ ನಡೆಯುತ್ತಿರುವಾಗ ತುಮಕೂರು ನಗರ ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕರುಗಳು ಮೊಬೈಲ್ ನಲ್ಲಿ ಮುಳುಗಿದ್ದುದು ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.

ಮಹಿಳಾ ಠಾಣೆಯ ವೃತ್ತ ನಿರೀಕ್ಷಕ ರಾಧಾಕೃಷ್ಣ ಹಾಗೂ ನಗರ ಠಾಣೆಯ ವೃತ್ತ ನಿರೀಕ್ಷಕ ನವೀನ್ ಅವರುಗಳು ಸಭೆ ಆರಂಭವಾದಾಗಿನಿಂದಲೂ ತಮ್ಮ ಮೊಬೈಲ್ ನೋಡುತ್ತಲೇ ಕಾಲ ಹರಣ ಮಾಡಿದರು. ಮುಖಂಡರು ತಮ್ಮ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯಗಳನ್ನು ಹೇಳುತ್ತಿದ್ದಾಗಲೂ ಇಬ್ಬರು ಅಧಿಕಾರಿಗಳು ಮಾತ್ರ ಗಮನ ಹರಿಸಲೇ ಇಲ್ಲ ಸಭೆಯಲ್ಲಿನ ಇವರ ನಡವಳಿಕೆ, ಇವರುಗಳು ದಲಿತರ ಮೇಲಿಟ್ಟಿರುವ ಕಾಳಜಿಯನ್ನು ತೋರಿಸುತ್ತದೆ ಎಂದು ದಲಿತ ಮುಖಂಡ ನರಸಿಂಹಮೂರ್ತಿ ಹೇಳಿದರು.  

Spread the love
Leave A Reply

Your email address will not be published.

Flash News