“ಕ್ರಿಕೆಟ್ ದೇವರು” ಸಚಿನ್ ಲತ್ತೆ ಮಗ”ನಿಗೆ ಅವಕಾಶಗಳ ಮೇಲೆ ಅವಕಾಶ-ವಿಶ್ವದಾಖಲೆ ಮಾಡಿದ “ಆಟೋ ಡ್ರೈವರ್ ಮಗ” ನಿಗೆ ಸ್ಕಾಲರ್ ಶಿಪ್ಪೇ ಕ್ಯಾನ್ಸಲ್..

0

ನಮ್ಮ ವ್ಯವಸ್ಥೆ ಇರೋದೇ  ಹೀಗೆ..ಎಲ್ಲಾ ಅರ್ಹತೆ-ಸಾಮರ್ಥ್ಯಗಳಿದ್ದರೂ ಕೆಲವೊಮ್ಮೆ ಅವ್ಯಾವು ಮಾನದಂಡವಾಗೋದೇ ಇಲ್ಲ.ಪ್ರತಿಷ್ಟಿತರ ಕುಟುಂಬಗಳ ಅಂತಸ್ತು-ಪ್ರತಿಷ್ಟೆಯೇ ಎಲ್ಲಕ್ಕೂ ಪ್ಯಾರಮೀಟರ್ಸ್ ಆಗಿಬಿಡುತ್ವೆ..ದೊಡ್ಡವರೆನಿಸಿಕೊಂಡವರ ಮಕ್ಕಳು ನಾಲಾಯಕ್ ಗಳಾಗಿದ್ರೂ ಅರ್ಹರನ್ನು ಹಿಂದಕ್ಕಿಕ್ಕಿ ಅವರನ್ನೇ ಉಪ್ಪರಿಗೆಯಲ್ಲಿ ಕೂರಿಸಿ ಸಂಭ್ರಮಿಸಲಾಗುತ್ತದೆ. ಒಂದಲ್ಲಾ..ಎರಡಲ್ಲಾ.ಮೂರಲ್ಲಾ..ನಿರಂತರವಾಗಿ ಅವಕಾಶ ಕೊಟ್ಟರೂ ವಿಫಲರಾದ ಮೇಲೂ ಅವರಿಗೆ ಚಾನ್ಸ್ ಗಳೆನ್ನೋದು ಸಿಗುತ್ತಲೇ ಹೋಗುತ್ವೆ..

ಇಂತದ್ದೊಂದು ಮಾತು ಹೇಳೊಕ್ಕೆ ಕಾರಣ ಕ್ರಿಕೆಟ್ ನಲ್ಲಿ ಲತ್ತೆ ಎಂದು ಪ್ರೂವ್ ಆದ್ರೂ ಕ್ರಿಕೆಟ್ ದೇವರು ಎನಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಗೆ ಪದೇ ಪದೇ ಅವಕಾಶ ಸಿಗುತ್ತಲೇ ಹೋಗುತ್ತಿದೆ.ಅರ್ಜುನ್ ಎನ್ನುವ ಐರನ್ ಲೆಗ್ ಗೆ ಪದೇ ಪದೇ ಅವಕಾಶ ಸಿಗ್ತಿದೆ ಎನ್ನುವುದೇ ಸತ್ಯವಾದ್ರೆ ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್..ಅರ್ಜುನ್ ಎನ್ನೋ ಲತ್ತೆ ಸಚಿನ್ ಮಗನಾಗದೇ ಹೋಗಿದಿದ್ದರೆ ಆತನಿಗೆ ಅವಕಾಶಗಳ ಮಹಾಪೂರ ಸಿಗ್ತಿತ್ತೇ..ನೋ ಚಾನ್ಸ್..

ಕೃಷಿ ಮಸೂದೆ ಕಾಯ್ದೆ ವಿರುದ್ಧದ ರೈತರ ಹೋರಾಟಕ್ಕೆ ಜಾಗತಿಕ ಮನ್ನಣೆ ಸಿಕ್ಕ ಬೆನ್ನಲ್ಲಿ,ಇದನ್ನು ಖಂಡಿಸುವ ರೀತಿಯ ಟ್ವೀಟ್ ಮಾಡಿದ್ದಾರೆನ್ನಲಾದ ಸಚಿನ್ ತೆಂಡೂಲ್ಕರ್ ಆ ಕಾರಣಕ್ಕೆ ವಿಲನ್ ಆಗಿದ್ದು ಎಲ್ಲರಿಗೂ ಗೊತ್ತಿದೆ.ಇದರ ಬೆನ್ನಲ್ಲೇ ಸಚಿನ್ ಬಗ್ಗೆ ಸಾಕಷ್ಟು ಲೇಖನಗಳು ಪ್ರಕಟವಾಗಿವೆ ಕೂಡ.ವಿನೋದ್ ಕಾಂಬ್ಳಿಯಂಥ ತನ್ನ ಸಹಪಾಠಿ ಬೆಳವಣಿಗೆಗೆ ಹೇಗೆ ಸಚಿನ್ ಕಲ್ಲಾಕಿದ್ರು..ಎಷ್ಟೋ ಬೆಳೆಯುವ ಪ್ರತಿಭೆಗಳನ್ನು ತನ್ನ ಹೊಲಸು ರಾಜಕೀಯದಿಂದ ಬರ್ಬಾದ್ ಮಾಡಿದರೆನ್ನುವ ರೀತಿಯ ಲೇಖನಗಳು ಪ್ರಕಟವಾಗಿದ್ದನ್ನು ದೇಶ ನೋಡಿದೆ.

ವಿಶ್ವದಾಖಲೆ ಬರೆದ ಪ್ರಣವ್ ಧನವಾಡೆ.
ವಿಶ್ವದಾಖಲೆ ಬರೆದ ಪ್ರಣವ್ ಧನವಾಡೆ.
ಕಳಪೆ ಫಾರ್ಮ್ ಹೊರತಾಗ್ಯೂ ಅಪ್ಪನ ಲಾಭಿಯಿಂದ ಅವಕಾಶ ಪಡೆಯುತ್ತಿರುವ ಅರ್ಜುನ್
ಕಳಪೆ ಫಾರ್ಮ್ ಹೊರತಾಗ್ಯೂ ಅಪ್ಪನ ಲಾಭಿಯಿಂದ ಅವಕಾಶ ಪಡೆಯುತ್ತಿರುವ ಅರ್ಜುನ್

ಅದಕ್ಕೆ ಪುಷ್ಠಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ಚರ್ಚೆ ಶುರುವಾಗಿದೆ.ಅದು ಸಚಿನ್ ಗಲ್ಲ,ಅವರ ಮಗ ಅರ್ಜುನ್ ಗೆ ಸಂಬಂಧಿಸಿದ ಸುದ್ದಿ. ಅರ್ಜುನ್, ಕ್ರಿಕೆಟ್ ನಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದಿದ್ದರೂ ತಂದೆಯ ಶಿಫಾರಸ್ಸು-ರಾಜಕೀಯದಿಂದಾಗಿ ಪ್ರತಿಷ್ಟಿತ ಟೂರ್ನಿಗಳಲ್ಲಿ ಆಡುವ ಅವಕಾಶ ಪಡೆದಿರುವುದು ಎಲ್ಲರಿಗೂ ಗೊತ್ತಿರುವುದೇ..

ಎಷ್ಟೇ ಅವಕಾಶ ಕೊಟ್ಟರೂ ನಿರೀಕ್ಷಿತ ಪ್ರದರ್ಶನ ಆತನಿಂದ ಬಂದಿಲ್ಲ..ಕ್ರಿಕೆಟ್ ಗೆ ಬೇಕಾದ ದೈಹಿಕ ಸಾಮರ್ಥ್ಯ ಹಾಗೂ ಮನೋಬಲ ಕಳೆದುಕೊಂಡೂ ಫಾರ್ಮ್ ಕಳೆದುಕೊಂಡರೂ ಮಗ ಕ್ರಿಕೆಟ್ ನಲ್ಲಿ ತನ್ನಂತೆ ಅಲ್ಲದಿದ್ದರೂ ತನ್ನ ಹೆಸರು ಪ್ರಸ್ತಾಪಿಸುವುದಕ್ಕಾದರೂ ಕ್ರಿಕೆಟ್ ಅಂಗಳಕ್ಕಿಳಿಯಬೇಕೆನ್ನುವ ತಂದೆಯ ಹಠದಿಂದ ಅರ್ಜುನ್ ಎನ್ನುವ ಲತ್ತೆ ಪ್ರತಿಭೆ ಆಯ್ಕೆ ಯಾಗುತ್ತಲೇ ಇದೆ.ಈತನಿಂದಾಗಿ ಅದೆಷ್ಟೋ ಪ್ರತಿಭಾನ್ವಿತರು ಕ್ಯೂನಲ್ಲಿ ಕಾಯಬೇಕಿದೆ.

ಆದ್ರೆ ಇನ್ನೊಬ್ಬ ಸಾಧಕನ ವಿಷಯವನ್ನು ತೆಗೆದುಕೊಳ್ಳೋಣ..ಅದು ಅರ್ಜುನ್ ವಿಷಯವನ್ನು ಹೇಳುವಾಗ ಪ್ರಸ್ತುತವೂ ಅನಿಸುತ್ತೆ..ಆತನ ಹೆಸರು  ಪ್ರಣವ್ ಧನವಾಡೆ..ಮುಂಬೈ ಮೂಲದ ಆಟೋ ಡ್ರೈವರ್ ಮಗ..ಈತ ಮಾಡಿರುವ ಸಾಧನೆ ಈಗಲೂ ಕ್ರಿಕೆಟ್ ನಲ್ಲಿ ದಾಖಲೆಯಾಗೇ ಉಳಿದಿದೆ.

ಜನವರಿ 2016ರಲ್ಲಿ ಅಂತರ್‌ಶಾಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ  ಪ್ರಣವ್ ಅಜೇಯ 1,009 ರನ್ ಗಳಿಸಿ ರಾತ್ರೋರಾತ್ರಿ ಸುದ್ದಿಯಾದ. 15ರ ಹರೆಯದಲ್ಲಿ ಮಾಡಿದ ಸಾಧನೆಗೆ ಆತನಿಗೆ  ಎಲ್ಲಾ ರೀತಿಯ ಬೆಂಬಲ-ಪ್ರೋತ್ಸಾಹವು ಸಿಕ್ಕಿತು.\ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ)  ತಿಂಗಳಿಗೆ 10 ಸಾವಿರ ರೂ ವಿದ್ಯಾರ್ಥಿ ವೇತನವನ್ನೂ ಪ್ರಕಟಿಸಿತ್ತು.

ಅರ್ಜುನ್ ಗೆ ಅಪ್ಪನ ಮಗ ಎನ್ನುವುದನ್ನು ಬಿಟ್ಟರೆ ಗುರುತಿಸಲು ಸಾಧನೆ ಇಲ್ಲ..  
ಅರ್ಜುನ್ ಗೆ ಅಪ್ಪನ ಮಗ ಎನ್ನುವುದನ್ನು ಬಿಟ್ಟರೆ ಗುರುತಿಸಲು ಸಾಧನೆ ಇಲ್ಲ..

ಆದರೆ ಆತನಿಗೆ  ಕಳಪೆ ಪ್ರದರ್ಶನದ ನೆವದಿಂದ  ಅಂಡರ್ -19 ತಂಡದಲ್ಲೂ  ಸ್ಥಾನ ನೀಡಿಲ್ಲ.ಈ ಕಾರಣಕ್ಕೆ ಆತನಿಗೆ ವಿದ್ಯಾರ್ಥಿವೇತನವು ನಿಂತಿದೆ.ಅಂದ್ಹಾಗೆ ಪ್ರಣವ್ ಗೆ ಸಿಕ್ಕ ಅವಕಾಶಗಳು ಅರ್ಜುನ್ ಗೆ ಕಂಪೇರ್ ಮಾಡಿದ್ರೆ ತುಂಬಾ ಕಡಿಮೆ..ಹಾಗಾದ್ರೆ ಇದೇ ತಂಡದಲ್ಲಿ ಸ್ಥಾನ ಪಡೆದಿರುವ ಅರ್ಜುನ್ ಸಾಧನೆಯೇನು..ಹೊಗಳುವಂತಿದ್ದೆದೆಯೇ..ಅಗಾಧ ಸಾಧನೆಯನ್ನೇನಾದ್ರೂ ಮಾಡಿದ್ದಾನಾ..? ಖಂಡಿತಾ ಇಲ್ಲ,ಫಾರ್ಮ್ ಗೆ ಬರೊಕ್ಕೆ ತಿಣುಕಾಡುತ್ತಿರುವ ಅರ್ಜುನ್ ಗೆ ಸಿಕ್ಕಷ್ಟು ಅವಕಾಶ ಪಾಪ ಪ್ರಣವ್ ಸಿಕ್ಕಿದಿದ್ದರೆ ಇವತ್ತು ಎಲ್ಲೋ ಹೋಗಿ ನಿಂತಿರುತ್ತಿದ್ದನೇನೋ..ಆದ್ರೆ  ಕಳಪೆ ಫಾರ್ಮ್  ನೆವವೊಡ್ಡಿ 10 ಸಾವಿರ ವಿದ್ಯಾರ್ಥಿ ವೇತನವನ್ನು ವಾಪಸ್ ಪಡೆದಿರುವುದು ಎಷ್ಟು ಸರಿ..

 1009 ರನ್ ಗಳನ್ನು ಗಳಿಸಿ ವಿಶ್ವದಾಖಲೆ ಬರೆದ ಆಟೋ ಡ್ರೈವರ್ ಮಗ ಪ್ರಣವ್ ಧನವಾಡೆ
1009 ರನ್ ಗಳನ್ನು ಗಳಿಸಿ ವಿಶ್ವದಾಖಲೆ ಬರೆದ ಆಟೋ ಡ್ರೈವರ್ ಮಗ ಪ್ರಣವ್ ಧನವಾಡೆ

ಒಂದಷ್ಟು ಹೊತ್ತು ಸ್ಕ್ರೀನ್ ನಲ್ಲಿ ನಿಲ್ಲೊಕ್ಕೆ ಹುಸ್ಸಪ್ಪಾ ಎನ್ನುವ ದಡೂತಿ ದೇಹದ ಅರ್ಜುನ್ ಪ್ರಣವ್ ನಂತೆ ದಿನಗಟ್ಟಲೇ ನಿಂತು 1009 ರನ್ ಗಳನ್ನು ಅದೂ ಕೂಡ ಅಜೇಯನಾಗಿ ಗಳಿಸಲು ಸಾಧ್ಯವಾಗುತ್ತಿತ್ತಾ.. ಖಂಡಿತಾ ಇಲ್ಲ..ಆದ್ರೂ ಅಂಡರ್-19 ಸ್ಥಾನದಲ್ಲಿ ಸ್ಥಾನ ಪಡೆದಿದ್ದಾನೆ.

ಮುಂದಿನ ವರ್ಷದ ಐಪಿಎಲ್ ನಲ್ಲಿ ತಂದೆ ಮೆಂಟರ್ ಆಗಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಟವಾಡಿದ್ರೂ ಆಶ್ಚರ್ಯವಿಲ್ಲ..ಏಕೆಂದ್ರೆ ಇದು ದುಡ್ಡಿರೋರು..ಶಿಫಾರಸ್ಸಿರೋರ ದುನಿಯಾ ಸ್ವಾಮಿ..ಇಲ್ಲಿ ಪ್ರತಿಭೆಗಿಂತ ಹೆಚ್ಚು ಮನ್ನಣೆ ಪಡೆಯೋದು ಲಾಭಿ..ಅರ್ಜುನ್ ಗೆ ಅಪ್ಪನ ಫೇಮ್..ಶಿಫಾರಸ್ಸು..ಸಚಿನ್ ಒಳಗೊಳಗೆ ಮಾಡುವ ಲಾಭಿ ಕಳಪೆ ಫಾರ್ಮ್ ಹೊರತಾಗ್ಯೂ ಕೈ ಹಿಡಿಯುತ್ತದೆ..

ಆದ್ರೆ ಕಳಪೆ ಫಾರ್ಮ್ ಸುಧಾರಿಸಿಕೊಂಡು ಲಯಕ್ಕೆ ಮರಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವ ಪ್ರಣವ್ ನಂಥ ಆಟೋ ಡ್ರೈವರ್  ಮಗನಿಗೆ ಅವಕಾಶಗಳೂ ಸಿಗೊಲ್ಲ..ವಿದ್ಯಾರ್ಥಿ ವೇತನವನ್ನೂ ಕಸಿದುಕೊಳ್ಳಲಾಗುತ್ತದೆ…

Spread the love
Leave A Reply

Your email address will not be published.

Flash News