ಅನ್ಯಾಯ…ಅನ್ಯಾಯ..”ನೇರ-ನಿಷ್ಠೂರ-ನಿಷ್ಪಕ್ಷಪಾತ” ಪತ್ರಿಕೋದ್ಯಮದ ಸಾಕ್ಷಿಪ್ರಜ್ಞೆಯ ಪತ್ರಕರ್ತ ಮಹಾಂತೇಶ್ ವಿರುದ್ದ FIR

0
“ದಿ-ಫೈಲ್” ವೆಬ್ ಸೈಟ್ ಮಾಲೀಕ,ಜಿ.ಮಹಾಂತೇಶ್ ಭದ್ರಾವತಿ
“ದಿ-ಫೈಲ್” ವೆಬ್ ಸೈಟ್ ಮಾಲೀಕ, ಜಿ.ಮಹಾಂತೇಶ್ ಭದ್ರಾವತಿ
ಸುದ್ದಿ ಜತೆ ಶ್ರೀಗಳ ಫೋಟೋ ಬಳಸಲಾಗಿದೆ ಎನ್ನುವುದು ಶ್ರೀ ಮಠದ ಆರೋಪ
ಸುದ್ದಿ ಜತೆ ಶ್ರೀಗಳ ಫೋಟೋ ಬಳಸಲಾಗಿದೆ ಎನ್ನುವುದು ಶ್ರೀ ಮಠದ ಆರೋಪ
ದಿ ಫೈಲ್ ನಲ್ಲಿ ಪ್ರಕಟವಾಗಿದ್ದ ಶ್ರೀ ಮಠದ ಕುರಿತಾದ ಸುದ್ದಿ
ದಿ ಫೈಲ್ ನಲ್ಲಿ ಪ್ರಕಟವಾಗಿದ್ದ ಶ್ರೀ ಮಠದ ಕುರಿತಾದ ಸುದ್ದಿ

ಬೆಂಗಳೂರು/ಚಿತ್ರದುರ್ಗ: ಇದು ಖಂಡನೀಯ-ಪತ್ರಿಕಾರಂಗದ ವೃತ್ತಿಪಾವಿತ್ರ್ಯತೆಗೆ ತಂದ ಧಕ್ಕೆ-ಪತ್ರಿಕೋದ್ಯಮದ ಸ್ವಾತಂತ್ರ್ಯವನ್ನು ಕತ್ತುಹಿಸುಕುವ ದಮನಕಾರಿ ಪ್ರವೃತ್ತಿ…ಸತ್ಯ ಹೇಳುವ ಧ್ವನಿಯನ್ನೇ ಅಡಗಿಸುವ ಹುನ್ನಾರ…ಕನ್ನಡ ಫ್ಲಾಶ್ ನ್ಯೂಸ್ ಇಂತದ್ದೊಂದು ದುಸ್ಸಾಹಸವನ್ನು ಖಂಡಾತುಂಡವಾಗಿ ಖಂಡಿಸುತ್ತದೆ.

ಸಿದ್ದಾಂತ-ನೈತಿಕತೆ-ಶಿಷ್ಟಾಚಾರ ಎಲ್ಲಕ್ಕಿಂತ ಮೀರಿದ ಸಾಮಾಜಿಕ ಬದ್ಧತೆಯನ್ನು ಕಳಕೊಳ್ಳುತ್ತಿರುವ ಆತಂಕದ ಸ್ಥಿತಿಯಲ್ಲಿದೆ ಪತ್ರಿಕೋದ್ಯಮ.ಯಾವುದೇ ಇಸಂಗೂ ಒಳಗಾಗದೆ ಇದ್ದುದ್ದನ್ನು ಇದ್ದ ಹಾಗೆ ಬರೆಯುವ ನೇರ ಹಾಗೂ ನಿಷ್ಟೂರ ಮನಸ್ಥಿತಿಯ ಪತ್ರಕರ್ತರು ಬೆರಳೆಣಿಕೆಯಷ್ಟಿದ್ದಾರೆ ಎನ್ನುವುದು ಕೂಡ ಕಳವಳಕಾರಿ.

ಅವರ ಮನೋಸ್ಥೈರ್ಯ ಹಾಗು ಆತ್ಮಬಲ ಕುಗ್ಗಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ್ರೆ ಅದಕ್ಕಿಂತ ದೌರ್ಭಾಗ್ಯಪೂರ್ಣವಾದ ವಿಚಾರ ಮತ್ತೊಂದಿಲ್ಲ.ದಿ ಫೈಲ್ ಎನ್ನುವಂಥ ನಿರ್ಭೀತ ಹಾಗೂ ಸ್ವಾತಂತ್ರ್ಯ ಪತ್ರಿಕೋದ್ಯಮದ ವೆಬ್ ಸೈಟ್ ಹಾಗೂ ಅದರ ಮಾಲೀಕ ಜಿ.ಮಹಾಂತೇಶ್ ವಿಷಯದಲ್ಲಿ ಆಗಿರುವುದು ಕೂಡ ಅದೇ..

ನಿನ್ನೆಯ ದಿನ ಪತ್ರಿಕಾರಂಗದ ಮೇಲೆ ಬಹುದೊಡ್ಡ ದಾಳಿಯೇ ನಡೆದೋಗಿದೆ.ಅದು ದೈಹಿಕವಾಗಿ ನಡೆದೋಗಿದ್ದರೆ ಪರ್ವಾಗಿರಲಿಲ್ಲ.ನೇರ-ನಿಷ್ಟೂರವಾಗಿ, ಕಣ್ಣಿಗೆ ರಾಚುವ ರೀತಿಯಲ್ಲಿನ  ಸತ್ಯವನ್ನು ಸಾಬೀತುಪಡಿಸುವ  ಸಾಕ್ಷ್ಯಗಳನ್ನಾಧರಿಸಿ ವರದಿ ಮಾಡುವ ದಿ ಫೈಲ್ ಎನ್ನುವ ವೆಬ್ ಸೈಟ್ ಮೇಲೆ ದಮನಕಾರಿ ದಾಳಿಯೇ ನಡೆದೋಗಿದೆ.ಸತ್ಯ ಹೇಳುವವರೇ ಕಡಿಮೆಯಾಗಿರುವ ಸನ್ನಿವೇಶದಲ್ಲಿ ಯಾವುದಕ್ಕೂ ಹೆದರದೆ ಗಟ್ಟಿಧ್ವನಿಯಲ್ಲಿ ಅದನ್ನು ಪ್ರತಿಪಾದಿಸುವ ನೈತಿಕಶಕ್ತಿಯ ಜಂಘಾಬಲವನ್ನೇ ಉಡುಗಿಸುವ ಕೆಲಸ ನಡೆದೋಗಿದೆ.ಅದಕ್ಕೆ ಕಾನೂನಿನ ಆಸರೆ ಪಡೆದಿರುವುದು ದುರಂತಕಾರಿ.

ಶ್ರೀ ಶಿವಮೂರ್ತಿ ಶರಣ
ಚಿತ್ರದುರ್ಗ ಶ್ರೀ ಮಠದ ಶ್ರೀ ಮುರುಘ ಶರಣರು

ದಿ ಫೈಲ್ ಎನ್ನುವುದು..ಜಿ.ಮಹಾಂತೇಶ್ ಎನ್ನುವ ಧೀಮಂತ ಪತ್ರಕರ್ತನ ಮಾಲೀಕತ್ವದ ವೆಬ್ ಸೈಟ್ ಮಾತ್ರವಲ್ಲ,ಆತನ ಮಹತ್ವಾಕಾಂಕ್ಷೆಯ ಕೂಸು.ಆರ್ಥಿಕ ಸಂಕಷ್ಟಗಳ ನಡುವೆಯೂ ಆಸ್ಥೆಯಿಂದ ಅದನ್ನು ಕಾಪಾಡಿಕೊಂಡು ಬಂದವರು ಜಿ.ಮಹಾಂತೇಶ್..ತನಿಖಾ ಪತ್ರಿಕೋದ್ಯಮವೇ ಸತ್ತು ಹೋಗುತ್ತಿರುವ ಸನ್ನಿವೇಶದಲ್ಲಿ ಅದರ ಜೀವಂತಿಕೆಯನ್ನು ತಮ್ಮ ವರದಿಗಳ ಮೂಲಕ ಹಿಡಿದಿಟ್ಟಾತ.ಯಾವುದೇ ಸನ್ನಿವೇಶದಲ್ಲೂ ತಾನು ನಂಬಿದ ಸಿದ್ದಾಂತಕ್ಕೆ ಚ್ಯುತಿ ಬಾರದ ರೀತಿಯಲ್ಲಿ ತುಂಬಾ ಜಾಗರೂಕತೆಯಿಂದ ನಡೆದುಕೊಂಡಾತ.ಯಾವುದೇ ಸಂದರ್ಭದಲ್ಲೂ ಕೈ-ಮನಸನ್ನು ಕೊಳಕು ಮಾಡಿಕೊಳ್ಳದ ಹಾಗೆ ಬೆಳೆದಾತ ಮಹಾಂತೇಶ್..ಇದಕ್ಕೆ ಅವರ ವೆಬ್ ಸೈಟ್ ನಲ್ಲಿ ಪ್ರಕಟವಾದ ವರದಿಗಳೇ ಸಾಕ್ಷಿ.

ಮಹಿಳೆ ಕೊಟ್ಟ ಅತ್ಯಾಚಾರ ದೂರಿನಿಂದಾಗಿ ಸುದ್ದಿಯಲ್ಲಿರುವ ಚಿತ್ರದುರ್ಗ ಶ್ರೀ ಮಠ
ಮಹಿಳೆ ಕೊಟ್ಟ ಅತ್ಯಾಚಾರ ದೂರಿನಿಂದಾಗಿ ಸುದ್ದಿಯಲ್ಲಿರುವ ಚಿತ್ರದುರ್ಗ ಶ್ರೀ ಮಠ

ದಿ ಫೈಲ್ ಎನ್ನುವ ವೆಬ್ ಸೈಟ್ ಮೂಡಿಸಿದ ಸಂಚಲನ ಅಷ್ಟಿಷ್ಟಲ್ಲ.ತನಿಖಾ ಪತ್ರಿಕೋದ್ಯಮದ ಸಧ್ಯದ ಮಟ್ಟಿಗೆ ಇದೇ  ಅಗ್ರಗಣ್ಯ ಎನಿಸಿಕೊಂಡಿದೆ.ಅದರಲ್ಲಿ ಮೂಡಿಬಂದ ಅದೆಷ್ಟೋ ವರದಿಗಳು ಸರ್ಕಾರದ ಮಟ್ಟದಲ್ಲಿ ಬಹುದೊಡ್ಡ ಚರ್ಚೆ ಹುಟ್ಟಿಹಾಕಿದಂತವು.ಅಬಕಾರಿ ಸಚಿವ ನಾಗೇಶ್ ಸ್ಥಾನ ಕಳೆದುಕೊಳ್ಳೊಕ್ಕೆ ಕಾರಣವಾಗಿದ್ದು ಕೂಡ ಜಿ.ಮಹಾಂತೇಶ್ ಅವರ ದಿ ಫೈಲ್.ಕೊರೊನಾ ಸಂದರ್ಭದಲ್ಲಿ ಆದಂಥ ಸಾಕಷ್ಟು ಹಗರಣಗಳನ್ನು ಸಾಕ್ಷ್ಯ ಸಮೇತ ಹೊರಹಾಕಿದ್ದು ದಿ ಫೈಲ್ ಹೆಗ್ಗಳಿಕೆ.ಸರ್ಕಾರ ತನಿಖೆಗೆ ಆದೇಶಿಸಲು ಕಾರಣವಾಗಿದ್ದು ಕೂಡ ದಿ ಫೈಲ್ ವರದಿ ಇಂಪ್ಯಾಕ್ಟ್..ದಿನಂಪ್ರತಿ ಒಂದಲ್ಲಾ ಒಂದು ಹಗರಣ,ಒಬ್ಬನಲ್ಲಾ ಒಬ್ಬ ಮಂತ್ರಿ-ಅಧಿಕಾರಿಯನ್ನು ಸಾರ್ವಜನಿಕವಾಗಿ ಬೆತ್ತಲು ಮಾಡುತ್ತಿರುವ ಫೈಲ್ ನ ವರದಿಗಳನ್ನೇ ನಿತ್ಯವೂ ಕುತೂಹಲದಿಂದ ನಿರೀಕ್ಷಿಸುವ ಲಕ್ಷಾಂತರ ಓದುಗರಿದ್ದಾರೆ.ದಿ ಫೈಲ್ ನ ಹೆಗ್ಗಳಿಕೆಗೆ ಇಷ್ಟೊಂದು ಉಲ್ಲೇಖಗಳು ಸಾಕೆನಿಸ್ಬೋದು.

ಇಂಥಾ ನೇರ ಹಾಗೂ ನಿಷ್ಟೂರ ಧೋರಣೆಯ ವೆಬ್ ಸೈಟ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿರುವುದು ನಿಜಕ್ಕೂ ವಿಪರ್ಯಾಸ.ಕೋರ್ಟ್ ನ ಆದೇಶವನ್ನು ಯಥಾವತ್ತಾಗಿ ಉಲ್ಲೇಖಿಸಿ ಬರೆದ ಹೊರತಾಗ್ಯೂ ಚಿತ್ರದುರ್ಗದ ಮುರುಘಮಠ ಎಫ್ ಐ ಆರ್ ದಾಖಲಿಸುತ್ತದೆ ಎಂದ್ರೆ ಇದನ್ನು ಹೇಗೆ ವ್ಯಾಖ್ಯಾನಿಸಬೇಕೋ ಗೊತ್ತಾಗ್ತಿಲ್ಲ.ಮಹಾಂತೇಶ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದು ಕಾನೂನಾತ್ಮಕವಾಗಿ ನ್ಯಾಯ ಸಮ್ಮತ ಎನ್ನುವುದಾದ್ರೆ,ಕೋರ್ಟ್ ಆರ್ಡರ್ ನ್ನೇ ಯಥಾವತ್ತಾಗಿ ಉಲ್ಲೇಖಿಸಿ ವರದಿ ಮಾಡಿದ ದಿ ಫೈಲ್ ಮೇಲೆ ಶ್ರೀ ಮಠ,ಎಫ್ ಐ ಆರ್ ದಾಖಲಿಸಿದ್ದು ಕೂಡ ನ್ಯಾಯಾಂಗ ನಿಂದನೆಯಂತಲ್ಲವೇ ಎಂದು ಪ್ರಶ್ನಿಸ್ತಾರೆ ಹಿರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು.

ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ
ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ

ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಮಠದ ಆಡಳಿತಾಧಿಕಾರಿಯ ವಿರುದ್ಧ ನೀಡಿದ ಕಂಪ್ಲೆಂಟ್ ಪ್ರತಿಯನ್ನು ಆಧರಿಸಿ  ದಿ ಫೈಲ್ ವರದಿ ಮಾಡಿತ್ತು.ಅಷ್ಟೇ ಅಲ್ಲ,ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದ  ಕಾನೂನಾತ್ಮಕ ವಿದ್ಯಾಮಾನಗಳನ್ನು ಫಾಲೋ ಅಪ್ ಸ್ಟೋರಿಯ ರೂಪದಲ್ಲಿ ಪ್ರಕಟಿಸಿತ್ತು.ಯಾವುದೇ ಇಸಂ-ಪೂರ್ವಾಗ್ರಹಪೀಡಿತವಿಲ್ಲದೆ ವಸ್ತುನಿಷ್ಟವಾಗಿ ಪೊಲೀಸ್ ಹಾಗೂ ಕೋರ್ಟ್ ನ ಬೆಳವಣಿಗೆಯನ್ನು ಆಧಾರವಾಗಿಟ್ಟುಕೊಂಡೇ ವರದಿ ಮಾಡಿದ್ದನ್ನು ಪ್ರತಿಯೊಬ್ಬರು ಓದಿದ್ದಾರೆ.ಅದನ್ನು ಇತರೆ ಮಾದ್ಯಮಗಳು ಕೂಡ ಸುದ್ದಿಯಾಗಿ ಪ್ರಕಟಿಸಿರುವುದುಂಟು.

ಆದರೆ ಸುದ್ದಿ ಪ್ರಕಟಿಸುವ ವೇಳೆ ದಿ ಫೈಲ್ ನ  ಮಹಾಂತೇಶ್ ಮಠದ ಶ್ರೀಗಳ ಭಾವಚಿತ್ರವನ್ನು ಪ್ರಕಟಿಸಿ ಅವಹೇಳನ ಮಾಡಿದ್ದಾರೆ.ವ್ಯಕ್ತಿಗತ ತೇಜೋವಧೆಗೆ ಕಾರಣವಾಗಿದ್ದಾರೆ.ಮಠದ ಮಾನವನ್ನು ಹರಾಜು ಹಾಕಿದ್ದಾರೆ.ಮಠದ ಘನತೆಯನ್ನು ಮಣ್ಣು ಪಾಲು ಮಾಡಿದ್ದಾರೆನ್ನುವಂತದ್ದು ಮಠದ ವಾದ.ಎಫ್ ಐ ಆರ್ ನಲ್ಲು ಇದನ್ನೇ ಉಲ್ಲೇಖಿಸಲಾಗಿದೆ.

ಆದರೆ ಇಲ್ಲಿ ಪ್ರಶ್ನೆ ಇರೋದು,ದಿ ಫೈಲ್ ವರದಿ ಮಾಡಿದ್ದು ಯಾವುದೇ ಊಹಾಪೋಹ-ಪುಕಾರು-ಗಾಳಿ ಸುದ್ದಿಯನ್ನಲ್ಲ.ಬಲವಾದ ಸಾಕ್ಷ್ಯಗಳನ್ನು ಇಟ್ಟುಕೊಂಡೇ ಅದನ್ನು ಉಲ್ಲೇಖಿಸಿಯೇ ಸುದ್ದಿ ಮಾಡಿದೆ.ಕೋರ್ಟ್ ಕೊಟ್ಟ ನಿರ್ದೇಶನಗಳ ವಾಸ್ತವತೆಗೆ ಭಂಗ ತರುವಂಥ ಸಣ್ಣ ಪ್ರಮಾದವನ್ನೂ ಮಾಡಿಲ್ಲ.ಪರಿಸ್ಥಿತಿ ಹೀಗಿದ್ದರೂ ಮಹಾಂತೇಶ್ ವಿರುದ್ಧ ಎಫ್ ಐ ಆರ್ ಹಾಕಲಾಗುತ್ತದೆ ಎಂದ್ರೆ ಇದು ಸತ್ಯದ ಧ್ವನಿಯೊಂದನ್ನು ಅಡಗಿಸುವ ಹುನ್ನಾರವಲ್ಲದೇ ಮತ್ತೇನು ಎಂದು ಪ್ರಶ್ನಿಸುತ್ತಾರೆ ಹಿರಿಯ ಪತ್ರಕರ್ತ ಹಾಗೂ ಜಿ.ಮಹಾಂತೇಶ್ ಅವರೊಂದಿಗೆ ಸಾಕಷ್ಟು ಮಾದ್ಯಮಗಳಲ್ಲಿ ಅವರ ಬಾಸ್ ಆಗಿ ಕೆಲಸ ಮಾಡಿದ ಅನಂತ ಚಿನಿವಾರ್.

ಹಿರಿಯ ಪತ್ರಕರ್ತ ಅನಂತ ಚಿನಿವಾರ್
ಹಿರಿಯ ಪತ್ರಕರ್ತ ಅನಂತ ಚಿನಿವಾರ್

ಮಠಮಾನ್ಯಗಳು ಏನೇ ಮಾಡಿದ್ರೂ ಅದನ್ನು ತುಟಿಬಿಚ್ಚದೆ  ಸಹಿಸಿಕೊಳ್ಳಬೇಕೆ..ಕೆಲವು ಅಪವಾದಗಳು ಸಾಮಾಜಿಕವಾಗಿ ಮಠದ ಬಗ್ಗೆ ಭಾವನೆ-ಪರಿಕಲ್ಪನೆಯನ್ನೇ ಹಾಳು ಮಾಡುವ ಅನರ್ಥವನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸುವುದೇ ತಪ್ಪಾ..?ಅದರಲ್ಲೂ ರಾಜ್ಯದಲ್ಲಿ ಇರುವ ಮಠಮಾನ್ಯಗಳಲ್ಲೇ ಒಂದಷ್ಟು ವೈಚಾರಿಕತೆ ಅಳವಡಿಸಿಕೊಂಡಿರುವ ಚಿತ್ರದುರ್ಗ ಮರುಘಾಮಠದ ಶ್ರೀಗಳು ಇಂತದ್ದೊಂದು ನಡೆ ಅನುಸರಿಸುತ್ತಾರೆಂದ್ರೆ ಅದು ಒಳ್ಳೆಯ ಬೆಳವಣಿಗೆಯಲ್ಲ ಎನ್ನುವುದು ಅನೇಕ ಹಿರಿಯ ಪತ್ರಕರ್ತರ ಬೇಸರ.

ಮಠಗಳ ಕರ್ಮಟತೆಯನ್ನು ನಿಷ್ಟೂರವಾಗಿ,ಗಟ್ಟಿಧ್ವನಿಯಲ್ಲಿ ವಿರೋಧಿಸುತ್ತಾ ಬಂದಿರುವ ಶ್ರೀ ಶಿವಮೂರ್ತಿ ಶರಣರು ಮಹಾಂತೇಶ್ ವಿರುದ್ಧ ದೂರು ಸಲ್ಲಿಸುವ ಹಿಂದಿದ್ದಾರೆನ್ನಲಾಗುತ್ತಿರುವುದು ಅವರನ್ನು ಬಹುವಾಗಿ ಮೆಚ್ಚುತ್ತಿದ್ದ ಅನೇಕ ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರಿಗೆ ಬಹುದೊಡ್ಡ ಶಾಕ್..ದಿ ಪೈಲ್ ವಿರುದ್ದ ಎಫ್ ಐ ಆರ್ ದಾಖಲಾಗಿರುವ ಕ್ರಮಕ್ಕೆ ರಾಜ್ಯಾದ್ಯಂತ ಪತ್ರಕರ್ತರ ಸಂಘಟನೆಗಳು,  ಹೋರಾಟಗಾರರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಫ್ಲಾಶ್ ನ್ಯೂಸ್ ಈ ಬಗ್ಗೆ ಮಹಾಂತೇಶ್ ಅವರನ್ನು ಸಂಪರ್ಕಿಸಿದಾಗ ಪೂರಕ ದಾಖಲೆಗಳನ್ನು ಮುಂದಿಟ್ಟುಕೊಂಡೇ,ಮುರುಘಾ ಮಠದ ವಿರುದ್ಧ ವರದಿ ಮಾಡಿದ್ದೇನೆ.ಆದರೆ ಸತ್ಯವನ್ನು ಪರಾಮರ್ಷಿಸಬೇಕಿದ್ದ  ಮಠ ಯಾಕೆ ಇಂತದ್ದೊಂದು ನಿರ್ದಾರ ಕೈಗೊಂಡಿತೋ ಗೊತ್ತಾಗ್ತಿಲ್ಲ. ಮಠದ ಈ ಕ್ರಮದ ವಿರುದ್ಧ ದಿಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಲಿಖಿತ ದೂರು ನೀಡಿದ್ದೇನೆ. ಪತ್ರಕರ್ತರ ಸಂಘಕ್ಕೂ ದೂರು ನೀಡುತ್ತೇನೆ ಎಂದು ತಿಳಿಸಿದ್ರು.

ಜನಾಧಿಕಾರ ಸಂಘರ್ಷ ಪರಿಷತ್ ನ ಆದರ್ಶ್ ಐಯ್ಯರ್
ಜನಾಧಿಕಾರ ಸಂಘರ್ಷ ಪರಿಷತ್ ನ ಆದರ್ಶ್ ಐಯ್ಯರ್

ಹಿರಿಯ ಪತ್ರಕರ್ತ ಸನತ್ ಕುಮಾರ ಬೆಳಗಲಿ ಅವರು ಚಿತ್ರದುರ್ಗದ ಮುರುಘಾಶರಣರ ನಡೆಯ ಬಗ್ಗೆ ದಿಗ್ಬ್ರಾಂತಿಯನ್ನೇ ವ್ಯಕ್ತಪಡಿಸಿದ್ದಾರೆ. ಗದ್ದರ್,ಮೇಧಾ ಪಾಟ್ಕರ್ ,ಸಾಯಿನಾಥ್ ರಂಥವರಿಗೆ ಪ್ರಶಸ್ತಿ ನೀಡಿ ಗೌರವಿಸಿರುವ ಮುರುಘಾ ಶರಣರು ಅವರಷ್ಟೇ ಬದ್ದತೆ ಹೊಂದಿದ ಮಹಾಂತೇಶ ಮೇಲೆ  ದೂರು ನೀಡಿಸಿರುವುದು ವಿಚಿತ್ರ.ಮಹಾಂತೇಶ ನನಗೆ ಕಳೆದ ಹದಿನೇಳು ವರ್ಷಗಳಿಂದ ಗೊತ್ತು. ಕೆಲ ಕಾಲ ವಾರ್ತಾಭಾರತಿ ಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು. ತುಂಬ ಪ್ರಾಮಾಣಿಕ ವರದಿಗಾರ. ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಇಂದಿನ ಮಾಧ್ಯಮಗಳ ನಡುವೆ ಮಹಾಂತೇಶರಂಥವರು ಸಿಗುವುದು ಅಪರೂಪ. ದಯವಿಟ್ಟು ಶ್ರೀಗಳು ದರ್ಜ್ ಮಾಡಿರುವ ಎಫ್.ಐ.ಆರ್ ನ್ನು ವಾಪಸ್ ಪಡೆಯಲಿ ಎಂದು ಮನವಿ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ
ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ

ಇನ್ನು ಪ್ರಗತಿಪರ ಚಿಂತಕ ಬಿ. ಶ್ರೀಪಾದ್ ಭಟ್, ಪತ್ರಕರ್ತ ಬಿ.ಮಹಾಂತೇಶ ಅವರ ಮೇಲೆ ದೂರು ದಾಖಲಿಸಿದ ಮುರುಘಾ ಶರಣರ ನಡೆ ಖಂಡನೀಯ ಮತ್ತು ಅಪಾಯಕಾರಿ ಮತ್ತು ಪ್ರಜಾಪ್ರಭುತ್ವ ವಿರೋದಿ. ವಿರಕ್ತ ಮಠದ ಶರಣರ ಈ ವರ್ತನೆ ಸನಾತನವಾದಿ, ಜಾತಿವಾದಿ, ಕರ್ಮಠರಾದ ಬ್ರಾಹ್ಮಣ ಮಠಗಳ ಜಾಡಿನಲ್ಲಿರುವುದು ಬಸವ ತತ್ತ್ವಕ್ಕೆ ವಿರೋದವಾಗಿದೆ.ಅನುಭವ ಮಂಟಪದ ಆತ್ಮವೇ ಸಮಾನತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದನ್ನುಮುರುಘಾ ಶರಣರು ಮರೆಯಬಾರದು. ಈ ಕೂಡಲೇ ದೂರನ್ನು ಹಿಂಪಡೆದುಕೊಂಡು ತಮ್ಮ ಗೌರವ ಉಳಿಕೊಳ್ಳಲಿ ಎಂದು  ಮನವಿ ಮಾಡಿದ್ದಾರೆ.ಜನಾಧಿಕಾರಿ ಸಂಘರ್ಷ ಪರಿಷತ್,ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಸಾಮಾಜಿಕ ಕಾರ್ಯಕರ್ತರು ಕೂಡ ಮಠದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಅದೇ ರೀತಿ ಶ್ರೀ ಮಠದ ನಡೆಯ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸಾಯಿದತ್ತಾ ಕೂಡ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಲೋಕಾಯುಕ್ತಕ್ಕೆ ಸಂಬಂಧಿಸಿದ ಅನೇಕ ಪ್ರಕರಣಗಳಲ್ಲಿ ಜಿ.ಮಹಾಂತೇಶ್ ವಸ್ತುನಿಷ್ಟ ವರದಿ ಮಾಡಿದ್ದನ್ನು  ನೋಡಿದ್ದೇನೆ..ಅಂಥವ್ರ ವಿರುದ್ಧ ಮಠ ಇಂತದ್ದೊಂದು ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂದ್ರೆ ಅದು ಕೊಡುವ ಸಾಮಾಜಿಕ ಸಂದೇಶವೇನು ಎನ್ನುವುದನ್ನುಪ್ರಶ್ನೆ ಮಾಡಬೇಕಿದೆ ಎಂದು ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಮಹಾಂತೇಶ್ ವಿರುದ್ದ ದಾಖಲಿಸಿರುವ ಎಫ್ ಐ ಆರ್ ವಾಪಸ್ ಪಡೆಯದೇ ಹೋದಲ್ಲಿ ನ್ಯಾಯಾಂಗ ನಿಂದನೆ ದೂರನ್ನು ಮಠದ ವಿರುದ್ಧ ನೀಡಬೇಕಾಗುತ್ತದೆ.ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಪತ್ರಿಕಾ ಸಂಘಟನೆಗಳು,ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.

Spread the love
Leave A Reply

Your email address will not be published.

Flash News