‘ರಾಬರ್ಟ್​’ ರಿಲೀಸ್​ಗೂ ಮುನ್ನ “ದಚ್ಚು” ಅಭಿಮಾನಿಗಳಿಗೆ 3 ದಿನ ಬ್ಯಾಕ್​ ಟು ಬ್ಯಾಕ್​ ಮನರಂಜನೆ…

0

ಬೆಂಗಳೂರು:ಚಾಲೆಂಜಿಂಗ್ ಸ್ಟಾರ್  ದರ್ಶನ್​ ಅಭಿನಯದ ‘ರಾಬರ್ಟ್​’ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದಕ್ಕೂ ಮುನ್ನವೇ ಅಭಿಮಾನಿಗಳಿಗೆ ಚಿತ್ರತಂಡದಿಂದ ಸರ್ಪ್ರೈಸ್​ ಸಿಗುತ್ತಿದೆ. ಏನದು? ಎನ್ನೂ ಕುತೂಹಲವಿದ್ದರೆ ಈ ಸ್ಟೋರಿ ಓದೆಲೇಬೇಕು.

ಡಿ ಬಾಸ್’​ ದರ್ಶನ್​ ಅವರ ’ರಾಬರ್ಟ್​’ ಸಿನಿಮಾ ಬಿಡುಗಡೆಗೂ ಮೊದಲೇ ಧೂಳೆಬ್ಬಿಸುತ್ತಿದೆ. ಟ್ರೇಲರ್​ ಸೂಪರ್ ಹಿಟ್​ ಆಗಿದೆ. ಹಾಡುಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ. ಇನ್ನೇನಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಗೆದ್ದು ಬೀಗುವುದೊಂದೇ ಬಾಕಿ. ಮಾ.11ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಆದರೆ ಅದಕ್ಕೂ ಮೊದಲೇ ಅಭಿಮಾನಿಗಳನ್ನು ಖುಷಿಪಡಿಸಲು ಚಿತ್ರತಂಡ ನಿರ್ಧರಿಸಿದೆ. ಮಾ.8ರಿಂದ ಮಾ.10ರವರೆಗೆ ವಿಶೇಷ ಮೇಕಿಂಗ್​ ವಿಡಿಯೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ‘ರಾಬರ್ಟ್​’ ಕೂಡ ಮುಂಚೂಣಿಯಲ್ಲಿದೆ. ದೊಡ್ಡ ಕ್ಯಾನ್ವಾಸ್​ನಲ್ಲಿ ಚಿತ್ರ ತಯಾರಾಗಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಗೌಡ ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಕಾಶಿಯಂತಹ ಲೊಕೇಷನ್​ಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಟ್ಟಾರೆಯಾಗಿ ಚಿತ್ರದ ತೆರೆಹಿಂದಿನ ಕೆಲಸ ಹೇಗಿತ್ತು ಎಂಬುದನ್ನು ಅಭಿಮಾನಿಗಳಿಗೆ ತಿಳಿಸುವ ಉದ್ದೇಶದಿಂದ ಮೇಕಿಂಗ್​ ವಿಡಿಯೋವನ್ನು ಚಿತ್ರತಂಡ ಹಂಚಿಕೊಳ್ಳಲಿದೆ.

ಮಾ.8ರಿಂದ ಚಿತ್ರ ಬಿಡುಗಡೆ ಆಗುವವರೆಗೆ ಪ್ರತಿದಿನ ಬೆಳಗ್ಗೆ 10.05ಕ್ಕೆ ಒಂದೊಂದು ಮೇಕಿಂಗ್​ ವಿಡಿಯೋ ರಿಲೀಸ್​ ಆಗಲಿದೆ.ಬಹುದಿನಗಳ ಬಳಿಕ ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಬೆಳ್ಳಿಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದರಿಂದ ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಗುರುವಾರವೇ (ಮಾ.11) ‘ರಾಬರ್ಟ್​’ ತೆರೆಕಾಣಲಿದೆ. ಅಂದು ರಜಾ ದಿನ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಲಿದ್ದಾರೆ. ಅದರ ಬೆನ್ನಲ್ಲೇ ವೀಕೆಂಡ್​ ದಿನಗಳು ಇರುವುದರಿಂದ ಚಿತ್ರಕ್ಕೆ ಹೆಚ್ಚಿನ ಲಾಭ ಆಗಲಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯುವ ನಿರೀಕ್ಷೆ ಇದೆ.

Spread the love
Leave A Reply

Your email address will not be published.

Flash News