ಮೊದಲ ವಾರವೇ ಬಿಗ್ ಬಾಸ್ ಮನೆಯಿಂದ ಹೊರಬಿದ್ದ “ರನ್‌ ರನ್‌… ಖ್ಯಾತಿಯ ಟಿಕ್ ಟಾಕ್ ಸುಂದರಿ ಧನುಶ್ರೀ..

0

ಬೆಂಗಳೂರು: ಹೀಗಾಗಬಾರದಿತ್ತು ಎಂದುಕೊಳ್ಳುತ್ತಿರುವವರೇ ಹೆಚ್ಚು,ಬಿಗ್ ಬಾಸ್ ಮನೆ ವಾತಾವರಣವನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಸ್ಪರ್ದಿಯೊಬ್ಬರನ್ನು ಹೊರಹಾಕಿರುವುದು ಬಿಗ್ ಬಾಸ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ವಾರವೇ ಮನೆಯಿಂದ ಹೊರಬಂದ ಆ ಅಭ್ಯರ್ಥಿ ಟಿಕ್ ಟಾಕ್ ಖ್ಯಾತಿಯ ಧನುಶ್ರೀ..

ಹೌದು….ಬಿಗ್‌  ಬಾಸ್  ಕನ್ನಡ ಸೀಸನ್​ 8’ರ ಮೊದಲ ವಾರದ ಎಲಿಮಿನೇಷನ್​ ಕೌತುಕಕ್ಕೆ ತೆರೆ ಬಿದ್ದಿದೆ. ಧನುಶ್ರೀ ಅವರು ದೊಡ್ಮನೆಯಿಂದ ಹೊರಬಿದ್ದಿದ್ದಾರೆ.  ಹದಿನೇಳು ಜನರಲ್ಲಿ ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಧನುಶ್ರೀ ಇದೀಗ ಮನೆಯಿಂದ ಹೊರನಡೆದಿದ್ದಾರೆ.

ಟ್ರೋಫಿ ಗೆಲ್ಲುವ ಕನಸು ಕಟ್ಟಿಕೊಂಡು ಬಿಗ್​ ಬಾಸ್​ ಮನೆಯೊಳಗೆ ಕಾಲಿಟ್ಟಿದ್ದ ಧನುಶ್ರೀ ಅವರಿಗೆ ತೀವ್ರ ನಿರಾಸೆ ಆಗಿದೆ.  ದುರಾದೃಷ್ಟವಶಾತ್ ಎಲಿಮಿನೇಟ್​ ಆಗಿದ್ದಾರೆ. ಈ ವಾರ ನಾಮಿನೇಟ್ ಆಗಿದ್ದ ಶುಭಾ ಪೂಂಜಾ ಮತ್ತು ವಿಶ್ವನಾಥ್​ ಶನಿವಾರವೇ ಸೇಫ್ ಆಗಿದ್ದರು. ನಿರ್ಮಲಾ ಚೆನ್ನಪ್ಪ, ರಘು ಮತ್ತು ಧನುಶ್ರೀಗೆ ಢವಢವ ಮುಂದುವರಿದಿತ್ತು. ಅಂತಿಮವಾಗಿ ಧನುಶ್ರೀ ಅವರಿಗೆ ಅದೃಷ್ಟ ಕೈಕೊಟ್ಟಿದೆ.

ಫೆ.28ರಂದು ಅದ್ದೂರಿಯಾಗಿ ಆರಂಭವಾದ ‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಶೋಗೆ 17 ಜನ ಸ್ಪರ್ಧಿಗಳು ಆಯ್ಕೆ ಆಗಿದ್ದರು. ಧನುಶ್ರೀ ಅವರ ಎಲಿಮಿನೇಷನ್​ ಬಳಿಕ ಈಗ 16 ಸ್ಪರ್ಧಿಗಳ ನಡುವೆ ಪೈಪೋಟಿ ಮುಂದುವರಿದಿದೆ. ಎರಡನೇ ವಾರವೂ ಶಮಂತ್​ ಬ್ರೋ ಗೌಡ ಕ್ಯಾಪ್ಟನ್​ ಆಗಿ ಮುಂದುವರಿದಿದ್ದಾರೆ. ಮನೆಯಿಂದ ಧನುಶ್ರೀ ಅವರನ್ನು ಇನ್ನುಳಿದ ಸ್ಪರ್ಧಿಗಳು ಭಾವುಕವಾಗಿ ಬೀಳ್ಕೊಟ್ಟಿದ್ದಾರೆ.

Spread the love
Leave A Reply

Your email address will not be published.

Flash News