“ಆಕೆ”ಯನ್ನು “ಸುದ್ದಿಮನೆ” ದಶಕಗಳವರೆಗೆ ಸಹಿಸಿಕೊಂಡಿದ್ದೇ “ಪವಾಡ”….ವೃತ್ತಿಬಾಂಧವರನ್ನೆಲ್ಲಾ “ಬಲಿ”ಪಡೆದಾಕೆಯೇ ಈಗ “ನಿರುದ್ಯೋಗಿ”… ಕಾಲಾಯ ತಸ್ಮೈ ನಮಃ..

0

ಬೆಂಗಳೂರು: ಸುದ್ದಿಮನೆಯ ಸಮಸ್ತರಲ್ಲಿ ಕ್ಷಮೆ ಯಾಚಿಸುತ್ತಾ.. ಪತ್ರಿಕಾ ಧರ್ಮದ ಪಾವಿತ್ರ್ಯ ಕಾಪಾಡಬೇಕಾದ ಬದ್ಧತೆ ಹಾಗೂ ಜವಾಬ್ದಾರಿಯಿಂದ ಈ ಒಂದು ಕಥೆಯನ್ನು ನಿಮ್ಮ ಮುಂದಿಡುವ ಧೈರ್ಯ ಮಾಡುತ್ತಿದ್ದೆ ಕನ್ನಡ ಫ್ಲಾಶ್ ನ್ಯೂಸ್….ಯಾರನ್ನೂ ಪ್ರಜ್ಞಾಪೂರ್ವಕವಾಗಿ ನೋಯಿಸುವ ಉದ್ದೇಶ ನಮ್ಮದಲ್ಲ..ಅದರ ಅಗತ್ಯವೂ ನಮಗಿಲ್ಲ..ನಮ್ಮದೇ ವೃತ್ತಿಯವರ ಲಜ್ಜೆಗೇಡಿತನವನ್ನು ಬಟಾಬಯಲುಗೊಳಿಸಿ ಅದರಿಂದ ವಿಕೃತ ಮನರಂಜನೆ ಪಡೆಯುವ-ಹಂಚುವ ವಿಕ್ಷಿಪ್ತತೆಯೂ ನಮ್ಮದಲ್ಲ..

ಆದ್ರೆ ಹೇಳದೇ ಹೋದ್ರೆ ಜಗತ್ತಿಗೆ ಗೊತ್ತಾಗಲೇಬೇಕಾದ ಸತ್ಯವೊಂದನ್ನು ಮುಚ್ಚಿಟ್ಟು ಸುದ್ದಿಮನೆಯ ನೈತಿಕತೆಗೆ ವಂಚನೆ ಮಾಡಿದಂತಾಗುತ್ತದಲ್ಲ ಎನ್ನೋ ಕಳವಳ ನಮ್ಮದು..ಹಾಗಾಗಿನೇ ಕನ್ನಡ ಫ್ಲಾಶ್ ನ್ಯೂಸ್ ತಂಡ ಸುದ್ದಿಮನೆಯ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ನಮ್ಮದೇ ವೃತ್ತಿಯ “ಆಕೆ”ಯ ವೃತ್ತಾಂತವನ್ನು ಎಳೆಎಳೆಯಾಗಿ ಬಿಡಿಸಿಡುವ ಕೆಲಸ ಮಾಡ್ತಿದೆ..

ಇದನ್ನು ಓದಿದ ಮೇಲೆ, ಹೌದು..! ಇಂಥಾ ಕಟು ಸತ್ಯ ಹೇಳುವ ಅವಶ್ಯಕತೆ ಸಧ್ಯದ ವಾತಾವರಣದಲ್ಲಿದೆ ಎಂದು ನೀವು ಒಪ್ಪಿಕೊಳ್ಳುತ್ತೀರಿ ಎಂಬ ಭಾವನೆ ನಮ್ಮದು

ಅಂದ್ಹಾಗೆ ಇದು ಕನ್ನಡ ಫ್ಲಾಶ್ ನ್ಯೂಸ್ ನ ನೇರ ಆಪಾದನೆಯಲ್ಲ.. “ಆಕೆ”ಯನ್ನು ತೀರಾ ಹತ್ತಿರದಿಂದ ಬಲ್ಲ..ಆಕೆಯೊಂದಿಗೆ ಕೆಲಸ ಮಾಡಿದ..ಆಕೆಯ ದೌರ್ಜನ್ಯಕ್ಕೆ ನಲುಗಿದ ಅದೆಷ್ಟೋ ವೃತ್ತಿಬಾಂಧವರ ನೋವು-ನಿಟ್ಟುಸಿರು-ಆಕ್ರೋಶದ ಅಭಿಪ್ರಾಯಗಳ ಕ್ರೋಢೀಕೃತ ಕಹಾನಿ..

“ಈ ಪತ್ರಕರ್ತೆ”  ಬಗ್ಗೆ ಸುದ್ದಿಮನೆಯಲ್ಲಿ ಸಾಕಷ್ಟು ರೋಚಕ ಕಥೆಗಳಿವೆ.ರಂಗೀನ್ ಕಹಾನಿಗಳಿವೆ..ಪರಮ ಅಸಹ್ಯ ಹುಟ್ಟಿಸುವಂಥ ಉಲ್ಲೇಖಗಳಿವೆ. ತಲೆಯಲ್ಲಿ ನಯಾಪೈಸೆ  ಜ್ಞಾನವಿಲ್ಲದಿದ್ದರೂ ತಾನೇ ಎಲ್ಲಾ..ತನ್ನನ್ನಿ ಬಿಟ್ಟರೆ ಬೇರೆನೂ ಇಲ್ಲ..ತಾನ್ ಮಾತ್ರ ಬುದ್ಧಿವಂತೆ..ತನ್ನ ಕೈಕೆಳಗೆ ಕೆಲಸ ಮಾಡೋರೆಲ್ಲಾ ಶತಮೂರ್ಖರೆಂದು ಭಾವಿಸುವ ಮಹಾನ್ ಮೂರ್ಖೆ “ಈಕೆ”ಯಂತೆ…

ಆದರೂ ತಾನು ಕೆಲಸ ಮಾಡುವ ಸಂಸ್ಥೆಗಳಲ್ಲಿನ ಮುಖ್ಯಸ್ಥರನ್ನು ಒಳಗಾಕಿಕೊಂಡು ಅವರಿಗೆ “ಬಕೆಟ್” ಹಿಡಿದೇ ತನ್ನ ಬುಡವನ್ನು ಭದ್ರಮಾಡಿಕೊಂಡಾಕೆ ಎನ್ನುವ ಮಾತಿದೆ.ನಿಷ್ಪಾಪಿ ಕಾರ್ಮಿಕ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಅವರನ್ನು ದಿಢೀರ್ ನಿರುದ್ಯೋಗಿಗಳನ್ನಾಗಿಸಿದಳೆನ್ನುವ ಆರೋಪವಿದೆಯೆಲ್ಲಾ ಅದು ಮಾತ್ರ ಘನಘೋರ..ಅಮಾನವೀಯ.

ಆದರೆ ಕಾಲಾಯ ತಸ್ಮೈ ನಮಃ ಎನ್ನುವ ಗಾಧೆಯಂತೆ ಆಕೆಯಿಂದ ಕೆಲಸ ಕಳೆದುಕೊಂಡ ನೊಂದವರ ಹಿಡಿಶಾಪ-ಕಣ್ಣೀರು-ನಿಟ್ಟುಸಿರು ನಿಷ್ಪ್ರಯೋಜಕವಾಗಲಿಲ್ಲವಂತೆ…ಅವರೆಲ್ಲರ ಶಾಪದ ಫಲವೇ ಇವತ್ತು ಎಲ್ಲೂ ಸಲ್ಲದವಳಾಗಿ ಸಂಸ್ಥೆಯಿಂದ ಹೊರದಬ್ಬಿಸಿಕೊಂಡು ಬಯಲಲ್ಲಿ ಒಂಟಿಯಾಗೋಗಿದ್ದಾಳಂತೆ..”ಆಕೆ”ಗಾದ ಶಾಸ್ತಿಗೆ “ಅಯ್ಯೋ ಪಾಪ..” ಎನ್ನುವ ಒಂದೇ ಒಂದು ಜೀವ ಇಲ್ಲ ಎಂದ್ರೆ ಆಕೆಯ ವ್ಯಕ್ತಿತ್ವ-ವೃತ್ತಿಪರತೆ ಎಂತದೆನ್ನೋದು ಅರ್ಥವಾಗುತ್ತದೆ ಎನ್ನುತ್ತಾರೆ ನೊಂದ ಪತ್ರಕರ್ತರು.

ಸಧ್ಯ ಪ್ರತಿಷ್ಟಿತ ಚಾನೆಲ್ ನಿಂದ ಹೊರಬಿದ್ದಿದ್ದಾಳೆನ್ನುವ “ಆಕೆ”ಯ ಹಿನ್ನಲೆ-ಇತಿಹಾಸ ಕೆದಕುವ ಒಂದಷ್ಟು ಪ್ರಯತ್ನವನ್ನು ಕನ್ನಡ ಫ್ಲಾಶ್ ನ್ಯೂಸ್ ಬಳಗ ಸಾಕಷ್ಟು ಮೂಲಗಳಿಂದ ಪಡೆದ ಮಾಹತಿ ಮೂಲಕ ಮಾಡಿದೆ.ಇದಕ್ಕಾಗಿ “ಆಕೆ” ವೃತ್ತಿ ಆರಂಭಿಸಿದ ದಿನಗಳಲ್ಲಿ ಆಕೆ ಜತೆಗೆ ಕೆಲಸ ಮಾಡಿದ ಒಂದಷ್ಟು ಸಹದ್ಯೋಗಿಗಳನ್ನು ಮಾತನಾಡಿಸಿದೆ..ಅವರಿಂದ ಒಂದಷ್ಟು ಮಾಹಿತಿ ಕಲೆ ಹಾಕಿದೆ.ನೀವು ನಂಬಲಿಕ್ಕಿಲ್ಲ..ಸಾಮಾನ್ಯವಾಗಿ ವ್ಯಕ್ತಿ ಎಷ್ಟೇ “ದುಷ್ಟ”ನಾಗಿ ದ್ದರೂ ಆತನ ಬಗ್ಗೆ ಶೇ.99ರಷ್ಟು ಅವಗುಣಗಳನ್ನು ಹೇಳಿದ್ಮೇಲೆ ಶೇಕಡಾ 5 ರಷ್ಟು ಒಳ್ಳೆಯ ಗುಣ ಹೇಳೋದನ್ನು ಕೇಳಿದ್ದೇವೆ.

ಆದ್ರೆ “ಈಕೆ” ಬಗ್ಗೆ ಕೇಳಿಬಂದ ಶೇಕಡಾ 100 ರಷ್ಟು ಅಭಿಪ್ರಾಯಗಳೂ ಆಕೆಯ ಅವಗುಣ-ದುಷ್ಟತನವನ್ನೇ ಸಾರಿ ಹೇಳುತ್ತಿದ್ದವು ಎಂದ್ರೆ “ಆಕೆ”ಯ ವ್ಯಕ್ತಿತ್ವ ಏನು ಎನ್ನೋದು ಅರ್ಥವಾಗುತ್ತದೆ..ಅಯ್ಯೋ ಆಕೆನಾ..ದರಿದ್ರ ಹೆಣ್ಣು…ಹೆಣ್ಣು ಎನ್ನೋದಕ್ಕಿಂತ ಹೆಮ್ಮಾರಿ..ಪತ್ರಿಕೋದ್ಯಮಕ್ಕೆ ಕಳಂಕ…ಬಕೆಟ್ ಹಿಡಿದೇ ಎಲ್ಲವನ್ನೂ ಗಿಟ್ಟಿಸಿಕೊಂಡಾಕೆ..ತಲೆಯಲ್ಲಿ ಎರಡಕ್ಷರ ಇಲ್ಲದಿದ್ದರೂ ತಾನೇ ಮಹಾನ್ ಬುದ್ದಿವಂತೆ ಎಂದು ಫೋಸ್ ಕೊಟ್ಕಂಡು ಮೀಟಿಂಗ್ ಗಳಲ್ಲಿ ಬಾಸ್ ಗಳಿಂದ ಶಹಬ್ಬಾಸ್ ಗಿರಿ ಪಡೆದಾಕೆ..ಎನ್ನುವುದು ಆಕೆ ಬಗ್ಗೆ ಇರುವ ಗಂಭೀರ ಆರೋಪ.

ಅಷ್ಟೇ ಅಲ್ಲ, ತನ್ನ ಸ್ಟೋರಿಗಳ ಬಗ್ಗೆ ಯಾರೇ ಕಾಮೆಂಟ್ ಮಾಡಿದ್ರೂ ಅವರನ್ನು ಕಿತ್ತೋದ್ ನನ್ಮಕ್ಕಳು..ನನ್ನ ಕೆಪಾಸಿಟಿ ಅವನಿಗೇನು ಗೊತ್ತು ಎಂದು ಹೇಳಿಕೊಳ್ತಾ,ಮ್ಯಾನೇಜ್ಮೆಂಟ್ ಲೆವಲ್ನಲ್ಲಿ ತಮ್ಮ ಚೀಫ್ ಗಳ ವಿರುದ್ಧವೇ ಷಡ್ಯಂತ್ರ ರೂಪಿಸಿದಾಕೆಯಂತೆ…ಆಕೆಯೊಂದಿಗೆ ಕೆಲಸ ಮಾಡಿದ್ದು ನಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ದಿನಗಳು ಎಂದು ಹೇಳಿದವ್ರೇ ಹೆಚ್ಚು..ತನಗಿಂತ ಬುದ್ಧಿವಂತರು,ತಿಳಿದವರು ತನ್ನ ಸುತ್ತ ಇದ್ದರೆ ಅವರನ್ನು ವ್ಯವಸ್ಥಿತವಾಗಿ ಬಲಿ ಹಾಕಲು ಷಡ್ಯಂತ್ರ ರೂಪಿಸೋದೇ ಇವಳಿಗೆ ಕೆಟ್ಟ ಖಯಾಲಿಯಾಗಿತ್ತಂತೆ.

ಆಶ್ಚರ್ಯ ಎಂದ್ರೆ ಆಕೆ ಆ ಪ್ರಯತ್ನದಲ್ಲಿ ಯಶಸ್ವಿಯೂ ಆಗೋಗ್ತಿದ್ಲು..ನಮ್ಮ ಕಣ್ಣೆದುರೇ ಆಕೆಯ ಕಾಟಕ್ಕೆ ಕೆಲಸ ಬಿಟ್ಟವರೆಷ್ಟೋ..ಈಕೆ ಚಿತಾವಣೆಯಿಂದ ಕೆಲಸ ಕಳೆದುಕೊಂಡವರೆಷ್ಟೋ ಲೆಕ್ಕಕ್ಕಿಲ್ಲ..ಆಕೆ ಬಗ್ಗೆ ಮಾತನಾಡಿದ್ರೆ ಹೇಸಿಗೆ ಮೇಲೆ ಕಲ್ಲಾಕಿ ಸಿಡಿಸಿಕೊಂಡಂತಾಗುತ್ತದೆ..ಒಳ್ಳೆಯ ಹೊತ್ತಲ್ಲಿ ಆ ಅಪಶಕುನದ ಬಗ್ಗೆ ಏಕೆ ಮಾತನಾಡೋಣ ಬಿಡಿ ಎಂದು ನೂರಾರು ಸಹದ್ಯೋಗಿಗಳು ಕೋಪ-ಆಕ್ರೋಶದಲ್ಲಿ ಮಾತನಾಡ್ತಾರೆಂದ್ರೆ ಇಡೀ ಪತ್ರಿಕೋದ್ಯಮಕ್ಕೆ ಕಳಂಕದಂತಿರುವ ಈಕೆಯನ್ನು ಅದ್ಹೇಗೆ ಸುದ್ದಿಮನೆ ಇಷ್ಟೊಂದು ವರ್ಷ ಸಹಿಸಿಕೊಳ್ತೋ..ಸಂಭಾಳಿಸ್ತೋ ಎನ್ನೋ ಆಶ್ಚರ್ಯ ಮೂಡುತ್ತದೆ.

“ಆಕೆ”ಯ ವೈಯುಕ್ತಿಕ ಬದುಕನ್ನು ವಿಶ್ಲೇಷಿಸುವ ಗೋಜಿಗೆ ನಾವು ಹೋಗೋದಿಲ್ಲ..ಅದು “ಆಕೆ”ಯ ತೀರಾ ವೈಯುಕ್ತಿಕ..ಏಕೆಂದ್ರೆ ಅದನ್ನು ಕೆದಕುತ್ತಾ ಹೋದ್ರೆ ಅದೊಂದು ದೊಡ್ಡ ಧಾರಾವಾಹಿಯಾಗುತ್ತದೆ.ಅಲ್ಲಿ ಬಂದೋಗುವ ವ್ಯಕ್ತಿತ್ವಗಳು.. ಅವು ನಿರ್ವಹಿಸಿದ ಪಾತ್ರಗಳದ್ದೂ ದೊಡ್ಡ ಕಥೆ..ಅದು ಗೌಪ್ಯವಾಗಿರುವ ಸಂಗತಿಯೇನಲ್ಲ..ಆಕೆಯೊಂದಿಗೆ ಕೆಲಸ ಮಾಡಿದ,ಆಕೆಯನ್ನು ಹತ್ತಿರದಿಂದ ಬಲ್ಲ ಅದೆಷ್ಟೋ ಪತ್ರಕರ್ತರಿಗೂ ಗೊತ್ತು.ಅದನ್ನು ಇನ್ನ್ನ್ಯಾವಾಗಲಾದ್ರೂ ಹೇಳಿದ್ರೆ ಆಯ್ತು ಬಿಡಿ..ಆ ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನದಲ್ಲಿ ಕನ್ನಡ ಫ್ಲಾಶ್ ನ್ಯೂಸ್ ನಿರತವಾಗಿದೆ…

ತಾನು ಕೆಲಸ ಮಾಡಿದ ಸಂಸ್ಥೆಗಳಲ್ಲೆಲ್ಲಾ ಒಂದಲ್ಲಾ ಒಂದು ಕ್ವಾಟ್ಲೆ..ಕೀಟಲೆ…ವಿವಾದ..ಅಕ್ರಮ..ಹಗರಣ..ಅಪವಾದ..ಕಳಂಕ.. ವೃತ್ತಿದ್ರೋಹದ ಕಾರಣಕ್ಕೆ ಹೊರದಬ್ಬಿಸಿಕೊಂಡಿದ್ದೇ ಹೆಚ್ಚಂತೆ..ಆದ್ರೆ ಅದು ಯಾರಿಗೂ ಗೊತ್ತಿಲ್ಲ ಎನ್ನುವಷ್ಟು ಸಾಚಾ-ಅಮಾಯಕಿಯಂತೆ ವೃತ್ತಿಪಾವಿತ್ರ್ಯತೆ- ನೈತಿಕತೆ-ಸಿದ್ಧಾಂತದ ಬಗ್ಗೆ ಪುಂಖಾನುಪುಂಕವಾಗಿ ಮಾತನಾಡುವುದನ್ನು ಕೇಳಿದ್ರೆ ಮೈಗೆಲ್ಲಾ ಖಾರ ಹಾಕಿದಂತಾಗುತ್ತದೆ ಎನ್ನುತ್ತಾರೆ ಆಕೆಯಿಂದ ನೊಂದ ನೂರಾರು ವೃತ್ತಿಬಾಂಧವರು.

ಕೆಲಸ ಕಳೆದುಕೊಂಡು ಮನೆಯಲ್ಲಿ ವೇಸ್ಟ್ ಬಾಡಿಯಾಗಿ ಬಿದ್ದಿದ್ದ ಈಕೆಯನ್ನು ಅದ್ಯಾವ ಮಹಾನುಭಾವ ಕನ್ನಡದ ಚಾನೆಲ್ ಗೆ ಸೇರಿಸಿಕೊಂಡನೋ ಗೊತ್ತಿಲ್ಲ..ಚಾನೆಲ್ ಗೆ ಕಾಲಿಟ್ಟ ಘಳಿಗೆಯಿಂದ್ಲೇ ಕೆಲಸ ಮಾಡುತ್ತಿದ್ದ ರಿಪೋರ್ಟಸ್ ಗಳ ವ್ಯವಸ್ಥೆಯನ್ನೆ ಹಾಳು ಮಾಡಿದ್ಳೆನ್ನುವ ಮಾತಿದೆ..ಇವಳ ಕಾಟಕ್ಕೆ ರಿಪೋರ್ಟಸ್ ಕಂಗಾಲಾಗಿ ಹೋಗಿದ್ರಂತೆ.ಒಳ್ಳೆಯ ಸ್ಟೋರಿಗಳನ್ನು ಮಾಡಿದಾಗ ಬೆನ್ತಟ್ಟಿ ಪ್ರೋತ್ಸಾಹಿಸುವ ಯೋಗ್ಯತೆ ಇಲ್ಲದ ಇವಳು ಒಂದ್ ಸ್ಟೋರಿ ಮಿಸ್ ಆದ್ರೂ ನೊಟೀಸ್ ಗಳನ್ನು ಸರ್ವ್ ಮಾಡಿಸಿ ಅವರ ಬಗ್ಗೆ ಮ್ಯಾನೇಜ್ಮೆಂಟ್ ಲೆವಲ್ನಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಳಂತೆ.. ಅದೇ  ಚಾನೆಲ್ ನ ತಲೆ ಮಾಸಿದ ಮುಖ್ಯಸ್ಥ ಕೂಡ ಆಕೆಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದನೆನ್ನುವ ಮಾತಿದೆ.

ಇವರಿಬ್ಬರ ಜುಗಲ್ ಬಂಧಿಯಿಂದ ತಿಂಗಳಿಗೊಬ್ಬರಂತೆ ರಿಪೋರ್ಟರ್ಸ್ ಕೆಲಸ ಕಳೆದುಕೊಳ್ಳಲಾರಂಭಿಸಿದ್ರು.ಅವರವರ ಬೀಟ್ ಗಳಲ್ಲಿ  ಸಮರ್ಥ ರಿಪೋರ್ಟ್ಸ್ ಎನಿಸಿಕೊಂಡ  ಆ ರಿಪೋರ್ಟರ್ಸ್ ಗಳನ್ನು ಕಾರಣ ನೀಡದೆ ನೊಟೀಸ್ ಸರ್ವ್ ಮಾಡಿಸಿ ಕೆಲಸದಿಂದ ತೆಗೆಸಿದಳೆನ್ನುವುದು ಸುದ್ದಿಜಗತ್ತಿನಲ್ಲಿರುವ ಮಾತು..ಆದ್ರೆ ಆಕೆಯಿಂದ ಸಂತ್ರಸ್ಥರಾದವರೆಲ್ಲರೂ ಒಳ್ಳೊಳ್ಳೆಯ ಹುದ್ದೆಗಳಲ್ಲೇ ಕೆಲಸ ಮಾಡುತ್ತಿದ್ದಾರೆ..ಅವರೆಲ್ಲಾ ಉದ್ಯೋಗಿಗಳಾಗಿದ್ದರೆ ಮಾಡಿದ ಪಾಪಕ್ಕೆ ಚಾನೆಲ್ ನಿಂದ ಹೊರದಬ್ಬಿಸಿಕೊಂಡ ಆಕೆ ಅಕ್ಷರಶಃ ನಿರುದ್ಯೋಗಿ…ಹೇಗಿದೆ ಕಾಲಚಕ್ರ ಎಂದು ಪ್ರಶ್ನಿಸ್ತಾರೆ ಆಕೆಯಿಂದ ಸಂತ್ರಸ್ಥರಾದ ವರದಿಗಾರರು..

ಆಕೆಯಿಂದ ಸಂತ್ರಸ್ಥರಾದ ನೂರಾರು ಪತ್ರಕರ್ತರು ಹೇಳುವ ಕಥೆಗಳನ್ನು ಕೇಳುತ್ತಾ ಹೋದ್ರೆ ಆಕೆಯ ವಿಕೃತಿ ಬಗ್ಗೆ ಆಕ್ರೋಶ ಮೂಡುವುದರ ಜತೆಗೆ ವಿಕ್ಷಿಪ್ತ ಮನಸ್ಥಿತಿ ಬಗ್ಗೆ ಅಸಹ್ಯ ಮೂಡುತ್ತದೆ..ರಣವಾಗಿ ಕೆಲಸ ಮಾಡುವ ಕೆಲಸಗಾರರನ್ನೆಲ್ಲಾ ತನ್ನ ಸ್ವಾರ್ಥಕ್ಕಾಗಿ ಟಾರ್ಗೆಟ್ ಮಾಡಿ ಮನೆಗೆ ಕಳುಹಿಸಿದ ಆಕೆ ಇಂದೇನಾಗಿದ್ದಾಳೆ..ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಹೊರಬಂದಿದ್ದಾಳೆ..

ಆಕೆ ಬೇರೆ ಕ್ಷೇತ್ರಗಳಲ್ಲಿ ಸತ್ಯವನ್ನು ಮರೆಮಾಚಿ ಕೆಲಸ ಪಡೆಯಬಹುದು..ಆದ್ರೆ ಮಾದ್ಯಮಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿಕೊಳ್ಳೋದು ಕಷ್ಟ..ಒಂದ್ವೇಳೆ ಆಕೆ ಬಗ್ಗೆ ಎಲ್ಲಾ ಗೊತ್ತಿದ್ದೂ  ಕೆಲಸ ಕೊಟ್ಟವರ ಪಾಡು..ಅಯ್ಯಯ್ಯೋ..ಎಂದಾಗುವುದಂತೂ ಸತ್ಯ..ಇದು ಕನ್ನಡ ಫ್ಲಾಶ್ ನ್ಯೂಸ್ ನುಡಿಯುತ್ತಿರುವ ಭವಿಷ್ಯ ಅಲ್ಲ,,ಬದಲಿಗೆ ಆಕೆಯ ದರ್ಪ-ದೌರ್ಜನ್ಯ-ದುರಂಹಕಾರ-ಸ್ವಾರ್ಥ-ಸರ್ವಾಧಿಕಾರಿತನಕ್ಕೆ ಅಕ್ಷರಶಃ ನಲುಗಿರುವ ಸಂತ್ರಸ್ಥರೆಲ್ಲರ ಒಕ್ಕೊರಲಿನ ಅನಿಸಿಕೆ..

Spread the love
Leave A Reply

Your email address will not be published.

Flash News