ಹಳ್ಳ ಹಿಡಿಯುತ್ತಿದೆಯೇ “ಸೆಕ್ಸ್ ಸೀಡಿ”ಯ ಎಸ್ ಐಟಿ ತನಿಖೆ..? “ಸಾಹುಕಾರ ಸಾಚಾನಾ..? -ಸೀಡಿ ಗ್ಯಾಂಗ್ ಮಾತ್ರ ಕ್ರಿಮಿನಲ್ಸಾ..? …ಸಾಹುಕಾರನ ಬೆನ್ನಿಗೆ ಸರ್ಕಾರ…! ಒತ್ತಡದಲ್ಲಿ ಪೊಲೀಸ್..ಸಮಾಧಿಯಾಗುತ್ತಾ ಸತ್ಯ.?ತನಿಖೆ ಬಗ್ಗೆ ಸಾರ್ವಜನಿಕರ ಅಪಸ್ವರ-ಆಕ್ಷೇಪ-ಶಂಕೆ..!?

0

ಬೆಂಗಳೂರು:ಸಾಹುಕಾರನ ಸೆಕ್ಸ್ ಸೀಡಿ ಪ್ರಕರಣದ ತನಿಖೆ ಅದ್ಹೇಕೋ ಒಂದೇ ಆಯಾಮದಲ್ಲಿ ಮುಂದುವರೆಯುತ್ತಿರುವಂತೆ ಕಾಣುತ್ತಿದೆ.ಕಣ್ಣು ಕಟ್ಟಿದ ಕುದುರೆ ಹೇಗೆ ಒಂದೇ ದಿಕ್ಕಿನಲ್ಲಿ ಮುನ್ನುಗ್ಗುತ್ತಿರುತ್ತದೋ ಹಾಗೆಯೇ ಎಸ್ ಐಟಿ ತನಿಖೆ ರಮೇಶ್ ಜಾರಕಿಹೊಳಿಯನ್ನು ನಿರಪರಾಧಿಯನ್ನಾಗಿಸುವ ಒಂದೇ ಉದ್ದೇಶದಲ್ಲಿ ಸಾಗುವಂತಿದೆ ಎನ್ನುವ ಆತಂಕವನ್ನು ರಾಜ್ಯದ ಜನತೆ ವ್ಯಕ್ತಪಡಿಸುತ್ತಿದೆ.

ರಮೇಶ್ ಜಾರಕಿಹೊಳಿ ಮಾಡಿದ್ದು ಸಾಚಾ ಕೆಲಸ,ಅಂಥಾ ಅಮಾಯಕ ನಾಯಕನನ್ನು ಸಿಕ್ಕಿಸುವ ಹುನ್ನಾರ ಯುವತಿ ಅಂಡ್ ಗ್ಯಾಂಗ್ ನಿಂದ ನಡೆಯಿತೆಂದು ಸಾಬೀತುಪಡಿಸುವ ಉದ್ದೇಶದಲ್ಲಿ ತನಿಖೆ ಸಾಗುತ್ತಿದೆ ಎನ್ನುವುದು ಪ್ರಕರಣವನ್ನು ಆರಂಭದಿಂದಲೂ ಗಮನಿಸುತ್ತಾ ಬಂದಿರುವ ಪ್ರತಿಯೋರ್ವನ  ನಿಷ್ಪಕ್ಷಪಾತದ ಅನಿಸಿಕೆ.

ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡುತ್ತಿದೆಯೇ ಎನ್ನುವ ಸಾರ್ವಜನಿಕನ ಅನಿಸಿಕೆಯಂತೆಯೇ ಪೊಲೀಸ್ ವ್ಯವಸ್ಥೆ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ.ಕೇವಲ ಸೀಡಿ ಮಾಡಿದವರ ಬೆನ್ನು ಬಿದ್ದಂತಿರುವ ಎಸ್ ಐಟಿ ರಮೇಶ್ ಜಾರಕಿಹೊಳಿ ಅವರ ತಪ್ಪನ್ನು ಅವಲೋಕಿಸುವಂಥ ಕೆಲಸವನ್ನೇ ಮಾಡುತ್ತಿಲ್ಲವೇ..?

ಎಸ್ ಐಟಿ ಮುಂದೆ ಕೊಟ್ಟ ಹೇಳಿಕೆಯನ್ನೇ ನಂಬಿಕೊಂಡು ಅದಕ್ಕೇ ಹೆಚ್ಚಿನ ಆಧ್ಯತೆ ಕೊಟ್ಟು ಕೆಲಸ ಮಾಡುತ್ತಿದೆ ಇಡೀ ಟೀಮ್.ಪೊಲೀಸ್ ಕಮಿಷನರ್ ಕಮಲ್ ಪಂಥ್ ಅವರನ್ನೊಳಗೊಂಡು ಇಡೀ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಬಿಟ್ಟು ಬೆಂಗಳೂರಿನ ಕಾನೂನು ಸುವ್ಯವಸ್ಥೆ ಬಗ್ಗೆ ತಲೆಕಡಿಸಿಕೊಂಡಂತೆ ಕಾಣುತ್ತಿಲ್ಲ ಎನ್ನುವುದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಅವರ ಗಂಭೀರ ಆರೋಪ.

ಸಿಡಿಯಲ್ಲಿರುವುದು ಪಕ್ಕಾ ರಮೇಶ್ ಜಾರಕಿಹೊಳಿ ಅವರೇ ಎನ್ನುವ ಸ್ಪಷ್ಟನೆಗೇನೆ ಪೊಲೀಸ್ರು-ಎಸ್ ಐಟಿ ಬಂದಂತೆ ಕಾಣುತ್ತಿಲ್ಲ.ಆ ಸತ್ಯ ಅವರಿಗೆ ಮನದಟ್ಟಾಗಿದ್ದಿದ್ದರೆ  ಜಾರಕಿಹೊಳಿ ವಿರುದ್ಧ ಕಾನೂನಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಷ್ಟೊತ್ತಿಗಾಗ್ಲೇ ಕಾರ್ಯಪ್ರವೃತ್ತವಾಗಬೇಕಿತ್ತು.

ರಮೇಶ್ ಜಾರಕಿಹೊಳಿ ಅವರನ್ನು ವಿಚಾರಣೆ-ತನಿಖೆ ಹೆಸರಲ್ಲಿ ಎಸ್ ಐಟಿ ಪರೆಡ್ ಮಾಡಿಸಬೇಕಿತ್ತು.ಯುವತಿಗೆ ಮಾಡಿರಬಹುದಾದ ವಂಚನೆ-ವಿಶ್ವಾಸದ್ರೋಹ-ಒಡ್ಡಿದ ಆಮಿಷ,ಪ್ರಲೋಭನೆ ಬಗ್ಗೆ ಡ್ರಿಲ್ ಮಾಡಿಸಬೇಕಿತ್ತು.?

ಆದ್ರೆ ಅದ್ಯಾವುದು ನಡೆಯುತ್ತಿಲ್ಲವೇ..? ಕೇವಲ ಸೀಡಿ ಮಾಡಿದ ಸಿಡಿಗೇಡಿಗಳನ್ನೇ ಕ್ರಿಮಿನಲ್ ಗಳೆಂದು ಡಿಸೈಡ್ ಮಾಡಿಕೊಂಡು ಆ ತಂಡದ ಬೆನ್ನತ್ತಿದ್ದಾರೆ.ಈ ಗ್ಯಾಂಗ್ ನ ಬೆನ್ನಿಗೆ ಬೀಳುವ ಮೂಲಕ “ಅಮಾಯಕ..!”ರಮೇಶ್ ಜಾರಕಿಹೊಳಿ ಅವರನ್ನು ವ್ಯವಸ್ಥಿತವಾಗಿ ಸಿಕ್ಕಿಸುವ ಪ್ರಯತ್ನವನ್ನು ಗ್ಯಾಂಗ್ ಮಾಡೀತೇ ಹೊರತು,ಇದರಲ್ಲಿ ಸಾಹುಕಾರನ ಪಾತ್ರವೇ ಇಲ್ಲ ಎನ್ನುವುದನ್ನು ಸಾರ್ವಜನಿಕ ಸತ್ಯವಾಗಿ ಸುವ ಕೆಲಸವನ್ನು ಎಸ್ ಐಟಿ ಮಾಡುತ್ತಿದ್ದಾರೆನ್ನುವುದು ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಯೋರ್ವರ ನೇರ ಆರೋಪ.

ಜನಾಧಿಕಾರ ಸಂಘರ್ಷ ಪರಿಷತ್ ದೂರು
ಜನಾಧಿಕಾರ ಸಂಘರ್ಷ ಪರಿಷತ್ ದೂರು

ಎಸ್ ಐಟಿ ಹಾಗೂ ಪೊಲೀಸ್ ಇಲಾಖೆ ನಡೆಸುತ್ತಿರುವ ತನಿಖೆಯ ಪಾರದರ್ಶಕತೆ ಬಗ್ಗೇನೆ ಸಾರ್ವಜನಿಕ ವಾಗಿ ಪ್ರಶ್ನೆಗಳು ಸೃಷ್ಟಿಯಾಗ್ತಿವೆ..?ತನಿಖೆ ಕಾನೂನುಬದ್ಧವಾಗಿ ನಡೆಯುತ್ತಲೇ ಇಲ್ಲ..ಪೊಲೀಸ್ರು ಸರ್ಕಾರದ ಒತ್ತಡಕ್ಕೆ ಮಣಿದು ಅದರ ಸಂಜ್ಞೆ ಮೇರೆಗೆ ಕುಣಿಯುತ್ತಿದ್ದಾರೆ.

ಯುವತಿಯನ್ನು ರಮೇಶ್ ಜಾರಕಿಹೊಳಿ ಅವರಿಂದ ವಂಚನೆಗೊಳಗಾದ ಸಂತ್ರಸ್ಥೆ ಎಂದು ಪರಿಗಣಿಸುವ ಸ್ಥಿತಿಯಲ್ಲೇ ಪೊಲೀಸರಿ ಲ್ಲ.. ಸೀಡಿ ಗ್ಯಾಂಗ್ ನಿಂದ ವಂಚನೆಗೊಳಗಾಗಿರುವುದು ರಮೇಶ್ ಜಾರಕಿಹೊಳಿ,ಹಾಗಾಗಿ ನಿಜವಾದ ಸಂತ್ರಸ್ಥ ಈ ಮಹಾನುಭಾವ ಎಂದು ಅವರ ಬಗ್ಗೆ ಸಾರ್ವಜನಿಕವಾಗಿ ಸಿಂಪಥಿ ಕ್ರಿಯೇಟ್ ಮಾಡ್ಲಿಕ್ಕೆ ಪೊಲೀಸ್ರು ಯತ್ನಿಸುತ್ತಿದ್ದಾರೆ.ಸೀಡಿ ಗ್ಯಾಂಗ್ ನಲ್ಲಿರುವವರನ್ನೇ  ಕ್ರಿಮಿನಲ್ಸ್ ಗಳೆಂದು ಪ್ರೂವ್ ಮಾಡಿ ಅಂತಿಮ ತನಿಖೆಯಲ್ಲಿ ರಮೇಶ್ ಜಾರಕಿಹೊಳಿ ಬಾಯಲ್ಲಿ ಬೆರಳಿಟ್ಟರೆ ಚೀಪಕ್ಕೆ ಬಾರದಷ್ಟು

ಜನಾಧಿಕಾರ ಸಂಘರ್ಷ ಪರಿಷತ್ ಸಂಚಾಲಕ ಆದರ್ಶ ಅಯ್ಯರ್
ಜನಾಧಿಕಾರ ಸಂಘರ್ಷ ಪರಿಷತ್ ಸಂಚಾಲಕ ಆದರ್ಶ ಅಯ್ಯರ್

ಅಮಾಯಕ-ನಿಷ್ಪಾಪಿ-ಮುಗ್ಧ ಎಂದು ಕ್ಲೀನ್ ಚಿಟ್ ನೀಡೊಕ್ಕೆ ಫ್ಲಾಟ್ ಫಾರ್ಮ್ ನ್ನು ಸಿದ್ಧಪಡಿಸಿ ಕೊಂಡಂತಿದೆ ಎಸ್ ಐಟಿ ಹಾಗೂ ಪೊಲೀಸ್..ಇಡೀ ಪ್ರಕರಣವನ್ನು ದುರ್ಬಲಗೊಳಿಸಿ ಅಂತಿಮವಾಗಿ ತಿಪ್ಪೆ ಸಾರಿಸುವ ಕೆಲಸ ನಡೆಯಲಿದೆ ಬಿಟ್ರೆ..ಇದರಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದು ನಿರೀಕ್ಷಿಸೋದೇ ಮೂರ್ಖತನ ಎನ್ನುವುದು ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್ ವಿವರಣೆ.

ಸೀಡಿಯಲ್ಲಿರುವ ಪರಮ ಅಸಹ್ಯಕರ ದೃಶ್ಯ ಹಾಗೂ ಸಂಭಾಷಣೆ ಗಮನಿಸಿದ್ರೆ ಎಂಥಾ ಮುಠ್ಠಾಳನಿಗೂ  ರಮೇಶ್ ಜಾರಕಿಹೊಳಿ ಸ್ವಯಂಪ್ರೇರಣೆಯಿಂದ ಕಾಮಕೇಳಿ-ರಾಸಲೀಲೆಯಲ್ಲಿ ಪಾಲ್ಗೊಂಡಿದ್ದಾರೆನ್ನುವ ಸತ್ಯ ಗೊತ್ತಾಗುತ್ತೆ.ನನ್ನನ್ನು ನನಗೆ ಗೊತ್ತಿಲ್ಲದೆ ಟ್ರ್ಯಾಪ್ ಮಾಡಲಾಗಿದೆ.ಯುವತಿ ಹಾಗೂ ಆಕೆಯ ಜತೆಗಿದ್ದ ವರ ತಂಡ ಬ್ಲ್ಯಾಕ್ ಮೇಲ್ ಮಾಡ್ತಿದೆ ಎಂದು ಈಗ ಎಸ್ ಐಟಿ ಮುಂದೆ ಅಮಾಯಕನಂತೆ ಹೇಳಿಕೆ ಕೊಡುತ್ತಿರುವುದು ಎಷ್ಟು ಸರಿ..

ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್
ಸಾಮಾಜಿಕ ಕಾರ್ಯಕರ್ತ ಎಸ್.ಭಾಸ್ಕರನ್

ಅದೆಲ್ಲಾ ಹೋಗಲಿ,ಸೀಡಿಯನ್ನು ಎಳೆ ಎಳೆಯಾಗಿ ನೋಡಿದ, ಅದರಲ್ಲಿರುವ ಅಸಹ್ಯಕರ ಸಂಭಾಷಣೆಯನ್ನು ಆಲಿಸಿದ( ನೆನಪಿರಲಿ ರಮೇಶ್ ಜಾರಕಿಹೊಳಿ,ಈ ರೀತಿ ಅಸಹ್ಯಕರವಾಗಿ ಮಾತನಾಡಿ ಸಿಕ್ಕಾಕಿಕೊಳ್ತಿರುವುದು ಇದೇ ಮೊದಲೇನಲ್ಲ..ಈ ಹಿಂದೆಯೂ ಮಹಿಳೆಯೋರ್ವಳ ಜತೆ ಕೊಳಕು ಕೊಳಕಾಗಿ ಮಾತನಾಡಿದ ಆಡಿಯೋ ವೈರಲ್ ಆಗಿತ್ತು) ಹೊರತಾಗ್ಯೂ ಎಸ್ ಐಟಿ ಹಾಗೂ ಪೊಲೀಸ್ರು ಜಾರಕಿಹೊಳಿ ಹೇಳ್ತಿರುವುದೇ ಸತ್ಯ ಎಂದು ಹೇಳಿಕೆ ದಾಖಲಿಸಿಕೊಳ್ತಿದ್ದಾರೆನ್ನುವುದು ಎಷ್ಟು ಸರಿ ಎನ್ನುವುದು ಸಾಮಾಜಿಕ ಹೋರಾಟಗಾರ ಹನುಮೇಗೌಡ ಅವರ ನೇರ ಪ್ರಶ್ನೆ.

ಹಾಗಾದ್ರೆ ಒಟ್ಟಾರೆ ಘಟನೆಯಲ್ಲಿ ಎಲ್ಲಾ ತಪ್ಪು-ಅಕ್ರಮ ನಡೆದಿರುವುದು ಯುವತಿ ಹಾಗೂ ಸೀಡಿ ಗ್ಯಾಂಗ್ ನಿಂದ ಮಾತ್ರನಾ..? ರಮೇಶ್ ಜಾರಕಿಹೊಳಿಯಿಂದ ಏನೂ ನಡೆದೇ ಇಲ್ಲವೇ? ಸಾರ್ವಜನಿಕವಾಗಿ ಎದ್ದಿರುವ ಈ ಪ್ರಶ್ನೆಗೆ ಎಸ್ ಐಟಿ ಹಾಗೂ ಪೊಲೀಸ್ರು ಉತ್ತರಿಸಲಿ ಸಾಕು..ಸಾಹುಕಾರನನ್ನು ರಕ್ಷಿಸುವ-ಅಮಾಯಕನೆಂದು ಪ್ರೂವ್ ಮಾಡುವ ಏಕೈಕ ಉದ್ದೇಶದಿಂದಷ್ಟೇ ನಡೆಯುತ್ತಿರುವ ತನಿಖೆ ಇದೆನ್ನುವ ಸಂದೇಶ ಪ್ರಕರಣದ ವಿಚಾರಣೆ ಹಳ್ಳ ಹಿಡಿಯುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕವಾಗಿ ರವಾನೆಯಾಗ್ತಿದೆ.ಹಾಗಂತ ಯುವತಿ ಮಾಡಿರೋದು ಸರಿ ಎನ್ನುವುದು ನಮ್ಮ ವಾದವಲ್ಲ,

ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್

ಆದ್ರೆ ಸಾಹುಕಾರನನ್ನು ಉಳಿಸುವ ಆತುರದಲ್ಲಿ ಆಕೆಗೆ ಆಗಿರುವ ಕಾನೂನಾತ್ಮಕ ಅನ್ಯಾಯಕ್ಕೂ ನ್ಯಾಯ ಸಿಗಬೇಕಲ್ಲವೇ? ನಿರ್ಭಯಾ ಆಕ್ಟ್ ಅಡಿಯಲ್ಲಿ ದೂರು ದಾಖಲಿಸುವ,ವೀಡಿಯೋ ಹೇಳಿಕೆಯನ್ನಾಧರಿಸಿ ಎಫ್ ಐಆರ್ ಲಾಡ್ಜ್ ಮಾಡುವ ಕೆಲಸವನ್ನಾದ್ರೂ ನಮ್ಮ ಕಾನೂನು ವ್ಯವಸ್ಥೆಗಳು ಮಾಡಬೇಕಿತ್ತಲ್ವಾ..?

ಸಾಮಾಜಿಕ ಹೋರಾಟಗಾರ ಹನುಮೇಗೌಡ
ಸಾಮಾಜಿಕ ಹೋರಾಟಗಾರ ಹನುಮೇಗೌಡ

ಅಷ್ಟನ್ನೇ ಮಾಡದ ನಮ್ಮ ವಿಚಾರಣಾ ಸಂಸ್ಥೆಗಳಿಂದ ಸ್ವಾಭಾವಿಕ ಹಾಗೂ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸ್ಲಿಕ್ಕಾಗುತ್ತಾ ಎನ್ನುವುದೇ ಸಾರ್ವಜನಿಕರ ಪ್ರಶ್ನೆ..ಈ ಕಾರಣಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್, ಡಿಸಿಪಿ ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಠಾಣಾಧಿಕಾರಿ ಮಾರುತಿ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ದೂರು ದಾಖಲಿಸಿದೆ.

ಒಂದಂತೂ ಸತ್ಯ,ಸೆಕ್ಸ್ ಸೀಡಿ ಪ್ರಕರಣದಲ್ಲಿ ಸರ್ಕಾರದ ಒತ್ತಡಕ್ಕೆ ಮಣಿದು ಪೊಲೀಸ್ ಹಾಗೂ ಎಸ್ ಐಟಿ ತನಿಖೆಗಳು ರಮೇಶ್ ಜಾರಕಿಹೊಳಿ ಅಮಾಯಕ,ಅವರನ್ನು ವ್ಯವಸ್ಥಿತವಾಗಿ ವಂಚಿಸಿ ಖೆಡ್ಡಾಕ್ಕೆ ಬೀಳಿಸಲಾಗಿದೆ.

ಸೀಡಿಯಲ್ಲಿರುವುದು ಅವರಲ್ಲವೇ ಅಲ್ಲ ಎಂದು ಪ್ರೂವ್ ಮಾಡುವುದರ ಜತೆಗೇ ಎಲ್ಲಾ ತಪ್ಪು ಸೀಡಿ ಗ್ಯಾಂಗ್ ಹಾಗೂ ಯುವತಿಯಿಂದ್ಲೇ ಆಗಿದೆ ಎನ್ನುವ ಫೈನಲ್ ಜಡ್ಜ್ ಮೆಂಟ್ ನೀಡಿದ್ದೇ ಆದಲ್ಲಿ ತನಿಖಾ ವ್ಯವಸ್ಥೆಗಳ ನೈತಿಕ ಅಧಃಪತನ,ಮಹಾ ದುರಂತದ ನಿರ್ಣಯವಾಗಲಿದೆ ಎಂದೇ ಸಾರ್ವಜನಿಕವಾಗಿ ವಿಶ್ಲೇಷಿಸಲಾಗುತ್ತಿದೆ.

ರಾಜಕಾರಣಿಗಳು-ಸರ್ಕಾರಗಳು ಇವತ್ತು ಇರುತ್ವೆ ನಾಳೆ ಹೋಗುತ್ವೆ..ಆದ್ರೆ ಜನರ ನಡುವಿದ್ದು ಸಾಮಾಜಿಕ ಹಾಗೂ ಸ್ವಾಭಾವಿಕ ನ್ಯಾಯ ಕೊಡ್ಬೇಕಾಗಿರು ವುದು ತನಿಖಾ ಸಂಸ್ಥೆಗಳು..ಅವೇ ಹಾದಿ ತಪ್ಪುವಂತಾದ್ರೆ ಅವುಗಳ ಬಗ್ಗೆ ಸಾರ್ವಜನಿಕರಿಗೆ ನಂಬಿಕೆ-ವಿಶ್ವಾಸ ಉಳಿಯುತ್ತಾ..ನೋ ಚಾನ್ಸ್..

Spread the love
Leave A Reply

Your email address will not be published.

Flash News