ಹಸಿವಿನ “ರಾಜಕಾರಣ” ಬೇಡ, ಹಸು ‘ರಾಜಕಾರಣ’ ಮಾಡೋಣ ಎಂದ ಶಾಸಕ ರಮೇಶ್ ಕುಮಾರ್..

0

ಬೆಂಗಳೂರು: ವಿಧಾನಸಭೆಯಲ್ಲಿ ಗುರುವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ರಮೇಶ್ ಕುಮಾರ್ ಗೋಹತ್ಯೆ ತಡೆ ಕಾಯ್ದೆ ಬಗ್ಗೆ ಟೀಕಿಸಿ, ಹೆಣ್ಣು ಹಸು ಕರು ಹಾಕಿದ್ರೆ ಒಂದೂವರೆ ವರ್ಷದಲ್ಲಿ ಆ ಹೆಣ್ಣು ಕರು ಲಾಭ ತರುತ್ತೆ. ಆದ್ರೆ ಹೋರಿ ಹುಟ್ಟಿದ್ರೆ ಖರ್ಚು ಯಾರು ಕೊಡ್ತಾರೆ‌ ನನಗೆ. ನೀವು ಪೂಜೆ ಮಾಡಿಕೊಳ್ಳಲು ನನ್ನ ಆಕ್ಷೇಪ ಇಲ್ಲ. ಆದರೆ ಇದು ಹಸುವಿನ‌ ರಾಜಕಾರಣ ಅಷ್ಟೇ. ಒಂದೊಂದು ಸಮುದಾಯದ ಆಹಾರ ಪದ್ಧತಿ ಒಂದೊಂದು ರೀತಿ ಇರುತ್ತೆ. ಊರುಗಳಲ್ಲಿ ದನ ಸತ್ತರೆ ಎತ್ತೋಕೆ ಯಾರು ಬರ್ತಾರೆ? ದನ ಸತ್ತರೆ ತೆರವುಗೊಳಿಸಲು ರಾಮ ಭಟ್ ಬರ್ತಾರಾ? ಯಾರನ್ನ ಊರಿಂದ ಹೊರಗೆ ಇಟ್ಟಿದ್ದೀರಿ ಅವರೇ ಬರಬೇಕು. ಪೂಜೆ ಮಾಡಲು ನೀವು, ಸತ್ತ ದನ ಎತ್ತಲು ಅವರಾ? ಇದ್ಯಾವ ನ್ಯಾಯ, ಯೋಚನೆ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಯಾವುದಾದ್ರೂ ಊರಲ್ಲಿ ಬೇರೆಯವರು ಮಲ ಹೊರ್ತಾರಾ? ಮಲ ಹೊರಲು ದಲಿತರು ಬಿಟ್ಟು ಬೇರೆಯವರು ಬರ್ತಾರಾ? ಅನುಪಯುಕ್ತ ಗಂಡು ಕರುಗಳ ಬಗ್ಗೆ ಸ್ಪಷ್ಟತೆ ಇರಬೇಕು. ಇಸ್ಲಾಮಿಕ್ ಜಗತ್ತಿನಲ್ಲಿ ಹಂದಿ ತಿನ್ನಲ್ಲ, ಕ್ರಿಶ್ಚಿಯನ್ ಜಗತ್ತಿನಲ್ಲಿ ಹಂದಿ ತಿಂತಾರೆ, ಬೀಫ್ ತಿಂತಾರೆ. ನಾವು ಬೀಫ್ ರಪ್ತು ಮಾಡಿದರೆ ಲಾಭ ಆಗುತ್ತಲ್ವಾ? ಕ್ರಾಸ್ ಬ್ರೀಡ್ ದನದಲ್ಲಿ ಹೋರಿ ಹುಟ್ಟಿದಾಗ ಏನ್ಮಾಡೋದು? ಹಸಿವಿನ‌ ರಾಜಕಾರಣ ಮಾಡೋಣ, ಹಸು ರಾಜಕಾರಣ ಬೇಡ ಎಂದು ಸಲಹೆ ನೀಡಿದರು

 

 

Spread the love
Leave A Reply

Your email address will not be published.

Flash News