ಐಪಿಎಲ್ ನಲ್ಲಿ “ಡೇಲ್ ಸ್ಟೇನ್” ನೆಚ್ಚಿನ ತಂಡ ಯಾವುದು ಗೊತ್ತಾ?

0

ಈ ಹಿಂದೆ ಐಪಿಎಲ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ, ಬಳಿಕ ಸ್ಪಷ್ಟನೆ ನೀಡಿದ್ದ ದಕ್ಷಿಣ ಆಫ್ರಿಕಾದ ಅನುಭವಿ ವೇಗಿ ಡೇಲ್ ಸ್ಟೇನ್‌ ಇದೀಗ ಅಭಿಮಾನಿಗಳೊಂದಿಗೆ ಟ್ವಿಟರ್‌ನಲ್ಲಿ ಪ್ರಶ್ನೋತ್ತರದ ವೇಳೆಯಲ್ಲಿ ತಮ್ಮ ನೆಚ್ಚಿನ ಐಪಿಎಲ್ ತಂಡ ಹಾಗೂ ನೆಚ್ಚಿನ ಆಟಗಾರ ಯಾರು ಎನ್ನುವ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಒಂದು ಕಾಲದಲ್ಲಿ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದ ಡೇಲ್‌ ಸ್ಟೇನ್‌ ಮಿಲಿಯನ್‌ ಡಾಲರ್ ಟೂರ್ನಿ ಎನಿಸಿಕೊಂಡಿರುವ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕನ್ ಚಾರ್ಜರ್ಸ್‌, ಸನ್‌ರೈಸರ್ಸ್ ಹೈದರಾಬಾದ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಆದರೆ ತಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವ ಪ್ರಶ್ನೆಗೆ ಚತುರತೆಯಿಂದ ಉತ್ತರ ನೀಡಿರುವ ಸ್ಟೇನ್‌ ಅದಕ್ಕೆ ಬೇಕಾದ ಸಮಜಾಯಿಷಿಯನ್ನು ನೀಡಿದ್ದಾರೆ.
ನಿಮ್ಮ ನೆಚ್ಚಿನ ಐಪಿಎಲ್ ತಂಡ ಯಾವುದು ಎನ್ನುವ ಪ್ರಶ್ನೆಗೆ ಸ್ಟೇನ್‌, ನನಗೆ ಎಲ್ಲಾ ತಂಡಗಳು ಇಷ್ಟವೇ. ಆದರೆ ಒಂದು ತಂಡವನ್ನು ಹೆಸರಿಸುವುದಾದರೆ ಅದು ಮುಂಬೈ ಇಂಡಿಯನ್ಸ್‌. ಯಾಕೆಂದರೆ ಮುಂಬೈ ಇಂಡಿಯನ್ಸ್‌ ಸಾಕಷ್ಟು ಸದೃಢವಾಗಿದೆ, ಇದರ ಜತೆಗೆ ಕ್ವಿಂಟನ್ ಡಿ ಕಾಕ್‌ ಮುಂಬೈ ತಂಡದಲ್ಲಿದ್ದು, ಆತ ನನ್ನ ನೆಚ್ಚಿನ ಆಟಗಾರ, ಆತನನ್ನು ನಾವು ಯಾವಾಗಲೂ ಬೆಂಬಲಿಸುತ್ತೇನೆ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ.

Spread the love
Leave A Reply

Your email address will not be published.

Flash News