ಕಲಬುರಗಿಯಲ್ಲಿ ‘ಯುವರತ್ನ’ ಪ್ರಮೋಷನ್ ಹೇಗಿತ್ತು ಗೊತ್ತಾ..?

0

ಯುವರತ್ನ ಚಲನಚಿತ್ರದ ಪ್ರಮೋಷನ್ ಗಾಗಿ ಕಲಬುರಗಿಗೆ ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಆಗಮಿಸಿದ್ದರು.. ಬೆಳಗ್ಗೆ 10 ಗಂಟೆಗೆ ಕಲಬುರಗಿ ಏರ್‌ಪೋಟ್೯ಗೆ ಬಂದಿದ್ದ ಪುನಿತ್‌ರನ್ನ ಅಭಿಮಾನಿಗಳು ಭವ್ಯವಾಗಿ ಸ್ವಾಗತ ಕೋರಿದರು. ನಂತರ ಕಾರಿನಲ್ಲಿ ಕಲಬುರಗಿ ನಗರದ ಶ್ರೀ ಶರಣಬಸವೇಶ್ವರ ದೇಗುಲಕ್ಕೆ ಆಗಮಿಸಿದ್ದಾರೆ.. ದೇವಸ್ಥಾನದ ಆವರಣದಲ್ಲಿ ಸಾವಿರಾರು ಅಭಿಮಾನಿಗಳು ಜೆಸಿಬಿ ಯಂತ್ರಗಳ ಮೂಲಕ ಗುಲಾಬಿ ಹೂವು ಹಾಕಿ ಭವ್ಯವಾಗಿ ಸ್ವಾಗತ ಕೋರಿದರು. ಪುನಿತ್‌ರನ್ನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸುಡು ಬಿಸಿಲನ್ನ ಲೆಕ್ಕಿಸದೇ ಕಿಕ್ಕಿರಿದು ತುಂಬಿದ್ದರು.. ಇನ್ನು ಇದೇ ವೇಳೆ ಮಾತನಾಡಿದ ಯುವರತ್ನ ಪುನಿತ್, ನಾನು ಚಿಕ್ಕವನಿದ್ದಾಗ ಅಪ್ಪಾಜಿ ಜೊತೆ ಕಲಬುರಗಿಗೆ ಆಗಮಿಸಿದ್ದೆ.. ಅದಾದ ನಂತರ ಮತ್ತೆ ಎರಡ್ಮೂರು ಸಲ ಬಂದಿದ್ದೆ ಎಂದರು.. ಇನ್ನೂ ಕೊರೊನಾ ಲಾಕ್‌ಡೌನ್ ನಂತರ ಮೊದಲ ಬಾರಿಗೆ ಪ್ರವಾಸ ಕೈಗೊಂಡು, ಯುವರತ್ನ ಚಿತ್ರದ ಪ್ರಮೋಟ್‌ಗಾಗಿ ಕಲಬುರಗಿಗೆ ಆಗಮಿಸಿದ್ದು ಅಂತಾ ಹೇಳಿ ಅಭಿಮಾನಿಗಳತ್ತ‌ ಕೈಬೀಸಿದರು.
ಇನ್ನೂ ಇಂದು ತಮ್ಮ ನೆಚ್ಚಿನ ನಟ ಪುನಿತ್ ರಾಜಕುಮಾರ್ ಕಲಬುರಗಿಗೆ ಆಗಮಿಸುತ್ತಾರೆಂಬ ಸುದ್ದಿ ಕೇಳಿ ಬೆಳಗ್ಗೆಯಿಂದಲೇ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು.. ಪುನಿತ್ ಜೊತೆ ಖ್ಯಾತ ನಟ ರವಿಶಂಕರ್ ಮತ್ತು ಯುವರತ್ನ ಚಿತ್ರದ ನಿರ್ದೇಶಕರು ಮತ್ತು ಇಡೀ ಚಿತ್ರತಂಡ ಪುನಿತ್ ಜೊತೆ ಆಗಮಿಸಿದ್ದರು.. ಇನ್ನೂ ಇದಕ್ಕೂ ಮುನ್ನ ಪುನಿತ್ ರಾಜಕುಮಾರ್, ಶ್ರೀ ಶರಣಬಸವೇಶ್ವರ ಗರ್ಭಗುಡಿಗೆ ತೆರಳಿ ವಿಶೇಷ ಪೂಜೆ ನೆರವೇರಿಸಿದರು.. ಅಲ್ಲದೆ ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದರು.‌ ನಂತರ ದಾಸೋಹ ಭವನಕ್ಕೆ ತೆರಳಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಬಸಪ್ಪ ಅಪ್ಪಾರ ಆಶಿರ್ವಾದ ಪಡೆದರು.. ಇದೇ ವೇಳೆ ಗೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಎಂಬ ಹಾಡಿಗೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಅಪ್ಪು ಅಪ್ಪು ಅಂತಾ ಜಯಘೋಷ ಹಾಕುತ್ತ ಕುಣಿದು ಕುಪ್ಪಳಿಸಿದರು. ಇನ್ನೂ ಮುಂದಿನ ದಿನಗಳಲ್ಲಿ ನನ್ನ ನಟನೆಯ ಕೆಲ ಚಿತ್ರಗಳ ಶೂಟಿಂಗ್‌ನ್ನ ಕಲಬುರಗಿ ಜಿಲ್ಲೆಯಲ್ಲಿ ಚಿತ್ರಿಕರಿಸಲಾಗುವುದು ಅಂತಾ ನಟ ಪುನಿತ್ ಹೇಳಿದರು. ಅಲ್ಲದೆ ಕೆಲವೇ ದಿನಗಳಲ್ಲಿ ಯುವರತ್ನ ಚಿತ್ರ ತೆರೆಯ ಮೇಲೆ ಬರಲಿದ್ದು, ಅಭಿಮಾನಿಗಳು ಚಿತ್ರ ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿಕೊಂಡರು.

Spread the love
Leave A Reply

Your email address will not be published.

Flash News