‘ಯುವರತ್ನ’ ನ ಭರ್ಜರಿ ಪ್ರಮೋಷನ್..!

0

ಸ್ಯಾಂಡಲ್ ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಏಪ್ರಿಲ್ 1 ರಂದು ಅದ್ದೂರಿಯಾಗಿ ಯುವರತ್ನ ತೆರೆಯ ಮೇಲೆ ಬರಲಿದ್ದಾನೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿಯೂ ಈ ಚಿತ್ರ ರಿಲೀಸ್ ಆಗುತ್ತಿದ್ದು, ಭರ್ಜರಿಯಾಗಿಯೇ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಖುದ್ದು ಪುನೀತ್ ರಾಜ್ ಕುಮಾರ್ ಅವರೇ ಯುವರತ್ನ ಪ್ರಮೋಷನ್ ಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ. ಮಾರ್ಚ್ 21 ರಂದು ಕಲುಬುರಗಿಯಲ್ಲಿ, ಮಾರ್ಚ್ 22 ರಂದು ಬಳ್ಳಾರಿಯಲ್ಲಿ ಯವರತ್ನ ಆಂಡ್ ಟೀಮ್ ಸಿನಿಮಾ ಪ್ರಚಾರಕ್ಕೆಂಉ ತೆರಳಿದ್ದರು, ಕಿಕ್ಕಿರಿದು ತುಂಬಿರುವ ಜನ, ಅಪ್ಪು ಅಪ್ಪು ಅಂತ ಜಯಘೋಷ ಮೊಳಗಿಸುತ್ತಿರೋ ಅಭಿನಮಾನಿಗಳನ್ನ ನೋಡಿ ಪುನೀತ್ ಫುಲ್ ಖುಷ್.
ಇತ್ತೀಚಿಗಷ್ಟೇ ತೆರೆಕಂಡ ‘ರಾಬರ್ಟ್’ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿತ್ತು. ರಾಬರ್ಟ್ ನ ಸಕ್ಸಸ್ ನಿಂದಾಗಿ ಕನ್ನಡ ಚಿತ್ರರಂಗದಲ್ಲಿ ಸಂಸದ ಮನೆಮಾಡಿದೆ. ಇನ್ಮುಂದೆ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ. ಅವುಗಳಲ್ಲಿ ‘ಯುವರತ್ನ ಕೂಡ ಒಂದು. ಈ ಚಿತ್ರದ ಬಿಡುಗಡೆಗೆ ಇನ್ನು ಕೆಲವೇ ಕೆಲವು ದಿನ ಬಾಕಿ ಇದ್ದು, ಸಿನಿಮಾದ ಪ್ರಮೋಷನ್ ಭರದಿಂದ ಸಾಗುತ್ತಿದೆ. ಪುನೀತ್ ರನ್ನು ನೋಡಲು ಜನ ಹಿಂಡು ಹಿಂಡಾಗಿ ಸೇರುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಸಹ ಮಾಸ್ಕ್ ಧರಿಸಿ, ಸೇಫ್ ಆಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಅಂತ ಅಭಿಮಾನಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇವೆಲ್ಲದರ ಮಧ್ಯೆ ಕೊರೊನಾ ತನ್ನ ಆಟ ಶುರುಮಾಡಿಕೊಂಡಿದೆ. ಯುವರತ್ನ ಚಿತ್ರತಂಡ ರಿಸ್ಕ್ ತಗೊಂಡು ಸಿನಿಮಾ ಪ್ರಮೋಷನ್ ಮಾಡ್ತಿದೆ. ಸರ್ಕಾರ ಸೆಮಿ ಲಾಕ್ ಡೌನ್ ಮಾಡುವ ಸಾಧ್ಯತೆ ಕೂಡ ಇದೆ. ಅಕಸ್ಮಾತ್ ಲಾಕ್ ಡೌನ್ ಜಾರಿಯಾದ್ರೆ ಥಿಯೇಟರ್ ಗಳಲ್ಲಿ ಶೇಕಡಾ 50 ರಷ್ಟು ಆಸನ ಭರ್ತಿ ಫಿಕ್ಸಾ? ಕೊರೊನಾ ಕೈಮೀರಿ ಹೋದ್ರೆ ಸಂಪೂರ್ಣ ಲಾಕ್ ಡೌನ್ ಆದ್ರೆ ಸಿನಿಮಾ ರಿಲೀಸ್ ಆಗೋದು ಡೌಟೇ ಅಲ್ವಾ?

Spread the love
Leave A Reply

Your email address will not be published.

Flash News