67 ನೇ ರಾಷ್ಟ್ರೀಯ ಪ್ರಶಸ್ತಿ‌: ಯಾವ್ಯಾವ ಪ್ರಶಸ್ತಿ ಯಾರ್ಯಾರ ಪಾಲಿಗೆ..?

0

ಕಲೆ ಮತ್ತು ಪ್ರತಿಭೆಗೆ ಯಾವುದೇ ಭಾಷೆಯ ಭೇದಭಾವವಿಲ್ಲ ಎಂಬಂತೆ ಈ ಬಾರಿಯ 67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಮವಾಗಿ ನೀಡಲಾಗಿದೆ. ಕೊರೊನಾ ಮಹಾಮಾರಿಯಿಂದಾಗಿ ಸುಮಾರು ಒಂದು ವರ್ಷ ವಿಳಂಬವಾಗಿದ್ದ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇದೀಗ ಘೋಷಣೆಯಾಗಿದ್ದು, ‘ಬೋಸ್ಲೆ’ ಚಿತ್ರದ ಅಭಿನಯಕ್ಕಾಗಿ ಬಾಲಿವುಡ್ ನಟ ವಾಜ್ ಪೇಯ್ ಹಾಗೂ ‘ಅಸುರನ್’ ಚಿತ್ರಕ್ಕಾಗಿ ತಮಿಳು ನಟ ಧನುಷ್ ಜಂಟಿಯಾಗಿ ಈ ಬಾರಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ಸದಾ ವಿವಾದಗಳಲ್ಲಿ ಮಿಂದೇಳುವ ಕಾಂಟ್ರೋವರ್ಸಿ ಹೀರೋಯಿನ್ ಕಂಗನಾ ರಣಾವತ್ ‘ಪಂಗಾ’ ಹಾಗೂ ‘ಮಣಿಕರ್ಣಿಕಾ’ ಚಿತ್ರದ ನಟನೆಯಿಂದ ಅತ್ಯತ್ತಮ ನಟಿ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದಾರೆ. ಹೀಗೆ ಅತ್ಯುತ್ತಮ ಛಾಯಾಗ್ರಹಣ ; ಜಲ್ಲಿಕಟ್ಟು(ಮಲಯಾಳಂ) ಅತ್ಯುತ್ತಮ ಹಿನ್ನೆಲೆ ಗಾಯಕಿ; ಬಾರ್ಡೋ(ಮರಾಠಿ), ಅತ್ಯುತ್ತಮ ಗಾಯಕ; ಕೇಸರಿ(ತೇರಿ ಮಿಟ್ಟಿ, ಹಿಂದಿ) ಅತ್ಯುತ್ತಮ ಪೋಷಕ ನಟ; ವಿಜಯ್ ಸೇತುಪತಿ (ಸೂಪರ್ ಡಿಲೆಕ್ಸ್) ಅತ್ಯುತ್ತಮ ನಿರ್ದೇಶಕ; ಬಹತ್ತರ್ ಹೊರಿಯನ್, ಅತ್ಯುತ್ತಮ ತುಳು ಚಿತ್ರ; ಪಿಂಗಾರಾ , ಅತ್ಯುತ್ತಮ ತೆಲಗು ಚಿತ್ರ; ಜರ್ಸಿ , ಅತ್ಯುತ್ತಮ ತಮಿಳು ಚಿತ್ರ; ಅಸುರನ್, ಅತ್ಯುತ್ತಮ ಮಲಯಾಳಂ ಚಿತ್ರ; ಕಳ್ಳ ನೋಟಂ, ಅತ್ಯುತ್ತಮ ಕೊಂಕಣಿ ಚಿತ್ರ; ಕಾಜ್ರೋ, ಅತ್ಯುತ್ತಮ ಹಿಂದಿ ಚಿತ್ರ; ಚಿಚೋರೆ . ಇವೆಲ್ಲದರ ಮಧ್ಯೆ ಕನ್ನಡಕ್ಕೂ ಒಳ್ಳೆಯ ಮಾನ್ಯತೆ ಸಿಕ್ಕಿರುವುದು ಹೆಮ್ಮೆಯ ಸಂಗತಿ. ಕನ್ನಡದ ‘ಅವನೇ ಶ್ರೀಮನ್ನಾರಾಯಣ ಚಿತ್ರದ ಸಾಹಸ ನಿರ್ದೇಶನಕ್ಕೆ ಪುರಸ್ಕಾರ ಸಿಕ್ಕಿದೆ. ಮತ್ತು ‘ಅಕ್ಷಿ’ ಕನ್ನಡದ ಅತ್ಯತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

Spread the love
Leave A Reply

Your email address will not be published.

Flash News