ನ್ಯೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ “ಆರ್.ಸಿ.ಬಿ”.. ಈ ಸಲ ಕಪ್ ನಮ್ದೇ..

0

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14 ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಅದರ ಬೆನ್ನಲ್ಲೇ ಎಲ್ಲಾ ತಂಡಗಳ ಫ್ರಾಂಚೈಸಿಗಳು ಹೊಸ ಸೀಸನ್​ಗಾಗಿ ಸಿದ್ಧತೆಗಳು ಆರಂಭಿಸಿದೆ. ಅದರ ಮೊದಲ ಹೆಜ್ಜೆ ಎನ್ನುವಂತೆ ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ತಮ್ಮ ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎಂದು ತಿಳಿದು ಬಂದಿದೆ. ಆರ್​ಸಿಬಿ ಈ ಬಾರಿ ಹೊಸ ಪ್ರಾಯೋಜಕತ್ವವನ್ನು ಹೊಂದಿದ್ದು, ಅದರಂತೆ ಜೆರ್ಸಿ ವಿನ್ಯಾಸ ಕೂಡ ಬದಲಾಗಲಿದೆ ಎಂದು ಹೇಳಲಾಗಿದೆ.
ಈ ಸುದ್ದಿ ಬೆನ್ನಲ್ಲೇ ಆರ್​ಸಿಬಿ ತಂಡದ ನೂತನ ಜೆರ್ಸಿಯ ಕೆಲ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಆರ್​ಸಿಬಿ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲಕಳೆದ ವರ್ಷ ಹೊಸ ವಿನ್ಯಾಸದ ಜೆರ್ಸಿ ಧರಿಸಿ ಕಣಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕೂಡ ಹೊಸ ವಿನ್ಯಾಸದ ಸಮವಸ್ತ್ರದಲ್ಲಿ ಮೈದಾನಕ್ಕಿಳಿಯುವುದು ಖಚಿತವಾಗಿದೆ.
ಅದರಂತೆ ಆರ್​ಸಿಬಿ ತಂಡದ ನೂತನ ಜೆರ್ಸಿಯನ್ನು ಏಪ್ರಿಲ್ ಮೊದಲ ವಾರದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಲಿದೆ ಎಂದು ತಿಳಿದು ಬಂದಿದೆ.
ಐಪಿಎಲ್​ 2021ರ ಆರ್​ಸಿಬಿ ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಫಿನ್ ಅಲೆನ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ಆಡಂ ಝಂಪಾ, ಕೇನ್ ರಿಚರ್ಡ್ಸನ್, ಗ್ಲೆನ್ ಮ್ಯಾಕ್ಸ್ ವೆಲ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್.

Spread the love
Leave A Reply

Your email address will not be published.

Flash News