ವಿವೋ ಐಪಿಎಲ್ 2021 ಗೆ ಅಧಿಕೃತವಾಗಿ ಜೊತೆಯಾದ ಟಾಟಾ ಸಫಾರಿ..

0

14ನೇ ಆವೃತ್ತಿಯ ಐಪಿಎಲ್‌ಗೆ ದಿನಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ (ಬಿಸಿಸಿಐ) ಸತತ ನಾಲ್ಕನೇ ವರ್ಷವೂ ತನ್ನ ಒಡನಾಟವನ್ನು ಮುಂದುವರೆಸಿದ ಟಾಟಾ ಮೋಟಾರ್ಸ್, ತನ್ನ ಪ್ರಮುಖ ಎಎಸ್‌ಯುವಿ ಹೊಸ ಟಾಟಾ ಸಫಾರಿ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ರ ಅಧಿಕೃತ ಪಾಲುದಾರನಾಗಲಿದೆ ಎಂದು ಪ್ರಕಟಿಸಿದೆ.
ಈ ಬಾರಿಯ ಐಪಿಎಲ್ ಆವೃತ್ತಿ ಭಾರತಕ್ಕೆ ಮರಳುತ್ತಿದ್ದಂತೆಯೇ ಟಾಟಾ ಕಂಪನಿ ತನ್ನ ಇತ್ತೀಚಿನ ಐಕಾನಿಕ್ ಬ್ರ್ಯಾಂಡ್ ಟಾಟಾ ಸಫಾರಿಯನ್ನು ಪ್ರಚಾರಪಡಿಸಲು ವೇದಿಕೆಯನ್ನು ಬಳಸಲು ನಿರ್ಧಾರಿಸಿದೆ. ಹೀಗಾಗಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಟಾಟಾ ಸಫಾರಿ ಅಧಿಕೃತ ಪಾಲುದಾರಿಕೆಯನ್ನು ಪಡೆದುಕೊಂಡಿದೆ.
ಐಪಿಎಲ್‌ನ 14ನೇ ಆವೃತ್ತಿ ಏಪ್ರಿಲ್ 9 ರಿಂದ ಚೆನ್ನೈನಲ್ಲಿ ಚಾಲನೆ ಪಡೆಯಲಿದೆ.ಬೆಂಗಳೂರು, ಚೆನ್ನೈ, ಡೆಲ್ಲಿ, ಕೊಲ್ಕತ್ತಾ, ಮುಂಬೈ ಹಾಗೂ ಅಹ್ಮದಾಬಾದ್‌ನಲ್ಲಿ ಪಂದ್ಯಗಳು ನಡೆಯಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜನೆಯಾಗಲಿದೆ.
ಈ ಹಿಂದೆನ ಆವೃತ್ತಿಯಂತೆಯೇ ಟಾಟಾ ಮೋಟಾರ್ಸ್ ತನ್ನ ಹೊಸ ಮಾದರಿಯ ಸಫಾರಿ ವಾಹನವನ್ನು ಆಡುವ ಎಲ್ಲಾ ಮೈದಾನಗಳಲ್ಲಿಯೂ ಪ್ರದರ್ಶನ ಮಾಡಲಿದೆ. ಬೆಂಗಳೂರು, ಚೆನ್ನೈ, ಡೆಲ್ಲಿ, ಕೊಲ್ಕತ್ತಾ, ಮುಂಬೈ ಹಾಗೂ ಅಹ್ಮದಾಬಾದ್‌ನಲ್ಲಿ ವಾಹನವನ್ನು ಪ್ರದರ್ಶನಗೊಳಿಸಲಾಗುತ್ತದೆ.
ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವೆ ಏಕದಿನ ಸರಣಿ ನಡೆಯುತ್ತಿದ್ದು ಮೂರು ಪಂದ್ಯಗಳ ಈ ಸರಣಿ ಮಾರ್ಚ್ 28ಕ್ಕೆ ಅಂತ್ಯವಾಗಲಿದೆ. ಬಳಿಕ 11 ದಿನಗಳ ವಿರಾಮವಿದ್ದು ಆದ ನಂತರ ಆಟಗಾರರು ವಿಶ್ವದ ಬೃಹತ್ ಕ್ರಿಕೆಟ್ ಲೀಗ್‌ ಪಂದ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ

Spread the love
Leave A Reply

Your email address will not be published.

Flash News