ಟೀಂ ಇಂಡಿಯಾದಲ್ಲಿ ಕನ್ನಡಿಗನ ಕಮಾಲ್.. ಪ್ರಸಿದ್ಧ್ ಕೃಷ್ಣ ಸಖತ್ ಬೌಲಿಂಗ್

0

ಕಳೆದ ಬಾರಿಯ ಆಸ್ಟ್ರೇಲಿಯಾ ಪ್ರವಾಸದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಆಟಗಾರರಾದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಚೊಚ್ಚಲ ಪಂದ್ಯ ಆಡಿದರು.ಅಂದಿನಿಂದ ಇಂದಿನವರೆಗು, ಅಂದರೆ ಮಾರ್ಚ್ 23 ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದವರೆಗೆ ಅನೇಕ ಆಟಗಾರರು ಭಾರತೀಯ ತಂಡದಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಅವರೆಲ್ಲರಲ್ಲೂ ಒಂದು ವಿಷಯ ಬಹಳ ವಿಶೇಷವಾಗಿದೆ. ಅದೆನೆಂದರೆ, ಅದು ಅವರ ಕಾರ್ಯಕ್ಷಮತೆಯಾಗಿದೆ. ಸಿರಾಜ್-ಶುಬ್ಮನ್ ಅಥವಾ ಟಿ ನಟರಾಜನ್-ವಾಷಿಂಗ್ಟನ್ ಸುಂದರ್ ಅಥವಾ ಅಕ್ಷರ್ ಪಟೇಲ್-ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಯಾರೇ ಇರಲಿ, ಈ ಎಲ್ಲ ಆಟಗಾರರು ತಮ್ಮ ಚೊಚ್ಚಲ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಅನೇಕ ವಿಜಯಗಳನ್ನು ನೀಡಿದರು. ಈಗ ಕನ್ನಡಿಗ ಪ್ರಸಿದ್ಧ್ ಕೃಷ್ಣ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಕರ್ನಾಟಕ ವೇಗದ ಬೌಲರ್ ಚೊಚ್ಚಲ ಪಂದ್ಯದಲ್ಲೇ ದಾಖಲೆಯನ್ನು ಮಾಡಿದ್ದು, ಟೀಂ ಇಂಡಿಯಾದ ಗೆಲುವಿಗೆ ನೆರವಾಗಿದ್ದಾರೆ.ಮಾರ್ಚ್ 23 ರ ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಇಂಗ್ಲೆಂಡ್ ತಂಡವನ್ನು 66 ರನ್‌ಗಳಿಂದ ಸೋಲಿಸಿತು. ಟೀಮ್

ಇಂಡಿಯಾದ ಈ ಗೆಲುವಿಗೆ ಅನೇಕ ಆಟಗಾರರು ಕೊಡುಗೆ ನೀಡಿದ್ದರು, ಆದರೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ಇದು ವಿಶೇಷ ಪಂದ್ಯಾವಳಿಯಾಗಿದೆ. ಇಂಗ್ಲಿಷ್ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ನೀಡಲು ತನ್ನ ಉದ್ದ ಮತ್ತು ವೇಗದ ಲಾಭವನ್ನು ಪಡೆದುಕೊಳ್ಳಲು 25 ವರ್ಷದ ವೇಗದ ಬೌಲರ್‌ನನ್ನು ಟೀಮ್ ಇಂಡಿಯಾದಲ್ಲಿ ಸೇರಿಸಿಕೊಳ್ಳಲಾಯಿತು. ಇದನ್ನು ಸದುಪಯೋಗ ಮಾಡಿಕೊಂಡ ಪ್ರಸಿದ್ಧ್ ಚೊಚ್ಚಲ ಪಂದ್ಯದಲ್ಲೇ 4 ವಿಕೆಟ್​ ಪಡೆದು ಮಿಂಚಿದರು.

Spread the love
Leave A Reply

Your email address will not be published.

Flash News