ಪ್ರಯಾಣಿಕರ ಗಮನಕ್ಕೆ: ಮಾರ್ಚ್ 26 ರಿಂದ ಮೆಜೆಸ್ಟಿಕ್ to ಮೈಸೂರ್ ರೋಡ್ ಮೆಟ್ರೊ ಸಂಚಾರ ಪುನರಾರಂಭ

0

ಬೆಂಗಳೂರು : ನಮ್ಮ ಮೆಟ್ರೋದ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್ ನಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಮಾರ್ಚ್ 26 ರಿಂದಲೇ ರೈಲು ಸಂಚಾರ ಪುನಾರಂಭವಾಗಲಿದೆ.
ಮೈಸೂರು ರಸ್ತೆಯಿಂದ ಕೆಂಗೇರಿಯವರೆಗೆ ಪರೀಕ್ಷಾರ್ಥ ರೈಲು ಸಂಚಾರ ನಡೆಸಲಾಗುತ್ತಿದ್ದು, ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆ ಮಾರ್ಪಾಡು ಮಾಡುವ ಕಾಮಗಾರಿ ಹಿನ್ನೆಲೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. . ಈ ಹಿನ್ನೆಲೆಯಲ್ಲಿ ಮಾರ್ಚ್ 21 ರಿಂದ 28 ರವರೆಗೆ ನಾಡಪ್ರಭು ಕೆಂಪೇಗೌಡ ರೈಲು ನಿಲ್ದಾಣದಿಂದ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದವರೆಗೆ ರೈಲು ಸಂಚಾರ ಬಂದ್ ಆಗಿರಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿತ್ತು.

ಇದೀಗ ನಿಗಧಿತ ಅವಧಿಗಿಂತ ಮೊದಲೇ ಕಾಮಗಾರಿ ಪೂರ್ಣಗೊಳ್ಳುವುದರಿಂದ ಮಾರ್ಚ್ 26 ರ ಬೆಳಗ್ಗೆ 7 ರಿಂದಲೇ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಮಾ 25 ರವರೆಗೆ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್ ನಿಂದ ಬೈಯಪ್ಪನಹಳ್ಳಿ ನಿಲ್ದಾಣದ ನಡುವೆ ಮಾತ್ರ ಮೆಟ್ರೋ ರೈಲು ಸಂಚರಿಸಲಿದೆ.

Spread the love
Leave A Reply

Your email address will not be published.

Flash News