ಕೊವಿಡ್ “ಯುದ್ಧಭೂಮಿ”ಯಲ್ಲಿ ಮಡಿದ ಬಿಬಿಎಂಪಿ 20  “ಯೋಧ”ರಿಗಿನ್ನೂ ಸಿಕ್ಕಿಲ್ಲ ಪರಿಹಾರ: ಚಪ್ಪಲಿ ಸವೆಸಿ ಸುಸ್ತಾದ ಸಂತ್ರಸ್ಥ ಕುಟುಂಬಗಳು…

0

ಬೆಂಗಳೂರು: ನಾಚಿಕೆಯಾಗಬೇಕು ಕಣ್ರಿ..ನಮ್ಮ ಸರ್ಕಾರ ಹಾಗೂ ಬಿಬಿಎಂಪಿಗೆ… ಮಹಾಮಾರಿ ಕೊರೋನಾ ವಕ್ಕರಿಸಿ ನಿಷ್ಪಾಪಿಗಳ ಜೀವ ಬಲಿಪಡೆಯಲು ಶುರುಮಾಡಿ ವರ್ಷವಾಗಿದೆ.ಕೊರೋನಾ ವಿರುದ್ಧ ಜೀವ ಹಂಗು ತೊರೆದು ಕೆಲಸ ಮಾಡುತ್ತಿರುವವರು ಅದೆಷ್ಟೋ ಜನ. ಅವರನ್ನೆಲ್ಲಾ ಕೊರೋನಾಯೋಧರೆಂದು ಹಾಡಿ ಹೊಗಳಿದೆ ಸರ್ಕಾರ.ಅಷ್ಟೇ ಅಲ್ಲ,

ಕೊರೋನಾ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ್ರೆ 30 ಲಕ್ಷ ಪರಿಹಾರ ನೀಡ್ತೀನಂತನೂ ಹೇಳಿತ್ತು.ಆದ್ರೆ ಹಾಗೆ ಕೊರೊನಾ ಯುದ್ದ ಭೂಮಿಯಲ್ಲಿ ಮಡಿದ 20 ಯೋಧರನ್ನು ಬಿಬಿಎಂಪಿ ಮರೆತೇ ಬಿಟ್ಟಿದೆ.ಅವರಿಗೆ ನೀಡಬೇಕಿದ್ದ 30 ಲಕ್ಷ ಪರಿಹಾರ ಈವರೆಗೂ ಸಿಕ್ಕಿಲ್ಲ.ಅಂದ್ಹಾಗೆ ಇಂತದ್ದೊಂದು ಸ್ಪೋಟಕ ಮಾಹಿತಿ ನೀಡಿರೋದು ಅದೇ ಬಿಬಿಎಂಪಿ.

ಕೊವಿಡ್ ಕರ್ತವ್ಯದ ವೇಳೆ ಸಾವನ್ನಪ್ಪಿದ ಬಿಬಿಎಂಪಿ 20 ನೌಕರ ಸಿಬ್ಬಂದಿ ವಿವರ
ಕೊವಿಡ್ ಕರ್ತವ್ಯದ ವೇಳೆ ಸಾವನ್ನಪ್ಪಿದ ಬಿಬಿಎಂಪಿ 20 ನೌಕರ ಸಿಬ್ಬಂದಿ ವಿವರ

ಇದು ನಿಜಕ್ಕೂ ಶಾಕಿಂಗ್ ನ್ಯೂಸ್.ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿರುವ  ಬಿಬಿಎಂಪಿ ನೌಕರರನ್ನು ಸರ್ಕಾರ ಕೊರೊನಾ ಯೋಧರೆಂದೇ ಡಿಕ್ಲೇರ್ ಮಾಡಿತ್ತು.ಅಷ್ಟೇ ಅಲ್ಲ ಕೊವಿಡ್ ಕರ್ತವ್ಯದ ವೇಳೆ ಸಾವನ್ನಪ್ಪಿದ್ತೆ ಅವರಿಗೆ 30 ಲಕ್ಷ ಪರಿಹಾರ ಕೊಡುವುದಾಗಿಯೂ ಘೋಷಿಸಿತ್ತು.ಆದ್ರೆ ಬಿಬಿಎಂಪಿ ಮಟ್ಟಿಗೆ ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ.ಏಕೆಂದ್ರೆ ಕೊರೊನಾ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ 20 ಅಧಿಕಾರಿ ಸಿಬ್ಬಂದಿಗೆ ನಯಾಪೈಸೆ ಪರಿಹಾರವೇ ಸಿಕ್ಕಿಲ್ಲ ಎಂದು ಆರ್ ಟಿಐ ನಲ್ಲಿ ಸ್ವತಃ ಬಿಬಿಎಂಪಿನೇ ಮಾಹಿತಿ ನೀಡಿದೆ.

ಕೊರೊನಾದಿಂದ ಸಾವನ್ನಪ್ಪಿದ 20 ಜನರಲ್ಲಿ ಹೆಚ್ಚಿನವರು ಅಂದ್ರೆ 13 ಜನ ಪೌರ ಕಾರ್ಮಿಕರು
ಕೊರೊನಾದಿಂದ ಸಾವನ್ನಪ್ಪಿದ 20 ಜನರಲ್ಲಿ ಹೆಚ್ಚಿನವರು ಅಂದ್ರೆ 13 ಜನ ಪೌರ ಕಾರ್ಮಿಕರು

ಹೌದು..ಇದನ್ನು ಕೇಳಿದ್ರೆ ಬೇಸರವಾಗದೆ ಇರೊಲ್ಲ.ಕೊರೊನಾಕ್ಕೆ ಬಲಿಯಾದ  ಒಂದೇ ಒಂದು ಜೀವಕ್ಕೂ ಪರಿಹಾರ ಸಿಕ್ಕಿಲ್ಲ.ಬಿಬಿಎಂಪಿ ಕೊಟ್ಟಿರುವ ಮಾಹಿತಿ ಪ್ರಕಾರ ಕೊರೊನಾಕ್ಕೆ ಈವರೆಗೂ ತುತ್ತಾಗಿ ಸತ್ತವರು 20 ಮಂದಿ.ಅವರ ಪೈಕಿ 13 ಜನ ಪೌರ ಕಾರ್ಮಿಕರು. ಆದ್ರೆ ಈವರೆಗೂ ಒಬ್ಬರಿಗೂ ಪರಿಹಾರವೂ ಸಿಕ್ಕಿಲ್ಲ. ಕಡತ ರವಾನಿಸಿದ್ರೂ ಆರೋಗ್ಯ ಇಲಾಖೆಯಿಂದ ಪರಿಹಾರ ಪಾವತಿಯಾಗಿಲ್ವಂತೆ ಎಂದು ಬಿಬಿಎಂಪಿ ಅಧಿಕಾರಿಗಳು ಆರ್ ಟಿಐ ನಲ್ಲಿ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಕೊಡುತ್ತಿರುವ ಕಾರಣವೇನು ಗೊತ್ತೆ..? 20 ಮೃತರ ಪೈಕಿ ಒಬ್ಬರಿಗೂ ಏಕೆ ಪರಿಹಾರ ವಿತರಣೆಯಾಗಿಲ್ಲ ಎಂದು ಕೇಳಿದ್ರೆ ಮೃತ 20 ಜನರ ಪೈಕಿ 15 ಜನರ ಕಡತ ಪಾವತಿಗೆ ರವಾನೆಯಾಗಿದೆ. ಇನ್ನು ನಾಲ್ವರ ಕುಟುಂಬಗಳು ಸಂಪೂರ್ಣ ಮಾಹಿತಿ-ದಾಖಲೆ ಸಲ್ಲಿಸಿಲ್ಲ. ಮತ್ತೋರ್ವರ ಕಡತ ಸಕ್ಷೇಮ ಪ್ರಾಧಿಕಾರದ ಅನುಮೋದನೆ ನಿರೀಕ್ಷೆಯಲ್ಲಿದೆ ಎಂಬ ಉತ್ತರ ದೊರೆತಿದೆ.

ಬಿಬಿಎಂಪಿಯ ಈ ಧೋರಣೆಗೆ ಬಿಬಿಎಂಪಿ ನೌಕರರ ಸಂಘಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ.ಕೊರೊನಾ ಯೋಧರೆಂದು ಕರೆಯುವ ಸರ್ಕಾರ ಅದೇ ಯೋಧರಿಗೆ ಇನ್ನೂ ಪರಿಹಾರ ನೀಡದೆ ವಂಚನೆ ಮಾಡಿದೆ.ಉಳಿದೆಲ್ಲಾ ಇಲಾಖೆಗಳಲ್ಲಿ ಕೊರೊನಾದಿಂದ ಸತ್ತವರಿಗೆ ನೀಡಲಾಗಿರುವ ಪರಿಹಾರವನ್ನು ಬಿಬಿಎಂಪಿಯಲ್ಲಿ ಮಡಿದವರಿಗೇಕೆ ನೀಡಿಲ್ಲ..ಒಬ್ಬರ ಕಣ್ಣಿಗೆ ಬೆಣ್ಣೆ ಮತ್ತೊರ್ವರ ಕಣ್ಣಿಗೆ ಸುಣ್ಣ ಎನ್ನುವಂಥ ಮಲತಾಯಿ ಧೋರಣೆಯನ್ನೇಕೆ ಮಾಡಬೇಕೆಂದು ನೌಕರರ ಮುಖಂಡರು ಪ್ರಶ್ನಿಸಿದ್ದಾರೆ.

 ಕೊರೊನಾಕ್ಕೆ ಬಲಿಯಾದವರ ಕುಟುಂಬಗಳು ಮನೆಯ ಯಜಮಾನನ್ನು ಕಳೆದುಕೊಂಡು ತಬ್ಬಲಿಭಾವದಲ್ಲಿದ್ದರೆ,ದುಡಿಮೆಯ ಮೂಲದಿಂದ ವಂಚಿತವಾಗಿ ಸಂಕಷ್ಟಕ್ಕೆ ಸಿಲುಕಿವೆ.ಬರಬೇಕಿರುವ ಪರಿಹಾರಕ್ಕಾಗಿ ಚಪ್ಪಲಿ ಸೆವೆಸುತ್ತಿದ್ದರೂ ಸೂಕ್ತ ಪ್ರತಿಕ್ರಿಯೆ ಸಿಗ್ತಿಲ್ಲ.ಕಮಿಷನರ್ ಮಂಜುನಾಥ ಪ್ರಸಾದ್,ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್ ಅವರಾಗ್ಲಿ ಮೃತ ಕುಟುಂಬದವರ ಸಮಸ್ಯೆಗೆ ಸ್ಪಂದಿಸುತ್ತಿಲ್ಲವಂತೆ.. ಕೊರೊನಾ ವೇಳೆ ಜೀವದ ಹಂಗುತೊರೆದು ಕೆಲಸ ಮಾಡಿ ಸಾವನ್ನಪ್ಪಿದ ಯೋಧರಿಗೆ ಸಿಗ್ಬೇಕಾದ ಪರಿಹಾರವನ್ನು ದೊರಕಿಸಿಕೊಡ್ಬೇಕಿದೆ.ಅದು ಕರ್ತವ್ಯವಷ್ಟೇ ಅಲ್ಲ ನೈತಿಕ ಹೊಣೆಗಾರಿಕೆಯೂ ಹೌದು..

ಕೊರೋನಾಕ್ಕೆ ಬಲಿಯಾದ ಅಧಿಕಾರಿಗಳ ವಿವರ ಕೆಳಕಂಡಂತಿದೆ

ವಿಶ್ವನಾಥ್..

ನಟರಾಜನ್…

ಕೆ.ತಿಮ್ಮಯ್ಯ..

ವಿ.ಶ್ರೀಧರ್..

ಬಿ.ಕೆ..ಶೈಲೇಶ್..

ಮುಸ್ತಾಫಾ..

ರವಿ..

 

ಕೊರೋನಾಕ್ಕೆ ಬಲಿಯಾದ ಪೌರ ಕಾರ್ಮಿಕರ ವಿವರ..

ನಾಗರಾಜ್..

ಶಿಲ್ಪಾ..

ಗಂಗಾಧರ್…

ನರಸಮ್ಮ…

ರಾಮಕ್ಕ…

ರಘುವೇಲ್…

ಸಿದ್ದಪ್ಪ..

ಗೋಪಿ..

ಮುದ್ದುರಾಜ್..

ವೆಂಕಟೇಶ್..

ವೆಂಕಟಲಕ್ಷ್ಮಿ..

ಕುಮಾರ್…

ಪೂಜಾರಿ ಶ್ರೀನಿವಾಸಲು 

Spread the love
Leave A Reply

Your email address will not be published.

Flash News