ಮಕ್ಕಳಲ್ಲೂ ಹೆಚ್ಚಾಗ್ತಿದೆ ಕೊರೊನಾ ಸೋಂಕು..

0

ಬೆಂಗಳೂರು: ಕರೊನಾ ಸೋಂಕು ಏನಿದ್ದರೂ ವಯಸ್ಕರಿಗೇ ಹೆಚ್ಚು ತಗುಲುತ್ತದೆ. ಈ ಸೋಂಕಿನ ವಿರುದ್ಧ ಮಕ್ಕಳಿಗೆ ಸ್ವಾಭಾವಿಕವಾದ ರೋಗ ನಿರೋಧಕ ಶಕ್ತಿ ಇರುತ್ತದೆ ಎಂಬುದು ಈ ಮುನ್ನ ಹಲವರ ಅಭಿಪ್ರಾಯವಾಗಿತ್ತು. ಆದರೆ, ಇದೀಗ ಕರೊನಾ ಹರಡುವಿಕೆಯ ಎರಡನೇ ಅಲೆಯಲ್ಲಿ ಅಂಕಿಅಂಶಗಳು ಬೇರೆಯೇ ಕಥೆಯನ್ನು ಹೇಳುತ್ತಿವೆ. ಬೆಂಗಳೂರು ನಗರದಲ್ಲಿ ಮಾರ್ಚ್ 1 ರಿಂದ ಈವರೆಗೆ ಹತ್ತು ವರ್ಷದ ಕೆಳಗಿನ 470 ಮಕ್ಕಳಲ್ಲಿ ಕರೊನಾ ಸೋಂಕು ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರೊನಾ ಸೋಂಕು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆಗಳು ಆರಂಭವಾಗುತ್ತಿರುವಾಗ, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲು ಇದು ಎಚ್ಚರಿಕೆ ಘಂಟೆಯಾಗಿದೆ.
ಈ ಮುನ್ನ ಲಾಕ್​ಡೌನ್ ಮತ್ತು ಕರೊನಾ ಬಗೆಗಿನ ಮುನ್ನೆಚ್ಚರಿಕೆ ಕ್ರಮಗಳನ್ನು ಹೆಚ್ಚಾಗಿ ಪಾಲಿಸುತ್ತಿದ್ದರ ಪರಿಣಾಮವಾಗಿ ಮಕ್ಕಳು ಕರೊನಾ ಸೋಂಕಿಗೆ ಒಳಗಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಹೊರಾಂಗಣ ಚಟುವಟಿಕೆಗಳು, ಸಭೆ-ಸಮಾರಂಭಗಳಲ್ಲಿ ಎಲ್ಲರೂ ಮುಕ್ತವಾಗಿ ಭಾಗವಹಿಸಲು ಆರಂಭಿಸಿರುವುದರಿಂದ ಮಕ್ಕಳಿಗೂ ಸೋಂಕಿನ ಅಪಾಯ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಂಕಿಅಂಶಗಳ ಪ್ರಕಾರ ಜಗತ್ತಿನಾದ್ಯಂತ ವರದಿಯಾಗಿರುವ ಕರೊನಾ ಪ್ರಕರಣಗಳಲ್ಲಿ ಕೇವಲ ಶೇ. 8.5 ರಷ್ಟು ಪ್ರಕರಣಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕಂಡುಬಂದಿದೆ ಎನ್ನಲಾಗಿದೆ. ಬಹುತೇಕ ಚಿಕ್ಕ ವಯಸ್ಸಿನವರಲ್ಲಿ ಮೆದು ಪ್ರಮಾಣದಲ್ಲಿ ರೋಗಲಕ್ಷಣಗಳು ಕಂಡುಬಂದಿದ್ದರೂ, ಅನ್ಯ ವೈದ್ಯಕೀಯ ಸಮಸ್ಯೆಗಳಿದ್ದಲ್ಲಿ ಅಂತಹ ಮಕ್ಕಳು ಸೋಂಕಿಗೆ ಒಳಗಾಗದಂತೆ ಎಚ್ಚರ ವಹಿಸುವುದು ಅವಶ್ಯಕ ಎಂದು ತಜ್ಞರು ಹೇಳಿದ್ದಾರೆ.

Spread the love
Leave A Reply

Your email address will not be published.

Flash News