ಥಿಯೇಟರ್ ಗಳಲ್ಲಿ ಪ್ರೇಕ್ಷಕರ ವೀಕ್ಷಣೆಗೆ ಮತ್ತೆ ಕಡಿವಾಣ: ಸಿಎಂ ಮುಂದೆ ಪ್ರಸ್ತಾಪ..

0

ಕೊರೊನಾಗೆ ತತ್ತರಿಸಿದ್ದ ಕನ್ನಡ ಚಿತ್ರರಂಗ ಈಗತಾನೇ ಸುಧಾರಿಸಿಕೊಳ್ಳುತ್ತಿದೆ. ಸ್ಟಾರ್​ ನಟರ ಚಿತ್ರಗಳು ಒಂದಾದಮೇಲೆ ಒಂದರಂತೆ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಕೂಡ ಥಿಯೇಟರ್​ನತ್ತ ಮುಖ ಮಾಡುತ್ತಿದ್ದಾರೆ. ಈಗ ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣ ಹೆಚ್ಚುತ್ತಿರುವುದು ಸಾಕಷ್ಟು ಆತಂಕ ಸೃಷ್ಟಿಸಿದೆ. ಹೀಗಿರುವಾಗಲೇ ರಾಜ್ಯದ ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.​ ಯಡಿಯೂರಪ್ಪ ಅವರ ಬಳಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್​ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್​ ಪ್ರಕರಣಗಳು ಹೆಚ್ಚುತ್ತಿವೆ. ಇದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ. ಕೊರೊನಾ ಪ್ರಕರಣ ಹೆಚ್ಚದಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ, ಕೊವಿಡ್​ ನಿಯಂತ್ರಣಕ್ಕೆ ಟಫ್​ ರೂಲ್ಸ್ ತರಲು ಸುಧಾಕರ್​ ಸಲಹೆ ನೀಡಿದ್ದಾರೆ.

​ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಬೇಕು. ಈ ಮೂಲಕ ಕೊವಿಡ್​ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಅವರಿಗೆ ಸುಧಾಕರ್​ ಸಲಹೆ ನೀಡಿದ್ದಾರೆ. ಒಂದೊಮ್ಮೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಲಹೆ ಸ್ವೀಕರಿಸಿದರೆ ಮುಂಬರುವ ಸಿನಿಮಾಗಳ ಕಲೆಕ್ಷನ್​ ಕುಸಿಯಲಿದೆ

Spread the love
Leave A Reply

Your email address will not be published.

Flash News