ಪಾರ್ಟಿ ಮತ್ನಲ್ಲಿ ಜಗಳ ಮಾಡ್ಕೊಂಡು ಪೆಟ್ಟು ತಿಂದ್ರಾ..? ಬಾಲಿವುಡ್ ನಟ..

0

ಬಾಲಿವುಡ್​ ನಟ ಅಜಯ್​ ದೇವಗನ್​ ಅವರಿಗೆ ಸ್ವಲ್ಪ ಕೋಪ ಜಾಸ್ತಿ ಎಂಬುದು ಗೊತ್ತಿರುವ ವಿಚಾರ. ಹಾಗಂತ ಅವರು ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳುವ ಮಟ್ಟಕ್ಕೆ ಇಳಿಯುತ್ತಾರಾ? ಸದ್ಯಕ್ಕಂತೂ ಅಂಥ ಘಟನೆ ನಡೆದಿಲ್ಲ. ಆದರೆ ಈಗ ಸೋಶಿಯಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಸಖತ್​ ವೈರಲ್​ ಆಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯನ್ನು ಒಂದಷ್ಟು ಜನರು ಮನಬಂದಂತೆ ಥಳಿಸುತ್ತಿದ್ದಾರೆ. ಹೊಡೆತ ತಿನ್ನುತ್ತಿರುವ ವ್ಯಕ್ತಿ ಅಜಯ್​ ದೇವಗನ್​ ಎಂದು ಸಾಕಷ್ಟು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅಜಯ್​ ದೇವಗನ್​ ಕಡೆಯಿಂದ ಪ್ರತಿಕ್ರಿಯೆ ಬರುವುದಕ್ಕೂ ಮುನ್ನವೇ ಜಗಳದ ವಿಡಿಯೋ ಎಲ್ಲೆಡೆ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮಾಲ್​ವೊಂದರ ಎದುರಿನಲ್ಲಿ ಪಾನಮತ್ತರಾದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.
ಪಾರ್ಟಿ ಮಾಡಿದ ಬಳಿಕ ಐಷಾರಾಮಿ ಕಾರುಗಳ ಪಕ್ಕದಲ್ಲಿ ಒಂದಷ್ಟು ಜನರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಆ ಗುಂಪಿನಲ್ಲಿ ಅಜಯ್​ ದೇವಗನ್​ ಕೂಡ ಇದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ವಿಡಿಯೋಗೆ ಸಂಬಂಧಿಸಿದಂತೆ ಅಜಯ್​ ದೇವಗನ್​ ತಂಡದವರು ಸ್ಪಷ್ಟನೆ ನೀಡಿದ್ದಾರೆ. ವೈರಲ್​ ವಿಡಿಯೋದಲ್ಲಿ ಇರುವುದು ಅಜಯ್​ ದೇವಗನ್​ ಅಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಳೆದ 14 ತಿಂಗಳಿನಿಂದ ಅಜಯ್​ ದೇವಗನ್​ ಅವರು ದೆಹಲಿಗೆ ತೆರಳಿಲ್ಲ. ‘ತಾನಾಜಿ: ದಿ ಅನ್​ಸಂಗ್​ ವಾರಿಯರ್​’ ಸಿನಿಮಾದ ಪ್ರಮೋಷನ್​ಗಾಗಿ ಅವರು ಕೊನೇ ಬಾರಿ ದೆಹಲಿಗೆ ತೆರಳಿದ್ದು 2020ರ ಜನವರಿಯಲ್ಲಿ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ. ಒಟ್ಟಿನಲ್ಲಿ ಈ ವಿಡಿಯೋದಲ್ಲಿ ಇರುವ ವ್ಯಕ್ತಿ ಅಜಯ್​ ದೇವಗನ್​ ಅಲ್ಲ ಎಂಬುದು ಸ್ಪಷ್ಟವಾಗಿದೆ.

Spread the love
Leave A Reply

Your email address will not be published.

Flash News