ಲೇಡಿ ಯುವತಿ ಪರ ವಕೀಲ ಜಗದೀಶ್ ವಿರುದ್ಧ ದಾಖಲಾಗಿರುವ ದೂರು-ಪ್ರಕರಣಗಳು ಎಷ್ಟು ಗೊತ್ತಾ..?

0

ಬೆಂಗಳೂರು:ಸಿಡಿ ಯುವತಿಯ ಪರ ಬೆನ್ನಿಗೆ ನಿಂತು ಕಾನುನಾ ತ್ಮಕವಾಗಿ ಆಕೆಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡುತ್ತಿರುವ ವಕೀಲ ಜಗದೀಶ್ ಅವರ ಪೂರ್ವಾಪರವನ್ನು ಕಂಡುಹಿಡಿ ಯುವ ಪ್ರಯತ್ನ ದಲ್ಲಿರುವ ಪೊಲೀಸರು ಕೆಲವು ಮಹತ್ವದ ಅಂಶಗಳನ್ನು ಕ್ರೋಢೀಕರಿಸಿ ದ್ದಾರೆ.

ಈ ಮಾಹಿತಿಯೂ ಕೊಂಚ ಕುತೂಹಲಕಾರಿ ಹಾಗು ಸ್ಪೋಟಕ ಎನಿಸುತ್ತದೆ,ಕನ್ನಡ ಫ್ಲಾಶ್ ನ್ಯೂಸ್ ಗೆ ಆ EXCLUSIVE  ಮಾಹಿತಿ ಲಭ್ಯವಾಗಿದೆ.

ವಕೀಲ ಕೆ.ಎಸ್.ಜಗದೀಶ್ ಅವರು ವಾಸವಾಗಿರುವ ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಲೆ ಹಾಕಿರುವ ಮಾಹಿತಿ ಪ್ರಕಾರ ವಿವಿಧ ಸನ್ನಿವೇಶಗಳಲ್ಲಿ 17 ಪ್ರಕರಣಗಳು ಅವರ ವಿರುದ್ಧ ದಾಖಲಾಗಿರುವುದನ್ನು ಪತ್ತೆ ಮಾಡಿದ್ದಾರೆ.

ಯಲಹಂಕ,ವಿದ್ಯಾರಣ್ಯಪುರ,ಹೆಬ್ಬಾಳ,ಸಂಜಯನಗರ,ಮಹಾರಾಷ್ಟ್ರದ ನೇವಿ ಮುಂಬೈನ ನೆರೂಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ವಿವಿಧ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತಿದೆ.ಬಹುತೇಕ ಪ್ರಕರಣಗ ಳಲ್ಲಿ  ಜಗದೀಶ್ ಅವರ ಮೇಲಿನ ಆರೋಪಗಳಿಗೆ ಬಿ ರಿಪೋರ್ಟ್ ಹಾಕಿ  ಖುಲಾಸೆಗೊಳಿಸಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದದ್ 32/2015 ಕೇಸ್ ಅನ್ವಯ ಸಿಸಿಎಂ ನ್ಯಾಯಾಲಯದಲ್ಲಿ  ಒಂದು ಪ್ರಕರಣ ಮಾತ್ರ ವಿಚಾರಣೆಯಲ್ಲಿರುವುದು ಗೊತ್ತಾಗಿದೆ.

ಐಪಿಎಸ್ ಸೆಕ್ಷನ್  307 (ಮಾರಣಾಂತಿಕ ಹಲ್ಲೆ),363( ಅಪಹರಣ) 353,504,498(ಎ), 66(ಎ) ಐಟಿ ಆಕ್ಟ್,506,507(ಜೀದಬೆದರಿಕೆ),341(ಹಲ್ಲೆ),323.324(ಸಾಧಾರಣ ಹಲ್ಲೆ),324,341,323,420( ವಂಚನೆ) ಕುರಿತಾದ ಸೆಕ್ಷನ್ ದಾಖಲಾಗಿವೆ.

Spread the love
Leave A Reply

Your email address will not be published.

Flash News