ಕನ್ನಡದ ವರಕವಿ ಬೇಂದ್ರೆಯವರ ಥೀಮ್ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್..

0

ಜ್ಞಾನಪೀಠ ಪ್ರಶಸ್ತಿ ವಿಜೇತ, ಕನ್ನಡದ ವರಕವಿ ದ.ರಾ. ಬೇಂದ್ರೆಯವರ ಬದುಕನ್ನು ವಸ್ತುವಾಗಿರಿಸಿಕೊಂಡು ಮಾಡಲಾದ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇಲ್ಲಿ ಯುವಜೋಡಿ ದ.ರಾ. ಬೇಂದ್ರೆಯವರ ಕವಿತೆಗಳಿಂದ ಆಯ್ದ ಪ್ರಣಯದ ಸಾರವನ್ನು ತಂದು ಛಾಯಾಚಿತ್ರಗಳ ಮೂಲಕ ಉತ್ತರ ಕರ್ನಾಟಕದ ಜೀವನ ಶೈಲಿಯನ್ನು ತೋರಿಸಿದ್ದಾರೆ.  ಏಪ್ರಿಲ್ 23 ರಂದು ವಿವಾಹವಾಗುತ್ತಿರುವ ಧಾರವಾಡದ ಚೇತನಾ ದೇಸಾಯಿ ಮತ್ತು ನಿಖಿಲ್ ಮಗ್ಗಾವಿ ಜೋಡಿಗೆ ಬೇಂದ್ರೆ ಹಾಗೂ ಅವರ ಕವಿತೆಗಳನ್ನಿಟ್ಟುಕೊಂಡು ಫೋಟೋಶೂಟ್  ಮಾಡಲು ಅನೇಕ ಕಾರಣಗಳಿದೆ. ಚೇತನಾ ಧಾರವಾಡದ ಸಾಧಂಕೇರಿಯಲ್ಲಿರುವ ಬೇಂದ್ರೆಯವರ ಮನೆಯ ನೆರೆಯ ನಿವಾಸಿಯಾಗಿದ್ದಾರೆ. ಅವರ ಕುಟುಂಬವು ತಲೆಮಾರುಗಳಿಂದ ಬೇಂದ್ರೆಯವರ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿದೆ.

ಫೋಟೋ ಥೀಮ್ ಕವಿತೆಗಳ ದಿನ ದಿನದ ಬಳಕೆಯನ್ನು ಪ್ರತಿನಿಧಿಸುತ್ತದೆ.  ಅತ್ಯಂತ ವಿಶಿಷ್ಟ ಸಂಗತಿ ಎಂದರೆ ಬೇಂದ್ರೆಯವರು ಬಳಸುತ್ತಿದ್ದ ಸಾಂಪ್ರದಾಯಿಕ ಟೋಪಿ, ಛತ್ರಿ ಮತ್ತು ಗ್ರಾಮೋಫೋನ್‌ಗಳನ್ನು ಚಿತ್ರೀಕರಣಕ್ಕಾಗಿ ಕುಟುಂಬದಿಂದ ಎರವಲು ಪಡೆಯಲಾಯಿತು. ಯುವ ಆರ್ಟ್ ಸ್ಟುಡಿಯೋದ ಸಂಸ್ಥಾಪಕ ಮತ್ತು ಧಾರವಾಡದ ಛಾಯಾಗ್ರಾಹಕ ಹರ್ಷದ್ ಉದಯ್ ಕಾಮತ್ ಅವರ ಅನೇಕ ಥೀಮ್ ಆಧಾರಿತ ಫೊಟೋಶೂಟ್ ಗಳು  ವೈರಲ್ ಆದ ನಂತರ ಪ್ರಿ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವವರಿಗೆ ನೆಚ್ಚಿನ ಛಾಯಾಗ್ರಾಹಕ ಎನಿಸಿಕೊಂಡಿದ್ದಾರೆ.

Spread the love
Leave A Reply

Your email address will not be published.

Flash News