ಅಕ್ಕಿನೇನಿ ನಾಗಾರ್ಜುನ್ ಗೆ ಬಾಡಿಗಾರ್ಡ್ ಆಗ್ತಾರಂತೆ ರಶ್ಮಿಕಾ..!

0

ಸ್ಯಾಂಡಲ್ ವುಡ್ ನ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಮುಂದೆ ಟಾಲಿವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸಿ ನ್ಯಾಷನಲ್ ಕ್ರಷ್ ಎನಿಸಿಕೊಂಡ್ರು. ಇದೀಗ ಬಾಲಿವುಡ್ ನ ಅಂಗಳಕ್ಕೂ ಲಗ್ಗೆ ಇಟ್ಟಿರುವ ರಶ್ಮಿಕಾ ಖ್ಯಾತ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ್ ಅವರಿಗೆ ಬಾಡಿಗಾರ್ಡ್ ಆಗ್ತಾರಂತೆ. ಅರೇ ಏನಿದು? ಸಿನಿಮಾ ಮಾಡ್ಕೊಂಡು ಚೆನ್ನಾಗೇ ಇದ್ರಲ್ಲಾ, ರಶ್ಮಿಕಾ ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡ್ರು ಅಂತ ಶಾಕ್ ಆಗಿರ್ಬೇಕಲ್ವಾ? ಅಸಲಿಗೆ ವಿಷಯನೇ ಬೇರೆ. ಅಕ್ಕಿನೇನಿ ನಾಗಾರ್ಜುನ್ ತಮ್ಮ ಟ್ವಿಟರ್ ಖಾತೆಯಲ್ಲಿ ವೈಲ್ಡ್ ಡಾಗ್ ಪುಷ್ ಅಪ್ ಮಾಡುವ ಚಾಲೆಂಜ್ ಗೆ ರಶ್ಮಿಕಾರನ್ನ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಉತ್ತರವಾಗಿ ಕಿರಿಕ್ ಬೆಡಗಿ ರಶ್ಮಿಕಾ ‘ಸರ್ ನೋಡಿ ಮುಂದೊಂದು ದಿನ ನಿಮ್ಮ ಬಾಡಿಗಾರ್ಡ್ ಆಗ್ಬೇಕು ಅಂತ ನಾನು ನನ್ನ ಪ್ರಯತ್ನವನ್ನ ಜಾರಿಯಲ್ಲಿಟ್ಟಿದ್ದೇನೆ’ ಅಂತ ಕಮೆಂಟ್ ಮಾಡಿದ್ದಾರೆ. ಇದು ಅಸಲಿ ಕಥೆ

Spread the love
Leave A Reply

Your email address will not be published.

Flash News