ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್ ಗುಪ್ತಾ ನೇಮಕ; ರಾಜ್ಯದ 16 ಐಎಎಸ್ ಅಧಿಕಾರಿಗಳ ಟ್ರಾನ್ಸ್ ಫರ್..

0

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಮಂಜುನಾಥ್ ಪ್ರಸಾದ್ ವರ್ಗಾವಣೆಯಾಗಿದ್ದಾರೆ. ಬಿಬಿಎಂಪಿ ನೂತನ ಆಯುಕ್ತರಾಗಿ ಗೌರವ್​ ಗುಪ್ತಾ ನೇಮಕವಾಗಿದ್ದಾರೆ. ಜೊತೆಗೆ, ಬಿಬಿಎಂಪಿ ಆಡಳಿತಾಧಿಕಾರಿಯಾಗಿ ರಾಕೇಶ್ ಸಿಂಗ್ ನೇಮಕವಾಗಿದ್ದಾರೆ. ಈ ಮೊದಲು ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ ಪ್ರಸಾದ್​ ಕಂದಾಯ ಇಲಾಖೆಗೆ ವರ್ಗಾವಣೆ ಹೊಂದಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೂತನ ಆಯುಕ್ತ ಗೌರವ್​ ಗುಪ್ತಾಗೆ ಹೆಚ್ಚುವರಿ ಹೊಣೆ ನೀಡಲಾಗಿದೆ. ಕಂದಾಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆ ಎಸಿಎಸ್ ಆಗಿರುವ ರಾಕೇಶ್ ಸಿಂಗ್​ಗೆ ಬಿಬಿಎಂಪಿ‌ ಆಡಳಿತಾಧಿಕಾರಿಯಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.

16 ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ
ಮೂವರು ಡಿವೈಎಸ್​ಪಿಗಳ ಹಾಗೂ 28 ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹದಿನಾರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. 16 ಅಧಿಕಾರಿಗಳ ಪಟ್ಟಿ ಇಲ್ಲಿದೆ.

ವಂದಿತಾ ಶರ್ಮ- ಸರ್ಕಾರದ ಎಸಿಎಸ್ ಹೆಚ್ಚುವರಿ ಹೊಣೆ
ರಾಜೀವ್ ಚಾವ್ಲಾ- ಎಸಿಎಸ್, ಡಿಪಿಎಆರ್
ಜಿ. ಕುಮಾರ ನಾಯ್ಕ್- ಎಸಿಎಸ್, ಇಂಧನ ಇಲಾಖೆ
ಜೊತೆಗೆ ಎಸಿಎಸ್, ಉನ್ನತ ಶಿಕ್ಷಣ ಇಲಾಖೆ ಹೆಚ್ಚುವರಿ ಹೊಣೆ
ಪಂಕಜ್ ಕುಮಾರ್ ಪಾಂಡೆ- ಕಾರ್ಯದರ್ಶಿ, MSME ಮತ್ತು ಗಣಿ ಇಲಾಖೆ
ವಿ‌.ಪೊನ್ನುರಾಜ್- ಕಾರ್ಯದರ್ಶಿ, DPAR (ಇ-ಆಡಳಿತ)
ಸಿಂಧೂ ರೂಪೇಶ್- ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
ಎಸ್. ಹೊನ್ನಾಂಬ- ನಿರ್ದೇಶಕಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಡಾ. ಬಿ.ಆರ್. ಮಮತಾ- ಹೆಚ್ಚುವರಿ ಮಿಷನ್ ಡೈರೆಕ್ಟರ್, ಸಕಾಲ
ಹೆಚ್.ಎನ್. ಗೋಪಾಲಕೃಷ್ಣ- ವ್ಯವಸ್ಥಾಪಕ ನಿರ್ದೇಶಕ, ಪಬ್ಲಿಕ್ ಲ್ಯಾಂಡ್ ಕಾರ್ಪೊರೇಷನ್
ಐಟಿ ಬಿಟಿ ಇಲಾಖೆಯ ನಿರ್ದೇಶಕರಾಗಿ ಹೆಚ್ಚುವರಿ ಹೊಣೆ

Spread the love
Leave A Reply

Your email address will not be published.

Flash News