‘ಯುವರತ್ನ’ ನ ಅಬ್ಬರ ಶುರು..

0

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಯುವರತ್ನ’ ಕೂಡ ಮುಂಚೂಣಿಯಲ್ಲಿದ್ದು, ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್​ ನಟನೆಯ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದರು. ಇಂದು ಅದ್ದೂರಿಯಾಗಿ ಎಲ್ಲಾ ಕಡೆ ಯುವರತ್ನ ರಿಲೀಸ್​ ಆಗುತ್ತಿದ್ದು, ಹಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆಯೇ ಈ ಸಿನಿಮಾ ಧೂಳೆಬ್ಬಿಸುತ್ತಿದೆ.
ಕಳೆದ 2 ವರ್ಷಗಳಿಂದ ಪುನೀತ್ ರಾಜ್​ಕುಮಾರ್​​ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಸಿಕ್ಕಿರಲಿಲ್ಲ. ಹಾಗಾಗಿ ಎಲ್ಲರಲ್ಲೂ ಹೆಚ್ಚಿನ ಕ್ಯೂರಿಯಾಸಿಟಿ ಇದೆ. ಅದಕ್ಕೆ ತಕ್ಕಂತೆಯೇ ದೊಡ್ಡಮಟ್ಟದಲ್ಲಿ ಸಿನಿಮಾ ಸೌಂಡು ಮಾಡುತ್ತಿದೆ. ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನನ ಆಗಮನ ಆಗುತ್ತಿದ್ದು, ಕನ್ನಡದ ಜೊತೆಗೆ ತೆಲುಗಿಗೂ ಈ ಸಿನಿಮಾ ಡಬ್​ ಆಗಿದೆ. ಆಂಧ್ರ ಮತ್ತು ತೆಲಂಗಾಣದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾನ ಮುಂಜಾನೆಯಿಂದಲೇ ಕಣ್ತುಂಬಿಕೊಳ್ಳುತ್ತಿದ್ದಾರೆ ಅಪ್ಪು ಫ್ಯಾನ್ಸ್​. ಈ ಮಾತು ಅನ್ವಯ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ, ಸಿದ್ದಲಿಂಗೇಶ್ವರ, ತಾವರೆಕರೆಯ ಬಾಲಾಜಿ ಚಿತ್ರಮಂದಿರ ಸೇರಿದಂತೆ ಅನೇಕ ಕಡೆಗಳಲ್ಲಿ ಮುಂಜಾನೆ 6 ಗಂಟೆಗೆ ಶೋ ಶುರುವಾಗಿದೆ. ಎಲ್ಲಾ ಕಡೆಗಳಲ್ಲಿ ಪುನೀತ್​ ಕಟೌಟ್​ಗಳು ರಾರಾಜಿಸುತ್ತಿವೆ.
ಬೆಂಗಳೂರಿನಲ್ಲಿ ಮೊದಲ ದಿನವೇ ಯುವರತ್ನ ಚಿತ್ರಕ್ಕೆ 650 ಶೋಗಳು ಮೀಸಲಾಗಿವೆ. ಬಹುತೇಕ ಕಡೆಗಳಲ್ಲಿ ಟಿಕೆಟ್​ಗಳು ಸೋಲ್ಡ್​ಔಟ್​ ಆಗಿವೆ. ಇನ್ನು, ವಿದೇಶದಲ್ಲೂ ಪುನೀತ್​ ಹವಾ ಜೋರಾಗಿರಲಿದೆ. ಕರ್ನಾಟಕದ ರೀತಿಯೇ ಅಮೆರಿಕಾ, ಸಿಂಗಾಪುರ, ದುಬೈ ಮುಂತಾದ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ.
‘ರಾಜಕುಮಾರ’ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಮತ್ತು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಅವರಿಗೆ ಭಾರಿ ಯಶಸ್ಸು ಸಿಕ್ಕಿತ್ತು. ಈಗ ಎರಡನೇ ಬಾರಿಗೆ ಈ ನಟ-ನಿರ್ದೇಶಕನ ಪವರ್​ಫುಲ್ ಕಾಂಬಿನೇಷನ್​ನಲ್ಲಿ ಯುವರತ್ನ ಸಿನಿಮಾ ಮೂಡಿಬಂದಿದ್ದು, ಸಹಜವಾಗಿಯೇ ಹೈಪ್​ ಸೃಷ್ಟಿಯಾಗಿದೆ. ಪುನೀತ್​ಗೆ ನಾಯಕಿಯಾಗಿ ಸಾಯೇಷಾ ನಟಿಸಿದ್ದಾರೆ.
ಪ್ರಕಾಶ್​ ರೈ, ಡಾಲಿ ಧನಂಜಯ, ಸೋನು ಗೌಡ, ದಿಗಂತ್​, ರಾಧಿಕಾ ಶರತ್​ ಕುಮಾರ್​, ಸಾಯಿಕುಮಾರ್​ ಮುಂತಾದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಹಾಡುಗಳಿಗೆ ಎಸ್​. ಥಮನ್​ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಪಾಠಶಾಲಾ..’ ಹಾಡು ಗಮನ ಸೆಳೆದಿದೆ. ಹಲವು ವರ್ಷಗಳ ಬಳಿಕ ಪುನೀತ್​ ರಾಜ್​ಕುಮಾರ್​ ಅವರು ಕಾಲೇಜು ವಿದ್ಯಾರ್ಥಿ ಆಗಿ ಕಾಣಿಸಿಕೊಂಡಿರುವುದು ವಿಶೇಷ.

Spread the love
Leave A Reply

Your email address will not be published.

Flash News