ಪವರ್ ಸ್ಟಾರ್ ನ’ಯುವರತ್ನ ಸೌಂಡೇ ಇಲ್ಲ ಅಂದ ಪ್ರೇಕ್ಷಕರು..!

0

ಯುವರತ್ನ’ ಸಿನಿಮಾ ಬಿಡುಗಡೆ ಆಗಿದ್ದ ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಪ್ರತಿಭಟನೆ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಧ್ವನಿ ಗುಣಮಟ್ಟ ಸರಿಯಿಲ್ಲ, ಸಿನಿಮಾದ ಸಂಭಾಷಣೆಗಳು ಸಹ ಕೇಳದಷ್ಟು ಕಡಿಮೆ ಸೌಂಡ್ ನೀಡಲಾಗಿದೆ ಎಂದು ಪ್ರೇಕ್ಷಕರು ಆಕ್ಷೇಪಿಸಿದ್ದಾರೆ. ಜೊತೆಗೆ ತಮ್ಮ ಸಿನಿಮಾ ಟಿಕೆಟ್‌ ಹಣವನ್ನು ಹಿಂದಿರುಗಿಸುವಂತೆ ಸಹ ಮನವಿ ಮಾಡಿದ್ದಾರೆ. ಆದರೆ, ಟಿಕೆಟ್ ಹಣ ಹಿಂದಿರುಗಿಸಲು ಚಿತ್ರಮಂದಿರ ಆಡಳಿತ ಮಂಡಳಿಯವರು ನಿರಾಕರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪ್ರೇಕ್ಷಕರು ಚಿತ್ರಮಂದಿರದ ಒಳಗೆಯೇ ಚಿತ್ರಮಂದಿರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದ್ದಾರೆ. ಕೆಲವರು ಸಿನಿಮಾ ನೋಡದೇ ವಾಪಸ್ ಮರಳಿದ್ದಾರೆ.ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಪ್ರತಿಭಟನೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇನ್ನು ಮುಂದೆ ಊರ್ವಶಿ ಚಿತ್ರಮಂದಿರದಲ್ಲಿ ಟಿಕೆಟ್ ಬುಕ್ ಮಾಡಬೇಡಿ’ ಎಂಬ ಒಕ್ಕಣೆಯೊಂದಿಗೆ ವಿಡಿಯೋಗಳು ಹರಿದಾಡುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಂಡಿರುವ ಅಭಿಪ್ರಾಯದ ಪ್ರಕಾರ, ಬೆಳಿಗ್ಗಿನ ಶೋಗೆ ಧ್ವನಿ ಗುಣಮಟ್ಟ ಚೆನ್ನಾಗಿಯೇ ಇತ್ತಂತೆ ಆದರೆ ಎರಡನೇ ಶೋ ನಿಂದ ಆಚೆಗೆ ಸೌಂಡ್ ಅನ್ನು ಕಡಿಮೆ ಮಾಡಲಾಗಿದೆಯಂತೆ. ಪ್ರತಿಭಟನೆ ವಿಷಯ ತಿಳಿದು ಪೊಲೀಸರು, ಮಾಧ್ಯಮಗಳವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪರಿಸ್ಥಿತಿಯನ್ನು ಪೊಲೀಸರು ತಿಳಿಗೊಳಿಸಿದ್ದಾರೆ

Spread the love
Leave A Reply

Your email address will not be published.

Flash News