ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಪಾಂಶುಪಾಲರು ಮಾಡಿದ್ದೇನು ಗೊತ್ತಾ..?

0

ಹಾಸನ: ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲೂ ಮುಖ್ಯವಾದ ಅದ್ಯಾಯ. ಹಾಗೆಯೇ ಶಿಕ್ಷಕರೂ ಸಹ ವಿದ್ಯಾರ್ಥಿಗಳ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಟೂಡೆಂಟ್ ಎಂಬ ಕಲ್ಲನ್ನು ಶಿಲೆಯನ್ನಾಗಿಸಿ ಅದಕ್ಕೆ ವಿದ್ಯೆ, ಬುದ್ಧಿಯನ್ನು ತುಂಬುವ ಕೆಲಸ ಗುರುವಿನದು. ಆದರೆ ಇಲ್ಲಿ ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರೊಬ್ಬರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಮಸಿ ಬಳಿದಿದ್ದಾರೆ.
ಹಾಸನದ ಸರ್ಕಾರಿ ನರ್ಸಿಗ್ ಕಾಲೇಜಿನಲ್ಲಿ ವ್ಯಾಸಾಂಗ ನಡೆಸುತ್ತಿರುವ ಚೆನ್ನಯ್ಯ ಒಬ್ಬ ಗುಡ್ ಸ್ಟೂಡೆಂಟ್. ರ್ಯಾಂಕ್ ವಿದ್ಯಾರ್ಥಿಯೂ ಕೂಡ. ಆದರೆ ಚನ್ನಯ್ಯ ಅದೇಕೋ ಏನೋ ತೃತೀಯ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ತಾನು ಫೇಲ್ ಅಂತ ತಿಳಿದಾಗ ಚನ್ನಯ್ಯ ಬಹಳ ವಿಚಲಿತನಾಗಿಬಿಟ್ಟಿದ್ದ. ಬಳಿಕ ತನ್ನ ಮೇಲಿನ ಅಚಲವಾದ ನಂಬಿಕೆಯಿಂದ ಏನೋ ತಪ್ಪು ನಡೆದಿದೆ ಎಂಬ ಸಂಶಯದಿಂದ ರಾಜೀವ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಉತ್ತರ ಪತ್ರಿಕೆ ತರಿಸಿ ನೋಡಿದಾಗ ನಿಜಾಂಶ ಬಯಲಾಗುತ್ತಾದೆ. ಚೆನ್ನಯ್ಯ ಓದುತ್ತಿದ್ದ ಕಾಲೇಜಿನ ಪ್ರಾಂಶುಪಾಲೆ ಶೋಭಾದೇವಮಾನೆ ಆತನ ಉತ್ತರ ಪತ್ರಿಕೆಯನ್ನು ಸ್ಕಾನ್ ಮಾಡಿ ಕಳುಹಿಸುವಾಗ ಜೂನಿಯರ್ ವಿದ್ಯಾರ್ಥಿಯ ಸಹಾಯ ಪಡೆದು, ಬೇಕಂತಲೇ ಚನ್ನಯ್ಯನ ಉತ್ತರ ಪತ್ರಿಕೆಯನ್ನು ವಿರೂಪಗೊಳಿಸಿದ್ದಾರೆ. ಇದರಿಂದ ಮನನೊಂದ ಚನ್ನಯ್ಯ ಪ್ರಾಶುಪಾಲೆ ಶೋಭಾದೇವಮಾನೆ ವಿರುದ್ಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಈ ಸಂಬಂಧ ಪೊಲೀಸರು ಪಾಂಶುಪಾಲೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ತಮ್ಮ ವೈಮನಸ್ಯಕ್ಕೆ, ವಯಕ್ತಿಕ ವಿಚಾರಕ್ಕೆ ವಿದ್ಯಾರ್ಥಿಗಳ ಬದುಕನ್ನು ನಾಶ ಮಾಡುವಂತಹ ಕೃತ್ಯವೆಸಗುವುದು ಸರಿಯೇ?

Spread the love
Leave A Reply

Your email address will not be published.

Flash News