ಈಶ್ವರಪ್ಪರಂತಹ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ಯಡಿಯೂರಪ್ಪ ಸ್ಕೆಚ್’

0

ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನು ಮುಗಿಸಿದಂತೆ ಈಗ ಹಿಂದುಳಿದ ವರ್ಗಗಳ ನಾಯಕರನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು ಲಿಂಗಾಯತ ನಾಯಕರನ್ನು ವ್ಯವಸ್ಥಿತವಾಗಿ ಮುಗಿಸಿದ್ದಾರೆ. ಇದೀಗ ಈಶ್ವರಪ್ಪರಂತಹ ಹಿಂದುಗಳಿದ ವರ್ಗಗಳ ನಾಯಕರನ್ನು ಮುಗಿಸುತ್ತಿದ್ದಾರೆ. ಯಡಿಯೂಪರಪ್ಪ ವಿರುದ್ಧ ಕಿಡಿಕಾರಿದರು. ಯತ್ನಾಳರ ಈ ಹೇಳಿಕೆಯನ್ನಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಟ್ವಿಟ್ಟರ್​ನಲ್ಲಿ ಯಡಿಯೂರಪ್ಪ ಅವರ ಕಾಲೆಳೆದಿದೆ. BSY ಅವರು ಲಿಂಗಾಯತ ನಾಯಕರನ್ನು ಮುಗಿಸಿದರು, ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ. ಯಡಿಯೂರಪ್ಪ ಅವರೇ ಯತ್ನಾಳ್ ಹೇಳಿದಂತೆ ಬಿ ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ? ನೀವು ಯತ್ನಾಳ್ ವಿರುದ್ಧ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ! ಎಂದು ಟ್ವೀಟ್ ಮಾಡಿದೆ.

Spread the love
Leave A Reply

Your email address will not be published.

Flash News