ಹನಿ ಟ್ರ್ಯಾಪ್ ದರೋಡೆ..!

0

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಲೈಂಗಿಕ ದೌರ್ಜನ್ಯದ ಜೊತೆಗೆ ಹನಿಟ್ರ್ಯಾಪ್ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಇದನ್ನು ಹಿನ್ನೆಲೆಯಾಗಿಟ್ಟುಕೊಂಡು ನೋಡಿದರೆ ಇತ್ತೀಚೆಗೆ ನಮ್ಮ ದೇಶದಲ್ಲಿ ಹನಿಟ್ರ್ಯಾಪ್‌ ಮೂಲಕ ಜನರನ್ನು ಬಲೆಗೆ ಕೆಡವಿ ಹಣ ಮಾಡುವ ಘಟನೆಗಳು ಬೆಳಕಿಗೆ ಬರುತ್ತಿವೆ. ಹಿಂದೆಲ್ಲಾ, ಗೂಢಾಚಾರಿಕೆಗಾಗಿ, ಬೇರೆ ದೇಶಗಳ ರಹಸ್ಯ ಮಾಹಿತಿ ಪಡೆಯಲು ಮಹಿಳೆಯರನ್ನು ಅಸ್ತ್ರವಾಗಿ ಬಳಸಲಾಗುತ್ತಿತ್ತು. ಹನಿಟ್ರ್ಬಾಪ್ ಎಂದರೆ ಆಯಕಟ್ಟಿನ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಆತನಿಗೆ ಮಹಿಳೆಯ ಮೂಲಕ ಲೈಂಗಿಕ ಆಮಿಷವೊಡ್ಡಿ ಆತನಿಂದ ಗೌಪ್ಯ ಮಾಹಿತಿ ಪಡೆಯುವುದು ಅಥವಾ ಹಣ ಮಾಡುವುದು. ಭಾರತದಲ್ಲಿ ಹನಿ ಟ್ರ್ಯಾಪ್ ಹಳೆಯ ಅಸ್ತ್ರವಾದರೂ ಅದನ್ನು ಹಣ ಮಾಡಲು ಬಳಸುವ ಪರಿಪಾಠ ಇತ್ತೀಚೆಗೆ ಆರಂಭವಾಗಿದೆ. ಮೊಬೈಲ್ ಕ್ಯಾಮರಾ, ರಹಸ್ಯ ಕ್ಯಾಮರಾಗಳು ಜನಸಾಮಾನ್ಯರ ಕೈಗೆ ಸಿಗುವಂತಾದ ಬಳಿಕವಂತೂ ಹಣವಂತರನ್ನು ಅದರಲ್ಲೂ ಪ್ರಭಾವಿ ಸ್ಥಾನದಲ್ಲಿರುವವರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ನಡೆಸುವ ಚಟುವಟಿಕೆಗಳು ಹೆಚ್ಚಾಗಿವೆ. ಹೀಗಾಗಿಯೇ ಇತ್ತೀಚೆಗೆ ಇಂತಹ ಪ್ರಕರಣಗಳು ಬೆಳಕಿಗೆ ಬರಲು ಆರಂಭಿಸಿದ್ದು, ಬ್ಲಾಕ್ ಮೇಲ್ ಗಳಿಂದ ರೋಸಿ ಹೋಗಿರುವ ನೊಂದ ಜನರು ಪೊಲೀಸರಿಗೆ ದೂರು ನೀಡಲು ಮುಂದಾಗುತ್ತಿದ್ದಾರೆ.

ಈ ನೊಂದ ಜನರಲ್ಲಿ ಬಹುಪಾಲು ಜನ ಪುರುಷರೇ ಆಗಿದ್ದಾರೆ. ಉದ್ಯಮಿ, ಹಣವಂತ ಪುರುಷರನ್ನು ಮೊಬೈಲ್ ಕರೆ ಮೂಲಕ, ಫೇಸ್ ಬುಕ್ ಅಥವಾ ವಾಟ್ಸ್‌ಆ್ಯಪ್ ಮೂಲಕ ಗೆಳೆತನ ಬೆಳಸುವುದು. ಆಪ್ತತೆ ಗಳಿಸಿದ ನಂತರ ಭೇಟಿ ಮಾಡುವ ನೆಪದಲ್ಲಿ ರೂಮಿಗೆ ಕರೆಸಿ, ಆಪ್ತ ಕ್ಷಣಗಳನ್ನು ರಹಸ್ಯ ಕ್ಯಾಮರಾ ಅಥವಾ ಮೊಬೈಲ್ ಮೂಲಕ ಚಿತ್ರಿಸುವುದು. ಅದಾದ ಬಳಿಕ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡುವ ದಂಧೆ ವ್ಯಾಪಕವಾಗಿ ಹೆಚ್ಚುತ್ತಿದೆ. ಬೆಂಗಳೂರಿನಲ್ಲೇ ಬೆಳಕಿಗೆ ಬಂದ ಒಂದು ಪ್ರಕರಣದಲ್ಲಂತೂ ಫೇಸ್‌ಬುಕ್ ಮೆಸೆಂಬರ್ ಮೂಲಕ ಪುರುಷನೊಬ್ಬನಿಗೆ ವಿಡಿಯೋ ಕಾಲ್ ಮಾಡಿದ ಯುವತಿ ತನ್ನ ಬೆತ್ತಲೆ ದೇಹವನ್ನು ಪ್ರದರ್ಶನ ಮಾಡ್ತಾಳೆ. ನಂತರ ಅದನ್ನೇ ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಂಡು ಆತನ ಕುಟುಂಬದವರು, ಸ್ನೇಹಿತರು

Spread the love
Leave A Reply

Your email address will not be published.

Flash News