ಟ್ಯಾಕ್ಸಿಗಳ ಬಾಡಿಗೆ ದರ ಪರಿಷ್ಕರಣೆ, ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..

0

ಬೆಂಗಳೂರು:  ಬೆಂಗಳೂರು ನಗರ ಒಳಗೊಂಡಂತೆ ರಾಜ್ಯಾದ್ಯಂತ ಅಗ್ರಿಗೇಟರ್ಸ್ ನಿಯಮದಡಿ ಕಾರ್ಯಾಚರಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಬಾಡಿಗೆ ದರವನ್ನು ಪರಿಷ್ಕರಿಸಿ ಸರ್ಕಾರ ಆದೇಶ ಹೊರಡಿಸಿದೆ. ವಾಹನದ ಮೌಲ್ಯ 5 ಲಕ್ಷ ರೂ.ವರೆಗಿನ ಡಿ ವರ್ಗದ ವಾಹನಗಳಿಗೆ ಕನಿಷ್ಟ 4ಕಿ.ಮೀ.ವರೆಗೆ 75ರೂ., ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಟ 18 ರೂ.ನಿಂದ ಗರಿಷ್ಟ 36ರೂ.ವರೆಗೆ ನಿಗದಿಪಡಿಸಲಾಗಿದೆ.
5 ರಿಂದ 10 ಲಕ್ಷ ರೂ.ವರೆಗಿನ ಮೌಲ್ಯದ ಸಿ ವರ್ಗದ ವಾಹನಗಳಿಗೆ ನಿಗದಿತ ದರ 100ರೂ., ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಟ 21 ರಿಂದ ಗರಿಷ್ಟ 42ರೂ., 10 ಲಕ್ಷದಿಂದ 16 ಲಕ್ಷ ರೂ.ವರೆಗಿನ ಬಿ ವರ್ಗದ ವಾಹನಗಳಿಗೆ ನಿಗದಿತ ದರ 120ರೂ., ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಟ 24 ರಿಂದ 48ರೂ ನಿಗದಿಪಡಿಸಲಾಗಿದೆ.
16 ಲಕ್ಷ ರೂ. ಮೇಲ್ಪಟ್ಟ ಎ ವರ್ಗದ ವಾಹನಗಳಿಗೆ ನಿಗದಿತ ದರ 150ರೂ. ಆಗಿದ್ದು, ಹೆಚ್ಚುವರಿ ಪ್ರತಿ ಕಿ.ಮೀ.ಗೆ ಕನಿಷ್ಟ 27ರೂ.ನಿಂದ ಗರಿಷ್ಟ 54ರೂ.ವರೆಗೂ ನಿಗದಿಪಡಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರ ಮತ್ತು ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪರಿಷ್ಕøತ ದರ ಜಾರಿಗೆ ಬರುವಂತೆ ನಿಗದಿಪಡಿಸಲು ಆದೇಶದಲ್ಲಿ ನಿರ್ದೇಶಿಸಲಾಗಿದೆ.
ನಿಗದಿಪಡಿಸಿದ್ದ ದರದ ಜತೆಗೆ ಜಿಎಸ್‍ಟಿ ಮತ್ತು ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಆದರೆ, ಸಮಯದ ಆಧಾರದಲ್ಲಿ ದರ ವಸೂಲಿ ಮಾಡಬಾರದು. ಸರ್ಕಾರ ನಿಗದಿಪಡಿಸಿರುವ ಕಿಲೋ ಮೀಟರ್ ದರದ ಆಧಾರದಲ್ಲಿ ಮಾತ್ರ ಪ್ರಯಾಣಿಕರಿಂದ ಬಾಡಿಗೆ ದರವನ್ನು ವಸೂಲಿ ಮಾಡುವುದು.

Spread the love
Leave A Reply

Your email address will not be published.

Flash News